Home
ಸುದ್ದಿಜಾಲ

ಜಿಯೋ ಹೊಸ ವರ್ಷದ ಕೊಡುಗೆ: ಈ ಪ್ಲ್ಯಾನಿನಲ್ಲಿ ಹಲವು ಪ್ರಯೋಜನ!

ಹೊಸ ವರ್ಷದ ಪ್ರಯುಕ್ತ ಇತ್ತೀಚಿಗೆ ಜಿಯೋ ಟೆಲಿಕಾಂ ನೂತನವಾಗಿ ಬಿಡುಗಡೆ ಮಾಡಿರುವ ಜಿಯೋ 2025ರೂ. ಪ್ರೀಪೇಯ್ಡ್‌ ಪ್ಲ್ಯಾನ್‌ (Jio Rs 2025 Plan) ಆಕರ್ಷಕ ಎನಿಸಿದೆ. ಈ ರೀಚಾರ್ಜ್‌ ಯೋಜನೆಯು ದೀರ್ಘಾವಧಿಯ ಯೋಜನೆ ಆಗಿದ್ದು, ಅತ್ಯುತ್ತಮ ದೈನಂದಿನ ಡೇಟಾ ಸೌಲಭ್ಯ ಸಹ ಪಡೆದುಕೊಂಡಿದೆ.

ದೇಶದ ಟೆಲಿಕಾಂ ವಲಯದಲ್ಲಿ ಅಗ್ರಸ್ಥಾನದಲ್ಲಿ ಇರುವ ಜಿಯೋ ಟೆಲಿಕಾಂನ ಈ ನೂತನ ರೀಚಾರ್ಜ್‌ ಪ್ಲ್ಯಾನ್‌ ಅಧಿಕ ಡೇಟಾ ಜೊತೆಗೆ ಹೆಚ್ಚಿನ ವ್ಯಾಲಿಡಿಟಿ ಬಯಸುವ ಗ್ರಾಹಕರಿಗೆ ಸೂಕ್ತ ಎನಿಸಿದೆ. ಅಂದಹಾಗೆ ಈ ಯೋಜನೆಯಲ್ಲಿ ಬಳಕೆದಾರರಿಗೆ ಒಟ್ಟು 500GB ಡೇಟಾ ಪ್ರಯೋಜನ ಸಿಗಲಿದೆ. ಹೊಸ ವರ್ಷದ ಆರಂಭದಲ್ಲಿ (New Year 2025) ಈ ನೂತನ ಪ್ಲ್ಯಾನ್‌ ಟ್ರೆಂಡ್‌ನಲ್ಲಿ ಕಾಣಿಸಿಕೊಂಡಿದೆ. ಈ ಬಗ್ಗೆ ಇನ್ನಷ್ಟು ಮಾಹಿತಿ ಮುಂದೆ ತಿಳಿಯೋಣ ಬನ್ನಿರಿ.

ಜಿಯೋ ಹೊಸ ವರ್ಷದ ಕೊಡುಗೆ: ಈ ಪ್ಲ್ಯಾನಿನಲ್ಲಿ ಹಲವು ಪ್ರಯೋಜನ!

ಜಿಯೋ 2025ರೂ. ಪ್ರೀಪೇಯ್ಡ್‌ ಯೋಜನೆ

ಜಿಯೋ ಟೆಲಿಕಾಂನ 2025 ರೂ. ಪ್ರೀಪೇಯ್ಡ್‌ ಪ್ಲ್ಯಾನ್‌ ಒಟ್ಟು 200 ದಿನಗಳ ವ್ಯಾಲಿಡಿಟಿ ಅವಧಿ ಅನ್ನು ಹೊಂದಿದ್ದು, ಈ ಅವಧಿ ಯಲ್ಲಿ ನಿತ್ಯ 2.5 GB ಡೇಟಾ ಸೌಲಭ್ಯ ಸಿಗಲಿದೆ. ಅಲ್ಲದೇ ಉಚಿತ 100 ಎಸ್ಎಮ್ಎಸ್ ಸೌಲಭ್ಯ ಸಹ ಒಳಗೊಂಡಿದ್ದು, ಹಾಗೆಯೇ ಚಂದಾದಾರರಿಗೆ ಅನಿಯಮಿತ ಫ್ರೀ ವಾಯಿಸ್ ಕರೆಗಳ ಸೌಲಭ್ಯ ಸಿಗಲಿದೆ. ಇದರ ಜೊತೆಗೆ ಪೂರ್ಣ ವ್ಯಾಲಿಡಿಟಿ ಅವಧಿಗೆ ಒಟ್ಟು 500 GB ಡೇಟಾ ಲಭ್ಯ ಖಚಿತ. ಹೆಚ್ಚುವರಿ ಆಗಿ ಜಿಯೋ ಆಪ್‌ಗಳ ಸೌಲಭ್ಯ ಸಿಗಲಿದೆ.

ಜಿಯೋ 859ರೂ. ಪ್ರೀಪೇಯ್ಡ್‌ ಯೋಜನೆ

ರಿಲಯನ್ಸ್‌ ಜಿಯೋ 859 ರೂ. ರೀಚಾರ್ಜ್‌ ಪ್ರೀಪೇಯ್ಡ್‌ ಯೋಜನೆಯು ದೀರ್ಘಾವಧಿಯ ಯೋಜನೆ ಆಗಿದ್ದು, ಒಟ್ಟು 90 ದಿನಗಳ ವ್ಯಾಲಿಡಿಟಿ ( Validity ) ಸೌಲಭ್ಯ ಪಡೆದುಕೊಂಡಿದೆ. ಈ ಅವಧಿಯಲ್ಲಿ ಚಂದಾದಾರರಿಗೆ ಪ್ರತಿದಿನ 2 GB ಡೇಟಾ ಸೌಲಭ್ಯ ಲಭ್ಯ ಇದ್ದು, ಹಾಗೆಯೇ ಅನಿಯಮಿತ ವಾಯಿಸ್‌ ಕರೆ ಪ್ರಯೋಜನ ಸಹ ಹೊಂದಿದೆ.

ಜಿಯೋ 999ರೂ. ಪ್ರೀಪೇಯ್ಡ್‌ ಯೋಜನೆ

ಜಿಯೋ ಟೆಲಿಕಾಂನ 999 ರೂ. ರೀಚಾರ್ಜ್‌ ಯೋಜನೆಯು ದೀರ್ಘಾವಧಿಯ ಪ್ಲ್ಯಾನ್‌ ಆಗಿದ್ದು, ಒಟ್ಟು 98 ದಿನಗಳ ವ್ಯಾಲಿಡಿಟಿ (Validity) ಸೌಲಭ್ಯ ಪಡೆದುಕೊಂಡಿದೆ. ಈ ಅವಧಿಯಲ್ಲಿ ಚಂದಾದಾರರಿಗೆ ಪ್ರತಿದಿನ 2 GB ಡೇಟಾ ಪ್ರಯೋಜನ ಲಭ್ಯ ಇದ್ದು, ಹಾಗೆಯೇ ಅನಿಯಮಿತ ವಾಯಿಸ್‌ ಕರೆ ಪ್ರಯೋಜನ ಸಹ ಲಭ್ಯವಾಗಲಿದೆ. ಅಲ್ಲದೇ ಇದರಲ್ಲಿ ಪ್ರತಿದಿನ 100 ಎಸ್‌ಎಮ್‌ಎಸ್‌ ಸೌಲಭ್ಯ ಸಹ ಹೊಂದಿದೆ.

Best Mobiles in India

English summary
Jio Rs 2025 Plan Explained: Data, Validity, SMS and Other benefits. check all details.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+