ಜಿಯೋ ಈ ಪ್ಲ್ಯಾನ್ ರೀಚಾರ್ಜ್‌ಗೆ ಯೋಗ್ಯವೇ?..100GB ಡೇಟಾ ಸೌಲಭ್ಯ!
ಟೆಲಿಕಾಂ ಸಂಸ್ಥೆಗಳು ಪ್ರೀಪೇಯ್ಡ್ ಯೋಜನೆಗಳಂತೆ ಪೋಸ್ಟ್‌ಪೇಯ್ಡ್ ಪ್ಲ್ಯಾನ್‌ಗಳಲ್ಲಿಯೂ ಆಕರ್ಷಕ ಪ್ರಯೋಜನಗಳನ್ನು ನೀಡುವ ಮೂಲಕ ಗ್ರಾಹಕರನ್ನು ಸೆಳೆಯುವ ಪ್ರಯತ್ನ ನಡೆಸಿವೆ. ಈ ನಿಟ್ಟಿನಲ್ಲಿ ರಿಲಾಯನ್ಸ್ ಜಿಯೋ ಟೆಲಿಕಾಂ ಭಿನ್ನ ಪ್ರೈಸ್‌ನಲ್ಲಿ ಪೋಸ್ಟ್‌ಪೇಯ್ಡ್ ಪ್ಲ್ಯಾನ್‌ಗಳ ಆಯ್ಕೆಯನ್ನು ಪರಿಚಯಿಸಿದೆ. ಆ ಪೈಕಿ ಜಿಯೋ 699ರೂ. ಪ್ಲ್ಯಾನ್ ಭರ್ಜರಿ ಪ್ರಯೋಜನಗಳಿಂದ ಗಮನ ಸೆಳೆದಿದೆ.
ಹೌದು, ಜಿಯೋ ಟೆಲಿಕಾಂ ಹಲವು ಪೋಸ್ಟ್‌ಪೇಯ್ಡ್ ಪ್ಲ್ಯಾನ್‌ಗಳ ಆಯ್ಕೆಯನ್ನು ಗ್ರಾಹಕರಿಗೆ ನೀಡಿದೆ. ಅವುಗಳಲ್ಲಿ ಜಿಯೋ 699ರೂ. ಪ್ಲ್ಯಾನ್ ಪೋಸ್ಟ್‌ಪೇಯ್ಡ್ ಯೋಜನೆ ಸಹ ಒಂದಾಗಿದೆ. ಇನ್ನು ಈ ಯೋಜನೆಯು ಅನಿಯಮಿತ ಡೇಟಾ ಪ್ರಯೋಜನದ ಜೊತೆಗೆ ಓಟಿಟಿ ಚಂದಾದಾರಿಕೆಯನ್ನು ಒಳಗೊಂಡಿದೆ. ಹಾಗೆಯೇ ಡೇಟಾ ರೋಲ್ ಓವರ್ ಹಾಗೂ ಎಸ್‌ಎಮ್‌ಎಸ್ ಸೌಲಭ್ಯವನ್ನು ಪಡೆದಿದೆ. ಇನ್ನುಳಿದಂತೆ ಜಿಯೋದ ಈ ಪೋಸ್ಟ್‌ಪೇಯ್ಡ್ ಪ್ಲ್ಯಾನಿನ ಮಾಹಿತಿಯನ್ನು ಮುಂದೆ ನೋಡೋಣ ಬನ್ನಿರಿ.

ಜಿಯೋ 699ರೂ. ಪೋಸ್ಟ್‌ಪೇಯ್ಡ್ ಪ್ಲ್ಯಾನ್ ಒಟ್ಟಾರೆ ಮಾಹಿತಿ ಇಲ್ಲಿದೆ : ಜಿಯೋ 699ರೂ ಯೋಜನೆಯಲ್ಲಿ ಚಂದಾದಾರರಿಗೆ 100 GB ಡೇಟಾದೊಂದಿಗೆ ಅನ್ಲಿಮಿಟೆಡ್ ವಾಯಿಸ್ ಕರೆ ಮಾಡುವ ಪ್ರಯೋಜನ ಮತ್ತು ಎಸ್‌ಎಮ್‌ಎಸ್ ಕಳುಹಿಸುವ ಅವಕಾಶವು ದೊರೆಯಲಿದೆ. ಹಾಗೆಯೇ ಈ ಪ್ಲ್ಯಾನಿನಲ್ಲಿ 3 ಆಡ್ ಆನ್ ಫ್ಯಾಮಿಲಿ ಸಿಮ್‌ಗಳ ಆಯ್ಕೆ ಇದ್ದು, ಎಲ್ಲ ಸಿಮ್‌ಗಳಿಗೆ ತಲಾ 5 GB ಡೇಟಾ ಖಚಿತ ಲಭ್ಯ.
ಇದಲ್ಲದೇ ಈ ಯೋಜನೆಯು ಹೆಚ್ಚುವರಿಯಾಗಿ ಓಟಿಟಿ ಚಂದಾದಾರಿಕೆ ಪ್ರಯೋಜನ ಪಡೆದಿದ್ದು, ಉಚಿತ ಅಮೆಜಾನ್ ಪ್ರೈಮ್ ಚಂದಾದಾರಿಕೆ ಮತ್ತು ಉಚಿತ ಅಮೆಜಾನ್ ಪ್ರೈಮ್ ಚಂದಾದಾರಿಕೆ ಸಹ ದೊರೆಯುತ್ತದೆ. ಇದರೊಂದಿಗೆ ಜಿಯೋ ಟಿವಿ, ಜಿಯೋ ಸಿನಿಮಾ, ಜಿಯೋ ಸಾವನ್ ಹಾಗೂ ಅನ್‌ಲಿಮಿಟೆಡ್ ಕಾಲರ್ ಟ್ಯೂನ್ ಸೌಲಭ್ಯಗಳು ಲಭ್ಯವಾಗಲಿವೆ.

