ಜಿಯೋ 247ರೂ. ಪ್ಲ್ಯಾನ್‌ನಲ್ಲಿ ಡೇಟಾ ಎಷ್ಟು?..ರೀಚಾರ್ಜ್‌ಗೆ ಉತ್ತಮವೇ?
ಭಾರತೀಯ ಟೆಲಿಕಾಂ ವಲಯದಲ್ಲಿ ಮುಂಚೂಣಿಯಲ್ಲಿ ಗುರುತಿಸಿಕೊಂಡಿರುವ ಜಿಯೋ, ಗ್ರಾಹಕರನ್ನು ಸೆಳೆಯಲು ಆಕರ್ಷಕ ಡೇಟಾ ಪ್ಲ್ಯಾನ್‌ಗಳನ್ನು ಪರಿಚಯಿಸಿದೆ. ಮತ್ತೆ ಅದೇ ಹಾದಿಯಲ್ಲಿ ಮುನ್ನಡೆದಿರುವ ಜಿಯೋ ಇತ್ತೀಚಿಗಷ್ಟೆ ಜಿಯೋ ಫ್ರೀಡಂ ಯೋಜನೆಗಳನ್ನು ಬಿಡುಗಡೆ ಮಾಡಿದೆ. ಆ ಪೈಕಿ ಜಿಯೋ 247ರೂ. ಫ್ರೀಡಂ ಯೋಜನೆ ಆಕರ್ಷಕ ಎನಿಸಿದೆ. ಈ ಯೋಜನೆಯು ವ್ಯಾಲಿಡಿಟಿ ಮತ್ತು ಡೇಟಾ ಸೌಲಭ್ಯ ಪಡೆದಿದೆ.

ಹೌದು, ಜಿಯೋ ಟೆಲಿಕಾಂನ ನೂತನ 247ರೂ. ಪ್ರೀಪೇಯ್ಡ್ ಪ್ಲ್ಯಾನ್ ಅಲ್ಪಾವಧಿಯ ಯೋಜನೆ ಆಗಿದ್ದು, 30 ದಿನಗಳ ವ್ಯಾಲಿಡಿಟಿಯನ್ನು ಪಡೆದಿದೆ. ಈ ಯೋಜನೆಯು ಡೇಟಾ ಜೊತೆಗೆ ಅನಿಯಮಿತ ವಾಯಿಸ್ ಕರೆಯ ಪ್ರಯೋಜನ ಹೊಂದಿದ್ದು, ಎಸ್‌ಎಮ್‌ಎಸ್ ಸೌಲಭ್ಯ ಸಹ ಪಡೆದಿದೆ. ಇದರೊಂದಿಗೆ ಜಿಯೋ ಆಪ್ಸ್‌ಗಳ ಪ್ರಯೋಜನಗಳು ಈ ಯೋಜನೆಯಲ್ಲಿ ದೊರೆಯುತ್ತವೆ. ಹಾಗಾದರೇ ಜಿಯೋದ ಈ ವಾರ್ಷಿಕ ಪ್ರೀಪೇಯ್ಡ್ ಪ್ಲ್ಯಾನ್ ರೀಚಾರ್ಜ್ ಮಾಡಿಸಲು ಉತ್ತಮವೇ?..ಈ ಯೋಜನೆಯ ಪ್ರಯೋಜನಗಳೇನು? ಎಂಬುದನ್ನು ಮುಂದೆ ತಿಳಿಯೋಣ ಬನ್ನಿರಿ.

ಜಿಯೋ 247ರೂ. ಪ್ರೀಪೇಯ್ಡ್ ಪ್ಲಾನ್
ಜಿಯೋ ಟೆಲಿಕಾಂನ ಈ ಪ್ಲ್ಯಾನಿನಲ್ಲಿ ಪೂರ್ಣ ವ್ಯಾಲಿಡಿಟಿ ಅವಧಿಗೆ ಒಟ್ಟು 25GB ಡೇಟಾ ಪ್ರಯೋಜನ ಲಭ್ಯವಾಗಲಿದೆ. ಇದರೊಂದಿಗೆ ಅನಿಯಮಿತ ವಾಯಿಸ್ ಕರೆಯ ಸೌಲಭ್ಯ ಸಿಗಲಿದೆ. ಹಾಗೆಯೇ ಪ್ರತಿದಿನ 100 ಎಸ್‌ಎಮ್‌ಎಸ್ ಸೌಲಭ್ಯವು ಲಭ್ಯ. ಇನ್ನು ಈ ಯೋಜನೆಯು 30 ದಿನಗಳ ವ್ಯಾಲಿಡಿಟಿ ಪಡೆದಿದೆ. ಹೆಚ್ಚುವರಿಯಾಗಿ ಜಿಯೋ ಸಿನಿಮಾ, ಜಿಯೋ ನ್ಯೂಸ್, ಜಿಯೋ ಸೆಕ್ಯುರಿಟಿ, ಜಿಯೋ ಕ್ಲೌಡ್, ಜಿಯೋ ಟಿವಿ ಸೇವೆಗಳು ದೊರೆಯುತ್ತವೆ.

