ಜಿಯೋ 149ರೂ. ಪ್ಲ್ಯಾನ್ ಬಗ್ಗೆ ತಿಳಿದ್ರೆ, ಒಂದು ಕ್ಷಣ ನೀವು ಅಚ್ಚರಿ ಪಡ್ತೀರಾ?!
ಭಾರತೀಯ ಟೆಲಿಕಾಂ ವಲಯದಲ್ಲಿ ಮೂಂಚೂಣಿಯ ಸಂಸ್ಥೆಯಾಗಿ ಕಾಣಿಸಿಕೊಂಡಿರುವ ರಿಲಯನ್ಸ್ ಜಿಯೋ, ಅಧಿಕ ಚಂದಾದಾರರನ್ನು ಆಕರ್ಷಿಸಲು ಅತ್ಯುತ್ತಮ ಯೋಜನೆಗಳನ್ನು ಪರಿಚಯಿಸಿದೆ. ಸಂಸ್ಥೆಯ ಕೆಲವು ಪ್ರೀಪೇಯ್ಡ್ ಯೋಜನಗಳು ಭರ್ಜರಿ ಪ್ರಯೋಜನಗಳನ್ನು ಪಡೆದಿದ್ದು, ಅವುಗಳಲ್ಲಿ ಅಧಿಕ ಡೇಟಾ ಹಾಗೂ ವ್ಯಾಲಿಡಿಟಿ ಪಡೆದಿವೆ. ಅದಾಗ್ಯೂ, ಜಿಯೋದ ಅಗ್ಗದ ಬೆಲೆಯ ಪ್ಲ್ಯಾನ್‌ವೊಂದು ಸಖತ್ ಟ್ರೆಂಡಿ ಸೌಲಭ್ಯ ಪಡೆದಿದ್ದು, ಅಚ್ಚರಿ ಮೂಡಿಸಿದೆ.
ಹೌದು, ರಿಲಯನ್ಸ್ ಜಿಯೋ ಟೆಲಿಕಾಂ ಭಿನ್ನ ಶ್ರೇಣಿಯಲ್ಲಿ ಪ್ರೀಪೇಯ್ಡ್ ರೀಚಾರ್ಜ್ ಯೋಜನೆಗಳ ಆಯ್ಕೆ ಪಡೆದಿದೆ. ಆ ಪೈಕಿ ಎಂಟ್ರಿ ಲೆವೆಲ್ ರೀಚಾರ್ಜ್ ಯೋಜನೆಗಳಲ್ಲಿ ಕಾಣಿಸಿಕೊಂಡಿರುವ ಜಿಯೋ 149ರೂ. ಪ್ಲ್ಯಾನ್ ಈಗ ಸೌಂಡ್ ಮಾಡ್ತಿದೆ. ಈ ಅಗ್ಗದ ಯೋಜನೆಯ ಪ್ರಯೋಜನಗಳು ಗ್ರಾಹಕರನ್ನು ಸೆಳೆಯುತ್ತಿವೆ.

ಈ ಪ್ರೀಪೇಯ್ಡ್ ಪ್ಲ್ಯಾನ್ ದೈನಂದಿನ ಡೇಟಾ, ಧ್ವನಿ ಕರೆ ಸೌಲಭ್ಯ ಜೊತೆಗೆ ಆಕರ್ಷಕ ವ್ಯಾಲಿಡಿಟಿ ಪ್ರಯೋಜನ ಕೂಡಾ ಒಳಗೊಂಡಿದೆ. ಹೀಗಾಗಿ ಕಡಿಮೆ ಬೆಲೆಯ ಪ್ಲ್ಯಾನ್ ರೀಚಾರ್ಜ್ ಮಾಡಲು ಬಯಸೋ ಗ್ರಾಹಕರಿಗೆ ಈ ಪ್ರೀಪೇಯ್ಡ್ ಯೋಜನೆ ಬೊಂಬಾಟ್ ಎನಿಸುತ್ತದೆ. ಹಾಗಾದರೇ ಜಿಯೋ ಟೆಲಿಕಾಂನ 149ರೂ. ಪ್ರೀಪೇಯ್ಡ್ ಪ್ಲ್ಯಾನ್ ರೀಚಾರ್ಜ್ ಯೋಜನೆಯ ಸೌಲಭ್ಯಗಳ ಬಗ್ಗೆ ಹಾಗೂ ಇತರೆ ಜನಪ್ರಿಯ ಯೋಜನಗಳ ಬಗ್ಗೆ ಮುಂದೆ ಓದಿರಿ.
