70 ದಿನ ವ್ಯಾಲಿಡಿಟಿಗೆ ಇದಕ್ಕಿಂತ ಬೆಸ್ಟ್ ಪ್ಲ್ಯಾನ್ ಬೇಕೆ?..ಗ್ರಾಹಕರಿಗೆ ಸಖತ್ ಉಳಿತಾಯ!
ಭಾರತೀಯ ಟೆಲಿಕಾಂ ಕ್ಷೇತ್ರದಲ್ಲಿ ಜಿಯೋ ಮುಂಚೂಣಿಯ ಸ್ಥಾನದಲ್ಲಿ ಕಾಣಿಸಿದ್ದು. ಕೆಲವು ಆಕರ್ಷಕ ರೀಚಾರ್ಜ್ ಯೋಜನೆಗಳ ಮೂಲಕ ಈಗಾಗಲೇ ಗ್ರಾಹಕರನ್ನು ಆಕರ್ಷಿಸಿದೆ. ಸಂಸ್ಥೆಯು ತನ್ನ ಚಂದಾದಾರರಿಗಾಗಿ ಅಲ್ಪಾವಧಿಯ ಹಾಗೂ ದೀರ್ಘಾವಧಿಯ ರೀಚಾರ್ಜ್ ಪ್ಲ್ಯಾನ್‌ಗಳ ಆಯ್ಕೆ ಸಹ ನೀಡಿದೆ. ಅವುಗಳಲ್ಲಿ ಬಹುತೇಕ ಪ್ಲ್ಯಾನ್‌ಗಳು ಡೇಟಾ ಪ್ರಯೋಜನ ಪಡೆದಿರುವುದು ಪ್ರಮುಖ ಆಕರ್ಷಣೆ ಎನಿಸಿದೆ. ಅದಾಗ್ಯೂ, ಜಿಯೋದ ಈ ಒಂದು ಪ್ರೀಪೇಯ್ಡ್ ಯೋಜನೆ ಬಹಳ ಟ್ರೆಂಡಿಂಗ್‌ನಲ್ಲಿ ಕಾಣಿಸಿಕೊಂಡಿದೆ.
ಹೌದು, ಜಿಯೋ ಸಂಸ್ಥೆಯ ಹಲವು ಭಿನ್ನ ರೀಚಾರ್ಜ್ ಪ್ಲ್ಯಾನ್‌ಗಳ ಆಯ್ಕೆ ಪಡೆದಿದ್ದು, ಆ ಪೈಕಿ 719ರೂ. ಪ್ರೀಪೇಯ್ಡ್ ರೀಚಾರ್ಜ್ ಪ್ಲ್ಯಾನ್ ಹೆಚ್ಚು ಗಮನ ಸೆಳೆದಿದೆ. ಈ ಯೋಜನೆಯು ದೀರ್ಘಾವಧಿಯ ವ್ಯಾಲಿಡಿಟಿ ಜೊತೆಗೆ ಆಕರ್ಷಕ ದೈನಂದಿನ ಡೇಟಾ ಪ್ರಯೋಜನ ಪಡೆದಿದೆ. ಇನ್ನು ಗ್ರಾಹಕರು ಈ ಪ್ಲ್ಯಾನ್ ರೀಚಾರ್ಜ್ ಮಾಡಿದ್ರೆ, 70 ದಿನ ಪದೇ ಪದೇ ರೀಚಾರ್ಜ್ ಮಾಡುವ ಕಿರಿ ಕಿರಿನೇ ಇರಲ್ಲ. ಹಾಗಾದರೇ ಜಿಯೋ 719 ರೂ. ಪ್ರೀಪೇಯ್ಡ್ ಪ್ಲ್ಯಾನಿನ ಹಾಗೂ ಇತರೆ ಜನಪ್ರಿಯ ಪ್ಲ್ಯಾನ್‌ಗಳ ಬಗ್ಗೆ ಈ ಲೇಖನದಲ್ಲಿ ತಿಳಿಯೋಣ ಮುಂದೆ ಓದಿರಿ.

ಜಿಯೋ 719ರೂ. ರೀಚಾರ್ಜ್ ಪ್ಲ್ಯಾನ್
ಜಿಯೋ ಟೆಲಿಕಾಂನ 719 ರೂ ರೀಚಾರ್ಜ್ ಪ್ಲ್ಯಾನ್ ಒಟ್ಟು 70 ದಿನಗಳ ವ್ಯಾಲಿಡಿಟಿ ಅವಧಿ ಯನ್ನು ಪಡೆದಿದ್ದು, ಈ ಅವಧಿ ಯಲ್ಲಿ ಪ್ರತಿದಿನ 2 GB ಡೇಟಾ ಸೌಲಭ್ಯ ಸಿಗಲಿದೆ. ಹಾಗೆಯೇ ಉಚಿತ 100 ಎಸ್ಎಮ್ಎಸ್ ಸೌಲಭ್ಯ ಸಹ ಒಳಗೊಂಡಿದ್ದು, ಹಾಗೆಯೇ ಗ್ರಾಹಕರಿಗೆ ಅನಿಯಮಿತ ಉಚಿತ ವಾಯಿಸ್ ಕರೆಗಳ ಸೌಲಭ್ಯ ಸಿಗಲಿದೆ. ಇದರೊಂದಿಗೆ ಪೂರ್ಣ ವ್ಯಾಲಿಡಿಟಿ ಅವಧಿಗೆ ಒಟ್ಟು 140GB ಡೇಟಾ ಲಭ್ಯ ಖಚಿತ. ಹೆಚ್ಚುವರಿಯಾಗಿ ಜಿಯೋ ಆಪ್‌ಗಳ ಸೌಲಭ್ಯ ಲಭ್ಯ.
