Home
ಸುದ್ದಿಜಾಲ

ಜಿಯೋ ಸೆಟ್‌ಟಾಪ್‌ ಬಾಕ್ಸ್‌ ಗ್ರಾಹಕರಿಗೆ ಗುಡ್‌ನ್ಯೂಸ್‌!

ಸದ್ಯ ದೇಶಿಯ ಟೆಲಿಕಾಂ ವಲಯದಲ್ಲಿ ಭಾರಿ ಸದ್ದು ಮಾಡುತ್ತಿರುವ ಜಿಯೋ ಸಂಸ್ಥೆಯು ಇತ್ತೀಚಿಗೆ ಜಿಯೋ ಸೆಟ್‌ಟಾಪ್ ಬಾಕ್ಸ್ ಪರಿಚಯಿಸಿದೆ. ಹಲವು ಮನರಂಜನೆಯ ಆಯ್ಕೆಗಳನ್ನು ಒಳಗೊಂಡಿರುವ ಜಿಯೋ ಸೆಟ್‌ಟಾಪ್ ಬಾಕ್ಸ್‌ ಗ್ರಾಹಕರನ್ನು ಸೆಳೆದಿದೆ. ಜಿಯೋ ಫೈಬರ್‌ ಸಂಪರ್ಕದೊಂದಿಗೆ ಕಾರ್ಯನಿರ್ವಹಿಸುವ ಜಿಯೋ ಸೆಟ್‌ಟಾಪ್‌ ಬಾಕ್ಸ್‌ನಲ್ಲಿ ಇದೀಗ ಸಂಸ್ಥೆಯು ಹೊಸದಾಗಿ oTT ಅಪ್ಲಿಕೇಶನ್‌ಗಳನ್ನು ಸೇರ್ಪಡೆ ಮಾಡಿದೆ.

ಜಿಯೋ ಸಂಸ್ಥೆಯ

ಹೌದು, ಜಿಯೋ ಸಂಸ್ಥೆಯು ತನ್ನ ಸೆಟ್‌ಟಾಪ್‌ ಬಾಕ್ಸ್ ಸೇವೆಯಲ್ಲಿ ಈಗ ಆರು ಹೊಸ OTT-ಲೈವ್‌ ವಿಡಿಯೊ ಸ್ಟ್ರೀಮಿಂಗ್‌ ಆಪ್ಸ್‌ಗಳ ಪ್ರಯೋಜನ ಒದಗಿಸಲು ಮುಂದಾಗಿದೆ. ಜೀ5, ಸನ್‌ನೆಕ್ಸ್ಟ್‌ ಸೇರಿದಂತೆ ಹಾಟ್‌ಸ್ಟಾರ್, ಯೂಟ್ಯೂಬ್, ವೂಟ್, ಸೋನಿಲೈವ್ ಅಪ್ಲಿಕೇಶನ್‌ಗಳು ಸೇರಿವೆ. ಇನ್ನು ಈ ಎಲ್ಲ ಆಪ್ಸ್‌ಗಳ ಪ್ರಯೋಜನವು ಜಿಯೋ ಫೈಬರ್ 849ರೂ ಮತ್ತು ಅದಕ್ಕಿಂತ ಹೆಚ್ಚಿನ ದರದ ಪ್ಲ್ಯಾನ್‌ಗಳಲ್ಲಿ ಲಭ್ಯವಾಗಲಿದೆ.

ಗ್ರಾಹಕರಿಗೂ ಜಿಯೋ

ಜಿಯೋ ಫೈಬರ್ ಸಂಪರ್ಕ ಪಡೆಯುವ ಪ್ರತಿ ಗ್ರಾಹಕರಿಗೂ ಜಿಯೋ ಸೆಟ್‌ಟಾಪ್‌ ಬಾಕ್ಸ್ ಉಚಿತವಾಗಿ ಲಭ್ಯ ಇರುತ್ತದೆ. ಇದರೊಂದಿಗೆ ಕೆಲವು ಕಾಂಪ್ಲಿಮೆಂಟ್ರಿ OTT ಆಪ್ಸ್‌ ಲಭ್ಯ ಇರುತ್ತವೆ. ಆ ಲಿಸ್ಟಿಗೆ ಮತ್ತೆ ಈಗ ಸನ್‌ನೆಕ್ಸ್ಟ್‌ಮತ್ತು ಜೀ5 ಸೇರಿವೆ. ಹಾಗೂ ಸದ್ಯದಲ್ಲಿಯೇ ಎರೊಸ್ ನವ್ ಆಪ್‌ ಸಹ ಸೇರ್ಪಡೆ ಆಗಲಿದೆ. ಜಿಯೋ ಫೈಬರ್‌ನ ಆರಂಭಿಕ 699ರೂ. ಪ್ಲ್ಯಾನಿನಲ್ಲಿ ಸಂಪೂರ್ಣ OTT ಆಪ್ಸ್‌ ಸಿಗುವುದಿಲ್ಲ.

