ಜಿಯೋದಲ್ಲಿ ಬರೀ 11ರೂ.ಗೆ 1GB ಡೇಟಾ ಸಿಗುತ್ತೆ; ಇನ್ನು ಟಾಕ್‌ಟೈಮ್ ಪ್ಲ್ಯಾನ್ ಹೇಗೆ?
ಭಾರತೀಯ ಟೆಲಿಕಾಂ ಕೇತ್ರದಲ್ಲಿ ರಿಲಯನ್ಸ್ ಜಿಯೋ ಟೆಲಿಕಾಂ ಅಗ್ಗದ ಬೆಲೆಯಲ್ಲಿ ಹಲವು ಡೇಟಾ ಯೋಜನೆಗಳನ್ನು ಪರಿಚಯಿಸಿ ಗ್ರಾಹಕರನ್ನು ಆಕರ್ಷಿಸಿದೆ. ಹಾಗೆಯೇ ದೈನಂದಿನ ಡೇಟಾ ಅಲ್ಲದೇ ಇನ್ನು ಅಧಿಕ ಡೇಟಾ ಬಯಸುವ ತನ್ನ ಬಳಕೆದಾರರ ಅನುಕೂಲಕರ ವರ್ಕ್ ಫ್ರಮ್ ಹೋಮ್ ಪ್ಲ್ಯಾನ್‌ಗಳನ್ನು ಹಾಗೂ 4G ಡೇಟಾ ವೋಚರ್ ಪ್ಯಾಕ್‌ಗಳನ್ನು ಸಹ ಪರಿಚಯಿಸಿ ಗಮನ ಸೆಳೆದಿದೆ. ಭಿನ್ನ ಪ್ರೈಸ್ ಟ್ಯಾಗ್‌ನಲ್ಲಿರುವ ಈ ಡೇಟಾ ವೋಚರ್ ಪ್ಯಾಕ್‌ಗಳು ಗ್ರಾಹಕರ ಹೆಚ್ಚುವರಿ ಡೇಟಾ ಅವಶ್ಯಕತೆ ಪೂರೈಸಲಿವೆ.

ಹೌದು, ಜಿಯೋ ಟೆಲಿಕಾಂ ಹಲವು ಡೇಟಾ ಪ್ಯಾಕ್ ಯೋಜನೆಗಳನ್ನು ಹೊಂದಿದೆ. ಆ ಪೈಕಿ ಆರಂಭಿಕ 11ರೂ. ಬೆಲೆಯಿಂದ ಡೇಟಾ ವೋಚರ್‌ಗಳ ಆಯ್ಕೆಯನ್ನು ಗ್ರಾಹಕರಿಗೆ ನೀಡಿದೆ. ಬಳಕೆದಾರರು ದೀರ್ಘಾವಧಿ ಪ್ರಯೋಜನಗಳ ಪ್ಲ್ಯಾನ್ ರೀಚಾರ್ಜ್ ಮಾಡಿಸಿರುತ್ತಾರೆ. ಆದರೆ ಕೆಲವೊಮ್ಮೆ ವ್ಯಾಲಿಡಿಟಿ ಅವಧಿಗೆ ಮುನ್ನವೇ ಡೇಟಾ ಸೌಲಭ್ಯ ಮುಗಿದು ಹೋಗಿರುತ್ತದೆ. ಅಂತಹ ಸಂದರ್ಭಗಳಲ್ಲಿ ಹಾಗೂ ಹೆಚ್ಚುವರಿ ಡೇಟಾ ಬಯಸುವ ಗ್ರಾಹಕರಿಗೆ ಈ 4G ಡೇಟಾ ವೋಚರ್ ರೀಚಾರ್ಜ್ ಪ್ಲ್ಯಾನ್‌ಗಳು ಉಪಯುಕ್ತ ಎನಿಸಲಿವೆ. ಹಾಗಾದರೇ ಜಿಯೋ ಟೆಲಿಕಾಂನ ಎಲ್ಲ ಡೇಟಾ ವೋಚರ್ ಪ್ಲ್ಯಾನ್‌ಗಳ ಪ್ರಯೋಜನಗಳ ಬಗ್ಗೆ ತಿಳಿಯೋಣ ಬನ್ನಿರಿ.