ಜಿಯೋ 749ರೂ. ರೀಚಾರ್ಜ್ ಪ್ಲ್ಯಾನ್
ಜಿಯೋ ಟೆಲಿಕಾಂನ 749 ರೂ. ರೀಚಾರ್ಜ್ ಪ್ಲ್ಯಾನ್ ಒಟ್ಟು 72 ದಿನಗಳ ವ್ಯಾಲಿಡಿಟಿ ಅವಧಿ ಯನ್ನು ಪಡೆದಿದ್ದು, ಈ ಅವಧಿ ಯಲ್ಲಿ ಪ್ರತಿದಿನ 2 GB ಡೇಟಾ ಸೌಲಭ್ಯ ಸಿಗಲಿದೆ. ಹಾಗೆಯೇ ಉಚಿತ 100 ಎಸ್ಎಮ್ಎಸ್ ಸೌಲಭ್ಯ ಸಹ ಒಳಗೊಂಡಿದ್ದು, ಹಾಗೆಯೇ ಗ್ರಾಹಕರಿಗೆ ಅನಿಯಮಿತ ಉಚಿತ ವಾಯಿಸ್ ಕರೆಗಳ ಸೌಲಭ್ಯ ಸಿಗಲಿದೆ. ಇದರೊಂದಿಗೆ ಪೂರ್ಣ ವ್ಯಾಲಿಡಿಟಿ ಅವಧಿಗೆ ಒಟ್ಟು 164GB ಡೇಟಾ ಲಭ್ಯ ಖಚಿತ. ಹೆಚ್ಚುವರಿಯಾಗಿ ಜಿಯೋ ಆಪ್‌ಗಳ ಸೌಲಭ್ಯ ಲಭ್ಯ.
ಜಿಯೋ 999ರೂ. ರೀಚಾರ್ಜ್ ಪ್ಲ್ಯಾನ್
ಜಿಯೋ ಟೆಲಿಕಾಂನ 999 ರೂ. ಪ್ರೀಪೇಯ್ಡ್ ಯೋಜನೆಯು ದೀರ್ಘಾವಧಿಯ ಪ್ಲ್ಯಾನ್ ಆಗಿದ್ದು, ಒಟ್ಟು 98 ದಿನಗಳ ವ್ಯಾಲಿಡಿಟಿ (Validity) ಸೌಲಭ್ಯ ಪಡೆದುಕೊಂಡಿದೆ. ಈ ಅವಧಿಯಲ್ಲಿ ಬಳಕೆದಾರರಿಗೆ ಪ್ರತಿದಿನ 2GB ಡೇಟಾ ಪ್ರಯೋಜನ ಲಭ್ಯ ಇದ್ದು, ಹಾಗೆಯೇ ಅನಿಯಮಿತ ವಾಯಿಸ್ ಕರೆ ಪ್ರಯೋಜನ ಸಹ ಲಭ್ಯವಾಗಲಿದೆ. ಅಲ್ಲದೇ ಇದರಲ್ಲಿ ಪ್ರತಿದಿನ 100 ಎಸ್‌ಎಮ್‌ಎಸ್ ಸೌಲಭ್ಯ ಸಹ ದೊರೆಯುತ್ತದೆ.
ಜಿಯೋ 859 ರೂ. ರೀಚಾರ್ಜ್ ಪ್ಲ್ಯಾನ್
ಜಿಯೋ 859 ರೂ. ಪ್ರೀಪೇಯ್ಡ್ ನೇರವಾಗಿ ಜಿಯೋ ಟೆಲಿಕಾಂನ 859ರೂ. ಪ್ರೀಪೇಯ್ಡ್ ಪ್ಲ್ಯಾನ್ ದೀರ್ಘಾವಧಿಯ ಯೋಜನೆ ಆಗಿದ್ದು, ಒಟ್ಟು 90 ದಿನಗಳ ವ್ಯಾಲಿಡಿಟಿ (Validity) ಸೌಲಭ್ಯ ಪಡೆದುಕೊಂಡಿದೆ. ಈ ಅವಧಿಯಲ್ಲಿ ಬಳಕೆದಾರರಿಗೆ ಪ್ರತಿದಿನ 2GB ಡೇಟಾ ಪ್ರಯೋಜನ ಲಭ್ಯ ಇದ್ದು, ಹಾಗೆಯೇ ಅನಿಯಮಿತ ವಾಯಿಸ್ ಕರೆ ಪ್ರಯೋಜನ ಸಹ ಲಭ್ಯವಾಗಲಿದೆ. ಅಲ್ಲದೇ ಇದರಲ್ಲಿ ಪ್ರತಿದಿನ 100 ಎಸ್‌ಎಮ್‌ಎಸ್ ಸೌಲಭ್ಯ ಸಹ ದೊರೆಯುತ್ತದೆ.


Click it and Unblock the Notifications








