Home
ಸುದ್ದಿಜಾಲ

ಕರ್ನಾಟಕದಲ್ಲಿ ತನ್ನ ಸಂಪರ್ಕ ಜಾಲ ಮತ್ತಷ್ಟು ಬಲಪಡಿಸಿದ 'ಜಿಯೋ' ಟೆಲಿಕಾಂ!

ರಿಲಯನ್ಸ್ ಜಿಯೋ ಇನ್ಫೋಕಾಮ್ ಲಿ (ಆರ್‌ ಜೆ ಐ ಎಲ್) ತನ್ನ ಗ್ರಾಹಕ ಅನುಭವವನ್ನು ವೃದ್ಧಿಸುವುದಕ್ಕಾಗಿ 1800 ಬ್ಯಾಂಡ್‌ನಲ್ಲಿ ಹೆಚ್ಚುವರಿ 5MHz ತರಂಗಾಂತರವನ್ನು ಯಶಸ್ವಿಯಾಗಿ ಅಳವಡಿಸಿದೆ. ಇದರೊಂದಿಗೆ ಈ ವರ್ಷದ ಮಾರ್ಚ್‌ ತಿಂಗಳಲ್ಲಿ ಡಿಒಟಿ ನಡೆಸಿದ ತರಂಗಾಂತರ (ಸ್ಪೆಕ್ಟ್ರಂ) ಹರಾಜಿನಲ್ಲಿ ಖರೀದಿಸಿದ ಹೆಚ್ಚುವರಿ 20MHz ತರಂಗಾಂತರದ ಅಳವಡಿಕೆಯನ್ನು ಪೂರ್ಣಗೊಳಿಸಿದಂತಾಗಿದೆ.

ಕರ್ನಾಟಕದಲ್ಲಿ ತನ್ನ ಸಂಪರ್ಕ ಜಾಲ ಮತ್ತಷ್ಟು ಬಲಪಡಿಸಿದ 'ಜಿಯೋ' ಟೆಲಿಕಾಂ!

ಈ ತರಂಗಾಂತರ ವೃದ್ಧಿಯು ಕರ್ನಾಟಕದಲ್ಲಿನ ಸಂಪೂರ್ಣ ಗ್ರಾಹಕ ನೆಲೆಗೆ ಜಿಯೋ ನೆಟ್‌ವರ್ಕ್ ಅನುಭವವನ್ನು ಪರಿಣಾಮಕಾರಿಯಾಗಿ ಹೆಚ್ಚಿಸಿದೆ. 850MHZ, 1800MHZ ಮತ್ತು 2300MHZ ಬ್ಯಾಂಡ್‌ಗಳಲ್ಲಿ ಹೆಚ್ಚುವರಿಯಾಗಿ 60MHz ಅಳವಡಿಸಲಾಗಿದೆ. ಇದರಿಂದ ಕರ್ನಾಟಕದಾದ್ಯಂತ ನೆಟ್‌ವರ್ಕ್ ಗುಣಮಟ್ಟ ಸುಧಾರಿಸಿದ್ದು, ಚಂದಾದಾರರ ಅನುಭವ ಸುಧಾರಣೆಗೆ ನೆರವಾಗಿದೆ. ರಾಜ್ಯಾದ್ಯಂತ ಇರುವ ನಿಯೋಜಿತ ನೆಟ್‌ವರ್ಕ್‌ ಸೈಟ್‌ಗಳ ವಿಚಾರದಲ್ಲಿ ಮತ್ತು ತನ್ನ ಚಂದಾದಾರರಿಗೆ ಒದಗಿಸುವ ನೆಟ್‌ವರ್ಕ್ ಗುಣಮಟ್ಟದಲ್ಲಿ ಜಿಯೋ ರಾಜ್ಯದ ನಾಯಕನಾಗಿ ಮುಂದುವರಿಯಲಿದೆ.

