Home
ಸುದ್ದಿಜಾಲ

ಪ್ರಿಪೇಯ್ಡ್, ಪೋಸ್ಟ್‌ಪೇಯ್ಡ್ ಪ್ಲ್ಯಾನ್‌ಗಳಲ್ಲಿ ಇನ್ಮುಂದೆ ಈ ಸೌಲಭ್ಯ ಇಲ್ಲ, ಜಿಯೋ ಈ ರೀತಿ ಮಾಡಿದ್ದು ಸರಿಯೇ?

ಜಿಯೋ ಭಾರತದಲ್ಲಿ ತನ್ನದೇ ಆದ ವಿಶೇಷ ಸೇವೆಗಳನ್ನು ನೀಡುವ ಮೂಲಕ ಹೊಸ ಹೊಸ ಗ್ರಾಹಕರನ್ನು ತನ್ನತ್ತ ಸೆಳೆಯುತ್ತಲೇ ಇರುತ್ತದೆ. ಅದರಂತೆ ಜಿಯೋ ಈವರೆಗೂ ಬಳಕೆದಾರರು ಸಂತಸ ಪಡುವ ಸೌಲಭ್ಯಗಳನ್ನು ಕಲ್ಪಿಸಿಕೊಡುತ್ತಿತ್ತು. ಆದ್ರೆ, ಇದೀಗ ಬಳಕೆದಾರರಿಗೆ ಬೇಸರ ಉಂಟಾಗುವಂತೆ ಮಾಡಿದೆ.

ಹೌದು, ಟೆಲಿಕಾಂ ಸೇವಾ ಪೂರೈಕೆದಾರ ಸಂಸ್ಥೆಯಾದ ರಿಲಯನ್ಸ್ ಜಿಯೋ ತನ್ನ ಪ್ರಿಪೇಯ್ಡ್ ಮತ್ತು ಪೋಸ್ಟ್‌ಪೇಯ್ಡ್ ಪ್ಲ್ಯಾನ್‌ಗಳಿಂದ ಈ ವಿಶೇ‍ಷ ಸೌಲಭ್ಯವೊಂದನ್ನು ತೆಗೆದುಹಾಕಿದೆ. ಅಷ್ಟು ಮಾತ್ರವಲ್ಲದೆ ಗೂಗಲ್‌ ಪ್ಲೇ ಸ್ಟೋರ್‌ ಲಿಸ್ಟ್‌ನಲ್ಲೂ ಸಹ ಇದು ಕಾಣಿಸಿಕೊಳ್ಳುತ್ತಿಲ್ಲ. ಈ ಮೂಲಕ ಅದೆಷ್ಟೊ ಗ್ರಾಹಕರ ಕಣ್ಣು ಕೆಂಪಾಗುವಂತೆ ಮಾಡಲಾಗಿದೆ. ಹಾಗಿದ್ರೆ, ಜಿಯೋ ಯಾಕೆ ಈ ನಿರ್ಧಾರ ಮಾಡಿದೆ?, ಇದರಿಂದ ಬಳಕೆದಾರರಿಗೆ ಆಗುವ ನಷ್ಟ ಏನು ಎಂಬ ಮಾಹಿತಿಯನ್ನು ತಿಳಿದುಕೊಳ್ಳಲು ಈ ಲೇಖನ ಓದಿರಿ.

ಪ್ರಿಪೇಯ್ಡ್, ಪೋಸ್ಟ್‌ಪೇಯ್ಡ್ ಪ್ಲ್ಯಾನ್‌ಗಳಲ್ಲಿ ಇನ್ಮುಂದೆ ಈ ಸೌಲಭ್ಯ ಇಲ್ಲ...

