Home
ಸುದ್ದಿಜಾಲ

ಮತ್ತೆ ಹೊಸ ದಾಖಲೆ ಬರೆದ ಜಿಯೋ.. ಏರ್‌ಟೆಲ್‌, ವಿ ಟೆಲಿಕಾಂಗೆ ಭಾರೀ ಹಿನ್ನಡೆ!

ಐಸಿಸಿ ವಿಶ್ವಕಪ್ 2023 (icc world cup 2023) ನಡೆಯಲಿರುವ ಭಾರತದ ಕ್ರಿಕೆಟ್ ಮೈದಾನಗಳಲ್ಲಿ ಕ್ರಿಕೆಟ್ ಪ್ರೇಮಿಗಳಿಗೆ ಇಲ್ಲಿದೆ ಖುಷಿ ವಿಷಯ. ಅದೇನು ಅಂತೀರಾ, ರಿಲಯನ್ಸ್ ಜಿಯೋ ಡೌನ್‌ಲೋಡ್ ವೇಗವು ಏರ್‌ಟೆಲ್‌ ಟೆಲಿಕಾಂಗಿಂತ ಎರಡು ಪಟ್ಟು ವೇಗವಾಗಿದ್ದು, ವಿ ಟೆಲಿಕಾಂಗಿಂತ (ವೊಡಾಫೋನ್‌-ಐಡಿಯಾ) 3.5 ಪಟ್ಟು ವೇಗವಾಗಿದೆ. ಓಪನ್ ಸಿಗ್ನಲ್ ವರದಿಯ ಪ್ರಕಾರ, ಭಾರತೀಯ ಕ್ರಿಕೆಟ್ ಮೈದಾನಗಳ ಒಳಗೆ ಮತ್ತು ಹೊರಗೆ ಅಳೆಯಲಾದ ಡೌನ್‌ಲೋಡ್ ವೇಗದಲ್ಲಿ ಜಿಯೋ ಗೆದ್ದಿದೆ.

ಹೌದು, ರಿಲಯನ್ಸ್ ಜಿಯೋ ಟೆಲಿಕಾಂನ ಸರಾಸರಿ ಡೌನ್‌ಲೋಡ್ ವೇಗವನ್ನು 61.7 ಎಂಬಿಪಿಎಸ್ ಎಂದು ಅಳೆಯಲಾಗಿದೆ. ಏರ್‌ಟೆಲ್ 30.5 ಎಂಬಿಪಿಎಸ್‌ನೊಂದಿಗೆ ಎರಡನೇ ಸ್ಥಾನದಲ್ಲಿ ಕಾಣಿಸಿಕೊಂಡಿದ್ದರೆ, ವೊಡಾಫೋನ್ ಐಡಿಯಾ (ವಿ ಟೆಲಿಕಾಂ) 17.7 ಎಂಬಿಪಿಎಸ್‌ನೊಂದಿಗೆ ತೃಥೀಯ ಸ್ಥಾನದಲ್ಲಿದೆ.

ಮತ್ತೆ ಹೊಸ ದಾಖಲೆ ಬರೆದ ಜಿಯೋ.. ಏರ್‌ಟೆಲ್‌, ವಿ ಟೆಲಿಕಾಂಗೆ ಭಾರೀ ಹಿನ್ನಡೆ!

ಓಪನ್ ಸಿಗ್ನಲ್ ವರದಿಯಲ್ಲಿ, 5G ಡೌನ್‌ಲೋಡ್ ವೇಗದಲ್ಲಿ ರಿಲಯನ್ಸ್ ಜಿಯೋ ಅಗ್ರ ಸ್ಥಾನದಲ್ಲಿದೆ. ಜಿಯೋದ 5ಜಿ ಡೌನ್‌ಲೋಡ್ ವೇಗವು ಏರ್‌ಟೆಲ್‌ಗಿಂತ ಶೇ 25.5 ರಷ್ಟು ಅಧಿಕವಾಗಿದೆ. ಜಿಯೋದ ಸರಾಸರಿ 5ಜಿ ಡೌನ್‌ಲೋಡ್ ವೇಗವು 344.5 ಎಂಬಿಪಿಎಸ್ ನಲ್ಲಿ ದಾಖಲಾಗಿದ್ದರೆ, ಏರ್‌ಟೆಲ್ 274.5 ಎಂಬಿಪಿಎಸ್ ನೊಂದಿಗೆ ದ್ವಿತೀಯ ಸ್ಥಾನದಲ್ಲಿದೆ. ವಿ ಟೆಲಿಕಾಂ (ವೊಡಾಫೋನ್ ಐಡಿಯಾ) ಸದ್ಯಕ್ಕೆ 5ಜಿ ಸೇವೆಯನ್ನು ಒದಗಿಸುತ್ತಿಲ್ಲ.