ಫೈಬರ್ ಸೆಟ್‌ಟಾಪ್‌

ಹಾಗೆಯೇ ಜಿಯೋ ಫೈಬರ್ ಸೆಟ್‌ಟಾಪ್‌ ಬಾಕ್ಸ್‌ನಲ್ಲಿ ಜಿಯೋ ಸಿನಿಮಾ, ಜೀಯೋ ಸಾವನ್ ಆಪ್ಸ್‌ಗಳು ಲಭ್ಯ ಇದ್ದು, ಇವುಗಳ ಜೊತೆಗೆ ಇನ್ನಷ್ಟು ಕಂಟೆಂಟ್‌ ಅಪ್ಲಿಕೇಶನ್‌ಗಳು ಗ್ರಾಹಕರಿಗೆ ಲಭ್ಯವಾಗುತ್ತವೆ. ಇವುಗಳನ್ನು ಹೊರತುಪಡಿಸಿ ಮುಂದಿನ ದಿನಗಳಲ್ಲಿ ಇನ್ನಷ್ಟು ಕಂಟೆಂಟ್‌ ಆಪ್ಸ್‌ ಮತ್ತು ಚಾನೆಲ್ಸ್‌ಗಳು ಜಿಯೋ ಫೈಬರ್‌ ಸೆಟ್‌ಟಾಪ್‌ ಸೇರ್ಪಡೆ ಆಗಲಿವೆ ಎನ್ನುವ ಮಾತುಗಳು ಸಹ ಇವೆ.

Eros Now ಆಪ್‌

ಎರೊಸ್ ನವ್ Eros Now ಆಪ್‌ ಅನ್ನು ಮುಂದಿನ ದಿನಗಳಲ್ಲಿ ಜಿಯೋ ಚಂದಾದಾರರ ವೀಕ್ಷಣೆಗೆ ಲಭ್ಯವಾಗಿಸುತ್ತದೆ. ಈ ಒಟಿಟಿ ಅಪ್ಲಿಕೇಶನ್‌ಗಳ ಚಂದಾದಾರಿಗೆಯಿಂದ ಗ್ರಾಹಕರು ಸುಮಾರು 150 ಚಾನೆಲ್‌ಗಳನ್ನು ವೀಕ್ಷಿಸಲು ಸಾಧ್ಯವಾಗುತ್ತದೆ. ಉದಾಹರಣೆಗೆ, ಹಾಟ್‌ಸ್ಟಾರ್ ಚಂದಾದಾರಿಕೆಯೊಂದಿಗೆ, ಗ್ರಾಹಕರು ಎಲ್ಲಾ ಸ್ಟಾರ್ ಚಾನಲ್‌ಗಳನ್ನು ಪ್ರವೇಶಿಸಲು ಸಾಧ್ಯವಾಗುತ್ತದೆ. ZEE5 ಆಪ್‌ ಸಂಪರ್ಕದೊಂದಿಗೆ ZEE ಚಾನೆಲ್‌ಗಳಂತೆಯೇ ಇರುತ್ತದೆ.

ಜಿಯೋ 4G ವೋಚರ್‌ ಮತ್ತು IUC ಟಾಪ್‌-ಅಪ್‌ ಪ್ಲ್ಯಾನ್: ಯಾವುದು ಯೋಗ್ಯ?

ಜಿಯೋ 4G ವೋಚರ್‌ ಮತ್ತು IUC ಟಾಪ್‌-ಅಪ್‌ ಪ್ಲ್ಯಾನ್: ಯಾವುದು ಯೋಗ್ಯ?