ಜಿಯೋ ಗ್ರಾಹಕರಿಗೆ ಶಾಕಿಂಗ್‌ ನ್ಯೂಸ್‌: ಜಿಯೋ ಕೇವಲ ಟೆಲಿಕಾಂ ಸೇವೆಯನ್ನಷ್ಟೇ ನೀಡದೆ ವಿವಿಧ ಕ್ಷೇತ್ರಗಳಲ್ಲಿ ತನ್ನದೇ ಆದ ಸೇವೆ ಸಲ್ಲಿಸುತ್ತಿದ್ದು, ಈ ಮೂಲಕ ಗ್ರಾಹಕರು ಕಡಿಮೆ ವೆಚ್ಚದಲ್ಲಿ ಹೆಚ್ಚ ಸೌಲಭ್ಯ ಪಡೆದುಕೊಳ್ಳುತ್ತಿದ್ದಾರೆ. ಈ ಸೇವೆಗಳಲ್ಲಿ ಜಿಯೋ ಸೆಕ್ಯೂರಿಟಿ (JioSecurity) ಸೇವೆ ಸಹ ಪ್ರಮುಖವಾಗಿತ್ತು. ಆದರೆ, ಇನ್ಮುಂದೆ ರಿಲಯನ್ಸ್ ಜಿಯೋ ತನ್ನ ಎಲ್ಲಾ ಪ್ರಿಪೇಯ್ಡ್ ಮತ್ತು ಪೋಸ್ಟ್‌ಪೇಯ್ಡ್ ಪ್ಲ್ಯಾನ್‌ಗಳಿಂದ ಜಿಯೋ ಸೆಕ್ಯುರಿಟಿಯ ಪ್ರಯೋಜನಗಳನ್ನು ತೆಗೆದುಹಾಕಿದೆ.

ಈ ಸಂಬಂಧ ಎಂದು ಟೆಲಿಕಾಂ ಟಾಕ್ ವರದಿ ಮಾಡಿದ್ದು, ಈ ಜಿಯೋ ಸೆಕ್ಯುರಿಟಿ ಸೇವೆಯ ಅಪ್ಲಿಕೇಶನ್ ಅನ್ನು ಗೂಗಲ್ ಪ್ಲೇ ಸ್ಟೋರ್‌ನಿಂದಲೂ ತೆಗೆದುಹಾಕಿದೆ ಎಂದು ಉಲ್ಲೇಖ ಮಾಡಿದೆ. ಆದರೆ, ಈವರೆಗೂ ಸಹ ಆಪಲ್‌ ಆಪ್ ಸ್ಟೋರ್‌ನಲ್ಲಿ ಈ ಆಪ್‌ ಇನ್ನೂ ಕಾಣಿಸಿಕೊಳ್ಳುತ್ತಿದ್ದು, ಇದನ್ನೂ ಸಹ ಇಲ್ಲಿಂದ ಶೀಘ್ರದಲ್ಲೇ ತೆಗೆದುಹಾಕಲಾಗುವುದು ಎಂದು ತಿಳಿದುಬಂದಿದೆ. ಆದರೆ ಯಾವಾಗ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.

ಏನಿದು ಜಿಯೋ ಸೆಕ್ಯೂರಿಟಿ?: ತಿಳಿದಿಲ್ಲದವರಿಗೆ, ಜಿಯೋದ ಯಾವುದೇ ಸೇವೆಗಳು ಜಿಯೋ ಗ್ರಾಹಕರಿಗೆ ಮಾತ್ರ ಲಭ್ಯ ಇರುತ್ತವೆ. ಅಂದರೆ ಜಿಯೋ ಅಲ್ಲದ ಗ್ರಾಹಕರು ಈ ಸೇವೆಗಳನ್ನು ಪಡೆದುಕೊಳ್ಳಲು ಆಗುವುದಿಲ್ಲ. ಅದರಂತೆ ಈ ಜಿಯೋ ಸೆಕ್ಯೂರಿಟಿ ಜಿಯೋ ಬಳಕೆದಾರರಿಗೆ ಹೆಚ್ಚುವರಿ ಭದ್ರತೆ ಮತ್ತು ಸೈಬರ್ ಬೆದರಿಕೆಗಳು ಮತ್ತು ಆನ್‌ಲೈನ್ ವಂಚನೆಗಳ ವಿರುದ್ಧ ರಕ್ಷಣೆ ನೀಡುತ್ತಿತ್ತು. ಹಾಗೆಯೇ ಈ ಆಪ್ ನಾರ್ಟನ್‌ನಿಂದ ಕಾರ್ಯನಿರ್ವಹಿಸುತ್ತಿತ್ತು. ಜೊತೆಗೆ ಇದು ಆಂಡ್ರಾಯ್ಡ್ ಹಾಗೂ ಐಫೋನ್‌ಗಳು, ಐಪ್ಯಾಡ್‌ಗಳಲ್ಲಿ ಬಳಕೆ ಆಗುತ್ತಿತ್ತು.

