Home
ಸುದ್ದಿಜಾಲ

Jio..ಗ್ರಾಮೀಣ ಭಾರತದಲ್ಲಿ ಮೇಲುಗೈ ಸಾಧಿಸಿದ ಜಿಯೋ; ಏರ್‌ಟೆಲ್‌, ವಿ ಟೆಲಿಕಾಂಗೆ ನಡುಕ ಶುರು!

ಜಿಯೋ ಟೆಲಿಕಾಂ (Jio Telecom) ಇತ್ತೀಚಿನ ದಿನಗಳಲ್ಲಿ ನೀಡುತ್ತಿರುವ ಹಲವಾರು ಪ್ರಯೋಜನಗಳಿಂದಾಗಿ ಗ್ರಾಹಕರು ಹೆಚ್ಚು ಹೆಚ್ಚಾಗಿ ಈ ಕಡೆ ವಾಲುತ್ತಿದ್ದಾರೆ. ಈ ಮೂಲಕ ಜೀಯೋ ಟೆಲಿಕಾಂ ವಲಯದಲ್ಲಿ ದೊಡ್ಡ ಸ್ಥಾನ ಪಡೆದುಕೊಳ್ಳುತ್ತಿದೆ. ಆದರೆ, ಇತರೆ ಟೆಲಿಕಾಂಗಳಿಗೆ ಇದು ದೊಡ್ಡ ತಲೆನೋವಾಗಿ ಪರಿಣಮಿಸಿದೆ.

ಹೌದು, ಟ್ರಾಯ್‌ (TRAI) ಡೇಟಾ ಪ್ರಕಾರ, ಜಿಯೋ 1,999,738 ಬಳಕೆದಾರರನ್ನು ಅಥವಾ ಸರಿಸುಮಾರು 2 ಮಿಲಿಯನ್ ಬಳಕೆದಾರರನ್ನು ಹೊಸದಾಗಿ ಪಡೆದುಕೊಂಡಿದ್ದು, ಏರ್‌ಟೆಲ್‌ ಮತ್ತು ವೊಡಾಪೋನ್‌ ಐಡಿಯಾ (Vi) 540,000 ಮತ್ತು 690,000 ಚಂದಾದಾರರನ್ನು ಕಳೆದುಕೊಂಡಿದೆ. ಇದೆಲ್ಲಕ್ಕಿಂತ ಮಿಗಿಲಾಗಿ ಜಿಯೋ ಗ್ರಾಮೀಣ ಭಾರತದಲ್ಲಿ 194 ಮಿಲಿಯನ್ ಬಳಕೆದಾರರನ್ನು ಹೊಂದಿದೆ. ಹಾಗಿದ್ರೆ, ಜಿಯೋ ಯಾಕೆ ಗ್ರಾಮೀಣ ಭಾಗದಲ್ಲಿ ಇಷ್ಟೊಂದು ಜನಪ್ರಿಯತೆ ಪಡೆಯುತ್ತಿದೆ ಎಂಬುದನ್ನು ನೋಡೋಣ ಬನ್ನಿ.

ಗ್ರಾಮೀಣ ಭಾರತದಲ್ಲಿ ಮೇಲುಗೈ ಸಾಧಿಸಿದ ಜಿಯೋ;ಏರ್‌ಟೆಲ್‌, ವಿಟೆಲಿಕಾಂಗೆ ನಡುಕ ಶುರು

ಗ್ರಾಮೀಣ ಭಾಗದಲ್ಲಿ ಜಿಯೋದ ಆರ್ಭಟ: ಜುಲೈ 2023 ರಲ್ಲಿ ದೇಶದ ಗ್ರಾಮೀಣ ಭಾಗದಲ್ಲಿ ಚಂದಾದಾರರನ್ನು ಸೇರಿಸಲು ರಿಲಯನ್ಸ್ ಜಿಯೋ ಏಕೈಕ ಟೆಲಿಕಾಂ ಆಪರೇಟರ್ ಆಗಿದೆ. ಜಿಯೋದ ಕಡಿಮೆ-ವೆಚ್ಚದ ಕೊಡುಗೆಗಳೇ ಇದಕ್ಕೆ ಕಾರಣ ಎನ್ನಲಾಗಿದೆ. ಜಿಯೋ ಇತ್ತೀಚೆಗೆ ಜಿಯೋ ಭಾರತ್‌ ಫೋನ್ ಪ್ಲಾಟ್‌ಫಾರ್ಮ್ ಅನ್ನು ಸಹ ಘೋಷಣೆ ಮಾಡಿದ್ದು, ಇದು ಬಳಕೆದಾರರಿಗೆ ಕೇವಲ 999 ರೂ.ಗೆ 4G ಫೀಚರ್ ಫೋನ್ ಅನ್ನು ಖರೀದಿಸಲು ಅನುವು ಮಾಡಿಕೊಟ್ಟಿದೆ.

