ಜಿಯೋದ 499ರೂ. ಪ್ಲ್ಯಾನ್ ರೀಚಾರ್ಜ್‌ಗೆ ಸೂಕ್ತವೇ?..ಹೆಚ್ಚುವರಿ ಸೌಲಭ್ಯ ಏನಿದೆ?
ಸದ್ಯ ಭಾರತೀಯ ಟೆಲಿಕಾಂ ಸಂಸ್ಥೆಗಳು ಪ್ರೀಪೇಯ್ಡ್ ಯೋಜನೆಗಳಂತೆ ಸದ್ಯ ಪೋಸ್ಟ್‌ಪೇಯ್ಡ್ ಯೋಜನೆಗಳಲ್ಲಿಯೂ ಅತ್ಯುತ್ತಮ ಪ್ರಯೋಜನಗಳನ್ನು ನೀಡುವ ಮೂಲಕ ಚಂದಾದಾರರನ್ನು ಸೆಳೆಯುವ ಪ್ರಯತ್ನ ಮಾಡುತ್ತ ಸಾಗಿವೆ. ಈ ನಿಟ್ಟಿನಲ್ಲಿ ರಿಲಾಯನ್ಸ್ ಜಿಯೋ ಟೆಲಿಕಾಂ ಭಿನ್ನ ಪ್ರೈಸ್‌ನಲ್ಲಿ ಪ್ರಿಪೇಯ್ಡ್ ಯೋಜನೆಗಳ ಆಯ್ಕೆ ಯನ್ನು ಪರಿಚಯಿಸಿದೆ. ಆ ಪೈಕಿ ಜಿಯೋ ಟೆಲಿಕಾಂನ 499ರೂ. ಪ್ರಿಪೇಯ್ಡ್ ಪ್ಲ್ಯಾನ್ ಆಕರ್ಷಕ ಪ್ರಯೋಜನಗಳಿಂದ ಗಮನ ಸೆಳೆದಿದೆ.

ಹೌದು, ಜಿಯೋ ಟೆಲಿಕಾಂ ಭಿನ್ನ ಶ್ರೇಣಿಯಲ್ಲಿ ಪ್ರಿಪೇಯ್ಡ್ ಯೋಜನೆಗಳನ್ನು ಪಡೆದಿದೆ. ಆ ಪೈಕಿ ಜಿಯೋದ 499ರೂ. ಪ್ರಿಪೇಯ್ಡ್ ಪ್ಲ್ಯಾನ್ ಹೆಚ್ಚಿನ ಸೌಲಭ್ಯಗಳೊಂದಿಗೆ ಗಮನ ಸೆಳೆದಿದೆ. ಇನ್ನು ಈ ಯೋಜನೆಯು ಡೈಲಿ ಡೇಟಾ ಪ್ರಯೋಜನದ ಜೊತೆಗೆ ಓಟಿಟಿ ಚಂದಾದಾರಿಕೆಯನ್ನು ಒಳಗೊಂಡಿದೆ. ಹಾಗೆಯೇ ಆಕರ್ಷಕ ವ್ಯಾಲಿಡಿಟಿ ಜೊತೆಗೆ ಎಸ್‌ಎಮ್‌ಎಸ್ ಸೌಲಭ್ಯ ವನ್ನು ಪಡೆದಿದೆ. ಹಾಗಾದರೆ ಜಿಯೋದ ಈ ಪ್ಲ್ಯಾನಿನ ಒಟ್ಟಾರೆ ಪ್ರಯೋಜನಗಳೆನು ಹಾಗೂ ಇತರೆ ಜಿಯೋದ ಆಕರ್ಷಕ ಈ ಪ್ರಿಪೇಯ್ಡ್ ಪ್ಲ್ಯಾನಿನ ಮಾಹಿತಿಯನ್ನು ಮುಂದೆ ನೋಡೋಣ ಬನ್ನಿರಿ.
ಜಿಯೋ 499ರೂ. ಪ್ರಿಪೇಯ್ಡ್ ಪ್ಲಾನ್ ಪ್ರಯೋಜನಗಳು
ಜಿಯೋ 499 ರೂ. ಪ್ರಿಪೇಯ್ಡ್ ಪ್ಲಾನ್ ಪ್ರತಿದಿನ 2 GB ಡೇಟಾ ಮತ್ತು ಡೈಲಿ 100 SMS ಪ್ರಯೋಜನ ನೀಡಲಿದೆ. ಇದು 28 ದಿನಗಳ ಮಾನ್ಯತೆಯನ್ನು ಹೊಂದಿದ್ದು, ಜಿಯೋ ಪ್ರೈಮ್ ಸದಸ್ಯತ್ವದೊಂದಿಗೆ ಅನಿಯಮಿತ ಕರೆ ಪ್ರಯೋಜನವನ್ನು ನೀಡಲಿದೆ. ಇದಲ್ಲದೆ ಈ ಪ್ಲಾನ್ ನಿಮಗೆ ಡಿಸ್ನಿ + ಹಾಟ್‌ಸ್ಟಾರ್ ಚಂದಾದಾರಿಕೆಯನ್ನು ನೀಡಲಿದೆ. ಇದು ನಿಮಗೆ ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ ಡಿಸ್ನಿ + ಹಾಟ್‌ಸ್ಟಾರ್ ಪ್ಲಾಟ್‌ಫಾರ್ಮ್‌ಗೆ ಒಂದು ವರ್ಷದ ಪ್ರವೇಶವನ್ನು ನೀಡುತ್ತದೆ. ಹಾಗೆಯೇ ಜಿಯೋ ಸಿನಿಮಾ ಮತ್ತು ಜಿಯೋಟಿವಿ ಅಂತಹ ಜಿಯೋ ಅಪ್ಲಿಕೇಶನ್‌ಗಳಿಗೆ ಪ್ರವೇಶವನ್ನು ನೀಡಲಿದೆ.
ಜಿಯೋ ಟೆಲಿಕಾಂ 249ರೂ ಪ್ರಿಪೇಯ್ಡ್ ಪ್ಲಾನ್
ಜಿಯೋ ಟೆಲಿಕಾಂ 249 ರೂ ಪ್ರಿಪೇಯ್ಡ್ ಪ್ಲಾನ್ 23 ದಿನಗಳ ಮಾನ್ಯತೆಯನ್ನು ನೀಡಲಿದೆ. ಈ ಸಮಯದಲ್ಲಿ ಪ್ರತಿನಿತ್ಯ 2GBಡೇಟಾ ಪ್ರಯೋಜನವನ್ನು ನೀಡಲಿದೆ. ಜೊತೆಗೆ ಜಿಯೋ ಟು ಜಿಯೋ ಹಾಗೂ ಇತರೆ ನೆಟ್‌ವರ್ಕ್‌ಗಳಿಗೆ ಅನಿಯಮಿತ ವಾಯ್ಸ್ ಕಾಲ್ ಪ್ರಯೋಜನವನ್ನು ಸಹ ನೀಡಲಿದೆ. ಹಾಗೆಯೇ ಪ್ರತಿದಿನ 100ಎಸ್‌ಎಮ್‌ಎಸ್ ಸೇವೆ ಕೂಡ ಲಭ್ಯವಿದೆ.

