ಬರೀ 5ರೂ. ಅಂತರದ ಈ ಎರಡು ಪ್ರೀಪೇಯ್ಡ್ ಪ್ಲ್ಯಾನ್‌ಗಳಲ್ಲಿ ಬೆಸ್ಟ್ ಯಾವುದು ಗೊತ್ತಾ?
ಚಂದಾದಾರರ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳಲು ಟೆಲಿಕಾಂ ಸಂಸ್ಥೆಗಳು ಸರ್ಕಸ್ ಮಾಡುತ್ತಾ ಸಾಗಿವೆ. ಮುಂಚೂಣಿಯಲ್ಲಿ ಕಾಣಿಸಿಕೊಂಡಿರುವ ಜಿಯೋ ಸೇರಿದಂತೆ ಏರ್‌ಟೆಲ್ ಹಾಗೂ (ವೊಡಾಫೋನ್ ಐಡಿಯಾ) ವಿ ಟೆಲಿಕಾಂಗಳು ಭಿನ್ನ ಪ್ರಯೋಜನಗಳ ಆಫರ್ ನೀಡುತ್ತ ಮುನ್ನಡೆದಿವೆ. ಆದರೆ ಜಿಯೋ ಮತ್ತು ವಿ ಟೆಲಿಕಾಂನ ಕೆಲವು ಯೋಜನೆಗಳು ಆಕರ್ಷಕ ಎನಿಸಿದ್ದು, ಹೆಚ್ಚಿನ ಸೌಲಭ್ಯ ಪಡೆದಿವೆ. ಜಿಯೋ ಹಾಗೂ ವಿ ಟೆಲಿಕಾಂನ ಜನಪ್ರಿಯ ಪ್ರೀಪೇಯ್ಡ್ ಪ್ಲ್ಯಾನ್‌ವೊಂದರ ನಡುವೆ ಬೆಲೆಯಲ್ಲಿ ಬರೀ 5ರೂ.ಗಳ ವ್ಯತ್ಯಾಸ ಇದೆ. ಆದರೆ ಪ್ರಯೋಜನಗಳ ವ್ಯತ್ಯಾಸ ತಿಳಿದರೇ ನೀವು ಹುಬ್ಬೇರಿಸುವುದು ಗ್ಯಾರಂಟಿ.

ಹೌದು, ಸದ್ಯ ಬಜೆಟ್ ದರದ ರೀಚಾರ್ಜ್ ಯೋಜನೆಗಳು ಹೆಚ್ಚು ಗಮನ ಸೆಳೆದಿದ್ದು, ಬಹುತೇಕ ಬಳಕೆದಾರರು ದೈನಂದಿನ ಡೇಟಾ, ಅನಿಯಮಿತ ವಾಯಿಸ್ ಕರೆ ಹಾಗೂ ಅತ್ಯುತ್ತಮ ವ್ಯಾಲಿಡಿಟಿ ಇರುವ ಪ್ಲ್ಯಾನ್‌ಗಳನ್ನು ರೀಚಾರ್ಜ್ ಮಾಡಲು ಮುಂದಾಗುತ್ತಾರೆ. ಆ ಪೈಕಿ ಜಿಯೋ ಟೆಲಿಕಾಂನ 444ರೂ ಪ್ಲ್ಯಾನ್ ಹಾಗೂ ವಿ ಟೆಲಿಕಾಂನ 449ರೂ. ಯೋಜನೆಗಳು ಆಕರ್ಷಕ ಎನಿಸಿಕೊಂಡಿವೆ. ಬೆಲೆಯಿಂದ ನೋಡುವುದಾರೇ ಈ ಎರಡು ಟೆಲಿಕಾಂನಗಳ ಪ್ಲ್ಯಾನ್‌ಗಳ ನಡುವೆ ಬರೀ 5ರೂ.ಗಳ ವ್ಯತ್ಯಾಸ ಕಾಣಿಸುತ್ತದೆ. ಈ ಎರಡು ಯೋಜನೆಗಳು ದೈನಂದಿನ ಡೇಟಾ, ವಾಯಿಸ್ ಕರೆ ಸೌಲಭ್ಯ, ಎಸ್‌ಎಮ್‌ಎಸ್ ಪ್ರಯೋಜನ ಹೊಂದಿವೆ. ಆದರೆ ಒಟ್ಟಾರೇಯಾಗಿ ನೋಡುವುದಾದರೇ ಈ ಎರಡು ಪ್ಲ್ಯಾನ್‌ಗಳ ಪ್ರಯೋಜನಗಳ ನಡುವೆ ಹೆಚ್ಚಿನ ಭಿನ್ನತೆಗಳನ್ನು ಕಾಣಬಹುದಾಗಿದೆ. ಹಾಗಾದರೇ ಜಿಯೋ ಟೆಲಿಕಾಂನ 444ರೂ ಪ್ಲ್ಯಾನ್ ಹಾಗೂ ವಿ ಟೆಲಿಕಾಂನ 449ರೂ. ಯೋಜನೆಗಳ ನಡುವಿನ ಭಿನ್ನತೆಗಳೆನು ಎಂಬುದನ್ನು ಮುಂದೆ ತಿಳಿಯೋಣ ಬನ್ನಿರಿ.

