Home
ಸುದ್ದಿಜಾಲ

ಜಿಯೋ 222ರೂ. ರೀಚಾರ್ಜ್: ಉಚಿತ ಡಿಸ್ನಿ ಪ್ಲಸ್‌ ಹಾಟ್‌ಸ್ಟಾರ್‌ VIP ಸದಸ್ಯತ್ವ!

ಟೆಲಿಕಾಂ ವಲಯದಲ್ಲಿ ಜಿಯೋ ಹೆಚ್ಚಿನ ಬಳಕೆದಾರರನ್ನು ಹೊಂದುದ್ದು, ಆಕರ್ಷಕ ಪ್ರೀಪೇಯ್ಡ್ ಪ್ಲ್ಯಾನ್‌ಗಳಿಂದ ಗ್ರಾಹಕರನ್ನು ಸೆಳೆದಿದೆ. ಜಿಯೋ ಈಗಾಗಲೆ ಹಲವು ಡೇಟಾ ಮತ್ತು ವ್ಯಾಲಿಡಿಟಿ ಸೌಲಭ್ಯದ ಪ್ರೀಪೇಯ್ಡ್‌ ಯೋಜನೆಗಳನ್ನು ಪ್ರಕಟಿಸಿದೆ. ಹಾಗೆಯೇ ಕೆಲವು ಪ್ಲ್ಯಾನ್‌ಗಳಲ್ಲಿ ಡೇಟಾ ಜೊತೆಗೆ ಹೆಚ್ಚುವರಿ ಮನರಂಜನೆಯ ಪ್ರಯೋಜನಗಳನ್ನು ಒದಗಿಸಿದೆ. ಅದೇ ಹಾದಿಯಲ್ಲಿ ಇದೀಗ ನೂತನ 222ರೂ. ಪ್ರೀಪೇಯ್ಡ್‌ ಪ್ಲ್ಯಾನಿನಲ್ಲಿ ಕೊಡುಗೆಯೊಂದನ್ನು ಘೋಷಿಸಿದೆ.

ಹೌದು, ಜಿಯೋ ಟೆಲಿಕಾಂ ಹೊಸ 222ರೂ. ಪ್ಲ್ಯಾನಿನಲ್ಲಿ ಪರಿಚಯಿಸಿದ್ದು, ಈ ಯೋಜನೆಯಲ್ಲಿ ಡಿಸ್ನಿ ಪ್ಲಸ್‌ ಹಾಟ್‌ಸ್ಟಾರ್‌ VIP ವಾರ್ಷಿಕ ಸದಸ್ಯತ್ವ ಪ್ರಯೋಜನ ತಿಳಿಸಿದೆ. ಇತ್ತೀಚಿಗಷ್ಟೆ ಜಿಯೋ 401ರೂ. ಪ್ಲ್ಯಾನಿನಲ್ಲಿ ಡಿಸ್ನಿ ಪ್ಲಸ್‌ ಹಾಟ್‌ಸ್ಟಾರ್‌ VIP ವಾರ್ಷಿಕ ಸದಸ್ಯತ್ವ ಕೊಡುಗೆ ನೀಡಿತ್ತು. ವಾರ್ಷಿಕ ಅವಧಿಯ ಪ್ಲ್ಯಾನ್ ರೀಚಾರ್ಜ್ ಮಾಡಿಸಿಕೊಂಡವರಿಗೆ ಡಿಸ್ನಿ ಪ್ಲಸ್‌ ಹಾಟ್‌ಸ್ಟಾರ್‌ VIP ವಾರ್ಷಿಕ ಸದಸ್ಯತ್ವ ಸೌಲಭ್ಯ ಪಡೆಯಲು ಈ ಯೋಜನೆ ಅನುಕೂಲ ಎನ್ನಲಾಗಿದೆ.

ಜಿಯೋ 222ರೂ. ರೀಚಾರ್ಜ್

ಜಿಯೋ 222ರೂ. ರೀಚಾರ್ಜ್

ಜಿಯೋ 222ರೂ. ರೀಚಾರ್ಜ್ ನಲ್ಲಿ ಬಳಕೆದಾರರಿಗೆ ಡಿಸ್ನಿ ಪ್ಲಸ್‌ ಹಾಟ್‌ಸ್ಟಾರ್‌ VIP ವಾರ್ಷಿಕ ಸದಸ್ಯತ್ವ ಸೌಲಭ್ಯ ದೊರೆಯುತ್ತದೆ. ಅದರೊಂದಿಗೆ 15GB ಡೇಟಾ ಪ್ರಯೋಜನವು ಸಹ ಲಭ್ಯವಾಗುತ್ತದೆ. ವಾರ್ಷಿಕ ವ್ಯಾಲಿಡಿಟಿ ಯೋಜನೆ ಪಡೆದವರು ಸಹ ಡಿಸ್ನಿ ಪ್ಲಸ್‌ ಹಾಟ್‌ಸ್ಟಾರ್‌ VIP ವಾರ್ಷಿಕ ಸದಸ್ಯತ್ವ ಸೌಲಭ್ಯ ಪಡೆಯಲು ಈ ರೀಚಾರ್ಜ್ ನೆರವಾಗಲಿದೆ. ಇನ್ನು ಇದೇ ರೀತಿ ಪ್ರಯೋಜನ ಪಡೆದಿರುವ ಜಿಯೋದ 401ರೂ. ಹಾಗೂ ಏರ್‌ಟೆಲ್‌ನ 401ರೂ. ಯೋಜನೆಗಳ ಬಗ್ಗೆ ಮಾಹಿತಿ ಮುಂದೆ ನೋಡೋಣ ಬನ್ನಿರಿ.

