ಈ ಪ್ರೀಪೇಯ್ಡ್ ಪ್ಲ್ಯಾನಿನಲ್ಲಿ ಭರ್ಜರಿ ಪ್ರಯೋಜನ!..ಆದ್ರೆ, ಬೆಲೆ ದುಬಾರಿ!
ದೇಶದ ಟೆಲಿಕಾಂ ವಲಯದಲ್ಲಿ ಮುಂಚೂಣಿಯ ಸಂಸ್ಥೆಯಾಗಿ ಗುರುತಿಸಿಕೊಂಡಿರುವ ಜಿಯೋ, ಚಂದಾದಾರರನ್ನು ಸೆಳೆಯಲು ಆಕರ್ಷಕ ಡೇಟಾ ಪ್ಲ್ಯಾನ್‌ಗಳನ್ನು ಪರಿಚಯಿಸಿದೆ. ಅದೇ ಹಾದಿಯಲ್ಲಿ ಮುಂದೆ ಸಾಗಿರುವ ಜಿಯೋ ಇದೀಗ ಅಲ್ಪಾವಧಿಯ ಯೋಜನೆಗಳ ಜೊತೆಗೆ ಕೆಲವು ಆಕರ್ಷಕ ದೀರ್ಘಾವಧಿಯ ಪ್ಲ್ಯಾನ್‌ಗಳನ್ನು ಪಡೆದಿದೆ. ಆ ಪೈಕಿ ಜಿಯೋ 3,499ರೂ. ಪ್ರೀಪೇಯ್ಡ್ ಪ್ಲ್ಯಾನ್ ದುಬಾರಿ ಪ್ರೈಸ್ ಟ್ಯಾಗ್ ಅನಿಸಿದರೂ, ಆಕರ್ಷಕ ಪ್ರಯೋಜನಗಳನ್ನು ಪಡೆದಿದೆ.

ಹೌದು, ಜಿಯೋ ಟೆಲಿಕಾಂನ 3,499ರೂ. ಪ್ರೀಪೇಯ್ಡ್ ಪ್ಲ್ಯಾನ್ ವಾರ್ಷಿಕ ಅವಧಿ ವ್ಯಾಲಿಡಿಟಿಯ ಪ್ರೀಪೇಯ್ಡ್ ಪ್ಲ್ಯಾನ್ ಆಗಿದೆ. ಈ ಪ್ರೀಪೇಯ್ಡ್ ಪ್ಲ್ಯಾನ್ ದೈನಂದಿನ ಡೇಟಾ ಜೊತೆಗೆ ಅನಿಯಮಿತ ವಾಯಿಸ್ ಕರೆಯ ಪ್ರಯೋಜನ ಹೊಂದಿದ್ದು, ವಾರ್ಷಿಕ ವ್ಯಾಲಿಡಿಟಿ ಸಹ ಪಡೆದಿದೆ. ಇದರೊಂದಿಗೆ ಜಿಯೋ ಆಪ್ಸ್‌ಗಳ ಪ್ರಯೋಜನಗಳು ಸಹ ಲಭ್ಯವಾಗಲಿವೆ. ಹಾಗಾದರೇ ಜಿಯೋ ಟೆಲಿಕಾಂನ 3,499ರೂ. ಒಂದು ವರ್ಷದ ವ್ಯಾಲಿಡಿಟಿಯ ಪ್ರೀಪೇಯ್ಡ್ ಪ್ಲ್ಯಾನ್ ರೀಚಾರ್ಜ್ ಮಾಡಿಸಿಕೊಳ್ಳಲು ಯೋಗ್ಯವೇ?.ಈ ಯೋಜನೆಯ ಹಾಗೂ ಇತರೆ ಜನಪ್ರಿಯ ಯೋಜನೆಗಳ ಪ್ರಯೋಜನಗಳೆನು ಎಂಬುದನ್ನು ಮುಂದೆ ತಿಳಿಯೋಣ ಬನ್ನಿರಿ.