ಕರ್ನಾಟಕದಲ್ಲಿ ತನ್ನ ಸಂಪರ್ಕ ಜಾಲ ಮತ್ತಷ್ಟು ಬಲಪಡಿಸಿದ 'ಜಿಯೋ' ಟೆಲಿಕಾಂ!

ಹೆಚ್ಚುತ್ತಿರುವ ವರ್ಕ್‌ ಫ್ರಂ ಹೋಮ್ ಸನ್ನಿವೇಶಗಳು ಹಾಗೂ ಕಾಲದಿಂದ ಕಾಲಕ್ಕೆ ಹೇರಿಕೆಯಾಗುತ್ತಿರುವ ನಿರ್ಬಂಧಿತ ಸಂಚಾರಗಳನ್ನು ಪರಿಗಣಿಸಿ, ಈ ತರಂಗಾಂತರ ವೃದ್ಧಿಯು, ಎ) ಮನೆಯಿಂದ ಕೆಲಸ ಮಾಡುವ ವೃತ್ತಿಪರರು, ಬಿ) ಆನ್‌ಲೈನ್ ತರಗತಿಗಳಲ್ಲಿ ಭಾಗವಹಿಸುವ ವಿದ್ಯಾರ್ಥಿಗಳು, ಸಿ) ಮನೆಯಲ್ಲಿ ಸುರಕ್ಷಿತವಾಗಿದ್ದುಕೊಂಡು ಯಾವುದೇ ತಡೆರಹಿತವಾಗಿ ಉದ್ಯಮವನ್ನು ಮನೆಯಿಂದಲೇ ನಡೆಸಲು ಸಹಕಾರಿಯಾಗುತ್ತದೆ. ಹೆಚ್ಚಿಸಲಾದ ಸಂಪರ್ಕ ಜಾಲ ಮತ್ತು ಅನುಭವವು ಹೊರಭಾಗದಲ್ಲಿನ ಅಗತ್ಯ ಕೆಲಸಗಳಲ್ಲಿ ತೊಡಗಿರುವ ವೈದ್ಯಕೀಯ ಹಾಗೂ ಇತರೆ ಮುಂಚೂಣಿ ಕೆಲಸಗಾರರಿಗೆ ಖಂಡಿತವಾಗಿಯೂ ಬಹು ದೊಡ್ಡ ನೆರವು ನೀಡಲಿದೆ.

ಕರ್ನಾಟಕದಲ್ಲಿ ತನ್ನ ಸಂಪರ್ಕ ಜಾಲ ಮತ್ತಷ್ಟು ಬಲಪಡಿಸಿದ 'ಜಿಯೋ' ಟೆಲಿಕಾಂ!

ಕರ್ನಾಟಕದಲ್ಲಿ ಜಿಯೋ 2.21 ಕೋಟಿಗೂ ಅಧಿಕ ಗ್ರಾಹಕರ ನೆಲೆಯನ್ನು ಹೊಂದಿದೆ (ಜುಲೈ ಟ್ರಾಯ್ ವರದಿ ಪ್ರಕಾರ), ಮತ್ತು ಪ್ರತಿ ಜಿಲ್ಲೆಯಲ್ಲಿಯೂ ಮತ್ತಷ್ಟು ಚಂದಾದಾರರನ್ನು ಸೇರ್ಪಡೆಯನ್ನು ಮುಂದುವರಿಸಿದೆ. ಮತ್ತಷ್ಟು 4ಜಿ ಟವರ್‌ಗಳ ಬೇಡಿಕೆಯನ್ನು ಈಡೇರಿಸಲು, ಜಿಯೋ ಕರ್ನಾಟಕ 2021ರಲ್ಲಿ ತನ್ನ 4ಜಿ ನೆಟ್‌ವರ್ಕ್ಅನ್ನು ಶೇ 28ರಷ್ಟು ವಿಸ್ತರಿಸುತ್ತಿದೆ. ಪ್ರಸ್ತುತ ಜಿಯೋ ರಾಜ್ಯದಲ್ಲಿ 22,300ಕ್ಕಿಂತ ಹೆಚ್ಚು 4ಜಿ ನೆಟ್‌ವರ್ಕ್ ಸೈಟ್‌ಗಳನ್ನು ಹೊಂದಿದ್ದು, ಇದು ಅತಿ ದೊಡ್ಡ 4ಜಿ ಹೆಜ್ಜೆಗುರುತಾಗಿದೆ.

