Home
ಸುದ್ದಿಜಾಲ

ಜಿಯೋದ ಈ ಒಂದು ಪ್ಲ್ಯಾನಿನಲ್ಲಿ ಜಬರ್ದಸ್ತ್‌ ಸೌಲಭ್ಯ!..ಫ್ಯಾಮಿಲಿಗೆ ಸೂಕ್ತ!

ಜಿಯೋ ಟೆಲಿಕಾಂ ಹಲವು ಅತ್ಯುತ್ತಮ ಪ್ರೀಪೇಯ್ಡ್‌ ಯೋಜನೆಗಳ ಮೂಲಕ ಮಾರುಕಟ್ಟೆಯಲ್ಲಿ ಮುಂಚೂಣಿಯಲ್ಲಿ ಕಾಣಿಸಿಕೊಂಡಿದೆ. ಹಾಗೆಯೇ ಜಿಯೋ ಕೆಲವು ಆಕರ್ಷಕ ಪೋಸ್ಟ್‌ಪೇಯ್ಡ್‌ ಯೋಜನೆಗಳನ್ನು ಸಹ ಗ್ರಾಹಕರಿಗೆ ಲಭ್ಯ ಮಾಡಿದೆ. ಆ ಪೈಕಿ ಈ ಒಂದು ಅಗ್ಗದ ಯೋಜನೆಯು ಕಂಪ್ಲೀಟ್‌ ಫ್ಯಾಮಿಲಿಗೆ ಜಬರ್ದಸ್ತ್‌ ಪೋಸ್ಟ್‌ಪೇಯ್ಡ್‌ ಪ್ಲ್ಯಾನ್ ಎನಿಸುತ್ತದೆ.

ಹೌದು, ಜಿಯೋ 399ರೂ. ಗಳ ಅಗ್ಗದ ಪೋಸ್ಟ್‌ಪೇಯ್ಡ್‌ ಯೋಜನೆಯ ಆಯ್ಕೆ ಹೊಂದಿದೆ. ಈ ಯೋಜನೆಯಲ್ಲಿ ಡೇಟಾ, ವಾಯಿಸ್‌ ಕರೆ ಜೊತೆಗೆ ಕೆಲವು ಸೌಲಭ್ಯ ಸಹ ದೊರೆಯುತ್ತವೆ. ಮುಖ್ಯವಾಗಿ ಈ ಮೊತ್ತಕ್ಕೆ ಇದು ಫ್ಯಾಮಿಲಿ ಆಡ್‌ ಆನ್‌ ಸೌಲಭ್ಯ ಸಹ ಒಳಗೊಂಡಿರುವುದು ಪ್ರಮುಖ ಆಕರ್ಷಣೆ ಎನ್ನಬಹುದಾಗಿದೆ. ಹಾಗಾದರೆ ಈ ಯೋಜನೆಯ ಬಗ್ಗೆ ಇನ್ನಷ್ಟು ಮಾಹಿತಿ ಮುಂದೆ ತಿಳಿಯೋಣ ಬನ್ನಿರಿ.

ಜಿಯೋದ ಈ ಒಂದು ಪ್ಲ್ಯಾನಿನಲ್ಲಿ ಜಬರ್ದಸ್ತ್‌ ಸೌಲಭ್ಯ!..ಫ್ಯಾಮಿಲಿಗೆ ಸೂಕ್ತ!

ಜಿಯೋ 399ರೂ. ಪೋಸ್ಟ್‌ಪೇಯ್ಡ್ ಪ್ಲ್ಯಾನ್‌ ಪ್ರಯೋಜನಗಳು : ಜಿಯೋ ಟೆಲಿಕಾಂನ 399 ರೂ. ಪೋಸ್ಟ್‌ಪೇಯ್ಡ್ ಯೋಜನೆಯಲ್ಲಿ ಗ್ರಾಹಕರಿಗೆ 75 GB ಡೇಟಾದೊಂದಿಗೆ ಅನಿಯಮಿತ ವಾಯಿಸ್ ಕರೆ ಮಾಡುವ ಸೌಲಭ್ಯ ದೊರೆಯುತ್ತದೆ. ಇದರ ಜೊತೆಗೆ ಈ ಪೋಸ್ಟ್‌ಪೇಯ್ಡ್ ಪ್ಲ್ಯಾನಿನಲ್ಲಿ 200 GB ಡೇಟಾ ರೋಲ್ ಓವರ್ ಆಯ್ಕೆಯೂ ದೊರೆಯಲಿದೆ ಮತ್ತು ಪ್ರತಿದಿನ 100 ಎಸ್‌ಎಮ್‌ಎಸ್‌ ಪ್ರಯೋಜನ ಲಭ್ಯವಾಗಲಿದೆ.

ಹಾಗೆಯೇ ಈ ಯೋಜನೆಯಲ್ಲಿ ಹೆಚ್ಚುವರಿ ಯಾಗಿ 3 ಫ್ಯಾಮಿಲಿ ಆಡ್‌ ಆನ್‌ ಲಭ್ಯ ಆಗಲಿದೆ. ಜೊತೆಗೆ ನೆಟ್‌ಫ್ಲಿಕ್ಸ್‌, ಒಂದು ವರ್ಷದ ಅಮೆಜಾನ್ ಪ್ರೈಮ್ ವಿಡಿಯೋ ಚಂದಾದಾರಿಕೆ ಸಹ ಸಿಗಲಿದೆ. ಇದಲ್ಲದೆ, ಜಿಯೋ ಟಿವಿ, ಜಿಯೋ ಸಿನಿಮಾ, ಜಿಯೋ ಸಾವನ್ ಹಾಗೂ ಅನ್‌ಲಿಮಿಟೆಡ್‌ ಕಾಲರ್‌ ಟ್ಯೂನ್‌ ಸೌಲಭ್ಯಗಳು ಲಭ್ಯವಾಗಲಿವೆ.

