Home
ಸುದ್ದಿಜಾಲ

ಮತ್ತೆ ಭಾರತದ ಪ್ರಬಲ ಬ್ರ್ಯಾಂಡ್ ಆಗಿ ಮುಂದುವರಿದ ಜಿಯೋ: ಇಲ್ಲಿದೆ ಮಾಹಿತಿ

ಜನಪ್ರಿಯ ರಿಲಯನ್ಸ್‌ನ ಟೆಲಿಕಾಂ ಮತ್ತು ಡಿಜಿಟಲ್ ಅಂಗವಾದ ಜಿಯೋ ಭಾರತದ ಪ್ರಬಲ ಸಂಸ್ಥೆಯಾಗಿ ಮುಂದುವರಿದಿದೆ. ಆ ನಂತರದ ಸ್ಥಾನದಲ್ಲಿ ಲೈಫ್ ಇನ್ಷೂರೆನ್ಸ್ ಕಾರ್ಪೊರೇಷನ್ (ಎಲ್ಐಸಿ), ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನಂತಹ ಸಂಸ್ಥೆಗಳು ಕಾಣಿಸಿಕೊಂಡಿವೆ. ಈ ಬಗ್ಗೆ ಇತ್ತೀಚಿನ ವರದಿ 'ಗ್ಲೋಬಲ್ - 500 2024' ಎಂಬುದನ್ನು ಬ್ರ್ಯಾಂಡ್ ಫೈನಾನ್ಸ್ ಪ್ರಕಟಿಸಿದೆ.

ಹೌದು, ಬ್ರ್ಯಾಂಡ್ ಫೈನಾನ್ಸ್‌ನ 2023ರ ಶ್ರೇಯಾಂಕದಲ್ಲಿಯೂ ರಿಲಯನ್ಸ್ ಜಿಯೋ ಭಾರತದ ಪ್ರಬಲ ಬ್ರ್ಯಾಂಡ್‌ಗಳ ಲಿಸ್ಟ್‌ನಲ್ಲಿ ಅಗ್ರಸ್ಥಾನದಲ್ಲಿತ್ತು. 2024ರ ಪಟ್ಟಿಯಲ್ಲಿ ವೀಚಾಟ್, ಯೂಟ್ಯೂಬ್, ಗೂಗಲ್, ಡೆಲಾಯಿಟ್, ಕೋಕಾ ಕೋಲಾ ಮತ್ತು ನೆಟ್ ಫ್ಲಿಕ್ಸ್ ಈ ಎಲ್ಲವೂ ವಿಶ್ವದ ಪ್ರಮುಖ ಬ್ರ್ಯಾಂಡ್ ಗಳಲ್ಲಿ ಮುಂಚೂಣಿಯಲ್ಲಿ ಇದ್ದು, ಇವುಗಳ ಸಾಲಿನಲ್ಲಿ ಇರುವಂಥ ಜಿಯೋ ಹದಿನೇಳನೇ ಸ್ಥಾನದಲ್ಲಿದೆ. ಅಂದಹಾಗೆ ಜಿಯೋದ ಬ್ರ್ಯಾಂಡ್ ಸಾಮರ್ಥ್ಯ ಸೂಚ್ಯಂಕ 88.9 ಇದೆ.

ಮತ್ತೆ ಭಾರತದ ಪ್ರಬಲ ಬ್ರ್ಯಾಂಡ್ ಆಗಿ ಮುಂದುವರಿದ ಜಿಯೋ: ಇಲ್ಲಿದೆ ಮಾಹಿತಿ

ಜಾಗತಿಕ ಮಟ್ಟದಲ್ಲಿ ಲೈಫ್ ಇನ್ಷೂರೆನ್ಸ್ ಕಾರ್ಪೊರೇಷನ್ 2 3ನೇ ಸ್ಥಾನದಲ್ಲಿದಲ್ಲಿದ್ದರೆ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ 24ನೇ ಸ್ಥಾನದಲ್ಲಿದೆ. ಇವು ಇವೈ (EY), ಮತ್ತು ಇನ್ ಸ್ಟಾಗ್ರಾಮ್ ನಂಥ ನಂತಹ ಬ್ರ್ಯಾಂಡ್‌ಗಳಿಗಿಂತ ಮುಂದಿವೆ.