ರಿಲಯನ್ಸ್ ಜಿಯೋ, ಕಳೆದ ತರಂಗಾಂತರ ಹರಾಜಿನಲ್ಲಿ 20 ವರ್ಷಗಳ ಅವಧಿಗೆ 57,123 ಕೋಟಿ ರೂಪಾಯಿ ವೆಚ್ಚದಲ್ಲಿ 22 ವಲಯಗಳಿಗೆ ಒಟ್ಟು 488.35 MHZ (850 MHZ, 1800 MHZ ಮತ್ತು 2300 MHZ ಒಳಗೊಂಡಂತೆ) ತರಂಗಾಂತರಗಳನ್ನು ಖರೀದಿಸಿದೆ. ಇದರೊಂದಿಗೆ ಜಿಯೋ ತನ್ನ ಹೆಜ್ಜೆಗುರುತನ್ನು ಶೇ 55ರಷ್ಟು ಏರಿಕೆಯೊಂದಿಗೆ ಒಟ್ಟು 1717 MHZಗೆ ಗಣನೀಯವಾಗಿ ಹೆಚ್ಚಿಸಿಕೊಂಡಿದೆ. ಜಿಯೋ ಪ್ರಸ್ತುತ 443 ಮಿಲಿಯನ್ ಗ್ರಾಹಕರನ್ನು ಹೊಂದಿದೆ. ತನ್ನ ವೃದ್ಧಿಸಿದ ತರಂಗಾಂತರ ಹೆಜ್ಜೆಗುರುತಿನೊಂದಿಗೆ ಆರ್‌ ಜೆ ಐ ಎಲ್, ತನ್ನ ಹಾಲಿ ಬಳಕೆದಾರರಿಗೆ ಸೇವೆ ಒದಗಿಸಲು ನೆಟ್‌ವರ್ಕ್ ಸಾಮರ್ಥ್ಯವನ್ನು ಹೆಚ್ಚಿಸಲಿದೆ. ಈ ವೃದ್ಧಿಯು ಮುಂದೆ 300 ಮಿಲಿಯನ್ ಬಳಕೆದಾರರನ್ನು ಸೇರ್ಪಡೆಗೊಳಿಸುವ ಮೂಲಕ ಡಿಜಿಟಲ್ ಸೇವೆಗಳತ್ತ ಹಾಗೂ 5ಜಿ ಸೇವೆಗಳ ಪರಿವರ್ತನೆಗೆ ಸಾಗಲು ಕೂಡ ನೆರವಾಗಲಿದೆ.

