ಜಿಯೋ 2121ರೂ. ಪ್ಲ್ಯಾನ್ V/S ಜಿಯೋ 4999ರೂ. ಪ್ಲ್ಯಾನ್: ಯಾವುದು ಉತ್ತಮ?
ದೇಶದ ಟೆಲಿಕಾಂ ವಲಯದಲ್ಲಿ ಜಿಯೋ ಸಂಸ್ಥೆಯು ಕಡಿಮೆ ಬೆಲೆಯಲ್ಲಿ ಅಧಿಕ ಡೇಟಾ ಸೌಲಭ್ಯದ ಪ್ರೀಪೇಯ್ಡ್ ಪ್ಲ್ಯಾನ್‌ಗಳನ್ನು ಪರಿಚಯಿಸಿ ಗ್ರಾಹಕರ ಮೆಚ್ಚುಗೆ ಪಡೆದಿದೆ. ಹಾಗೆಯೇ ಜಿಯೋ ಇತ್ತೀಚಿಗೆ 2121ರೂ. ಬೆಲೆಯ ವಾರ್ಷಿಕ ಪ್ರೀಪೇಯ್ಡ್ ಪ್ಲ್ಯಾನ್ ಅನ್ನು ಪರಿಚಯಸಿದೆ. ಅದರೊಂದಿಗೆ ಮತ್ತೆ ತನ್ನ 4,999ರೂ. ಪ್ರೀಪೇಯ್ಡ್ ಪ್ಲ್ಯಾನ್ ಸಹ ಮರಳಿ ಬಿಡುಗಡೆ ಮಾಡಿದೆ. ಆದರೆ ಈ ಎರಡರಲ್ಲಿ ಯಾವುದು ಬೆಸ್ಟ್ ವಾರ್ಷಿಕ ಪ್ಲ್ಯಾನ್ ಎನ್ನುವ ಗೊಂದಲ ಗ್ರಾಹಕರಲ್ಲಿ ಇದೆ.

ಪ್ರಸ್ತುತ ದೇಶದ ಖಾಸಗಿ ಟೆಲಿಕಾಂ ಸಂಸ್ಥೆಗಳು ಆರ್ಥಿಕ ಸಂಕಷ್ಟ ಎದುರಿಸುತ್ತಿವೆ. ಈ ನಿಟ್ಟಿನಲ್ಲಿ ಜಿಯೋ, ಏರ್‌ಟೆಲ್ ಮತ್ತು ವೊಡಾಫೋನ್ ಡೇಟಾ ಫೋರ್ ರೇಟ್ ನಿಗದಿ ಮಾಡಲು ಟ್ರಾಯ್‌ಗೆ ಮನವಿ ಸಲ್ಲಿಸಿವೆ. ಈ ನಡುವೆ ಜಿಯೋ ತನ್ನ 4,999ರೂ. ಪ್ರೀಪೇಯ್ಡ್ ಪ್ಲ್ಯಾನ್ ಅನ್ನು ಮತ್ತೆ ರೀ-ಲಾಂಚ್ ಮಾಡಿದೆ. ಹಾಗೆಯೇ 2121ರೂ, ಬೆಲೆಯ ದೀರ್ಘಾವಧಿ ಪ್ರೀಪೇಯ್ಡ್ ಪ್ಲ್ಯಾನ್ ಅನ್ನು ಹೊಂದಿದೆ. ಜಿಯೋ 2121ರೂ. ಪ್ಲ್ಯಾನ್ ಹಾಗೂ ಜಿಯೋ 4999.ರೂ ಪ್ಲ್ಯಾನ್ ಇವೆರಡು ಪ್ಲ್ಯಾನ್‌ಗಳ ಪ್ರಯೋಜನಗಳೆನು? ಯಾವುದು ಉತ್ತಮ ಆಯ್ಕೆ? ಮುಂದೆ ಓದಿರಿ.

ಜಿಯೋ 2121ರೂ. ಪ್ಲ್ಯಾನ್
ಜಿಯೋ ಟೆಲಿಕಾಂ ಇತ್ತೀಚಿಗೆ ಬಿಡುಗಡೆ ಮಾಡಿರುವ ಜಿಯೋ 2121ರೂ. ಪ್ರೀಪೇಯ್ಡ್ ಪ್ಲ್ಯಾನ್ ಪ್ರತಿದಿನ 1.5GB ಡೇಟಾ ಸೌಲಭ್ಯವನ್ನು ಒದಗಿಸುತ್ತದೆ. ಇದರೊಂದಿಗೆ ಜಿಯೋ ಟು ಜಿಯೋ ಕರೆಗಳು ಅನಿಯಮಿತ ಉಚಿತವಾಗಿರುತ್ತವೆ. ಇನ್ನು ಜಿಯೋದಿಂದ ಇತರೆ ಟೆಲಿಕಾಂ ಸಂಸ್ಥೆಗಳಿಗೆ ಹೊರ ಹೋಗುವ ಕರೆಗಳಿಗೆ ಪೂರ್ಣ ವ್ಯಾಲಿಡಿಟಿ ಅವಧಿಗೆ 12,000 ಉಚಿತ ನಿಮಿಷಗಳ ಪ್ರಯೋಜನ ಹೊಂದಿದೆ. ಅಂದಹಾಗೆ ಈ ಪ್ಲ್ಯಾನ್ ಒಟ್ಟು 336 ದಿನಗಳ ವ್ಯಾಲಿಡಿಟಿ ಅವಧಿಯನ್ನು ಪಡೆದಿದೆ. ಈ ಯೋಜನೆಯ ಅವಧಿಯಲ್ಲಿ ಒಟ್ಟು 504GB ಡೇಟಾ ದೊರೆಯುತ್ತದೆ.

