Home
ಸುದ್ದಿಜಾಲ

ವರ್ಷಪೂರ್ತಿ ಮತ್ತೆ ರೀಚಾರ್ಜ್‌ ಮಾಡುವ ಅಗತ್ಯ ಇಲ್ಲ!..ಈ ಪ್ಲ್ಯಾನ್‌ ಗಮನಿಸಿ!

ಟೆಲಿಕಾಂ ವಲಯದಲ್ಲಿ ಮುಂಚೂಣಿಯ ಸಂಸ್ಥೆಯಾಗಿ ಗುರುತಿಸಿಕೊಂಡಿರುವ ರಿಲಯನ್ಸ್‌ ಜಿಯೋ, ಭಿನ್ನ ಪ್ಲ್ಯಾನ್‌ಗಳ ಮೂಲಕ ಅಧಿಕ ಚಂದಾದಾರರನ್ನು ಸೆಳೆದಿದೆ. ಸಂಸ್ಥೆಯ ಬಹುತೇಕ ಪ್ಲ್ಯಾನ್‌ಗಳು ದೈನಂದಿನ ಡೇಟಾ ಹಾಗೂ ಆಕರ್ಷಕ ವ್ಯಾಲಿಡಿಟಿ ಸೌಲಭ್ಯ ಪಡೆದಿವೆ. ಆ ಪೈಕಿ ದೀರ್ಘಾವಧಿಯ ಪ್ರೀಪೇಯ್ಡ್‌ ಯೋಜನೆಗಳು ಹೆಚ್ಚಿನ ಡಿಮ್ಯಾಂಡ್‌ ಪಡೆದಿವೆ.

ಹೌದು, ಜಿಯೋ ಸಂಸ್ಥೆಯು ಕೆಲವು ವಾರ್ಷಿಕ ವ್ಯಾಲಿಡಿಟಿ ಸೌಲಭ್ಯದ ಪ್ರೀಪೇಯ್ಡ್‌ ಯೋಜನೆಗಳ ಆಯ್ಕೆ ಹೊಂದಿದೆ. ಆ ಪೈಕಿ ಜಿಯೋ 1559ರೂ. ಯೋಜನೆ ಹಾಗೂ ಜಿಯೋ 2,999ರೂ. ಯೋಜನೆ ದೀರ್ಘಾವಧಿ ವ್ಯಾಲಿಡಿಟಿ ಬಯಸುವ ಗ್ರಾಹಕರಿಗೆ ಹೇಳಿ ಮಾಡಿಸಿದಂತ ಪ್ರೀಪೇಯ್ಡ್‌ ಪ್ಲ್ಯಾನ್‌ಗಳಾಗಿವೆ.

ವರ್ಷಪೂರ್ತಿ ಮತ್ತೆ ರೀಚಾರ್ಜ್‌ ಮಾಡುವ ಅಗತ್ಯ ಇಲ್ಲ!..ಈ ಪ್ಲ್ಯಾನ್‌ ಗಮನಿಸಿ!

ಜಿಯೋ 1559ರೂ. ಮತ್ತು ಜಿಯೋ 2999ರೂ. ಈ ಎರಡು ಯೋಜನೆಗಳು ಅಧಿಕ ವ್ಯಾಲಿಡಿಟಿ ಸೌಲಭ್ಯ ಪಡೆದಿವೆ. ಆದರೆ ಡೇಟಾ ಪ್ರಯೋಜನದಲ್ಲಿ ಭಿನ್ನತೆ ಹೊಂದಿವೆ. ಹಾಗಾದರೆ ಜಿಯೋ ಟೆಲಿಕಾಂನ ಈ ಎರಡು ಪ್ರೀಪೇಯ್ಡ್‌ ಯೋಜನೆಗಳ ಪೂರ್ಣ ಪ್ರಯೋಜನಗಳ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಜಿಯೋ ಟೆಲಿಕಾಂ 1559ರೂ. ಪ್ರೀಪೇಯ್ಡ್‌ ಯೋಜನೆ ಪ್ರಯೋಜನಗಳ ಮಾಹಿತಿ :
ರಿಯಲನ್ಸ್‌ ಜಿಯೋ ಟೆಲಿಕಾಂ 1559ರೂ. ಪ್ರೀಪೇಯ್ಡ್‌ ಯೋಜನೆಯು ಒಟ್ಟು 336 ದಿನಗಳ ವ್ಯಾಲಿಡಿಟಿ ಅವಧಿಯನ್ನು ಒಳಗೊಂಡಿದೆ. ಈ ಯೋಜನೆಯಲ್ಲಿ ಗ್ರಾಹಕರಿಗೆ ಒಟ್ಟು 3600 ಎಸ್‌ಎಮ್‌ಎಸ್‌ ಸೌಲಭ್ಯ ಲಭ್ಯವಾಗಲಿದ್ದು, ಇದರೊಂದಿಗೆ ಒಟ್ಟು 24 GB ಡೇಟಾ ಪ್ರಯೋಜನ ಸಹ ಸಿಗಲಿದೆ. ಹಾಗೆಯೇ ಈ ಯೋಜನೆಯು ಸಂಪೂರ್ಣ ಅನಿಯಮಿತ ವಾಯಿಸ್‌ ಕರೆಗಳ ಸೌಲಭ್ಯವನ್ನು ಪಡೆದಿದೆ. ಜೊತೆಗೆ ಹೆಚ್ಚುವರಿಯಾಗಿ ಜಿಯೋ ಆಪ್ಸ್‌ಗಳು ಕೂಡಾ ಲಭ್ಯವಾಗಲಿವೆ.