ಜಿಯೋ 401ರೂ. ಪ್ಲ್ಯಾನ್

ಜಿಯೋ 401ರೂ. ಪ್ಲ್ಯಾನ್

ಜಿಯೋ ಟೆಲಿಕಾಂನ ಈ ಹೊಸ ಪ್ರೀಪೇಯ್ಡ್‌ ಪ್ಲ್ಯಾನ್ ಒಟ್ಟು 28 ದಿನಗಳ ವ್ಯಾಲಿಡಿಟಿಯನ್ನು ಒಳಗೊಂಡಿದ್ದು, ಈ ಅವಧಿಯಲ್ಲಿ ಪ್ರತಿದಿನ ಒಟ್ಟು 90GB ಡೇಟಾ ಪ್ರಯೋಜನವನ್ನು ಒಳಗೊಂಡಿದೆ. ಜಿಯೋ ಟು ಜಿಯೋ ಉಚಿತ ವಾಯಿಸ್ ಕರೆ ಹಾಗೂ ಜಿಯೋ ಟು ಇತರೆ ಟೆಲಿಕಾಂಗಳಿಗೆ 1000 ನಿಮಿಷಗಳ ಕರೆ ಮಿತಿ ಸೌಲಭ್ಯವಿದೆ. ಜೊತೆಗೆ ಪ್ರತಿದಿನ 100 ಎಸ್‌ಎಮ್‌ಎಸ್‌ ಪ್ರಯೋಜನ ಸಹ ಇದೆ. ಹಾಗೆಯೇ ಇದರೊಂದಿಗೆ ಹೆಚ್ಚುವರಿಯಾಗಿ 399ರೂ ಶುಲ್ಕದ ಡಿಸ್ನಿ ಪ್ಲಸ್‌ ಹಾಟ್‌ಸ್ಟಾರ್‌ VIP ಸದಸ್ಯತ್ವ ಸಹ ಲಭ್ಯವಾಗುತ್ತದೆ.

ಏರ್‌ಟೆಲ್‌ 401ರೂ. ಪ್ಲ್ಯಾನ್

ಏರ್‌ಟೆಲ್‌ 401ರೂ. ಪ್ಲ್ಯಾನ್

ಏರ್‌ಟೆಲ್‌ ಸಂಸ್ಥೆಯ ಈ ಪ್ರೀಪೇಯ್ಡ್‌ ಪ್ಲ್ಯಾನ್ ಸಹ ಒಟ್ಟು 28 ದಿನಗಳ ವ್ಯಾಲಿಡಿಟಿಯನ್ನು ಒಳಗೊಂಡಿದ್ದು, ಈ ಅವಧಿಯಲ್ಲಿ ಪ್ರತಿದಿನ 3GB ಡೇಟಾ ಪ್ರಯೋಜನ ದೊರೆಯುತ್ತದೆ. ಹಾಗೆಯೇ ಹೆಚ್ಚುವರಿಯಾಗಿ 399ರೂ ಶುಲ್ಕದ ಡಿಸ್ನಿ ಪ್ಲಸ್‌ ಹಾಟ್‌ಸ್ಟಾರ್‌ VIP ಸದಸ್ಯತ್ವ ಸಹ ಲಭ್ಯವಾಗುತ್ತದೆ. ಅಂದಹಾಗೆ ಡಿಸ್ನಿ ಪ್ಲಸ್‌ ಹಾಟ್‌ಸ್ಟಾರ್‌ VIP ಸದಸ್ಯತ್ವವು ಒಂದು ವರ್ಷದ ವಾಯ್ದೆಯನ್ನು ಪಡೆದಿರುತ್ತದೆ. ಆದರೆ ಈ ಪ್ಲ್ಯಾನಿನಲ್ಲಿ ಯಾವುದೇ ಉಚಿತ ಕರೆ ಹಾಗೂ ಎಸ್‌ಎಮ್‌ಎಸ್‌ ಸೌಲಭ್ಯಗಳು ಲಭ್ಯವಿರುವುದಿಲ್ಲ.

Best Mobiles in India

English summary
Jio’s Rs 222 plan, get 15GB high-speed internet along with a free subscription for Disney+ Hotstar.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+