ಇಷ್ಟು ಮಾತ್ರವಲ್ಲದೆ ಈ ಜಿಯೋ ಸೆಕ್ಯೂರಿಟಿ ಅಪ್ಲಿಕೇಶನ್ ಬಳಕೆದಾರರಿಗೆ ಹಾನಿಕಾರಕ ವೆಬ್‌ಸೈಟ್‌ಗಳು, ಪೇಜ್‌ಗಳು ಮತ್ತು ಇನ್ನೂ ಹೆಚ್ಚಿನ ಮಾಹಿತಿಯನ್ನು ಹಾಗೂ ಅವರ ಡೇಟಾವನ್ನು ಸುರಕ್ಷಿತವಾಗಿರಿಸಲು ಯಾವಾಗಲು ಸಹಾಯ ಮಾಡುತ್ತಿತ್ತು ಹಾಗೂ ಸೂಚನೆ ನೀಡುತ್ತಿತ್ತು. ಆದರೆ, ಇನ್ಮುಂದೆ ಈ ಸೇವೆ ಜಿಯೋ ಬಳಕೆದಾರರಿಗೆ ಲಭ್ಯ ಇರುವುದಿಲ್ಲ ಎನ್ನುವುದು ಹಲವರಿಗೆ ಬೇಸರ ಉಂಟು ಮಾಡುವ ವಿಷಯವಾಗಿದೆ.

ಪ್ರಮುಖ ವರದಿಯ ಪ್ರಕಾರ ರಿಲಯನ್ಸ್ ಪ್ಲೇ ಸ್ಟೋರ್ ಮತ್ತು ಅದರ ಎಲ್ಲಾ ಯೋಜನೆಗಳಿಂದ ಈ ಆಪ್‌ ಅನ್ನು ತೆಗೆದುಹಾಕಿಲ್ಲ. ಬದಲಾಗಿ ಜಿಯೋ ಸೆಕ್ಯುರಿಟಿ ವೆಬ್‌ಸೈಟ್ ಅನ್ನು ಸಹ ತೆಗೆದುಹಾಕಿದೆಯಂತೆ. ಈ ಮೂಲಕ ಈ ರೀತಿಯ ಸೇವೆ ಜಿಯೋ ನೀಡುತ್ತಿತ್ತು ಎನ್ನುವುದನ್ನೇ ಮರೆಸಲು ಜಿಯೋ ಮುಂದಾಗಿದೆ ಎಂದು ತೋರುತ್ತದೆ. ಆದರೂ ಸಹ ಜಿಯೋ ಇದಕ್ಕೆ ಏನಾದರೂ ಪರ್ಯಾಯ ಮಾರ್ಗಗಳನ್ನು ನೀಡುತ್ತದೆ ಎಂದು ಸಹ ನಿರೀಕ್ಷೆ ಮಾಡಲಾಗಿದೆ.

ಪ್ರಿಪೇಯ್ಡ್, ಪೋಸ್ಟ್‌ಪೇಯ್ಡ್ ಪ್ಲ್ಯಾನ್‌ಗಳಲ್ಲಿ ಇನ್ಮುಂದೆ ಈ ಸೌಲಭ್ಯ ಇಲ್ಲ...

ಬಳಕೆದಾರರ ಮೇಲೆ ಇದು ಹೇಗೆ ಪರಿಣಾಮ ಬೀರುತ್ತದೆ?: ಇನ್ನು ಈ ಜಿಯೋ ಅಪ್ಲಿಕೇಶನ್‌ ಸಾಮಾನ್ಯವಾಗಿ ಇತರೆ ಜಿಯೋದ ಆಪ್‌ಗಳಂತೆ ಹೆಚ್ಚು ಜನಪ್ರಿಯತೆ ಪಡೆದಿಲ್ಲ. ಆದರೆ, ಇದರ ಸೇವೆಗಳು ಮಾತ್ರ ಮಹತ್ವದ್ದಾಗಿದ್ದವು. ಅದಾಗ್ಯೂ ಇದರಿಂದ ಎಷ್ಟು ಬಳಕೆದಾರರು ಏನೆಲ್ಲಾ ಸಮಸ್ಯೆ ಎದುರಿಸಬಹುದು ಎಂಬುದು ಮಾತ್ರ ಇನ್ನೂ ಸ್ಪಷ್ಟವಾಗಿಲ್ಲ. ಯಾಕೆಂದರೆ ಕೆವರನ್ನು ಬಿಟ್ಟರೆ ಹಲವರಿಗೆ ಈ ಆಪ್‌ಬಗ್ಗೆ ಹೆಚ್ಚಿನ ಅರಿವೇ ಇರಲಿಲ್ಲ ಎಂದು ಹೇಳಲಾಗಿದೆ.

Best Mobiles in India

English summary
Like other Jio services Jio Security service is also important and henceforth this service will not be available anywhere.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+