ಇಷ್ಟೇ ಅಲ್ಲದೆ ಈ ಫೋನ್‌ಗಳಲ್ಲಿ UPI ಪಾವತಿಗಳನ್ನು ಮಾಡಲು ಮತ್ತು ಡೇಟಾ ಮತ್ತು ವಾಯ್ಸ್ ಕಾಲ್‌ ಮೂಲಕ ಪರಿಣಾಮಕಾರಿಯಾಗಿ ಇತರರೊಂದಿಗೆ ಸಂವಹನ ನಡೆಸಲು ಇದು ಸಹಾಯಕವಾಗಿದ್ದು, ಇದರಿಂದಾಗಿ ಜನರು ಈ ಫೋನ್‌ಖರೀದಿ ಮಾಡುವ ಮೂಲಕ ಜಿಯೋ ಟೆಲಿಕಾಂ ಗೆ ತಮ್ಮದೇ ಆದ ಕೊಡುಗೆ ನೀಡುತ್ತಿದ್ದಾರೆ. ಇದರಿಂದಾಗಿಯೇ ಗ್ರಾಮೀಣ ಭಾಗದಲ್ಲಿ ಜಿಯೋ ಒಂದು ಹೆಜ್ಜೆ ಮುಂದೆ ಇರಲು ಸಾಧ್ಯವಾಗಿದೆ.

ಇನ್ನು ಟ್ರಾಯ್‌ ಡೇಟಾ ಪ್ರಕಾರ, ಜಿಯೋ 1,999,738 ಬಳಕೆದಾರರನ್ನು ಅಥವಾ ಸರಿಸುಮಾರು 2 ಮಿಲಿಯನ್ ಬಳಕೆದಾರರನ್ನು ಪಡೆದರೆ. ಇದೇ ಸಮಯದಲ್ಲಿ, ಏರ್‌ಟೆಲ್‌ ಮತ್ತು ವೊಡಾಫೋನ್ ಐಡಿಯಾ ಕ್ರಮವಾಗಿ 540,000 ಮತ್ತು 690,000 ಚಂದಾದಾರರನ್ನು ಕಳೆದುಕೊಂಡಿದೆ. ಈ ಮೂಲಕ ಬಹಳ ಸಂಕಷ್ಟ ಎದುರಿವಂತೆ ಅಗಿದೆ. ಅದರಲ್ಲೂ ಗಮನಿಸಬೇಕಾದ ಮಾಹಿತಿ ಏನೆಂದರೆ ಜಿಯೋ ಗ್ರಾಮೀಣ ಭಾರತದಲ್ಲಿ 194 ಮಿಲಿಯನ್ ಬಳಕೆದಾರರನ್ನು ಹೊಂದಿದ್ದರೆ ಏರ್‌ಟೆಲ್ ಮತ್ತು ವಿ 180 ಮಿಲಿಯನ್ ಮತ್ತು 111.32 ಮಿಲಿಯನ್ ಬಳಕೆದಾರರನ್ನು ಪಡೆದಿದೆ.

ಓಪನ್‌ಸಿಗ್ನಲ್ ಡೇಟಾ ಪ್ರಕಾರ 4G ಲಭ್ಯತೆಗೆ ಬಂದಾಗ, ಜಿಯೋ ಸಹ ಸ್ಪರ್ಧಿಗಳಿಗಿಂತ ಮುಂದಿದೆ . ಜಿಯೋ ಗ್ರಾಮೀಣ ಭಾಗಗಳಲ್ಲಿ ಹೆಚ್ಚಿನ ಚಂದಾದಾರರನ್ನು ಹೊಂದಿರುವಲ್ಲಿ ಇದು ಕೂಡ ಒಂದು ಪಾತ್ರವನ್ನು ವಹಿಸುತ್ತದೆ ಎನ್ನಲಾಗಿದೆ. ಭಾರ್ತಿ ಏರ್‌ಟೆಲ್‌ನ ಸಿಇಒ ಗೋಪಾಲ್ ವಿಟ್ಟಲ್ ಅವರು ಗ್ರಾಮೀಣ ಭಾರತದತ್ತ ತಮ್ಮ ಗಮನವನ್ನು ಬದಲಾಯಿಸುತ್ತಿದ್ದಾರೆ ಎಂದು ಹೇಳಿದ್ದು, ಏರ್‌ಟೆಲ್ ಸಾವಿರಾರು ಹಳ್ಳಿಗಳನ್ನು ಗುರುತಿಸಿದ್ದು, ಅಲ್ಲಿ ಧನಾತ್ಮಕ ಆದಾಯವನ್ನು ಗಳಿಸಬಹುದು ಎಂದು ಉಲ್ಲೇಖ ಮಾಡಿದ್ದಾರೆ.