ಐಸಿಸಿ ವಿಶ್ವಕಪ್ 2023 ರ (icc world cup 2023) ಪಂದ್ಯಗಳು ದೇಶದ 10 ಕ್ರೀಡಾಂಗಣಗಳಲ್ಲಿ ನಡೆಯಲಿವೆ. ಇವುಗಳಲ್ಲಿ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಂತಹ ಹೊಸ ಕ್ರೀಡಾಂಗಣಗಳು ಮತ್ತು ಕೋಲ್ಕತ್ತಾದ ಈಡನ್ ಗಾರ್ಡನ್‌ ಕ್ರೀಡಾಂಗಣ ಕೂಡಾ ಸೇರಿವೆ. ಇದಲ್ಲದೇ ದೆಹಲಿ, ಮುಂಬೈ, ಪುಣೆ, ಹೈದರಾಬಾದ್, ಚೆನ್ನೈ, ಬೆಂಗಳೂರು, ಲಖನೌ ಮತ್ತು ಧರ್ಮಶಾಲಾ ಕ್ರಿಕೆಟ್ ಸ್ಟೇಡಿಯಮ್ ಗಳಲ್ಲಿಯೂ ಪಂದ್ಯಗಳು ನಡೆಯಲಿವೆ.

ಕ್ರಿಕೆಟ್ ಮೈದಾನಗಳಲ್ಲಿ ಒಟ್ಟಾರೆ ಅಪ್‌ಲೋಡ್ ವೇಗದ ವಿಷಯದಲ್ಲಿ ತೀವ್ರ ಪೈಪೋಟಿ ಇತ್ತು. ಏರ್‌ಟೆಲ್‌ನ ಸರಾಸರಿ ಅಪ್‌ಲೋಡ್ ವೇಗವನ್ನು 6.6 ಎಂಬಿಪಿಎಸ್ ಎಂದು ಅಳೆಯಲಾಗಿದ್ದರೆ, ಜಿಯೋ 6.3 ಎಂಬಿಪಿಎಸ್ ಇದೆ. ವೊಡಾಫೋನ್ ಐಡಿಯಾ ಎಂಬಿಪಿಎಸ್ ನೊಂದಿಗೆ ಮೂರನೇ ಸ್ಥಾನದಲ್ಲಿದೆ. ಸರಾಸರಿ 5ಜಿ ಅಪ್‌ಲೋಡ್‌ನಲ್ಲಿ ಏರ್‌ಟೆಲ್ ಅಗ್ರಸ್ಥಾನದಲ್ಲಿದೆ, ಏರ್‌ಟೆಲ್‌ನ ವೇಗ 26.3 ಎಂಬಿಪಿಎಸ್ ಆಗಿದ್ದರೆ, ರಿಲಯನ್ಸ್ ಜಿಯೋ 21.6 ಎಂಬಿಪಿಎಸ್ ಆಗಿತ್ತು.

ಓಪನ್ ಸಿಗ್ನಲ್ ಐಸಿಸಿ ವಿಶ್ವಕಪ್ ಕ್ರೀಡಾಂಗಣಗಳ ಒಳಗೆ ಮತ್ತು ಹೊರಗೆ 5ಜಿ ಸಂಪರ್ಕದ ಲಭ್ಯತೆಯನ್ನು ಪರಿಶೀಲಿಸಿದೆ. ನೆಟ್‌ವರ್ಕ್ ಲಭ್ಯತೆಯನ್ನು ಗ್ರಾಹಕರು 5ಜಿ ನೆಟ್‌ವರ್ಕ್‌ನಲ್ಲಿ ಕಳೆಯುವ ಸಮಯದಿಂದ ಅಳೆಯಲಾಗುತ್ತದೆ. ವರದಿಯ ಪ್ರಕಾರ, ವಿಶ್ವಕಪ್ ಸ್ಟೇಡಿಯಂಗಳಲ್ಲಿ 5ಜಿ ಲಭ್ಯತೆಯ ವಿಷಯದಲ್ಲಿ ಜಿಯೋ ಅಗ್ರಸ್ಥಾನದಲ್ಲಿದೆ.