ಜಿಯೋ ಟೆಲಿಕಾಂ 2999ರೂ. ಪ್ರೀಪೇಯ್ಡ್‌ ಯೋಜನೆ ಪ್ರಯೋಜನಗಳ ಮಾಹಿತಿ :
ರಿಯಲನ್ಸ್‌ ಜಿಯೋ ಟೆಲಿಕಾಂ 2999ರೂ. ಪ್ರೀಪೇಯ್ಡ್‌ ಯೋಜನೆಯು ಒಟ್ಟು 365 ದಿನಗಳ ವ್ಯಾಲಿಡಿಟಿ ಅವಧಿ ಅನ್ನು ಒಳಗೊಂಡಿದೆ. ಈ ಯೋಜನೆಯಲ್ಲಿ ಗ್ರಾಹಕರಿಗೆ ಪ್ರತಿದಿನ 100 ಎಸ್‌ಎಮ್‌ಎಸ್‌ ಸೌಲಭ್ಯ ಲಭ್ಯವಾಗಲಿದ್ದು, ಇದರೊಂದಿಗೆ ಪ್ರತಿದಿನ 2.5GB ಡೇಟಾ ಪ್ರಯೋಜನ ಸಹ ಸಿಗಲಿದೆ. ಹಾಗೆಯೇ ಈ ಯೋಜನೆಯು ಕೂಡಾ ಸಂಪೂರ್ಣ ಅನಿಯಮಿತ ವಾಯಿಸ್‌ ಕರೆಗಳ ಸೌಲಭ್ಯವನ್ನು ಪಡೆದಿದೆ. ಒಟ್ಟಾರೇ ವ್ಯಾಲಿಡಿಟಿ ಅವಧಿಗೆ 912.5GB ಡೇಟಾ ಸೌಲಭ್ಯ ಸಿಗುತ್ತದೆ.

ಜಿಯೋ ಟೆಲಿಕಾಂ 2545ರೂ. ಪ್ರೀಪೇಯ್ಡ್‌ ಯೋಜನೆ ಪ್ರಯೋಜನಗಳ ಮಾಹಿತಿ :
ರಿಯಲನ್ಸ್‌ ಜಿಯೋ ಟೆಲಿಕಾಂ 2545ರೂ. ಪ್ರೀಪೇಯ್ಡ್‌ ಯೋಜನೆಯು ಒಟ್ಟು 336 ದಿನಗಳ ವ್ಯಾಲಿಡಿಟಿ ಅವಧಿ ಅನ್ನು ಪಡೆದುಕೊಂಡಿದೆ. ಈ ಪ್ರೀಪೇಯ್ಡ್‌ ಪ್ಲ್ಯಾನಿನಲ್ಲಿ ಚಂದಾದಾರರಿಗೆ ಪ್ರತಿದಿನ 100 ಎಸ್‌ಎಮ್‌ಎಸ್‌ ಸೌಲಭ್ಯ ಲಭ್ಯವಾಗಲಿದ್ದು, ಇದರೊಂದಿಗೆ ಪ್ರತಿದಿನ 1.5GB ಡೇಟಾ ಪ್ರಯೋಜನ ಸಹ ಸಿಗಲಿದೆ. ಹಾಗೆಯೇ ಈ ಯೋಜನೆಯು ಕೂಡಾ ಸಂಪೂರ್ಣ ಅನಿಯಮಿತ ವಾಯಿಸ್‌ ಕರೆಗಳ ಸೌಲಭ್ಯವನ್ನು ಪಡೆದಿದೆ. ಒಟ್ಟಾರೇ ವ್ಯಾಲಿಡಿಟಿ ಅವಧಿಗೆ 504GB ಡೇಟಾ ಸೌಲಭ್ಯ ಸಿಗುತ್ತದೆ.

ಜಿಯೋ ಟೆಲಿಕಾಂನ ಇತ್ತೀಚಿನ ಹೊಸ ಪ್ಲ್ಯಾನ್‌ ಮಾಹಿತಿ :
ಜಿಯೋ 1099ರೂ. ಪ್ರೀಪೇಯ್ಡ್‌ ಪ್ಲ್ಯಾನ್‌ - ಜಿಯೋ ಸಂಸ್ಥೆಯ ಈ ಹೊಸ ಪ್ಲ್ಯಾನ್ ಒಟ್ಟು 84 ದಿನಗಳ ವ್ಯಾಲಿಡಿಟಿ ಪಡೆದಿದೆ. ಈ ಅವಧಿಯಲ್ಲಿ ಪ್ರತಿದಿನ 2GB ಡೇಟಾ ಪ್ರಯೋಜನ ಹಾಗೂ ನಿತ್ಯವೂ 100 ಎಸ್‌ಎಮ್‌ಎಸ್‌ ಸೌಲಭ್ಯ ನೀಡುತ್ತದೆ. ಜೊತೆಗೆ ಅನಿಯಮಿತ ವಾಯಿಸ್‌ ಕರೆಯ ಸೌಲಭ್ಯ ಸಿಗಲಿದೆ. ಇದರ ಪ್ಲಸ್‌ ಪಾಯಿಂಟ್‌ ಎಂದರೆ, ಈ ಪ್ಲ್ಯಾನ್‌ ನೆಟ್‌ಫ್ಲಿಕ್ಸ್‌ ಚಂದಾದಾರಿಕೆ ಸೌಲಭ್ಯ ಪಡೆದಿದೆ. ಪೂರ್ಣ ಅವಧಿಗೆ ಒಟ್ಟಾರೆ, 168GB ಡೇಟಾ ಪ್ರಯೋಜನ ಸಿಗಲಿದೆ.

Best Mobiles in India

English summary
Jio 1559 Recharge Plan offers 336 Days validity, daily data, sms and more. complete details here.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+