ಬೆಲೆಯಿಂದ ಬರೀ 5ರೂ, ವ್ಯತ್ಯಾಸ
ಜಿಯೋ ಟೆಲಿಕಾಂನ 444ರೂ ಪ್ಲ್ಯಾನ್ ಹಾಗೂ ವಿ ಟೆಲಿಕಾಂನ 449ರೂ. ಯೋಜನೆಗಳು ಈಗಾಗಲೇ ಗ್ರಾಹಕರಿಂದ ಅತ್ಯುತ್ತಮ ಪ್ಲ್ಯಾನ್‌ಗಳಾಗಿ ಗಮನ ಸೆಳೆದಿವೆ. ಆದರೆ ಬೆಲೆಯಿಂದ ಹಾಗೂ ಪ್ರಯೋಜನಗಳಿಂದ ಈ ಎರಡು ಯೋಜನೆಗಳು ಭಿನ್ನತೆ ಪಡೆದಿವೆ. ಬೆಲೆಯಿಂದ ಬರೀ 5ರೂ. ಅಷ್ಟೇ ವ್ಯತ್ಯಾಸ ಕಾಣಬಹುದಾಗಿದೆ. ಆದರೆ ಈ ಎರಡು ಯೋಜನೆಗಳ ಪ್ರಯೋಜನಗಳನ್ನು ನೋಡುವುದಾದರೇ ಹೆಚ್ಚಿನ ಅಂತರ ಕಂಡು ಬರುತ್ತದೆ.

ಜಿಯೋ 444ರೂ. ಪ್ರೀಪೇಯ್ಡ್ ಯೋಜನೆ
ಜಿಯೋ ಟೆಲಿಕಾಂನ 444ರೂ. ಪ್ರೀಪೇಯ್ಡ್ ಯೋಜನೆಯು ಒಟ್ಟು 56 ದಿನಗಳ ವ್ಯಾಲಿಡಿಟಿ ಹೊಂದಿದ್ದು, ಈ ಅವಧಿಯಲ್ಲಿ ಗ್ರಾಹಕರಿಗೆ ಪ್ರತಿದಿನ 2GB ಡೇಟಾ ಪ್ರಯೋಜನ ಸಿಗುತ್ತದೆ. ಪೂರ್ಣ ವ್ಯಾಲಿಡಿಟಿ ಅವಧಿಗೆ ಒಟ್ಟು ಡೇಟಾ 112GB ಲಭ್ಯವಾಗಲಿದೆ. ಹಾಗೆಯೇ ಜಿಯೋದಿಂದ ಜಿಯೋ ನೆಟವರ್ಕ ಕರೆಗಳು ಉಚಿತವಾಗಿರುತ್ತವೆ. ಜಿಯೋದಿಂದ ಇತರೆ ನೆಟವರ್ಕ ಕರೆಗಳು ಸಹ ಅನಿಯಮಿತ ಉಚಿತ ಸೌಲಭ್ಯ ಪಡೆದಿದೆ. ಇದರೊಂದಿಗೆ ಪ್ರತಿದಿನ 100 ಎಸ್ಎಮ್ಎಸ್ ಪ್ರಯೋಜನ ದೊರೆಯಲಿದೆ. ಹೆಚ್ಚುವರಿಯಾಗಿ ಜಿಯೋ ಆಪ್ಸ್‌ಗಳ ಪ್ರಯೋಜನ ಸಹ ಸಿಗುತ್ತದೆ.