ರಿಲಯನ್ಸ್‌ ಜಿಯೋ ಗ್ರಾಹಕರು ಶೇ 53 ಕ್ಕಿಂತ ಹೆಚ್ಚು ಸಮಯ 5ಜಿ ನೆಟ್‌ವರ್ಕ್‌ಗೆ ಸಂಪರ್ಕ ಹೊಂದಿದ್ದರು. ಆದರೆ ಏರ್‌ಟೆಲ್ ಗ್ರಾಹಕರು 5ಜಿ ನೆಟ್‌ವರ್ಕ್‌ಗೆ ಕೇವಲ ಶೇ 20.7 ರಷ್ಟು ಸಮಯವನ್ನು ಮಾತ್ರ ಸಂಪರ್ಕಿಸಬಹುದು. ಈ ವರದಿ ಪ್ರಕಾರ, ಜಿಯೋದ 5ಜಿ ನೆಟ್‌ವರ್ಕ್‌ನ ಲಭ್ಯತೆ ಏರ್‌ಟೆಲ್‌ಗಿಂತ 2.6 ಪಟ್ಟು ಹೆಚ್ಚು ಎಂದು ದಾಖಲಿಸಲಾಗಿದೆ.

ಜಿಯೋ - ನೆಟ್‌ಫ್ಲಿಕ್ಸ್‌ ಪ್ಲ್ಯಾನ್‌
ಜಿಯೋ ಟೆಲಿಕಾಂ ಇತ್ತೀಚಿಗೆ ಹೊಸದಾಗಿ 1099ರೂ. ಪ್ರೀಪೇಯ್ಡ್‌ ಪ್ಲ್ಯಾನ್‌ ಅನ್ನು ಪರಿಚಯಿಸಿ ಗ್ರಾಹಕರ ಗಮನ ಸೆಳೆದಿದೆ. ಈ ಹೊಚ್ಚ ಹೊಸ ಪ್ರೀಪೇಯ್ಡ್‌ ಪ್ಲ್ಯಾನ್ ಒಟ್ಟು 84 ದಿನಗಳ ವ್ಯಾಲಿಡಿಟಿ ಪಡೆದಿದೆ. ಈ ವೇಳೆ ಪ್ರತಿದಿನ 2GB ಡೇಟಾ ಪ್ರಯೋಜನ ಹಾಗೂ ಪ್ರತಿದಿನವು 100 ಉಚಿತ ಎಸ್‌ಎಮ್‌ಎಸ್‌ ಆಯ್ಕೆ ಸಿಗುತ್ತದೆ.

ಇದರ ಜೊತೆಗೆ ಗ್ರಾಹಕರಿಗೆ ಅನಿಯಮಿತ ಧ್ವನಿ ಕರೆಯ ಸೌಲಭ್ಯ ಕೂಡಾ ಸಿಗಲಿದೆ. ಈ ಯೋಜನೆ ಪ್ಲಸ್‌ ಪಾಯಿಂಟ್‌ ಎಂದರೆ, ಹೆಚ್ಚುವರಿಯಾಗಿ ಇದ್ರಲ್ಲಿ ನೆಟ್‌ಫ್ಲಿಕ್ಸ್‌ ಚಂದಾದಾರಿಕೆ ಸೌಲಭ್ಯ ಸಹ ಪಡೆದಿದೆ. ಇನ್ನು ಪೂರ್ಣ ವ್ಯಾಲಿಡಿಟಿ ಅವಧಿಗೆ ಒಟ್ಟಾರೆ, 168GB ಡೇಟಾ ಪ್ರಯೋಜನ ದೊರೆಯುತ್ತದೆ.

Best Mobiles in India

English summary
according to Opensignal report Jio leads over Airtel in 5G speed across all ICC 2023 cricket stadiums.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+