ಜಿಯೋ 399ರೂ. ಪೋಸ್ಟ್‌ಪೇಯ್ಡ್ ಪ್ಲ್ಯಾನ್ : ಜಿಯೋದ ಈ ಪ್ಲ್ಯಾನಿನಲ್ಲಿ ಗ್ರಾಹಕರಿಗೆ 75 GB ಡೇಟಾದೊಂದಿಗೆ ಅನ್ಲಿಮಿಟೆಡ್ ಕರೆ ಮಾಡುವ ಮತ್ತು ಎಸ್‌ಎಮ್‌ಎಸ್ ಕಳುಹಿಸುವ ಅವಕಾಶವು ದೊರೆಯಲಿದೆ. ಹಾಗೆಯೇ ಈ ಪ್ಲ್ಯಾನಿನಲ್ಲಿ 3 ಆಡ್ ಆನ್ ಫ್ಯಾಮಿಲಿ ಸಿಮ್‌ಗಳ ಆಯ್ಕೆ ಇದ್ದು, ಪ್ರತಿ ಸಿಮ್‌ಗೆ 5 GB ಡೇಟಾ ಲಭ್ಯವಾಗಲಿದೆ. ಜಿಯೋ ಟಿವಿ, ಜಿಯೋ ಸಿನಿಮಾ, ಜಿಯೋ ಸಾವನ್ ಹಾಗೂ ಅನ್‌ಲಿಮಿಟೆಡ್ ಕಾಲರ್ ಟ್ಯೂನ್ ಸೌಲಭ್ಯಗಳು ಲಭ್ಯ.
ಜಿಯೋ 599ರೂ. ಪೋಸ್ಟ್‌ಪೇಯ್ಡ್ ಪ್ಲ್ಯಾನ್ ಪ್ರಯೋಜನಗಳು : ಜಿಯೋ 599ರೂ. ಈ ಪ್ಲ್ಯಾನಿನಲ್ಲಿ ಅನಿಯಮಿತ ಡೇಟಾ ಸಿಗಲಿದ್ದು, ಜೊತೆಗೆ ಅನ್ಲಿಮಿಟೆಡ್ ಕರೆ ಮಾಡುವ ಮತ್ತು ಎಸ್‌ಎಮ್‌ಎಸ್ ಕಳುಹಿಸುವ ಅವಕಾಶವು ದೊರೆಯಲಿದೆ. ಹಾಗೆಯೇ ಜಿಯೋ ಟಿವಿ, ಜಿಯೋ ಸಿನಿಮಾ, ಜಿಯೋ ಸಾವನ್ ಹಾಗೂ ಅನ್‌ಲಿಮಿಟೆಡ್ ಕಾಲರ್ ಟ್ಯೂನ್ ಸೌಲಭ್ಯಗಳು ಲಭ್ಯವಾಗಲಿವೆ.

ಜಿಯೋ 1499ರೂ. ಪೋಸ್ಟ್‌ಪೇಯ್ಡ್ ರೀಚಾರ್ಜ್‌ನ ಪ್ರಯೋಜನಗಳು : ಜಿಯೋ ಟೆಲಿಕಾಂನ ಈ ರೀಚಾರ್ಜ್‌ನಲ್ಲಿ ಬಳಕೆದಾರರಿಗೆ 300 GB ಡೇಟಾ ಪ್ರಯೋಜನ ಖಚಿವಾಗಿ ಲಭ್ಯ. ಇದರಲ್ಲಿ ಚಂದಾದಾರರಿಗೆ ಅನಿಯಮಿತ ವಾಯಿಸ್ ಕರೆ ಮತ್ತು ಎಸ್‌ಎಮ್‌ಎಸ್ ಸೌಲಭ್ಯ ಎರಡು ಲಭ್ಯವಾಗಲಿವೆ. ಈ ರೀಚಾರ್ಜ್ ಯೋಜನೆಯಲ್ಲಿ ಆಡ್ ಆನ್ ಫ್ಯಾಮಿಲಿ ಸಿಮ್ ಆಯ್ಕೆ ಇರುವುದಿಲ್ಲ.
ಹಾಗೆಯೇ ಈ ರೀಚಾರ್ಜ್ ಪ್ಲ್ಯಾನ್ ಹೆಚ್ಚುವರಿಯಾಗಿ ಓಟಿಟಿ ಸದಸ್ಯತ್ವ ಪ್ರಯೋಜನ ಪಡೆದಿದ್ದು, ಉಚಿತ ಅಮೆಜಾನ್ ಪ್ರೈಮ್ ಚಂದಾದಾರಿಕೆ ಮತ್ತು ಫ್ರಿ ಅಮೆಜಾನ್ ಪ್ರೈಮ್ ಸದಸ್ಯತ್ವ ಕೂಡಾ ಗ್ರಾಹಕರಿಗೆ ದೊರೆಯುತ್ತದೆ. ಇದರೊಂದಿಗೆ ಜಿಯೋ ಟಿವಿ, ಜಿಯೋ ಸಿನಿಮಾ, ಜಿಯೋ ಸಾವನ್ ಸೌಲಭ್ಯಗಳು ಲಭ್ಯ.


Click it and Unblock the Notifications