ಜಿಯೋ 555ರೂ. ಪ್ರೀಪೇಯ್ಡ್ ಪ್ಲಾನ್
ಜಿಯೋ 555ರೂ. ಪ್ರೀಪೇಯ್ಡ್ ಪ್ಲ್ಯಾನ್ ಆಲ್-ಇನ್-ಒನ್ ಕೊಡುಗೆಯ ಪ್ಲ್ಯಾನ್ ಆಗಿದ್ದು, ಈ ಪ್ಲ್ಯಾನ್ ಒಟ್ಟು 84 ದಿನಗಳ ವ್ಯಾಲಿಡಿಟಿ ಅವಧಿಯನ್ನು ಪಡೆದುಕೊಂಡಿದೆ. ಈ ಅವಧಿಯಲ್ಲಿ ಪ್ರತಿದಿನ 1.5GB ಡೇಟಾ ಪ್ರಯೋಜನ ಲಭ್ಯವಾಗಲಿದ್ದು ಹಾಗೆಯೇ ಪ್ರತಿದಿನ 100 ಉಚಿತ ಎಸ್ಎಮ್ಎಸ್ ಸೌಲಭ್ಯ ಸಹ ದೊರೆಯುತ್ತದೆ. ಜಿಯೋ ಸೇರಿದಂತೆ ಇತರೆ ನೆಟವರ್ಕ್‌ಗಳಿಗೂ ಅನಿಯಮಿತ ಉಚಿತ ವಾಯಿಸ್ ಕರೆಗಳ ಸೌಲಭ್ಯ. ಒಟ್ಟು ಈ ಯೋಜನೆಯಲ್ಲಿ ಗ್ರಾಹಕರಿಗೆ 126GB ಡೇಟಾ ಪ್ರಯೋಜನ ಲಭ್ಯವಾಗಲಿದೆ. ಜಿಯೋ ಟಿವಿ, ಜಿಯೋ ಸೆಕ್ಯುರಿಟಿ, ಜಿಯೋ ನ್ಯೂಸ್, ಜಿಯೋ ಸಿನಿಮಾ ಆಪ್‌ಗಳ ಸೌಲಭ್ಯ ಸಿಗಲಿದೆ.

ಜಿಯೋ 599ರೂ. ಪ್ರೀಪೇಯ್ಡ್ ಪ್ಲಾನ್
ಜಿಯೋ 599ರೂ. ಪ್ರೀಪೇಯ್ಡ್ ಪ್ಲ್ಯಾನ್ ಒಟ್ಟು 84 ದಿನಗಳ ವ್ಯಾಲಿಡಿಟಿ ಅವಧಿಯನ್ನು ಪಡೆದುಕೊಂಡಿದೆ. ಈ ಅವಧಿಯಲ್ಲಿ ಪ್ರತಿದಿನ 2GB ಡೇಟಾ ಪ್ರಯೋಜನ ಲಭ್ಯವಾಗಲಿದೆ. ಹಾಗೆಯೇ ಪ್ರತಿದಿನ 100 ಉಚಿತ ಎಸ್ಎಮ್ಎಸ್ ಸೌಲಭ್ಯ ಸಹ ಒಳಗೊಂಡಿದೆ. ಇದರೊಂದಿಗೆ ಜಿಯೋ ಸೇರಿದಂತೆ ಇತರೆ ನೆಟವರ್ಕ್‌ಗಳಿಗೂ ಅನಿಯಮಿತ ಉಚಿತ ವಾಯಿಸ್ ಕರೆಗಳ ಸೌಲಭ್ಯ.

ಜಿಯೋ 444ರೂ. ಪ್ರೀಪೇಯ್ಡ್ ಪ್ಲಾನ್
ಜಿಯೋದ ಈ ಪ್ಲ್ಯಾನ್ ಒಟ್ಟು 56 ದಿನಗಳ ವ್ಯಾಲಿಡಿಟಿ ಹೊಂದಿದ್ದು, ಈ ಅವಧಿಯಲ್ಲಿ ಪ್ರತಿದಿನ 2GB ಡೇಟಾ ಪ್ರಯೋಜನ ಸಿಗುತ್ತದೆ. (ಒಟ್ಟು ಡೇಟಾ 112GB). ಹಾಗೆಯೇ ಜಿಯೋದಿಂದ ಜಿಯೋ ನೆಟವರ್ಕ ಕರೆಗಳು ಉಚಿತವಾಗಿರುತ್ತವೆ. ಜಿಯೋದಿಂದ ಇತರೆ ನೆಟವರ್ಕ್‌ಗಳಿಗೂ ಅನಿಯಮಿತ ಉಚಿತ ವಾಯಿಸ್ ಕರೆಗಳ ಸೌಲಭ್ಯ.


Click it and Unblock the Notifications