ಜಿಯೋ 3,499ರೂ. ಪ್ರೀಪೇಯ್ಡ್ ಪ್ಲ್ಯಾನ್ ಪ್ರಯೋಜನಗಳು
ರಿಲಾಯನ್ಸ್ ಜಿಯೋ ಟೆಲಿಕಾಂನ 3,499ರೂ. ಪ್ರೀಪೇಯ್ಡ್ ಪ್ಲ್ಯಾನ್ ಒಂದು ವಾರ್ಷಿಕ ಅವಧಿಯ ಯೋಜನೆ ಆಗಿದೆ. ಈ ಯೋಜನೆಯು 365 ದಿನಗಳ ವ್ಯಾಲಿಡಿಟಿ ಅವಧಿಯನ್ನು ಪಡೆದಿದೆ. ಈ ಅವಧಿಯಲ್ಲಿ ಪ್ರತಿದಿನ 3GB ಡೇಟಾ ಪ್ರಯೋಜನಗಳು ಗ್ರಾಹಕರಿಗೆ ಲಭ್ಯವಾಗಲಿದ್ದು, ಪೂರ್ಣ ವ್ಯಾಲಿಡಿಟಿ ಅವಧಿಗೆ 1095 GB ಡೇಟಾ ಸೌಲಭ್ಯ ಸಿಗಲಿದೆ. ಹಾಗೆಯೇ ಜಿಯೋ ಸೇರಿದಂತೆ ಇತರೆ ನೆಟವರ್ಕ್‌ಗಳಿಗೂ ಅನಿಯಮಿತ ಉಚಿತ ವಾಯಿಸ್ ಕರೆಗಳ ಸೌಲಭ್ಯ. ಪ್ರತಿದಿನ 100 ಎಸ್ಎಮ್ಎಸ್ ಪ್ರಯೋಜನ ಸಹ ದೊರೆಯುತ್ತದೆ.

ಜಿಯೋ 2,399ರೂ. ಪ್ರೀಪೇಯ್ಡ್ ಪ್ಲ್ಯಾನ್ ಪ್ರಯೋಜನಗಳು
ರಿಲಾಯನ್ಸ್ ಜಿಯೋ ಟೆಲಿಕಾಂನ 2399ರೂ. ಪ್ರೀಪೇಯ್ಡ್ ಪ್ಲ್ಯಾನ್ ಒಂದು ವಾರ್ಷಿಕ ಅವಧಿಯ ಯೋಜನೆ ಆಗಿದೆ. ಈ ಯೋಜನೆಯು 365 ದಿನಗಳ ವ್ಯಾಲಿಡಿಟಿ ಅವಧಿಯನ್ನು ಪಡೆದಿದೆ. ಪ್ರತಿದಿನ 2GB ಡೇಟಾ ಪ್ರಯೋಜನಗಳು ಗ್ರಾಹಕರಿಗೆ ಲಭ್ಯವಾಗಲಿವೆ. ಜಿಯೋ ಸೇರಿದಂತೆ ಇತರೆ ನೆಟವರ್ಕ್‌ಗಳಿಗೂ ಅನಿಯಮಿತ ಉಚಿತ ವಾಯಿಸ್ ಕರೆಗಳ ಸೌಲಭ್ಯ. ಇದರೊಂದಿಗೆ ಪ್ರತಿದಿನ 100 ಎಸ್ಎಮ್ಎಸ್ ಪ್ರಯೋಜನ ಸಹ ದೊರೆಯುತ್ತದೆ. ಹೆಚ್ಚುವರಿಯಾಗಿ ಜಿಯೋ ಆಪ್ಸ್ ಪ್ರಯೋಜನ ಲಭ್ಯ.

