ಜಿಯೋದ 395ರೂ ಪ್ಲ್ಯಾನ್ ರೀಚಾರ್ಜ್ ಮಾಡಿದರೇ, 84 ದಿನಗಳ ವ್ಯಾಲಿಡಿಟಿ ಪಕ್ಕಾ!
ದೇಶದ ಟೆಲಿಕಾಂ ವಲಯದಲ್ಲಿ ರಿಲಯನ್ಸ್ ಜಿಯೋ ಕಂಪನಿಯು ಈಗಾಗಲೇ ಆಕರ್ಷಕ ರೀಚಾರ್ಜ್ ಪ್ಲ್ಯಾನ್‌ಗಳ ಮೂಲಕ ಗಮನ ಸೆಳೆದಿದೆ. ಅವುಗಳ ಪೈಕಿ ಜಿಯೋದ ಬಹುತೇಕ ಪ್ಲ್ಯಾನ್‌ಗಳು ಅನಿಯಮಿತ ವಾಯಿಸ್ ಕರೆ, ದೈನಂದಿನ ಡೇಟಾ ಸೌಲಭ್ಯ ಪಡೆದಿವೆ. ಹಾಗಯೇ ಜಿಯೋ ತನ್ನ ಚಂದಾದಾರರಿಗಾಗಿ ಗ್ರಾಹಕ ಸ್ನೇಹಿ ಬೆಲೆಯಲ್ಲಿ ಹಲವು ಪ್ರೀಪೇಯ್ಡ್ ಪ್ಲ್ಯಾನ್ ಲಭ್ಯ ಮಾಡಿದೆ. ಆ ಪೈಕಿ ಜಿಯೋ ಟೆಲಿಕಾಂನ 395ರೂ. ರೀಚಾರ್ಜ್ ಯೋಜನೆಯು ಹೆಚ್ಚು ಕಡಿಮೆ ಮೂರು ತಿಂಗಳ ವ್ಯಾಲಿಡಿಟಿ ಪಡೆದಿದೆ.
ಹೌದು, ಜಿಯೋ ಟೆಲಿಕಾಂನ 395ರೂ. ರೀಚಾರ್ಜ್ ಪ್ಲ್ಯಾನ್ ಒಟ್ಟು 84 ದಿನಗಳ ವ್ಯಾಲಿಡಿಟಿ ಸೌಲಭ್ಯ ಪಡೆದಿದ್ದು, ಅನೇಕ ಜಿಯೋ ಗ್ರಾಹಕರನ್ನು ಈ ಪ್ಲ್ಯಾನ್ ಆಕರ್ಷಿಸಿದೆ. ಹಾಗೆಯೇ ಈ ಪ್ರೀಪೇಯ್ಡ್ ಪ್ಲ್ಯಾನ್ ಡೇಟಾ ಪ್ರಯೋಜನ, ಅನಿಯಮಿತ ವಾಯಿಸ್ ಕರೆ ಪ್ರಯೋಜನವನ್ನು ಪಡೆದಿದೆ. ಇದರೊಂದಿಗೆ ಎಸ್‌ಎಮ್‌ಎಸ್ ಸೌಲಭ್ಯ ಕೂಡಾ ಒಳಗೊಂಡಿದೆ. ಹಾಗಾದರೆ ಜಿಯೋ ಟೆಲಿಕಾಂನ 395ರೂ. ರೀಚಾರ್ಜ್ ಯೋಜನೆಯ ಪ್ರಯೋಜನಗಳ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಜಿಯೋ ಟೆಲಿಕಾಂನ 395ರೂ. ರೀಚಾರ್ಜ್ ಪ್ಲ್ಯಾನ್ ಮಾಹಿತಿ
