Home
ಸುದ್ದಿಜಾಲ

ಜಿಯೋ ಸಂಸ್ಥೆಯಲ್ಲಿ ಅಮೆರಿಕಾದ 'ಸಿಲ್ವರ್ ಲೇಕ್' ಕಂಪನಿ ಭಾರೀ ಹೂಡಿಕೆ!

ದೇಶದ ನಂಬರ್ ಒನ್ ಟೆಲಿಕಾಂ ಸಂಸ್ಥೆಯಾಗಿ ಗುರುತಿಸಿಕೊಂಡಿರುವ ರಿಲಾಯನ್ಸ್‌ ಜಿಯೋದಲ್ಲಿ ಇತ್ತೀಚಿಗಷ್ಟೆ ಸೋಶಿಯಲ್ ಮೀಡಿಯಾ ದಿಗ್ಗಜ ಫೇಸ್‌ಬುಕ್ ಬರೋಬ್ಬರಿ 43,574 ಕೋಟಿ ಹೂಡಿಕೆ ಮಾಡಿದೆ. ಈ ಮೂಲಕ ಜಿಯೋದ ಶೇ 9.9ರಷ್ಟು ‍ಷೇರ ಅನ್ನು ಫೇಸ್‌ಬುಕ್ ತನ್ನದಾಗಿಸಿಕೊಂಡಿದೆ. ಅದರ ಬೆನ್ನಲ್ಲೇ ಇದೀಗ ಸಿಲ್ವರ್ ಲೇಕ್ ಸಂಸ್ಥೆಯು 5,655.75 ಕೋಟಿ ರೂ.ವನ್ನು ಜಿಯೋ ಪ್ಲಾಟ್‌ಫಾರ್ಮ್‌ನಲ್ಲಿ ಹೂಡಿಕೆ ಮಾಡಲಿದೆ.

ಜಾಗತಿಕ ಟೆಕ್ ಹೂಡಿಕೆ

ಹೌದು, ಅಮೆರಿಕಾ ಮೂಲದ ಜಾಗತಿಕ ಟೆಕ್ ಹೂಡಿಕೆದಾರ ಸಂಸ್ಥೆಯಾದ ಸಿಲ್ವರ್ ಲೇಕ್ ಸಂಸ್ಥೆಯು ಜಿಯೋ ಟೆಲಿಕಾಂ ಪ್ಲಾಟ್‌ಫಾರ್ಮ್‌ನಲ್ಲಿ 5,655.75 ಕೋಟಿ ರೂ.ಗಳನ್ನು ಹೂಡಿಕೆ ಮಾಡಲು ಮುಂದಾಗಿದ್ದು, ಷೇರು ಮೌಲ್ಯ 4.90 ಲಕ್ಷ ಕೋಟಿ ರೂ. ಆಗಲಿದೆ. ಈ ಸಿಲ್ವರ ಲೇಕ್‌ನ ಹೂಡಿಕೆಯಿಂದ ಜಿಯೋದ ಬ್ರ್ಯಾಂಡ್‌ ಮೌಲ್ಯ ಇನ್ನಷ್ಟು ಹೆಚ್ಚಾಗಲಿದೆ. ಸಿಲ್ವರ್ ಲೇಕ್ ಕಂಪನಿಯು ಡೆಲ್ ಟೆಕ್ನಾಲಜೀಸ್, ಟ್ವಿಟರ್, ಆಂಟ್ ಫೈನಾನ್ಷಿಯಲ್, ಅಲಿಬಾಬಾ, ಏರ್ಬನ್ಬಿ, ಮತ್ತು ವಿಶ್ವದ ಹಲವಾರು ಟೆಕ್ ಕಂಪನಿಗಳಲ್ಲಿ ಹೂಡಿಕೆ ಮಾಡಿದೆ.

ಸಿಲ್ವರ್ ಲೇಕ್‌

ಸಿಲ್ವರ್ ಲೇಕ್‌ನೊಂದಿಗಿನ ಒಪ್ಪಂದವನ್ನು ಉದ್ದೇಶಿಸಿ ಮಾತನಾಡಿದ ಮುಖೇಶ್ ಅಂಬಾನಿ ಅವರು ಈ ಪಾಲುದಾರಿಕೆಯಿಂದ ಸಂತಸಗೊಂಡಿದ್ದಾರೆ ಎಂದು ಹೇಳಿದರು. ಜಾಗತಿಕವಾಗಿ ಸಿಲ್ವರ್ ಲೇಕ್ ಎಷ್ಟು ದೊಡ್ಡದಾಗಿದೆ ಎಂಬುದು ಎಲ್ಲರಿಗೂ ತಿಳಿದಿದೆ ಮತ್ತು ಜಾಗತಿಕ ತಂತ್ರಜ್ಞಾನದ ಬಗ್ಗೆ ತಮ್ಮ ಒಳನೋಟಗಳನ್ನು ಹೆಚ್ಚಿಸುವ ಮೂಲಕ ರಿಲಯನ್ಸ್ ಜಿಯೋ ಭಾರತವನ್ನು ಸಂಪೂರ್ಣವಾಗಿ ಡಿಜಿಟಲ್ ಮಾಡಲು ಸಾಧ್ಯವಾಗುತ್ತದೆ ಎಂದು ಅವರು ಹೇಳಿದರು.