ಜಿಯೋ 999ರೂ. ಪ್ರೀಪೇಯ್ಡ್ ಪ್ಲಾನ್ ಪ್ರಯೋಜನಗಳು
ರಿಲಾಯನ್ಸ್ ಜಿಯೋ 999ರೂ.ಪ್ಲ್ಯಾನ್ ಒಟ್ಟು 84 ದಿನಗಳ ವ್ಯಾಲಿಡಿಟಿ ಅವಧಿಯನ್ನು ಪಡೆದಿದೆ. ಈ ಅವಧಿಯಲ್ಲಿ ಪ್ರತಿದಿನ 3GB ಡೇಟಾ ಪ್ರಯೋಜನ ಲಭ್ಯವಾಗಲಿದ್ದು, 64Kbps ವೇಗದಲ್ಲಿ ಇಂಟರ್ನೆಟ್ ಇರಲಿದೆ. ಹಾಗೆಯೇ ಅನಿಯಮಿತ ಜಿಯೋ ಟು ಜಿಯೋ ಕರೆಗಳು, ಜಿಯೋ ಸೇರಿದಂತೆ ಇತರೆ ನೆಟವರ್ಕ್‌ಗಳಿಗೂ ಅನಿಯಮಿತ ಉಚಿತ ವಾಯಿಸ್ ಕರೆಗಳ ಸೌಲಭ್ಯ. ಜೊತೆಗೆ ಉಚಿತ ಎಸ್‌ಎಮ್‌ಎಸ್ ಜಿಯೋ ಆಪ್ ಸೇವೆಗಳು ಸಹ ಸಿಗುತ್ತವೆ.

ಜಿಯೋ 555ರೂ. ಪ್ರೀಪೇಯ್ಡ್ ಪ್ಲಾನ್ ಪ್ರಯೋಜನಗಳು
ಜಿಯೋ 555ರೂ. ಪ್ರೀಪೇಯ್ಡ್ ಪ್ಲ್ಯಾನ್ ಆಲ್-ಇನ್-ಒನ್ ಕೊಡುಗೆಯ ಪ್ಲ್ಯಾನ್ ಆಗಿದ್ದು, ಈ ಪ್ಲ್ಯಾನ್ ಒಟ್ಟು 84 ದಿನಗಳ ವ್ಯಾಲಿಡಿಟಿ ಅವಧಿಯನ್ನು ಪಡೆದುಕೊಂಡಿದೆ. ಈ ಅವಧಿಯಲ್ಲಿ ಪ್ರತಿದಿನ 1.5GB ಡೇಟಾ ಪ್ರಯೋಜನ ಲಭ್ಯವಾಗಲಿದ್ದು ಹಾಗೆಯೇ ಪ್ರತಿದಿನ 100 ಉಚಿತ ಎಸ್ಎಮ್ಎಸ್ ಸೌಲಭ್ಯ ಸಹ ದೊರೆಯುತ್ತದೆ. ಜಿಯೋ ಸೇರಿದಂತೆ ಇತರೆ ನೆಟವರ್ಕ್‌ಗಳಿಗೂ ಅನಿಯಮಿತ ಉಚಿತ ವಾಯಿಸ್ ಕರೆಗಳ ಸೌಲಭ್ಯ. ಹೆಚ್ಚುವರಿಯಾಗಿ ಜಿಯೋಕ್ಲೌಡ್, ಜಿಯೋ ಸೆಕ್ಯುರಿಟಿ, ಜಿಯೋ ಸಿನಿಮ, ಜಿಯೋನ್ಯೂಸ್ ಮತ್ತು ಜಿಯೋಟಿವಿ ಸೇರಿದಂತೆ ಜಿಯೋ ಅಪ್ಲಿಕೇಶನ್‌ಗಳ ಹೆಚ್ಚುವರಿ ಪ್ರಯೋಜನವನ್ನು ಹೊಂದಿವೆ.

