Home
ಸುದ್ದಿಜಾಲ

ಜಿಯೋದ ಈ ಪ್ಲ್ಯಾನ್‌ ಬೆಲೆ ತುಂಬಾ ಅಗ್ಗ!..7GB ಡೇಟಾ ಸಂಪೂರ್ಣ ಉಚಿತ!

ದೇಶದ ಮುಂಚೂಣಿಯ ಟೆಲಿಕಾಂ ಆಗಿ ಕಾಣಿಸಿಕೊಮಡಿರುವ ರಿಲಯನ್ಸ್‌ ಜಿಯೋ ಟೆಲಿಕಾಂ ಈಗಾಗಲೇ ಕೆಲವು ಜನಪ್ರಿಯ ಪ್ರೀಪೇಯ್ಡ್‌ ಪ್ಲ್ಯಾನ್‌ಗಳ ಅಧಿಕ ಗ್ರಾಹಕರನ್ನು ಆಕರ್ಷಿಸಿದೆ. ಜಿಯೋ ಟೆಲಿಕಾಂನ ಬಹುತೇಕ ರೀಚಾರ್ಜ್‌ ಪ್ಲ್ಯಾನ್‌ಗಳು ಅಧಿಕ ಡೇಟಾ ಸೌಲಭ್ಯ ಪಡೆದಿದ್ದು, ಬೊಂಬಾಟ್‌ ವ್ಯಾಲಿಡಿಟಿ ಕೂಡಾ ಪಡೆದಿವೆ. ಅವುಗಳಲ್ಲಿ ಜಿಯೋದ ಅಗ್ಗದ ಬೆಲೆಯ ರೀಚಾರ್ಜ್‌ ಯೋಜನೆಯೊಂದು ಈಗ ಭಾರೀ ಗಮನ ಸೆಳೆದಿದೆ.

ಹೌದು, ಜಿಯೋ ಟೆಲಿಕಾಂನ 299ರೂ. ಬೆಲೆಯ ರೀಚಾರ್ಜ್‌ ಯೋಜನೆಯು ಅಧಿಕ ಡೇಟಾ ಪ್ರಯೋಜನದ ಮೂಲಕ ಈಗ ಚಂದಾದಾರರು ಈ ಯೋಜನೆಯ ಬಗ್ಗೆ ನೋಡುವಂತಾಗಿದೆ. ಜಿಯೋ 7 ನೇ ವಾರ್ಷಿಕೋತ್ಸವ ಪ್ರಯುಕ್ತ ಈ ಪ್ಲ್ಯಾನಿನಲ್ಲಿ ಹೆಚ್ಚುವರಿಯಾಗಿ 7GB ಡೇಟಾ ಪ್ರಯೋಜನ ಘೋಷಿಸಿದೆ. ಅನಿಯಮಿತ ಧ್ವನಿ ಕರೆ, ಡೇಟಾ ಪ್ರಯೋಜನದ ಜೊತೆಗೆ ಎಸ್‌ಎಮ್‌ಎಸ್‌ ಪ್ರಯೋಜನ ಸಹ ಪಡೆದಿದೆ.

ಜಿಯೋದ ಈ ಪ್ಲ್ಯಾನ್‌ ಬೆಲೆ ತುಂಬಾ ಅಗ್ಗ!..7GB ಡೇಟಾ ಸಂಪೂರ್ಣ ಉಚಿತ!

ಹಾಗೆಯೇ ಜಿಯೋ ಟೆಲಿಕಾಂನ ಈ ಅಗ್ಗದ ಪ್ಲ್ಯಾನ್‌ ಎಸ್‌ಎಮ್‌ಎಸ್‌ ಪ್ರಯೋಜನ ಸಹ ಪಡೆದಿದ್ದು, ಕೆಲವು ಜಿಯೋ ಆಪ್ಸ್‌ ಲಭ್ಯ ಆಗಲಿವೆ. ಹಾಗಾದರೆ ಜಿಯೋ 299ರೂ. ಪ್ರೀಪೇಯ್ಡ್‌ ಯೋಜನೆಯ ಇತರೆ ಪ್ರಯೋಜನಗಳು ಏನು? ಹಾಗೂ ಇತರೆ ಜನಪ್ರಿಯ ಪ್ಲ್ಯಾನ್‌ಗಳ ಮಾಹಿತಿಗಾಗಿ ಮುಂದೆ ಓದಿರಿ.

ಜಿಯೋ 299ರೂ. ರೀಚಾರ್ಜ್‌ ಪ್ಲ್ಯಾನ್ ಪ್ರಯೋಜನ ಹೀಗಿವೆ
ಜಿಯೋ ಟೆಲಿಕಾಂನ 299ರೂ. ರೀಚಾರ್ಜ್‌ ಯೋಜನೆಯು ಒಟ್ಟು 28 ದಿನಗಳ ವ್ಯಾಲಿಡಿಟಿ ಸೌಲಭ್ಯ ಒಳಗೊಂಡಿದೆ. ಈ ವೇಳೆ ಗ್ರಾಹಕರಿಗೆ ಪ್ರತಿದಿನ 2 GB ದೈನಂದಿನ ಡೇಟಾ ಪ್ರಯೋಜನ ದೊರೆಯಲಿದ್ದು, ಹಾಗೆಯೇ ಜಿಯೋ ವಾರ್ಷಿಕೋತ್ಸವ ಅಂಗವಾಗಿ ಹೆಚ್ಚುವರಿಯಾಗಿ 7GB ಡೇಟಾ ಉಚಿತವಾಗಿ ಲಭ್ಯವಾಗಲಿದೆ.