ಜಿಯೋ 299 ರೂ. ಪ್ರೀಪೇಯ್ಡ್ ಪ್ಲಾನ್
ಜಿಯೋ ಟೆಲಿಕಾಂನ ಈ ಪ್ಲ್ಯಾನ್ ಒಟ್ಟು 28 ದಿನಗಳ ವ್ಯಾಲಿಡಿಟಿ ಅವಧಿ ಹೊಂದಿದೆ. ಈ ಸಂದರ್ಭದಲ್ಲಿ ಪ್ರತಿದಿನ 2 GB ಇಂಟರ್ನೆಟ್ ಪ್ರಯೋಜನ ಸಿಗುತ್ತದೆ. ಹಾಗೆಯೇ ಜಿಯೋದಿಂದ ಜಿಯೋ ಕರೆಗಳು ಸೇರಿದಂತೆ ಜಿಯೋದಿಂದ ಇತರೆ ನೆಟವರ್ಕ ಕರೆಗಳು ಸಹ ಸಂಪೂರ್ಣ ಅನಿಯಮಿತ ಉಚಿತ. ಇದರೊಂದಿಗೆ ಪ್ರತಿದಿನ 100 ಎಸ್ಎಮ್ಎಸ್ ಸೌಲಭ್ಯ ಲಭ್ಯ. ಈ ಯೋಜನೆಯಲ್ಲಿ ಒಟ್ಟು 56 GB ಡೇಟಾ ಸಿಗಲಿದ್ದು, ಜಿಯೋ ಆಪ್ಸ್‌ಗಳಾದ ಜಿಯೋ ಟಿವಿ, ಜಿಯೋ ಸಿನಿಮಾ, ಜಿಯೋ ಸೆಕ್ಯುರಿಟಿ, ಜಿಯೋ ಕ್ಲೌಡ್‌ನಂತಹ ಸೇವೆಗಳು ಸಹ ಲಭ್ಯ.
ಜಿಯೋ 533 ರೂ. ಪ್ರಿಪೇಯ್ಡ್ ಪ್ಲ್ಯಾನ್
ಜಿಯೋದ ಈ ಪ್ಲ್ಯಾನ್ ಒಟ್ಟು 56 ದಿನಗಳ ವ್ಯಾಲಿಡಿಟಿ ಹೊಂದಿದ್ದು, ಈ ಅವಧಿಯಲ್ಲಿ ಪ್ರತಿದಿನ 2 GB ಡೇಟಾ ಪ್ರಯೋಜನ ಸಿಗುತ್ತದೆ. ಹಾಗೆಯೇ ಜಿಯೋದಿಂದ ಜಿಯೋ ನೆಟವರ್ಕ ಕರೆಗಳು ಉಚಿತವಾಗಿರುತ್ತವೆ. ಜಿಯೋದಿಂದ ಇತರೆ ನೆಟವರ್ಕ ಕರೆಗಳು ಸಹ ಅನಿಯಮಿತ ಉಚಿತ ಸೌಲಭ್ಯ ಪಡೆದಿದೆ. ಇದರೊಂದಿಗೆ ಪ್ರತಿದಿನ 100 ಎಸ್ಎಮ್ಎಸ್ ಸೌಲಭ್ಯ ಲಭ್ಯ.


Click it and Unblock the Notifications