ಜಿಯೋ 4G ಡಾಟಾ ವೋಚರ್ಸ್: ಆರಂಭಿಕ ಪ್ಲ್ಯಾನ್ ಜಸ್ಟ್ 11ರೂ.
ಜಿಯೋ ಸಂಸ್ಥೆಯು ಹೆಚ್ಚುವರಿ ಡೇಟಾ ಬಳಕೆಗಾಗಿ ಅಗತ್ಯವಿರುವ ಗ್ರಾಹಕರಿಗಾಗಿ ಹಾಗೂ 4G ಡೇಟಾ ಬಳಕೆಗಾಗಿ ಕೆಲವು 4G ಡೇಟಾ ವೋಚರ್ಸ್ ಆಯ್ಕೆಗಳು ಪರಿಚಯಿಸಿದೆ. 11ರೂ. ಡಾಟಾ ವೋಚರ್ ನಲ್ಲಿ 1GB ಡೇಟಾ ಲಭ್ಯ, 21ರೂ. ವೋಚರ್‌ನಲ್ಲಿ 2GB ಡೇಟಾ, 51ರೂ. ನಲ್ಲಿ 6GB ಡೇಟಾ, ಹಾಗೂ 101ರೂ. ಡೇಟಾ ವೋಚರ್ ಪ್ಲ್ಯಾನಿನಲ್ಲಿ ಒಟ್ಟು 12GB ಡೇಟಾ ಸಿಗಲಿದೆ.

ಜಿಯೋ 10ರೂ. ಮತ್ತು 20ರೂ. ರೀಚಾರ್ಜ್ ಯೋಜನೆ
ಜಿಯೋ ಟೆಲಿಕಾಂನ ಈ ಪ್ಲ್ಯಾನ್ ಜಿಯೋ ಟೆಲಿಕಾಂನ ಆರಂಭಿಕ ಟಾಪ್‌ಅಪ್ ಪ್ಲ್ಯಾನ್ ಇದಾಗಿದ್ದು, ಈ ಯೋಜನೆಯಲ್ಲಿ ಬಳಕೆದಾರರಿಗೆ 7.47ರೂ. ಗಳ ಟಾಕ್‌ಟೈಮ್ ಸಿಗಲಿದೆ. ಯಾವುದೇ ಹೆಚ್ಚುವರಿ ವ್ಯಾಲಿಡಿಟಿ ಹಾಗೂ ಎಸ್‌ಎಮ್‌ಎಸ್, ಡೇಟಾ ಪ್ರಯೋಜನ ಸಿಗುವುದಿಲ್ಲ. ಟಾಕ್‌ಟೈಮ್ ಅನ್ನು ಅಂತರರಾಷ್ಟ್ರೀಯ ಸೇವೆಗಳಿಗೆ ಸಹ ಬಳಸಬಹುದು. ಅದೇ ರೀತಿ ಜಿಯೋ 20ರೂ. ರೀಚಾರ್ಜ್ ಟಾಪ್‌ಅಪ್ ಯೋಜನೆಗಳಲ್ಲಿ ಒಂದಾಗಿದೆ. ಈ ಯೋಜನೆಯಲ್ಲಿ ಬಳಕೆದಾರರಿಗೆ 14.95ರೂ. ಗಳ ಟಾಕ್‌ಟೈಮ್ ಸಿಗಲಿದೆ. ಟಾಕ್‌ಟೈಮ್ ಅನ್ನು ಅಂತರರಾಷ್ಟ್ರೀಯ ಸೇವೆಗಳಿಗೆ ಸಹ ಬಳಸಬಹುದು. ಆದರೆ ಯಾವುದೇ ಹೆಚ್ಚುವರಿ ವ್ಯಾಲಿಡಿಟಿ ಹಾಗೂ ಎಸ್‌ಎಮ್‌ಎಸ್, ಡೇಟಾ ಪ್ರಯೋಜನ ಸಿಗುವುದಿಲ್ಲ.