ಹಾಗೆಯೇ ಕಳೆದ ಜೂನ್‌ನಲ್ಲಿ 4G ಡೌನ್‌ಲೋಡ್ ವೇಗದಲ್ಲಿ ಜಿಯೋ ಅಗ್ರಸ್ಥಾನ ಪಡೆದಿರುವ ಬಗ್ಗೆ ಟ್ರಾಯ್ ವರದಿ ನೀಡಿತ್ತು. ಪ್ರತಿ ಸೆಕೆಂಡಿಗೆ ಸರಾಸರಿ 20.7 ಮೆಗಾಬೈಟ್ ಡೌನ್‌ಲೋಡ್ ವೇಗವನ್ನು ಹೊಂದಿರುವ ರಿಲಯನ್ಸ್ ಜಿಯೋ, 4ಜಿ ವಿಭಾಗದಲ್ಲಿ ತನ್ನ ಮುಂದಾಳತ್ವ ಕಾಯ್ದುಕೊಳ್ಳುವುದನ್ನು ಮುಂದುವರಿಸಿದೆ. ಮೇ ತಿಂಗಳಿನ ಪಟ್ಟಿಯಲ್ಲಿ ವೊಡಾಫೋನ್ ಐಡಿಯಾ 6.7 ಎಂಬಿಪಿಎಸ್ ಡೇಟಾ ವೇಗದೊಂದಿಗೆ ಅಪ್‌ಲೋಡ್ ವಿಭಾಗದಲ್ಲಿ ಮೊದಲ ಸ್ಥಾನ ಪಡೆದಿದೆ. ರಿಲಯನ್ಸ್ ಜಿಯೋದ 4ಜಿ ನೆಟ್‌ವರ್ಕ್ ವೇಗವು ಅಲ್ಪ ಪ್ರಮಾಣದಲ್ಲಿ ಏರಿಕೆಯಾಗಿದೆ. ಆದರೆ ಅದು ತನ್ನ ಅತಿ ಸಮೀಪದ ಪ್ರತಿಸ್ಪರ್ಧಿ ವೊಡಾಫೋನ್ ಐಡಿಯಾಕ್ಕಿಂತಲೂ ಮೂರು ಪಟ್ಟು ಅಧಿಕವಾಗಿದೆ. ವೊಡಾಫೋನ್ ಐಡಿಯಾ 6.3 ಎಂಬಿಪಿಎಸ್ ಸರಾಸರಿ ಡೌನ್‌ಲೋಡ್ ವೇಗವನ್ನು ಹೊಂದಿದೆ.

4Gಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿರುವ ಜಿಯೋ ದೃಷ್ಠಿ 5G ನೆಟವರ್ಕ್‌ನಲ್ಲಿದೆ. ಈ ನಿಟ್ಟಿನಲ್ಲಿ ಇತ್ತೀಚಿಗಷ್ಟೆ ಮುಂಬೈನಲ್ಲಿ ಪರೀಕ್ಷಾರ್ಥವಾಗಿ 5G ಶುರುಮಾಡಿದೆ. ಹಾಗೆಯೇ ಗುರುಗಾಂವ್‌ ನಲ್ಲಿ ಜಿಯೋ ಟ್ರಯಲ್ಸ್‌ ನಡೆಸಿದೆ. ಏರ್‌ಟೆಲ್‌ 3500MHz ಬ್ಯಾಂಡ್‌ನಲ್ಲಿ ನೆಟ್‌ವರ್ಕ್‌ಗಳನ್ನು ಪರೀಕ್ಷಿಸಲು ಟೆಲಿಕಾಂ ಆಪರೇಟರ್ ಎರಿಕ್ಸನ್ ಅವರೊಂದಿಗೆ ಕೈಜೋಡಿಸಿದೆ. ಪ್ರಯೋಗಗಳ ಸಮಯದಲ್ಲಿ ಎರಡೂ ಕಂಪನಿಗಳು 1 ಜಿಬಿಪಿಎಸ್ ವೇಗವನ್ನು ತಲುಪಿಸುವಲ್ಲಿ ಯಶಸ್ವಿಯಾಗಿದೆ. ಮುಂಬೈ, ದೆಹಲಿ, ಎನ್‌ಸಿಆರ್, ಕೋಲ್ಕತಾ, ಮತ್ತು ಬೆಂಗಳೂರಿನಲ್ಲಿ ಪ್ರಯೋಗಗಳನ್ನು ನಡೆಸಲು ಏರ್‌ಟೆಲ್ 5G ಸ್ಪೆಕ್ಟ್ರಮ್ ಪಡೆದಿದೆ.

Best Mobiles in India

English summary
Jio Strengthens Its Connectivity Across Karnataka.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+