ಜಿಯೋ 599ರೂ. ಪ್ರೀಪೇಯ್ಡ್ ಪ್ಲಾನ್ ಪ್ರಯೋಜನಗಳು
ಜಿಯೋ 599ರೂ. ಪ್ರೀಪೇಯ್ಡ್ ಪ್ಲ್ಯಾನ್ ಒಟ್ಟು 84 ದಿನಗಳ ವ್ಯಾಲಿಡಿಟಿ ಅವಧಿಯನ್ನು ಪಡೆದುಕೊಂಡಿದೆ. ಈ ಅವಧಿಯಲ್ಲಿ ಪ್ರತಿದಿನ 2GB ಡೇಟಾ ಪ್ರಯೋಜನ ಲಭ್ಯವಾಗಲಿದೆ. ಹಾಗೆಯೇ ಪ್ರತಿದಿನ 100 ಉಚಿತ ಎಸ್ಎಮ್ಎಸ್ ಸೌಲಭ್ಯ ಸಹ ಒಳಗೊಂಡಿದೆ. ಇದರೊಂದಿಗೆ ಜಿಯೋ ಸೇರಿದಂತೆ ಇತರೆ ನೆಟವರ್ಕ್‌ಗಳಿಗೂ ಅನಿಯಮಿತ ಉಚಿತ ವಾಯಿಸ್ ಕರೆಗಳ ಸೌಲಭ್ಯ. ಹೆಚ್ಚುವರಿಯಾಗಿ ಜಿಯೋಕ್ಲೌಡ್, ಜಿಯೋ ಸೆಕ್ಯುರಿಟಿ, ಜಿಯೋ ಸಿನಿಮ, ಜಿಯೋನ್ಯೂಸ್ ಮತ್ತು ಜಿಯೋಟಿವಿ ಸೇರಿದಂತೆ ಜಿಯೋ ಅಪ್ಲಿಕೇಶನ್‌ಗಳ ಹೆಚ್ಚುವರಿ ಪ್ರಯೋಜನವನ್ನು ಹೊಂದಿವೆ.

ಜಿಯೋ 499ರೂ. ಪ್ರೀಪೇಯ್ಡ್ ಪ್ಲ್ಯಾನ್ ಪ್ರಯೋಜನಗಳು
ಜಿಯೋ 499ರೂ. ಪ್ರೀಪೇಯ್ಡ್ ಪ್ಲ್ಯಾನ್ ಒಟ್ಟು 28 ದಿನಗಳ ವ್ಯಾಲಿಡಿಟಿ ಅವಧಿಯನ್ನು ಪಡೆದುಕೊಂಡಿದೆ. ಈ ಅವಧಿಯಲ್ಲಿ ಬಳಕೆದಾರರಿಗೆ ಪ್ರತಿದಿನ 3GB ಡೇಟಾ ಪ್ರಯೋಜನ ಲಭ್ಯ ವಾಗಲಿದೆ. ಹಾಗೆಯೇ ಪ್ರತಿದಿನ 100 ಉಚಿತ ಎಸ್ಎಮ್ಎಸ್ ಸೌಲಭ್ಯ ಸಹ ಒಳಗೊಂಡಿದೆ. ಇದರೊಂದಿಗೆ ಜಿಯೋ ಸೇರಿದಂತೆ ಇತರೆ ನೆಟವರ್ಕ್‌ಗಳಿಗೂ ಅನಿಯಮಿತ ಉಚಿತ ವಾಯಿಸ್ ಕರೆಗಳ ಸೌಲಭ್ಯ. ಹೆಚ್ಚುವರಿಯಾಗಿ ಡಿಸ್ನಿ ಪ್ಲಸ್ ಹಾಟ್‌ಸ್ಟಾರ್ ಚಂದಾದಾರಿಕೆಯ ಪ್ರಯೋಜನ ಪಡೆದಿದೆ. ಹಾಗೆಯೇ 6GB ಡೇಟಾ ಸಿಗಲಿದ್ದು, ಪೂರ್ಣ ವ್ಯಾಲಿಡಿಟಿಯ ಅವಧಿಗೆ ಒಟ್ಟಾರೇ 90GB ಡೇಟಾ ಪ್ರಯೋಜನ ಲಭ್ಯವಾಗಲಿದೆ.