ಏರ್‌ಟೆಲ್ ಗ್ರಾಮೀಣ ಭಾಗಗಳಲ್ಲಿ ಜಿಯೋಗಿಂತ ಹೆಚ್ಚಿನ ಗ್ರಾಹಕರನ್ನು ಹೊಂದಿಲ್ಲದಿರುವ ಒಂದು ಪ್ರಮುಖ ಕಾರಣವೆಂದರೆ ಕಡಿಮೆ-ಪಾವತಿಸುವ ಗ್ರಾಹಕರೊಂದಿಗೆ ಹೆಚ್ಚು ತೊಡಗಿಸಿಕೊಳ್ಳಲು ಏರ್‌ಟೆಲ್‌ ಬಯಸುವುದಿಲ್ಲ, ಆದರೆ, ಈ ವಿಚಾರದಲ್ಲಿ ಜಿಯೋಗೆ ಯಾವುದೇ ಸಮಸ್ಯೆಗಳಿಲ್ಲ. ಜಿಯೋ ಮಾರುಕಟ್ಟೆಯ ಪ್ರಮಾಣವನ್ನು ನೋಡುತ್ತದೆಯೇ ಹೊರತು ಈ ವಿಷಯಗಳನ್ನು ಪರಿಗಣನೆಗೆ ತೆಗೆದುಕೊಳ್ಳುವುದಿಲ್ಲ. ಆದರೆ ಏರ್‌ಟೆಲ್ ಹೆಚ್ಚು ಪಾವತಿಸುವ ಗ್ರಾಹಕರಿಂದ ಎಷ್ಟು ಆದಾಯ ಮಾಡಬಹುದು ಎಂದು ನೋಡುತ್ತದೆ.

ಗ್ರಾಮೀಣ ಭಾರತದಲ್ಲಿ ಮೇಲುಗೈ ಸಾಧಿಸಿದ ಜಿಯೋ;ಏರ್‌ಟೆಲ್‌, ವಿಟೆಲಿಕಾಂಗೆ ನಡುಕ ಶುರು

ಜಿಯೋ ಭಾರತ್‌ ಫೋನ್ ಪ್ಲಾಟ್‌ಫಾರ್ಮ್ ಖಂಡಿತವಾಗಿಯೂ ಹೆಚ್ಚಿನ ಗ್ರಾಹಕರನ್ನು ಪಡೆಯಲು ಸಹಾಯಕ ಎನ್ನಬಹುದು. ಇಲ್ಲಿ ಆಸಕ್ತಿದಾಯಕ ಸಂಗತಿಯೆಂದರೆ ಖಾಸಗಿ ಟೆಲಿಕಾಂ ಗಳ ವಿಭಾಗದಲ್ಲಿ ಕಡಿಮೆ ಸುಂಕದ ಯೋಜನೆಯನ್ನು ವೊಡಾಫೋನ್ ಐಡಿಯಾ (Vi) ನೀಡುತ್ತದೆ. ಆದರೆ, ಏರ್‌ಟೆಲ್‌ ಹಾಗೂ ಜಿಯೋ ಇದನ್ನು ನೀಡುವುದಿಲ್ಲ. ಆದರೂ ವಿಗೆ ಹೆಚ್ಚಿನ ಚಂದಾದಾರನ್ನು ಪಡೆದುಕೊಳ್ಳಲು ಸಾಧ್ಯ ಆಗುತ್ತಿಲ್ಲ.

Best Mobiles in India

English summary
According to TRAI data, Jio gained 1,999,738 users or around 2 million new users, while Airtel and Vodafone Idea (Vi) lost 540,000 and 690,000 subscribers respectively.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+