ಜಿಯೋ ಗ್ರಾಹಕರಿಗೆ ಧಮಾಕಾ ಆಫರ್!..ಉಚಿತವಾಗಿ 12GB ಡೇಟಾ ಗ್ಯಾರಂಟಿ!
ಮೂಂಚೂಣಿಯ ಟೆಲಿಕಾಂ ಸಂಸ್ಥೆಯಾಗಿ ಕಾಣಿಸಿಕೊಂಡಿರುವ ಜಿಯೋ, ಇತ್ತೀಚಿಗೆ 2023ರೂ. ಪ್ಲ್ಯಾನ್ ಪರಿಚಯಿಸುವ ಮೂಲಕ ಸದ್ದು ಮಾಡಿದೆ. ಇದರೊಂದಿಗೆ ಹೊಸ ವರ್ಷದ ಆರಂಭದಲ್ಲಿ ಜಿಯೋ ತನ್ನ 2,999ರೂ. ವಾರ್ಷಿಕ ಯೋಜನೆಯಲ್ಲಿ ಹೆಚ್ಚುವರಿ ವ್ಯಾಲಿಡಿಟಿ ನೀಡುವ ಮೂಲಕ ಮತ್ತೆ ಗ್ರಾಹಕರಿಗೆ ಗುಡ್‌ನ್ಯೂಸ್ ನೀಡಿದೆ. ಈಗ ಮತ್ತೊಮ್ಮೆ ಸಿಹಿಸುದ್ದಿ ಹೊರಹಾಕಿದೆ.
ಹೌದು, ಜಿಯೋ ಟೆಲಿಕಾಂ ತನ್ನ 899ರೂ. ಮತ್ತು 349ರೂ. ಪ್ರೀಪೇಯ್ಡ್ ಪ್ಲ್ಯಾನ್‌ಗಳಲ್ಲಿ ಹೆಚ್ಚುವರಿ ಡೇಟಾ ಪ್ರಯೋಜನ ಲಭ್ಯ ಮಾಡಿದ್ದು, ಅಧಿಕ ಡೇಟಾ ಪ್ರಿಯರ ಗಮನ ಸೆಳೆದಿದೆ. ಅಂದಹಾಗೆ ಈ ಎರಡು ಟೆಲಿಕಾಂಗಳು ಅನಿಯಮಿತ ವಾಯಿಸ್ ಕರೆ, ಎಸ್‌ಎಮ್‌ಎಸ್ ಪ್ರಯೋಜನ ಹಾಗೂ ದೈನಂದಿನ ಡೇಟಾ ಸೌಲಭ್ಯ ಒಳಗೊಂಡಿವೆ.

ಜಿಯೋ ಟೆಲಿಕಾಂನ 899ರೂ. ಮತ್ತು 349ರೂ. ಈ ಎರಡು ಪ್ರೀಪೇಯ್ಡ್ ಪ್ಲ್ಯಾನ್‌ಗಳಲ್ಲಿ ಹೆಚ್ಚುವರಿಯಾಗಿ 12GB ಡೇಟಾ ಪ್ರಯೋಜನ ದೊರೆಯುತ್ತದೆ. ಇದರೊಂದಿಗೆ ಈ ಯೋಜನೆಗಳು ಆಕರ್ಷಕ ವ್ಯಾಲಿಡಿಟಿ ಪ್ರಯೋಜನ ಪಡೆದಿವೆ. ಇನ್ನುಳಿದಂತೆ ಈ ಎರಡು ಯೋಜನೆಗಳ ಪ್ರಯೋಜನಗಳೆನು ಹಾಗೂ ಇತರೆ ಜನಪ್ರಿಯ ಯೋಜನಗಳ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಜಿಯೋ 349ರೂ. ಪ್ಲ್ಯಾನ್ ಪ್ರಯೋಜನ
ಜಿಯೋ 349ರೂ. ಪ್ಲ್ಯಾನ್ ಒಟ್ಟು 30 ದಿನಗಳ ವ್ಯಾಲಿಡಿಟಿ ಅವಧಿಯನ್ನು ಪಡೆದಿದೆ. ಈ ಅವಧಿಯಲ್ಲಿ ಪ್ರತಿದಿನ 2.5GB ಡೇಟಾ ಪ್ರಯೋಜನ ಲಭ್ಯವಾಗಲಿದ್ದು, ಪೂರ್ಣ ವ್ಯಾಲಿಡಿಟಿ ಅವಧಿಗೆ 75GB ಡೇಟಾ ಸಿಗಲಿದೆ. ಹಾಗೆಯೇ ಅನಿಯಮಿತ ವಾಯಿಸ್ ಕರೆ ಲಭ್ಯ. ಇದರೊಂದಿಗೆ 100 ಎಸ್‌ಎಮ್‌ಎಸ್ ಸೌಲಭ್ಯ ಸಹ ಲಭ್ಯವಾಗಲಿದೆ ಜೊತೆಗೆ ಹೆಚ್ಚುವರಿಯಾಗಿ 12GB ಡೇಟಾ ಪ್ರಯೋಜನ ಸಹ ಲಭ್ಯ.