ಜಿಯೋ 349ರೂ. ಪ್ರೀಪೇಯ್ಡ್ ಪ್ಲ್ಯಾನ್ ಪ್ರಯೋಜನಗಳು
ಜಿಯೋದ 349ರೂ. ಪ್ರೀಪೇಯ್ಡ್ ಪ್ಲ್ಯಾನಿನಲ್ಲಿ ಪ್ರತಿದಿನ 3GB ದೈನಂದಿನ ಡೇಟಾವನ್ನು ನೀಡುತ್ತದೆ, ಅಂದರೆ ಬಳಕೆದಾರರು ಒಟ್ಟು 84GB ಡೇಟಾವನ್ನು ಪಡೆಯುತ್ತಾರೆ. ಜೊತೆಗೆ ಪ್ರತಿದಿನ 100 ಎಸ್‌ಎಮ್‌ಎಸ್ ಸೌಲಭ್ಯ ದೊರೆಯುತ್ತದೆ. ಇದರೊಂದಿದೆ ಈ ಯೋಜನೆಯು ಸಹ ಸಂಪೂರ್ಣ ಅನಿಯಮಿತ ವಾಯಿಸ್ ಕರೆಗಳ ಸೌಲಭ್ಯವನ್ನು ಪಡೆದಿದೆ. ಈ ಯೋಜನೆಯು ಒಟ್ಟು 28 ದಿನಗಳ ವ್ಯಾಲಿಡಿಟಿ ಅವಧಿಯನ್ನು ಪಡೆದಿದೆ. ಹೆಚ್ಚುವರಿಯಾಗಿ ಜಿಯೋಟಿವಿ, ಜಿಯೋ ಸಿನಿಮ, ಜಿಯೋ ಸೆಕ್ಯುರಿಟಿ, ಜಿಯೋನ್ಯೂಸ್ ಮತ್ತು ಜಿಯೋಕ್ಲೌಡ್ ಸೇರಿದಂತೆ ಹಲವು ಅಪ್ಲಿಕೇಶನ್‌ಗಳನ್ನು ನೀಡುತ್ತದೆ.

ಜಿಯೋ 399ರೂ. ಪ್ರೀಪೇಯ್ಡ್ ಪ್ಲ್ಯಾನ್ ಪ್ರಯೋಜನಗಳು
ಒಟ್ಟು 56 ದಿನಗಳ ವ್ಯಾಲಿಡಿಟಿ ಅವಧಿಯನ್ನು ಪಡೆದಿರುವ ಜಿಯೋದ 399ರೂ. ಪ್ರೀಪೇಯ್ಡ್ ಪ್ಲ್ಯಾನ್ ಬಳಕೆದಾರರಿಗೆ ಪ್ರತಿದಿನ 1.5GB ಡೇಟಾ ಸೌಲಭ್ಯವನ್ನು ಒದಗಿಸುತ್ತದೆ. ಇದರೊಂದಿಗೆ ಜಿಯೋದಿಂದ ಜಿಯೋಗೆ ಸೇರಿದಂತೆ ಇತರೆ ನೆಟವರ್ಕ್ ಕರೆಗಳು ಸಹ ಅನಿಯಮಿತ ಉಚಿತ ಸೌಲಭ್ಯ ಪಡೆದಿವೆ. ಇದರೊಂದಿಗೆ ಪ್ರತಿದಿನ 100 ಉಚಿತ ಎಸ್ಎಮ್ಎಸ್ ಸೌಲಭ್ಯ ನೀಡುತ್ತದೆ.


Click it and Unblock the Notifications