ಜಿಯೋ ಟೆಲಿಕಾಂನ ಈ 395ರೂ. ರೀಚಾರ್ಜ್ ಪ್ಲ್ಯಾನಿನಲ್ಲಿ ಗ್ರಾಹಕರಿಗೆ ಒಟ್ಟು 84 ದಿನಗಳ ವ್ಯಾಲಿಡಿಟಿ ಅವಧಿ ದೊರೆಯುತ್ತದೆ. ಹಾಗೆಯೇ ಪೂರ್ಣ ವ್ಯಾಲಿಡಿಟಿ ಅವಧಿಗೆ ಒಟ್ಟು 6GB ಡೇಟಾ ಪ್ರಯೋಜನ ಸಿಗುತ್ತದೆ. ಇದರ ಜೊತೆಗೆ ಪೂರ್ಣ ವ್ಯಾಲಿಡಿಟಿಗೆ ಒಟ್ಟು 1000 ಎಸ್‌ಎಮ್‌ಎಸ್ ಪ್ರಯೋಜನದ ಸೌಲಭ್ಯ ದೊರೆಯುತ್ತದೆ. ಇದರೊಂದಿಗೆ ಈ ರೀಚಾರ್ಜ್ ಪ್ಲ್ಯಾನಿನಲ್ಲಿ ಸಹ ಸಂಪೂರ್ಣ ಅನಿಯಮಿತ ವಾಯಿಸ್ ಕರೆಗಳ ಸೌಲಭ್ಯವನ್ನು ಒಳಗೊಂಡಿದೆ.
ಅಂದಹಾಗೆ ಈ ರೀಚಾರ್ಜ್ ಪ್ಲ್ಯಾನಿನಲ್ಲಿ ಒಟ್ಟು 6GB ಡೇಟಾ ಇದ್ದು, ಯಾವುದೇ ದೈನಂದಿನ ಡೇಟಾ ಮಿತಿ ಇರುವುದಿಲ್ಲ. ಹಾಗೆಯೇ ಒಟ್ಟು 1000 ಎಸ್‌ಎಮ್‌ಎಸ್ ಲಭ್ಯ ಇದ್ದು, ದೈನಂದಿನ ಮಿತಿ ಇರಲ್ಲ. ಇದರ ಜೊತೆಗೆ ಜಿಯೋ ಟಿವಿ, ಜಿಯೋ ಸಿನಿಮಾ ಹಾಗೂ ಜಿಯೋ ಕ್ಲೌಡ್ ಸೇವೆಗಳು ದೊರೆಯುತ್ತವೆ.
ಜಿಯೋ ಟೆಲಿಕಾಂನ 1559ರೂ. ರೀಚಾರ್ಜ್ ಪ್ಲ್ಯಾನ್ ಮಾಹಿತಿ
ಜಿಯೋ ಟೆಲಿಕಾಂನ ಈ 1559ರೂ. ರೀಚಾರ್ಜ್ ಪ್ಲ್ಯಾನಿನಲ್ಲಿ ಚಂದಾದಾರರಿಗೆ ಒಟ್ಟು 336 ದಿನಗಳ ವ್ಯಾಲಿಡಿಟಿ ಅವಧಿ ಲಭ್ಯ ಆಗಲಿದೆ. ಹಾಗೆಯೇ ಪೂರ್ಣ ವ್ಯಾಲಿಡಿಟಿ ಅವಧಿಗೆ ಒಟ್ಟು 24GB ಡೇಟಾ ಪ್ರಯೋಜನ ದೊರೆಯುತ್ತದೆ. ಇದರ ಜೊತೆಗೆ ಪೂರ್ಣ ವ್ಯಾಲಿಡಿಟಿಗೆ ಒಟ್ಟು 3600 ಎಸ್‌ಎಮ್‌ಎಸ್ ಪ್ರಯೋಜನದ ಸೌಲಭ್ಯ ಗ್ರಾಹಕರಿಗೆ ಸಿಗಲಿದೆ. ಇದರೊಂದಿಗೆ ಈ ರೀಚಾರ್ಜ್ ಪ್ಲ್ಯಾನಿನಲ್ಲಿ ಸಹ ಸಂಪೂರ್ಣ ಅನಿಯಮಿತ ವಾಯಿಸ್ ಕರೆಗಳ ಸೌಲಭ್ಯವನ್ನು ಒಳಗೊಂಡಿದೆ.