ಜಿಯೋ 899ರೂ. ಪ್ಲ್ಯಾನ್ ಪ್ರಯೋಜನ
ಜಿಯೋ 899ರೂ. ಪ್ಲ್ಯಾನ್ ಒಟ್ಟು 90 ದಿನಗಳ ವ್ಯಾಲಿಡಿಟಿ ಅವಧಿಯನ್ನು ಪಡೆದಿದೆ. ಈ ಅವಧಿಯಲ್ಲಿ ಪ್ರತಿದಿನ 2.5GB ಡೇಟಾ ಪ್ರಯೋಜನ ಲಭ್ಯವಾಗಲಿದ್ದು, ಪೂರ್ಣ ವ್ಯಾಲಿಡಿಟಿ ಅವಧಿಗೆ 225GB ಡೇಟಾ ಸಿಗಲಿದೆ. ಹಾಗೆಯೇ ಅನಿಯಮಿತ ವಾಯಿಸ್ ಕರೆ ಲಭ್ಯ. ಇದರೊಂದಿಗೆ 100 ಎಸ್‌ಎಮ್‌ಎಸ್ ಸೌಲಭ್ಯ ಸಹ ಲಭ್ಯವಾಗಲಿದೆ ಜೊತೆಗೆ ಹೆಚ್ಚುವರಿಯಾಗಿ 12GB ಡೇಟಾ ಪ್ರಯೋಜನ ಸಹ ಲಭ್ಯ.

ಜಿಯೋ ಟೆಲಿಕಾಂ 2999ರೂ. ಪ್ಲಾನ್ ಪ್ರಯೋಜನಗಳು
ಜಿಯೋ ಟೆಲಿಕಾಂನ ಈ ಪ್ರೀಪೇಯ್ಡ್ ಪ್ಲ್ಯಾನ್ ವಾರ್ಷಿಕ ಅವಧಿಯ ಯೋಜನೆ ಆಗಿದ್ದು, 365 ದಿನಗಳ ವ್ಯಾಲಿಡಿಟಿ ಅವಧಿ ಯನ್ನು ಪಡೆದಿದೆ. ಆದ್ರೆ ಈಗ ಹೆಚ್ಚುವರಿಯಾಗಿ 23 ದಿನಗಳನ್ನು ನೀಡಿದ್ದು, ಒಟ್ಟು 388 ದಿನಗಳ ವ್ಯಾಲಿಡಿಟಿ ದೊರೆಯುತ್ತದೆ. ಪ್ರತಿದಿನ 2.5 GB ಡೇಟಾ ಪ್ರಯೋಜನಗಳು ಗ್ರಾಹಕರಿಗೆ ಲಭ್ಯವಾಗಲಿವೆ. ಅನಿಯಮಿತ ಉಚಿತ ವಾಯಿಸ್ ಕರೆಗಳ ಸೌಲಭ್ಯ ಹಾಗೂ ಪ್ರತಿದಿನ 100 ಎಸ್ಎಮ್ಎಸ್ ಲಭ್ಯ.

ಜಿಯೋ ಟೆಲಿಕಾಂ 2023ರೂ. ಪ್ರೀಪೇಯ್ಡ್ ಪ್ಲಾನ್ ಪ್ರಯೋಜನಗಳು
ಜಿಯೋ ಟೆಲಿಕಾಂ ಹೊಸ ವರ್ಷದ ಅಂಗವಾಗಿ ಪರಿಚಯಿಸಿರುವ 2023ರೂ. ಪ್ರೀಪೇಯ್ಡ್ ಪ್ಲ್ಯಾನ್ ದೀರ್ಘಾವಧಿಯ ಯೋಜನೆ ಆಗಿದ್ದು, 252 ದಿನಗಳ ವ್ಯಾಲಿಡಿಟಿ ಅವಧಿ ಯನ್ನು ಪಡೆದಿದೆ. ಪ್ರತಿದಿನ 2.5 GB ಡೇಟಾ ಪ್ರಯೋಜನಗಳು ಗ್ರಾಹಕರಿಗೆ ಲಭ್ಯವಾಗಲಿದ್ದು, ಒಟ್ಟಾರೇ ಪೂರ್ಣ ವ್ಯಾಲಿಡಿಟಿ ಅವಧಿಗೆ 630GB ಡೇಟಾ ಪ್ರಯೋಜನ ಸಿಗಲಿದೆ. ಹಾಗೆಯೇ ಅನಿಯಮಿತ ಉಚಿತ ವಾಯಿಸ್ ಕರೆಗಳ ಸೌಲಭ್ಯ, ಪ್ರತಿದಿನ 100 ಎಸ್ಎಮ್ಎಸ್ ಪ್ರಯೋಜನ ಸಹ ದೊರೆಯುತ್ತದೆ.
ಜಿಯೋದ 2879ರೂ. ಪ್ರೀಪೇಯ್ಡ್ ಪ್ಲಾನ್ ಪ್ರಯೋಜನಗಳು
ಜಿಯೋ ಟೆಲಿಕಾಂ ಪ್ರೀಪೇಯ್ಡ್ ಪ್ಲ್ಯಾನ್ ವಾರ್ಷಿಕ ಅವಧಿಯ ಯೋಜನೆ ಆಗಿದ್ದು, 365 ದಿನಗಳ ವ್ಯಾಲಿಡಿಟಿ ಅವಧಿ ಯನ್ನು ಪಡೆದಿದೆ. ಪ್ರತಿದಿನ 2 GB ಡೇಟಾ ಪ್ರಯೋಜನಗಳು ಗ್ರಾಹಕರಿಗೆ ಲಭ್ಯವಾಗಲಿವೆ. ಜಿಯೋ ಸೇರಿದಂತೆ ಇತರೆ ನೆಟವರ್ಕ್ ಗಳಿಗೂ ಅನಿಯಮಿತ ಉಚಿತ ವಾಯಿಸ್ ಕರೆಗಳ ಸೌಲಭ್ಯ. ಪ್ರತಿದಿನ 100 ಎಸ್ಎಮ್ಎಸ್ ಪ್ರಯೋಜನ ಸಹ ದೊರೆಯುತ್ತದೆ.


Click it and Unblock the Notifications