ದೇಶದ ಖಾಸಗಿ ಟೆಲಿಕಾಂ ವಲಯದಲ್ಲಿಯೇ ಹೊಸ ಸಂಚಲಯ ಮೂಡಿಸಿದ ಜಿಯೋ ಇದೀಗ ಹೊರ ಹೋಗುವ ಕರೆಗಳಿಗೆ 6ಪೈಸೆ ದರ ನಿಗದಿ ಮಾಡಿ ಸುದ್ದಿ ಆಗಿತ್ತು. ಅದರಿಂದ ತನ್ನ ಚಂದಾದಾರರಿಗೆ ಹೊರೆ ಆಗಬಾರದೆಂದು ವಿವಿಧ ಬೆಲೆಗಳಲ್ಲಿ IUC ಟಾಪ್-ಅಪ್‌ ರೀಚಾರ್ಜ್ ಪ್ಲ್ಯಾನ್‌ಗಳನ್ನು ಪರಿಚಯಿಸಿದೆ. ಹಾಗೆಯೇ ಹಲವು 4G ಡಾಟಾ ಪ್ಲ್ಯಾನ್‌ಗಳನ್ನು ಸಹ ಬಿಡುಗಡೆ ಮಾಡಿದೆ. ಆದರೆ ಯಾವುದನ್ನು ರೀಚಾರ್ಜ್ ಮಾಡಿಸುವುದು ಯೋಗ್ಯ ಎಂಬ ಪ್ರಶ್ನೆ ಅನೇಕ ಗ್ರಾಹಕರಲ್ಲಿದೆ.

ಹೌದು, ಜಿಯೋ ಭಿನ್ನ ರೀಚಾರ್ಜ್ ಪ್ಲ್ಯಾನ್‌ ಆಯ್ಕೆಗಳನ್ನು ಪರಿಚಯಿಸಿದೆ. ಅವುಗಳಲ್ಲಿ IUC ಟಾಪ್‌-ಅಪ್‌ ರೀಚಾರ್ಜ್ ಪ್ಲ್ಯಾನ್‌ಗಳು ಹಾಗೂ 4G ಡಾಟಾ ವೋಚರ್‌ಗಳು ಸೇರಿವೆ. ಆಲ್‌-ಇನ್‌-ಒನ್ ಪ್ಲ್ಯಾನ್‌, ದೀರ್ಘ ವ್ಯಾಲಿಡಿಟಿ ಅವಧಿಯ ಪ್ಲ್ಯಾನ್‌ಗಳನ್ನು ರೀಚಾರ್ಜ್ ಮಾಡಿಸಿದ್ದರು ಕೆಲವೊಮ್ಮೆ ಹೆಚ್ಚುವರಿ ಡಾಟಾ ಅಗತ್ಯ ಅನಿವಾರ್ಯ ಆಗಿರುತ್ತದೆ. ಆಗ ಟಾಪ್‌-ಅಪ್‌ ರೀಚಾರ್ಜ್‌ ಆಯ್ಕೆಗಳನ್ನು ಗಮನಿಸುತ್ತಾರೆ. ಹೀಗೆ ರೀಚಾರ್ಜ್ ಮಾಡಿಸುವುದಕ್ಕೆ IUC ಟಾಪ್‌-ಅಪ್‌ ಮತ್ತು 4G ಡಾಟಾ ವೋಚರ್ ಪ್ಲ್ಯಾನ್‌ಗಳಲ್ಲಿ ಯಾವುದು ಬೆಸ್ಟ್‌ ಅಂತೀರಾ. ಮುಂದೆ ಓದಿರಿ.

IUC ಟಾಪ್‌-ಅಪ್‌ ಪ್ಲ್ಯಾನ್‌

IUC ಟಾಪ್‌-ಅಪ್‌ ಪ್ಲ್ಯಾನ್‌

ಜಿಯೋ ದಿಂದ ಇತರೆ ನೆಟವರ್ಕಗಳಿಗೆ ಹೊರಹೋಗುವ ಕರೆಗಳಿಗೆ ಪ್ರತಿ ನಿಮಿಷಕ್ಕೆ 6 ಪೈಸೆ ನಿಗದಿ ಮಾಡಿದ ನಂತರ ಜಿಯೋ ಈ IUC ಟಾಪ್‌-ಅಪ್‌ ಪ್ಲ್ಯಾನ್‌ಗಳನ್ನು ಪರಿಚಯಿಸಿತು. ವ್ಯಾಲಿಡಿಟಿ ಇದ್ದು, ಇತರೆ ನೆಟವರ್ಕಗಳ ಉಚಿತ ಕರೆ ನಿಮಿಷದ ಮಿತಿ ಮುಗಿದಾಗ, ಜಿಯೋ ಗ್ರಾಹಕರ ಈ IUC ಟಾಪ್‌-ಅಪ್‌ ರೀಚಾರ್ಜ್ ಮಾಡಿಕೊಳ್ಳಬಹುದಾಗಿದೆ. ಇನ್ನು 10ರೂ.ಯಿಂದ 1000ರೂ.ವರೆಗೂ ಸಹ IUC ಟಾಪ್‌-ಅಪ್‌ ರೀಚಾರ್ಜ್ ಆಯ್ಕೆಗಳಿವೆ.