ಜಿಯೋ 599ರೂ. ಪೋಸ್ಟ್‌ಪೇಯ್ಡ್ ಪ್ಲ್ಯಾನ್‌ ಪ್ರಯೋಜನಗಳು : ಜಿಯೋ ಟೆಲಿಕಾಂನ 599 ರೂ. ಪೋಸ್ಟ್‌ಪೇಯ್ಡ್ ಯೋಜನೆಯಲ್ಲಿ ಗ್ರಾಹಕರಿಗೆ 100 GB ಡೇಟಾದೊಂದಿಗೆ ಅನಿಯಮಿತ ವಾಯಿಸ್ ಕರೆ ಮಾಡುವ ಸೌಲಭ್ಯ ದೊರೆಯುತ್ತದೆ. ಇದರ ಜೊತೆಗೆ ಪ್ರತಿದಿನ 100 ಎಸ್‌ಎಮ್‌ಎಸ್‌ ಕಳುಹಿಸುವ ಅವಕಾಶವು ಸಿಗಲಿದೆ. ಹಾಗೆಯೇ ಈ ಪ್ಲ್ಯಾನಿನಲ್ಲಿ 200 GB ಡೇಟಾ ರೋಲ್ ಓವರ್ ಆಯ್ಕೆಯೂ ದೊರೆಯಲಿದೆ ಮತ್ತು ಹೆಚ್ಚುವರಿ ಒಂದು ಸಿಮ್ ಕನೆಕ್ಟಿವಿಟಿ ಸೌಲಭ್ಯ ಪಡೆದಿದೆ.

ಇನ್ನುಳಿದಂತೆ ಈ ಯೋಜನೆಯಲ್ಲಿ ಹೆಚ್ಚುವರಿ ಯಾಗಿ ನೆಟ್‌ಫ್ಲಿಕ್ಸ್‌ ಚಂದಾದಾರಿಕೆ, ಒಂದು ವರ್ಷದ ಅಮೆಜಾನ್ ಪ್ರೈಮ್ ವಿಡಿಯೋ ಚಂದಾದಾರಿಕೆ ಸಿಗಲಿದೆ. ಇದಲ್ಲದೆ, ಜಿಯೋ ಟಿವಿ, ಜಿಯೋ ಸಿನಿಮಾ, ಜಿಯೋ ಸಾವನ್ ಹಾಗೂ ಅನ್‌ಲಿಮಿಟೆಡ್‌ ಕಾಲರ್‌ ಟ್ಯೂನ್‌ ಸೌಲಭ್ಯಗಳು ಲಭ್ಯವಾಗಲಿವೆ.

ಜಿಯೋ 799ರೂ. ಪೋಸ್ಟ್‌ಪೇಯ್ಡ್ ಪ್ಲ್ಯಾನ್‌ ಪ್ರಯೋಜನಗಳು : ಜಿಯೋ ಟೆಲಿಕಾಂನ 799 ರೂ. ಪೋಸ್ಟ್‌ಪೇಯ್ಡ್ ಯೋಜನೆಯಲ್ಲಿ ಗ್ರಾಹಕರಿಗೆ 150 GB ಡೇಟಾದೊಂದಿಗೆ ಅನಿಯಮಿತ ವಾಯಿಸ್ ಕರೆ ಮಾಡುವ ಸೌಲಭ್ಯ ದೊರೆಯುತ್ತದೆ. ಇದರ ಜೊತೆಗೆ ಗ್ರಾಹಕರಿಗೆ ಪ್ರತಿದಿನ 100 ಎಸ್‌ಎಮ್‌ಎಸ್‌ ಕಳುಹಿಸುವ ಅವಕಾಶವು ಸಿಗಲಿದೆ. ಹಾಗೆಯೇ ಈ ಪ್ಲ್ಯಾನಿನಲ್ಲಿ 200 GB ಡೇಟಾ ರೋಲ್ ಓವರ್ ಆಯ್ಕೆಯೂ ದೊರೆಯಲಿದೆ ಮತ್ತು ಹೆಚ್ಚುವರಿ ಎರಡು ಸಿಮ್ ಕನೆಕ್ಟಿವಿಟಿ ಸೌಲಭ್ಯ ಪಡೆದಿದೆ.

ಇದರೊಂದಿಗೆ ಈ ಪೋಸ್ಟ್‌ಪೇಯ್ಡ್ ಯೋಜನೆ ಯಲ್ಲಿ ಹೆಚ್ಚುವರಿ ಯಾಗಿ ಗ್ರಾಹಕರಿಗೆ ನೆಟ್‌ಫ್ಲಿಕ್ಸ್‌ ಚಂದಾದಾರಿಕೆ, ಒಂದು ವರ್ಷದ ಅಮೆಜಾನ್ ಪ್ರೈಮ್ ವಿಡಿಯೋ ಚಂದಾದಾರಿಕೆ ಸಿಗಲಿದೆ. ಇದಲ್ಲದೆ, ಜಿಯೋ ಟಿವಿ, ಜಿಯೋ ಸಿನಿಮಾ, ಜಿಯೋ ಸಾವನ್ ಹಾಗೂ ಅನ್‌ಲಿಮಿಟೆಡ್‌ ಕಾಲರ್‌ ಟ್ಯೂನ್‌ ಸೌಲಭ್ಯ ಗಳು ಲಭ್ಯವಾಗಲಿವೆ.

Best Mobiles in India

English summary
Jio Rs 399 Postpaid Plan offers Add-on Family SIMs: Check Details here.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+