ಜಿಯೋ 50ರೂ. ಮತ್ತು 100ರೂ. ರೀಚಾರ್ಜ್ ಯೋಜನೆ
ಜಿಯೋ ಟೆಲಿಕಾಂನ ಈ ಪ್ಲ್ಯಾನ್ ಜಿಯೋ ಟೆಲಿಕಾಂನ ಟಾಪ್‌ಅಪ್ ಯೋಜನೆಗಳಲ್ಲಿ ಒಂದಾಗಿದೆ. ಈ ಯೋಜನೆಯಲ್ಲಿ ಬಳಕೆದಾರರಿಗೆ 39.37ರೂ. ಗಳ ಟಾಕ್‌ಟೈಮ್ ಸಿಗಲಿದೆ. ಯಾವುದೇ ಹೆಚ್ಚುವರಿ ವ್ಯಾಲಿಡಿಟಿ ಹಾಗೂ ಎಸ್‌ಎಮ್‌ಎಸ್, ಡೇಟಾ ಪ್ರಯೋಜನ ಸಿಗುವುದಿಲ್ಲ. ಹಾಗೆಯೇ ಜಿಯೋ 100ರೂ. ರೀಚಾರ್ಜ್ ಯೋಜನೆಯು ಜನಪ್ರಿಯ ಟಾಪ್‌ಅಪ್ ಯೋಜನೆಗಳಲ್ಲಿ ಒಂದಾಗಿದೆ. ಈ ಯೋಜನೆಯಲ್ಲಿ ಬಳಕೆದಾರರಿಗೆ 81.75ರೂ. ಗಳ ಟಾಕ್‌ಟೈಮ್ ಸಿಗಲಿದೆ. ಯಾವುದೇ ಹೆಚ್ಚುವರಿ ವ್ಯಾಲಿಡಿಟಿ ಹಾಗೂ ಎಸ್‌ಎಮ್‌ಎಸ್, ಡೇಟಾ ಪ್ರಯೋಜನ ಸಿಗುವುದಿಲ್ಲ. ಟಾಕ್‌ಟೈಮ್ ಅನ್ನು ಅಂತರರಾಷ್ಟ್ರೀಯ ಸೇವೆಗಳಿಗೆ ಸಹ ಬಳಸಬಹುದು.

ಜಿಯೋ 500ರೂ. ಮತ್ತು ಜಿಯೋ 1000ರೂ. ರೀಚಾರ್ಜ್ ಯೋಜನೆ
ಜಿಯೋ ಟೆಲಿಕಾಂನ 500ರೂ. ಪ್ಲ್ಯಾನ್ ಟಾಪ್‌ಅಪ್ ರೀಚಾರ್ಜ್ ಯೋಜನೆಗಳಲ್ಲಿ ಒಂದಾಗಿದೆ. ಈ ಯೋಜನೆಯಲ್ಲಿ ಬಳಕೆದಾರರಿಗೆ 420.73ರೂ. ಗಳ ಟಾಕ್‌ಟೈಮ್ ಸಿಗಲಿದೆ. ಯಾವುದೇ ಹೆಚ್ಚುವರಿ ವ್ಯಾಲಿಡಿಟಿ ಹಾಗೂ ಎಸ್‌ಎಮ್‌ಎಸ್, ಡೇಟಾ ಪ್ರಯೋಜನ ಸಿಗುವುದಿಲ್ಲ. ಟಾಕ್‌ಟೈಮ್ ಅನ್ನು ಅಂತರರಾಷ್ಟ್ರೀಯ ಸೇವೆಗಳಿಗೆ ಸಹ ಬಳಸಬಹುದು. ಅದೇ ರೀತಿ ಜಿಯೋ 1000ರೂ. ಇದು ಜಿಯೋ ಟೆಲಿಕಾಂನ ಟಾಕ್‌ಟೈಮ್ ಯೋಜನೆಗಳಲ್ಲಿ ಒಂದಾಗಿದೆ. ಈ ಯೋಜನೆಯಲ್ಲಿ ಬಳಕೆದಾರರಿಗೆ 844.46ರೂ. ಗಳ ಟಾಕ್‌ಟೈಮ್ ಸಿಗಲಿದೆ. ಯಾವುದೇ ಹೆಚ್ಚುವರಿ ವ್ಯಾಲಿಡಿಟಿ ಹಾಗೂ ಎಸ್‌ಎಮ್‌ಎಸ್, ಡೇಟಾ ಪ್ರಯೋಜನ ಸಿಗುವುದಿಲ್ಲ. ಟಾಕ್‌ಟೈಮ್ ಅನ್ನು ಅಂತರರಾಷ್ಟ್ರೀಯ ಸೇವೆಗಳಿಗೆ ಸಹ ಬಳಸಬಹುದು.


Click it and Unblock the Notifications