ರಿಲಯನ್ಸ್ ಜಿಯೋ 149ರೂ. ಪ್ರೀಪೇಯ್ಡ್ ಯೋಜನೆಯ ಪ್ರಯೋಜನಗಳ ಮಾಹಿತಿ : ರಿಲಯನ್ಸ್ ಜಿಯೋ ಟೆಲಿಕಾಂನ ಈ 149ರೂ. ರೀಚಾರ್ಜ್ ಯೋಜನೆಯಲ್ಲಿ ಗ್ರಾಹಕರಿಗೆ ಪ್ರತಿದಿನ 1 GB ಡೇಟಾ ದೊರೆಯುತ್ತದೆ. ಇದರೊಂದಿಗೆ ಅನಿಯಮಿತ ಉಚಿತ ಧ್ವನಿ ಕರೆಗಳ ಸೌಲಭ್ಯ ಕೂಡಾ ಲಭ್ಯ ಇರುತ್ತದೆ.
ಇದರೊಂದಿಗೆ ಈ ಯೋಜನೆಯಲ್ಲಿ ಚಂದಾದಾರರಿಗೆ ಪ್ರತಿದಿನ 100 ಉಚಿತ ಎಸ್‌ಎಮ್‌ಎಸ್ ಪ್ರಯೋಜನ ಸಹ ಸಿಗಲಿದೆ. ಅಂದಹಾಗೆ ಈ ರೀಚಾರ್ಜ್ ಯೋಜನೆಯು ಒಟ್ಟು 20 ದಿನಗಳ ವ್ಯಾಲಿಡಿಟಿ ಅವಧಿ ಅನ್ನು ಒಳಗೊಂಡಿದೆ. ಹೆಚ್ಚುವರಿಯಾಗಿ ಜಿಯೋ ಟಿವಿ, ಜಿಯೋ ಸಿನಿಮಾ, ಜಿಯೋ ಕ್ಲೌಡ್ ಸೇವೆಗಳು ಲಭ್ಯ.
ರಿಲಯನ್ಸ್ ಜಿಯೋ 179ರೂ. ಪ್ರೀಪೇಯ್ಡ್ ಪ್ಲಾನ್ ಪ್ರಯೋಜನಗಳ ಮಾಹಿತಿ : ಜಿಯೋ ಟೆಲಿಕಾಂನ 179ರೂ. ಪ್ರೀಪೇಯ್ಡ್ ಪ್ಲ್ಯಾನ್ ಒಟ್ಟು 24 ದಿನಗಳ ವ್ಯಾಲಿಡಿಟಿ ಅವಧಿ ಅನ್ನು ಒಳಗೊಂಡಿದೆ. ಈ ಅವಧಿಯಲ್ಲಿ ಗ್ರಾಹಕರಿಗೆ ಪ್ರತಿದಿನ 1 GB ಡೇಟಾ ಪ್ರಯೋಜನ ದೊರೆಯುತ್ತದೆ.
ಇನ್ನು ಪೂರ್ಣ ವ್ಯಾಲಿಡಿಟಿ ಅವಧಿಗೆ ಒಟ್ಟು 24 GB ಡೇಟಾ ಸೌಲಭ್ಯ ಚಂದಾದಾರಿಗೆ ಸಿಗಲಿದೆ. ಹಾಗೆಯೇ ಈ ರೀಚಾರ್ಜ್ ಯೋಜನೆಯು ಅನಿಯಮಿತ ಉಚಿತ ಧ್ವನಿ ಕರೆಗಳ ಸೌಲಭ್ಯ ಹಾಗೂ ಎಸ್‌ಎಮ್‌ಎಸ್ ಪ್ರಯೋಜನ ಕೂಡಾ ಪಡೆದುಕೊಂಡಿದೆ. ಇದರೊಂದಿಗೆ ಜಿಯೋ ಆಪ್ಸ್ ಸೇವೆ ಸಿಗಲಿವೆ.