ಹಾಗೆ ನೋಡಿದರೆ ದೂರಸಂಪರ್ಕ ವಲಯದಲ್ಲಿ ಜಿಯೋ ಹೊಸದಾಗಿ ಪ್ರವೇಶಿಸಿದ್ದು, ಬ್ರ್ಯಾಂಡ್ ಮೌಲ್ಯದಲ್ಲಿ ಗಮನಾರ್ಹವಾದ ಶೇ 14 ರಷ್ಟು ಹೆಚ್ಚಳದೊಂದಿಗೆ 6.1 ಶತಕೋಟಿ ಯುಎಸ್ ಡಿಗೆ ತಲುಪಿ, ಪ್ರಬಲ ಬ್ರ್ಯಾಂಡ್ ಆಗಿ ಹೊರಹೊಮ್ಮಿದೆ. ಜೊತೆಗೆ ಹೆಚ್ಚಿನ ಬ್ರ್ಯಾಂಡ್ ಸಾಮರ್ಥ್ಯ ಸೂಚ್ಯಂಕ ಸ್ಕೋರ್ 89.0 ಮತ್ತು ಸಂಬಂಧಿತ ಎಎಎ (AAA) ಬ್ರ್ಯಾಂಡ್ ರೇಟಿಂಗ್ ಕೂಡ ಪಡೆದಿದೆ, ಎಂದು ವರದಿ ಹೇಳಿದೆ.

ಮತ್ತೆ ಭಾರತದ ಪ್ರಬಲ ಬ್ರ್ಯಾಂಡ್ ಆಗಿ ಮುಂದುವರಿದ ಜಿಯೋ: ಇಲ್ಲಿದೆ ಮಾಹಿತಿ

'ಟೆಲಿಕಾಂ ಉದ್ಯಮದಲ್ಲಿ ಜಿಯೋದ ಈ ಅಮೋಘ ಏರಿಕೆಯು ರಿಲಯನ್ಸ್ ಇಂಡಸ್ಟ್ರೀಸ್ ಸಮೂಹದಿಂದ ಮಾಡಿರುವಂಥ ಗಣನೀಯ ಬ್ರ್ಯಾಂಡ್ ಹೂಡಿಕೆಯಿಂದ ಪ್ರಯೋಜನ ಪಡೆಯುತ್ತಿದೆ, ಇದರ ಜತೆಗೆ ಬಹಳ ವೇಗವಾಗಿ ಗ್ರಾಹಕ ನೆಲೆಯಲ್ಲಿ ಬೆಳವಣಿಗೆ ಮತ್ತು ಆದಾಯದ ಬೆಳವಣಿಗೆಯನ್ನು ನೀಡುತ್ತಿದೆ.

'ಬ್ರ್ಯಾಂಡ್‌ಗೆ ಸಂಬಂಧಿಸಿದಂತೆ ಹೆಚ್ಚಿನ ಬ್ರ್ಯಾಂಡ್ ಸಾಮರ್ಥ್ಯದ ಸೂಚ್ಯಂಕ ಮತ್ತು ಎಎಎ ರೇಟಿಂಗ್ ಇವೆಲ್ಲ ಅದರ ಗ್ರಾಹಕ ನೆಲೆಯ ವೇಗವಾದ ಬೆಳವಣಿಗೆ, ಮಾರುಕಟ್ಟೆ ನಾವೀನ್ಯತೆ ಮತ್ತು ಪ್ರಬಲವಾದ ಬ್ರ್ಯಾಂಡ್ ಆಲೋಚನೆಯಲ್ಲಿ ಪ್ರತಿಬಿಂಬಿಸುತ್ತದೆ.'

ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ (ಟಿಸಿಎಸ್), ಟಾಟಾ ಸ್ಟೀಲ್, ಟಾಟಾ ಮೋಟಾರ್ಸ್ ಮತ್ತು ತಾಜ್ ಹೊಟೇಲ್‌ಗಳಂತಹ ಕಂಪನಿಗಳೊಂದಿಗೆ ವೈವಿಧ್ಯಮಯ ಪೋರ್ಟ್ ಫೋಲಿಯೋ ಹೊಂದಿರುವ ಟಾಟಾ ಸಮೂಹವಯ 'ದಕ್ಷಿಣ ಏಷ್ಯಾದ ಅತ್ಯಮೂಲ್ಯ ಬ್ರ್ಯಾಂಡ್ ಆಗಿದೆ' ಎಂದು ವರದಿ ಹೇಳಿದೆ.

ಜಿಯೋ 4498ರೂ. ಪ್ಲಾನ್ ಮಾಹಿತಿ
ಜಿಯೋ ಸಂಸ್ಥೆಯ ಈ ಯೋಜನೆಯು ಒಟ್ಟು 365 ದಿನಗಳ ವ್ಯಾಲಿಡಿಟಿ ಸೌಲಭ್ಯ ಪಡೆದುಕೊಂಡಿದೆ. ಈ ಅವಧಿಯಲ್ಲಿ ಪ್ರತಿದಿನ 2GB ಡೇಟಾ ಪ್ರಯೋಜನ ಲಭ್ಯ ಆಗಲಿದ್ದು, ಹಾಗೆಯೇ ಪ್ರತಿದಿನ 100 ಉಚಿತ ಎಸ್‌ಎಮ್‌ಎಸ್‌ ಸೌಲಭ್ಯ ಕೂಡಾ ಗ್ರಾಹಕರಿಗೆ ಸಿಗಲಿದೆ.

ಹಾಗೆಯೇ ಈ ಪ್ಲ್ಯಾನ್ ಡಿಸ್ನಿ+ ಹಾಟ್‌ ಸ್ಟಾರ್‌, ಅಮೆಜಾನ್ ಪ್ರೈಮ್‌ ವಿಡಿಯೋ, ಜೀ5, ಸೋನಿ ಲೈವ್, ಸನ್‌ ನೆಕ್ಸ್ಟ್‌, ಡಿಸ್ಕವರಿ+, ಜಿಯೋ ಸಿನಿಮಾಸ್ ಸೇರಿದಂತೆ ಒಟ್ಟು 14 ಜನಪ್ರಿಯ ಓಟಿಟಿ ಚಂದಾದಾರಿಕೆಯ ಪ್ರಯೋಜನ ಒಳಗೊಂಡಿದೆ. ಅಂದಹಾಗೆ ಈ ಯೋಜನೆಯಲ್ಲಿ ಒಟ್ಟಾರೇ 730GB ಡೇಟಾ ಪ್ರಯೋಜನ ಸಿಗಲಿದೆ.

ಜಿಯೋ 3662ರೂ. ಪ್ಲಾನ್ ಮಾಹಿತಿ
ಈ ಪ್ಲ್ಯಾನಿನಲ್ಲಿ ಒಟ್ಟು 365 ದಿನಗಳ ವ್ಯಾಲಿಡಿಟಿ ಸೌಲಭ್ಯದ ಜೊತೆಗೆ ನಿತ್ಯವು 2.5GB ಡೇಟಾ ಪ್ರಯೋಜನ ನೀಡುತ್ತದೆ. ಇದರೊಂದಿಗೆ ಈ ಯೋಜನೆಯು ಅನಿಯಮಿತ ಧ್ವನಿ ಕರೆ, ಅನಿಯಮಿತ 5G ಡೇಟಾ, ಪ್ರತಿದಿನ 100 ಎಸ್‌ಎಮ್‌ಎಸ್‌ ಸೌಲಭ್ಯ ಕೂಡಾ ಲಭ್ಯ. ಇದರೊಂದಿಗೆ Sony LIV ಮತ್ತು ZEE5 ಓಟಿಟಿ ಚಂದಾದಾರಿಕೆ ಸಹ ದೊರೆಯಲಿದೆ.

Best Mobiles in India

English summary
Jio remains India's strongest brand for 2024. brand finance report.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+