ಹೀಗಾಗಿ ಪೂರ್ಣ ವ್ಯಾಲಿಡಿಟಿ ಅವಧಿಗೆ ಒಟ್ಟಾರೇಯಾಗಿ 56GB + 7GB = 63GB ಡೇಟಾ ಪ್ರಯೋಜನ ಸಿಗಲಿದೆ. ಇದರ ಜೊತೆಗೆ ಅನಿಯಮಿತ ಧ್ವನಿ ಕರೆಗಳ ಸೌಲಭ್ಯ ಮತ್ತು ಪ್ರತಿದಿನ 100 ಉಚಿತ ಎಸ್‌ಎಂಎಸ್ ಸಹ ಲಭ್ಯ ಆಗಲಿವೆ. ಇಷ್ಟೇ ಅಲ್ಲದೇ ಜಿಯೋ ಟಿವಿ, ಜಿಯೋ ಮೂವಿಸ್, ಜಿಯೋ ನ್ಯೂಸ್ ಹಾಗೂ ಇತರೆ ಸೇವೆಗಳು ಗ್ರಾಹಕರಿಗೆ ಖಚಿತ.

ಇತರೆ ಜನಪ್ರಿಯ ಜಿಯೋ ಪ್ಲ್ಯಾನ್‌ಗಳ ಮಾಹಿತಿ
ಜಿಯೋ 666ರೂ. ಪ್ಲ್ಯಾನ್ ಒಟ್ಟು 84 ದಿನಗಳ ವ್ಯಾಲಿಡಿಟಿ ಸೌಲಭ್ಯವನ್ನು ಪಡೆದುಕೊಂಡಿದ್ದು, ಈ ವೇಳೆ ಯಲ್ಲಿ ಪ್ರತಿದಿನ 1.5 GB ಡೇಟಾ ಪ್ರಯೋಜನ ಒದಗಿಸಲಿದೆ. ಹಾಗೆಯೇ ಪ್ರತಿದಿನ 100 ಉಚಿತ ಎಸ್ಎಮ್ಎಸ್ ಸೌಲಭ್ಯ ಸಹ ಗ್ರಾಹಕರಿಗೆ ಲಭ್ಯವಾಗಲಿದೆ. ಇದರ ಜೊತೆಗೆ ಅನಿಯಮಿತ ಉಚಿತ ಧ್ವನಿ ಕರೆಗಳ ಸೌಲಭ್ಯ ಸಹ ಚಂದಾದಾರರಿಗೆ ದೊರೆಯುತ್ತದೆ.

ಜಿಯೋ ಸಂಸ್ಥೆಯ 719ರೂ ರೀಚಾರ್ಜ್‌ ಪ್ಲ್ಯಾನ್‌ ಒಟ್ಟು 84 ದಿನಗಳ ವ್ಯಾಲಿಡಿಟಿ ಪಡೆದುಕೊಂಡಿದೆ. ಈ ಅವಧಿಯಲ್ಲಿ ಗ್ರಾಹಕರಿಗೆ ಡೈಲಿ 2 GB ಡೇಟಾ ದೊರೆಯಲಿದ್ದು, ಹಾಗೆಯೇ ಡೈಲಿ 100 ಫ್ರಿ ಎಸ್ಎಮ್ಎಸ್ ಪ್ರಯೋಜನ ಸಹ ಲಭ್ಯ ಆಗಲಿದೆ. ಇದರೊಂದಿಗೆ ಅನಿಯಮಿತ ಧ್ವನಿ ವಾಯಿಸ್ ಕರೆಗಳ ಸೌಲಭ್ಯ ಇರುತ್ತದೆ. ಇನ್ನು ಪೂರ್ಣ ವ್ಯಾಲಿಡಿಟಿಗೆ ಒಟ್ಟಾರೇ 168 GB ಡೇಟಾ ಪ್ರಯೋಜನ ಗ್ರಾಹಕರಿಗೆ ಲಭ್ಯ ಆಗಲಿದೆ.

ರಿಲಯನ್ಸ್‌ ಜಿಯೋ ಸಂಸ್ಥೆಯ 1066ರೂ. ರೀಚಾರ್ಜ್‌ ಪ್ಲ್ಯಾನ್‌ ಒಟ್ಟು 84 ದಿನಗಳ ವ್ಯಾಲಿಡಿಟಿ ಪಡೆದುಕೊಂಡಿದೆ. ಈ ಅವಧಿಯಲ್ಲಿ ಪ್ರತಿದಿನ 2 GB ಡೇಟಾ ಸೌಲಭ್ಯ ಇರಲಿದ್ದು, ಹಾಗೆಯೇ ಡೈಲಿ 100 ಉಚಿತ ಎಸ್ಎಮ್ಎಸ್ ಸೌಲಭ್ಯ ಸಹ ಸಿಗುತ್ತದೆ. ಇದರ ಜೊತೆಗೆ ಅನಿಯಮಿತ ಉಚಿತ ಧ್ವನಿ ಕರೆಗಳ ಪ್ರಯೋಜನ ಕೂಡಾ ಗ್ರಾಹಕರಿಗೆ ಲಭ್ಯ ಆಗಲಿದೆ. ಇನ್ನು ಪೂರ್ಣ ವ್ಯಾಲಿಡಿಟಿ ಅವಧಿಗೆ ಗ್ರಾಹಕರಿಗೆ ಒಟ್ಟು 173 GB ಡೇಟಾ ಸಿಗಲಿದೆ.

Best Mobiles in India

English summary
Jio offering 7GB data for free in rs 299 prepaid plan due to jio anniversary special.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+