ಜಿಯೋ 4999ರೂ.ಪ್ಲ್ಯಾನ್
ಜಿಯೋದ 4999ರೂ. ಪ್ರೀಪೇಯ್ಡ್ ಪ್ಲ್ಯಾನ್ ಮತ್ತೆ ರೀ-ಲಾಂಚ್ ಆಗಿದ್ದು, ಈ ಪ್ಲ್ಯಾನ್ ಒಟ್ಟು 360 ದಿನಗಳ ವ್ಯಾಲಿಡಿಟಿ ಪಡೆದಿದೆ. ಈ ಅವಧಿಯಲ್ಲಿ ಪ್ರತಿದಿನ ಇಂತಿಷ್ಟು ಜಿಬಿ ಡೇಟಾ ಅಂತಾ ನಿಗದಿಪಡಿಸಿಲ್ಲ. ಆದರೆ ಪೂರ್ಣ ಅವಧಿಗೆ ಒಟ್ಟು 4G ನೆಟವರ್ಕ್‌ನ 350GB ಡೇಟಾ ಸೌಲಭ್ಯವು ದೊರೆಯುತ್ತದೆ. ಇದರೊಂದಿಗೆ ಜಿಯೋ ಟು ಜಿಯೋ ಕರೆಗಳು ಉಚಿತವಾಗಿರುತ್ತವೆ. ಇತರೆ ಟೆಲಿಕಾಂ ಕರೆಗಳಿಗೆ 12000 ಉಚಿತ ನಿಮಿಷಗಳ ಕರೆ ಮಿತಿ ಒಳಗೊಂಡಿದೆ. ಹಾಗೆಯೇ ಪ್ರತಿದಿನ 100 ಎಸ್‌ಎಮ್ಎಸ್ ಪ್ರಯೋಜನವು ಇರುತ್ತದೆ.

ಜಿಯೋ 2121ರೂ. ಪ್ಲ್ಯಾನ್ V/S ಜಿಯೋ 4999ರೂ.ಪ್ಲ್ಯಾನ್
ಜಿಯೋದ 2121ರೂ. ಪ್ಲ್ಯಾನ್ ಮತ್ತು 4999ರೂ. ಪ್ಲ್ಯಾನ್ ಹೆಚ್ಚಿನ ಭಿನ್ನತೆಗಳೆನನ್ನು ಹೊಂದಿಲ್ಲ. ಆದರೆ ಜಿಯೋದ 4999ರೂ.ಪ್ಲ್ಯಾನ್ ದುವಾರಿ ಅನಿಸಲಿದ್ದು, ಬಹುತೇಕ ಗ್ರಾಹಕರಿಗೆ ಹೊರೆಯನಿಸಲಿದೆ. ಜಿಯೋದ 2121ರೂ. ಪ್ಲ್ಯಾನ್ ಇತ್ತೀಚಿಗೆ ವ್ಯಾಲಿಡಿಟಿಯಲ್ಲಿ ಇಳಿಕೆ ಕಂಡಿದ್ದು, ಗ್ರಾಹಕರಿಗೆ ಬೇಸರ ತಂದಿದೆ. ಇನ್ನು ಹೆಚ್ಚಿನ ಪ್ರಯೋಜನಗಳೆನನ್ನು ಹೊಂದಿರದ ಜಿಯೋದ 4999ರೂ. ಪ್ಲ್ಯಾನ್ ಆಕರ್ಷಿಸುವಲ್ಲಿ ಹಿಂದೆ ಬೀಳುವ ಸಾಧ್ಯತೆಗಳಿವೆ. ಇನ್ನು ಈ ಪ್ಲ್ಯಾನ್‌ನಲ್ಲಿ 350GB ಡೇಟಾ ಇದ್ದು, ಗ್ರಾಹಕರು ದಿನದ ಮಿತಿ ಇಲ್ಲದೇ ಬಳಕೆ ಮಾಡಬಹುದಾಗಿದೆ.


Click it and Unblock the Notifications