ವಿ ಟೆಲಿಕಾಂ 449ರೂ. ಪ್ರೀಪೇಯ್ಡ್ ಪ್ಲ್ಯಾನ್
ವಿ ಟೆಲಿಕಾಂನ 449ರೂ. ಪ್ಲ್ಯಾನ್ ಸಹ ಒಟ್ಟು 56 ದಿನಗಳ ವ್ಯಾಲಿಡಿಟಿ ಅವಧಿಯನ್ನು ಪಡೆದಿದೆ. ಈ ಅವಧಿಯಲ್ಲಿ ಪ್ರತಿದಿನ 4GB ಡೇಟಾ ಪ್ರಯೋಜನ ಸಿಗಲಿದೆ. ಇದರೊಂದಿಗೆ ಯಾವುದೇ ನೆಟವರ್ಕಗೆ ಅನಿಯಮಿತ ಉಚಿತ ಕರೆಗಳ ಪ್ರಯೋಜನ ಒಳಗೊಂಡಿದೆ. ಹಾಗೂ ಪ್ರತಿದಿನ 100 ಉಚಿತ ಎಸ್ಎಮ್ಎಸ್ ಸಹ ಹೊಂದಿದೆ. ಹೆಚ್ಚುವರಿಯಾಗಿ ಜೀ5 ಓಟಿಟಿ ಆಕ್ಸಸ್ ಸಹ ದೊರೆಯಲಿದೆ. ವಿಕೆಂಡ್ ಡೇಟಾ ರೋಲ್ ಓವರ್ ಸೌಲಭ್ಯ ಇದ್ದು, ವಿ ಆಪ್ಸ್‌ಗಳ ಪ್ರಯೋಜನ ಸಹ ಇರಲಿದೆ.

ಜಿಯೋ ಮತ್ತು ವಿ: ಡೇಟಾ ಭಿನ್ನತೆ
ಜಿಯೋ ಟೆಲಿಕಾಂನ 444ರೂ ಪ್ಲ್ಯಾನ್ ಹಾಗೂ ವಿ ಟೆಲಿಕಾಂನ 449ರೂ. ಯೋಜನೆಗಳು ಆಕರ್ಷಕ ಆಗಿವೆ. ಆದರೆ ದೈನಂದಿನ ಡೇಟಾ ಪ್ರಯೋಜನದಲ್ಲಿ ಜಿಯೋ 2GB ಡೇಟಾ ನೀಡಿದರೇ, ವಿ ಟೆಲಿಕಾಂ ಪ್ರತಿದಿನ 4GB ಡೇಟಾ ನೀಡುತ್ತಿದೆ. ಅಲ್ಲದೇ ಹೆಚ್ಚುವರಿಯಾಗಿ ಜೀ 5 ಓಟಿಟಿ ಆಕ್ಸಸ ಸಹ ನೀಡಿದೆ. ವ್ಯಾಲಿಡಿಟಿ ಸೇರಿದಂತೆ ಉಳಿದ ಸೌಲಭ್ಯಗಳಲ್ಲಿ ಎರಡು ಒಂದೇ ಅನಿಸುತ್ತವೆ. ಪ್ರತಿದಿನ ಅಧಿಕ ಡೇಟಾ ಬಯಸುವ ಗ್ರಾಹಕರಿಗೆ ವಿ ಟೆಲಿಕಾಂನ ಯೋಜನೆಯು ಹೆಚ್ಚು ಸೂಕ್ತ ಎಂದು ಹೇಳಬಹುದು.


Click it and Unblock the Notifications