ಸಂಪೂರ್ಣವಾಗಿ ಡಿಜಿಟಲ್

ಜಿಯೋ ದೇಶದಲ್ಲಿ ಕಡಿಮೆ ವೆಚ್ಚದಲ್ಲಿ ತಂತ್ರಜ್ಞಾನದ ಲಾಭವನ್ನು ಜನಸಾಮಾನ್ಯರಿಗೆ ತಲುವುವಂತೆ ಮಾಡುತ್ತಿರುವ ಕೆಲಸದಿಂದ ಸಿಲ್ವರ್ ಲೇಕ್ ಪ್ರಭಾವಿತವಾಗಿದೆ. ಈ ನಿಟ್ಟಿನಲ್ಲಿ ಭಾರತವನ್ನು ಸಂಪೂರ್ಣವಾಗಿ ಡಿಜಿಟಲ್ ಮಾಡುವ ಉದ್ದೇಶದಿಂದ ಜಿಯೋಗೆ ಸಹಾಯ ಮಾಡಲು ಸಿಲ್ವರ್ ಲೇಕ್ ಸಿದ್ಧವಾಗಿದೆ ಎಂದು ಸಿಲ್ವರ್ ಲೇಕ್‌ನ ಸಹ-ಸಿಇಒ ಮತ್ತು ವ್ಯವಸ್ಥಾಪಕ ಪಾಲುದಾರ ಶ್ರೀ ಎಗಾನ್ ಡರ್ಬನ್ ಹೂಡಿಕೆಯ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.

ದೇಶದ ಟೆಲಿಕಾಂ

ಜಿಯೋ-ಫೇಸ್‌ಬುಕ್‌ ದೋಸ್ತಿಯಿಂದ ದೇಶದ ಟೆಲಿಕಾಂ, ಇಂಟರ್ನೆಟ್, ಆನ್‌ಲೈನ್‌ ಪೇಮೆಂಟ್, ಗೇಮಿಂಗ್ ಸೇರಿದಂತೆ ಅನೇಕ ಮಹತ್ತರ ಬೆಳವಣಿಗೆಗೆ ಸಾಕ್ಷಿಯಾಗಲಿದೆ ಎಂದು ಹೇಳಲಾಗುತ್ತಿದೆ. ಹಾಗೆಯೇ ಈ ದೈತ್ಯ ಸಂಸ್ಥೆಗಳ ಮೈತ್ರಿಯಿಂದ ಇ-ಕಾಮರ್ಸ್‌ ವಲಯದಲ್ಲಿಯೂ ಬದಲಾವಣೆ ಸಾಧ್ಯತೆಗಳಿದ್ದು, ಜಿಯೋ ಮಾರ್ಟ್‌ ಇ-ಕಾಮರ್ಸ್‌ ಸೇವೆಯಲ್ಲಿ ಮತ್ತಷ್ಟು ಹಿಡಿತ ಸಾಧಿಸಲಿದೆ. ಹೀಗಾಗಿ ದೈತ್ಯ ಇ-ಕಾಮರ್ಸ್ ತಾಣಗಳಾದ ಅಮೆಜಾನ್‌ ಹಾಗೂ ಫ್ಲಿಪ್‌ಕಾರ್ಟ್‌ಗಳಿಗೆ ಭಾರಿ ಹಿನ್ನಡೆ ಆಗಬಹುದು ಎನ್ನಲಾಗಿದೆ. ಹಾಗೆಯೇ ಜಿಯೋ-ಫೇಸ್‌ಬುಕ್‌ಗಳು ಡಿಜಿಟಲ್‌ ಪೇಮೆಂಟ್ ವಲಯಕ್ಕೂ ಕಾಲಿಡಲಿದ್ದು, ಗೂಗಲ್‌ ಪೇ, ಪೇಟಿಎಮ್, ಫೋನ್‌ಪೇಗಳಿಗೂ ಪೈಪೋಟಿ ನೀಡುವ ಸಾಧ್ಯತೆಗಳಿವೆ. ಅದೇ ರೀತಿ ಸಿಲ್ವರ್ ಲೇಕ್ ಹೂಡಿಕೆಯಿಂದಲೂ ಜಿಯೋದ ಸೇವೆಗಳು ಮತ್ತಷ್ಟು ವಿಸ್ತರಿಸಲಿವೆ ಎನ್ನಲಾಗಿದೆ.

Best Mobiles in India

English summary
Silver Lake will invest Rs 5,655.75 crore in Reliance Jio at an equity value of Rs 4.90 lakh crore.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+