ರಿಲಯನ್ಸ್ ಜಿಯೋ 299ರೂ. ಪ್ರಿಪೇಯ್ಡ್ ಯೋಜನೆ ಸೌಲಭ್ಯಗಳ ಮಾಹಿತಿ : ಜಿಯೋದ ಈ ರೀಚಾರ್ಜ್‌ನಲ್ಲಿ ಗ್ರಾಹಕರಿಗೆ ಪ್ರತಿದಿನ 2GB ಡೇಟಾ ಪ್ರಯೋಜನ ಲಭ್ಯ. ಇದರೊಂದಿಗೆ ಅನಿಯಮಿತ ಉಚಿತ ಧ್ವನಿ ಕರೆಗಳ ಸೌಲಭ್ಯ ದೊರೆಯುತ್ತದೆ. ಅಲ್ಲದೇ ಪ್ರತಿದಿನ 100 ಎಸ್ಎಮ್ಎಸ್ ಪ್ರಯೋಜನ ಕೂಡಾ ಸಿಗಲಿದೆ. ಅಂದಾಹಗೆ ಈ ಪ್ಲ್ಯಾನ್ ಒಟ್ಟು 28 ದಿನಗಳ ವ್ಯಾಲಿಡಿಟಿ ಅವಧಿ ಪಡೆದುಕೊಂಡಿದೆ.
ರಿಲಯನ್ಸ್ ಜಿಯೋ 479ರೂ. ರೀಚಾರ್ಜ್ ಪ್ಲ್ಯಾನ್ ಪ್ರಯೋಜನಗಳ ಮಾಹಿತಿ : ಜಿಯೋ ಟೆಲಿಕಾಂನ ಈ ರೀಚಾರ್ಜ್ ಪ್ಲಾನ್ ಒಟ್ಟು 56 ದಿನಗಳ ವ್ಯಾಲಿಡಿಟಿ ಅವಧಿ ಅನ್ನು ಒಳಗೊಂಡಿದ್ದು, ಬಳಕೆದಾರರಿಗೆ ಪ್ರತಿದಿನ 1.5 GB ಡೇಟಾ ಪ್ರಯೋಜನ ನೀಡುತ್ತದೆ. ಹಾಗೆಯೇ ಅನಿಯಮಿತ ಉಚಿತ ಧ್ವನಿ ಕರೆಗಳ ಸೌಲಭ್ಯ ದೊರೆಯುತ್ತದೆ. ಅಲ್ಲದೇ ಪ್ರತಿದಿನ 100 ಎಸ್ಎಮ್ಎಸ್ ಪ್ರಯೋಜನ ಕೂಡಾ ಸಿಗಲಿದೆ. ಉಳಿದಂತೆ ಜಿಯೋ ಆಪ್ಸ್ ಸೇವೆ ಸಹ ಸಿಗಲಿದೆ.
ರಿಲಯನ್ಸ್ ಜಿಯೋ 2999ರೂ. ಪ್ರೀಪೇಯ್ಡ್ ಪ್ಲಾನ್ ಸೌಲಭ್ಯಗಳ ಮಾಹಿತಿ : ಜಿಯೋ ಟೆಲಿಕಾಂನ ಹೈ ಎಂಡ್ ರೀಚಾರ್ಜ್ ಪ್ಲ್ಯಾನ್ 365 ದಿನಗಳ ವ್ಯಾಲಿಡಿಟಿ ಅವಧಿ ಅನ್ನು ಪಡೆದುಕೊಂಡಿದೆ. ಈ ಯೋಜನೆಯಲ್ಲಿ ಗ್ರಾಹಕರಿಗೆ ಪ್ರತಿದಿನ 2.5 GB ಡೇಟಾ ಪ್ರಯೋಜನಗಳು ಲಭ್ಯವಾಗಲಿದೆ. ಹಾಗೆಯೇ ಅನಿಯಮಿತ ಉಚಿತ ಧ್ವನಿ ಕರೆಗಳ ಸೌಲಭ್ಯ ದೊರೆಯುತ್ತದೆ. ಅಲ್ಲದೇ ಪ್ರತಿದಿನ 100 ಎಸ್ಎಮ್ಎಸ್ ಪ್ರಯೋಜನ ಕೂಡಾ ಸಿಗಲಿದೆ. ಉಳಿದಂತೆ ಜಿಯೋ ಆಪ್ಸ್ ಸೇವೆ ಸಹ ಸಿಗಲಿದೆ.


Click it and Unblock the Notifications