IUC ಟಾಪ್‌-ಅಪ್‌ ಡಾಟಾ ಪ್ರಯೋಜನಗಳು

IUC ಟಾಪ್‌-ಅಪ್‌ ಡಾಟಾ ಪ್ರಯೋಜನಗಳು

ಅಗ್ಗದ ಬೆಲೆಗೆ ಈ IUC ಟಾಪ್‌-ಅಪ್‌ ರೀಚಾರ್ಜ್‌ಗಳು ಅನುಕೂಲಕರ ಎನ್ನಬಹುದಾಗಿದೆ. IUC ಟಾಪ್‌-ಅಪ್‌ ರೀಚಾರ್ಜ್ ಆಯ್ಕೆಗಳು ಕ್ರಮವಾಗಿ 10ರೂ, 20ರೂ, 50ರೂ, 100ರೂ, 500ರೂ, ಮತ್ತು 1000ರೂ. ಆಗಿವೆ. ಇನ್ನು ಈ ಫ್ಲ್ಯಾನ್‌ಗಳು ಡಾಟಾ ಪ್ರಯೋಜನ ಪಡೆದಿದ್ದು, ಕ್ರಮವಾಗಿ 1GB, 2GB, 5GB, 10GB, 50GB ಮತ್ತು 100GB ಡಾಟಾ ಸೌಲಭ್ಯವನ್ನು ಒದಗಿಸಲಿವೆ.

ಜಿಯೋ 4G ಡಾಟಾ ವೋಚರ್ಸ್‌ ಆಯ್ಕೆಗಳು

ಜಿಯೋ 4G ಡಾಟಾ ವೋಚರ್ಸ್‌ ಆಯ್ಕೆಗಳು

ಜಿಯೋ ಸಂಸ್ಥೆಯು ಹೆಚ್ಚುವರಿ ಡಾಟಾ ಬಳಕೆಗಾಗಿ ಅಗತ್ಯವಿರುವ ಗ್ರಾಹಕರಿಗಾಗಿ ಹಾಗೂ 4G ಡಾಟಾ ಬಳಕೆಗಾಗಿ ಕೆಲವು 4G ಡಾಟಾ ವೋಚರ್ಸ್‌ ಆಯ್ಕೆಗಳು ಪರಿಚಯಿಸಿದೆ. 11ರೂ. ಡಾಟಾ ವೋಚರ್ ನಲ್ಲಿ 400MB ಡಾಟಾ ಲಭ್ಯ, 21ರೂ. ವೋಚರ್‌ನಲ್ಲಿ 1GB ಡಾಟಾ, 51ರೂ. ನಲ್ಲಿ 3GB ಡಾಟಾ, ಹಾಗೂ 101ರೂ. ಡಾಟಾ ವೋಚರ್ ಪ್ಲ್ಯಾನಿನಲ್ಲಿ ಒಟ್ಟು 6GB ಡಾಟಾ ಸಿಗಲಿದೆ.

ಯಾವುದು ಯೋಗ್ಯ?

ಯಾವುದು ಯೋಗ್ಯ?

ಜಿಯೋ ಬಳಕೆದಾರರ ಹೆಚ್ಚುವರಿ 4G ಡಾಟಾ ಅಗತ್ಯಕ್ಕಾಗಿ IUC ಟಾಪ್‌-ಅಪ್‌ ರೀಚಾರ್ಜ್ ಪ್ಲ್ಯಾನುಗಳೆ ಉತ್ತಮ. ಏಕೆಂದರೇ ಅಗ್ಗದ ಬೆಲೆಯಲ್ಲಿ ಉಚಿತ ಕರೆ ನಿಮಿಷ ಹಾಗೂ ಹೆಚ್ಚಿನ ಡಾಟಾ ಪ್ರಯೋಜನಗಳನ್ನು ಒದಗಿಸುತ್ತದೆ. ಅದೇ IUC ಟಾಪ್‌-ಅಪ್‌ಗೆ ಹೋಲಿಸಿದರೇ, ಜಿಯೋ 4G ಡಾಟಾ ರೀಚಾರ್ಜ್ ವೋಚರ್‌ನಲ್ಲಿ ಡಾಟಾ ಪ್ರಯೋಜನ ಕಡಿಮೆ.

Best Mobiles in India

English summary
JioFiber subscribers get a Jio Set-Top Box for free with every connection, and they also get to enjoy complimentary subscription of these OTT applications. to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+