ಅಂದಹಾಗೆ ಈ ರೀಚಾರ್ಜ್ ಯೋಜನೆಯಲ್ಲಿ ಒಟ್ಟು 24GB ಡೇಟಾ ಇದ್ದು, ಯಾವುದೇ ದೈನಂದಿನ ಡೇಟಾ ಮಿತಿ ಇರುವುದಿಲ್ಲ. ಹಾಗೆಯೇ ಒಟ್ಟು 3600 ಎಸ್‌ಎಮ್‌ಎಸ್ ಲಭ್ಯ ಇದ್ದು, ದೈನಂದಿನ ಮಿತಿ ಇರಲ್ಲ. ಇದರ ಜೊತೆಗೆ ಜಿಯೋ ಟಿವಿ, ಜಿಯೋ ಸಿನಿಮಾ ಹಾಗೂ ಜಿಯೋ ಕ್ಲೌಡ್ ಸೇವೆಗಳು ದೊರೆಯುತ್ತವೆ.
ಜಿಯೋ ಟೆಲಿಕಾಂನ 155ರೂ. ರೀಚಾರ್ಜ್ ಪ್ಲ್ಯಾನ್ ಮಾಹಿತಿ
ಜಿಯೋ ಟೆಲಿಕಾಂನ ಈ 155ರೂ. ರೀಚಾರ್ಜ್ ಪ್ಲ್ಯಾನಿನಲ್ಲಿ ಚಂದಾದಾರರಿಗೆ ಒಟ್ಟು 28 ದಿನಗಳ ವ್ಯಾಲಿಡಿಟಿ ಅವಧಿ ಲಭ್ಯ ಆಗಲಿದೆ. ಹಾಗೆಯೇ ಪೂರ್ಣ ವ್ಯಾಲಿಡಿಟಿ ಅವಧಿಗೆ ಒಟ್ಟು 2GB ಡೇಟಾ ಪ್ರಯೋಜನ ದೊರೆಯುತ್ತದೆ. ಇದರ ಜೊತೆಗೆ ಪೂರ್ಣ ವ್ಯಾಲಿಡಿಟಿಗೆ ಒಟ್ಟು 3600 ಎಸ್‌ಎಮ್‌ಎಸ್ ಪ್ರಯೋಜನದ ಸೌಲಭ್ಯ ಗ್ರಾಹಕರಿಗೆ ಸಿಗಲಿದೆ. ಇದರೊಂದಿಗೆ ಈ ರೀಚಾರ್ಜ್ ಪ್ಲ್ಯಾನಿನಲ್ಲಿ ಸಹ ಸಂಪೂರ್ಣ ಅನಿಯಮಿತ ವಾಯಿಸ್ ಕರೆಗಳ ಸೌಲಭ್ಯವನ್ನು ಒಳಗೊಂಡಿದೆ.
ಇನ್ನು 28 ದಿನಗಳ ವ್ಯಾಲಿಡಿಟಿ ಅವಧಿಗೆ 2GB ಡೇಟಾ ಇದ್ದು, ಯಾವುದೇ ದೈನಂದಿನ ಡೇಟಾ ಮಿತಿ ಇರುವುದಿಲ್ಲ. ಇನ್ನು ಒಟ್ಟು 300 ಎಸ್‌ಎಮ್‌ಎಸ್ ಲಭ್ಯ ಇದ್ದು, ದೈನಂದಿನ ಮಿತಿ ಇರಲ್ಲ. ಇದರ ಜೊತೆಗೆ ಜಿಯೋ ಟಿವಿ, ಜಿಯೋ ಸಿನಿಮಾ ಹಾಗೂ ಜಿಯೋ ಕ್ಲೌಡ್ ಸೇವೆಗಳು ದೊರೆಯುತ್ತವೆ.


Click it and Unblock the Notifications








