Home
ಸುದ್ದಿಜಾಲ

ನೀವು ಎರಡು ಸಿಮ್‌ ಬಳಕೆ ಮಾಡುತ್ತಿದ್ದರೆ, ಈ ಪ್ಲ್ಯಾನ್‌ ರೀಚಾರ್ಜ್‌ ಮಾಡೋದು ಬೆಸ್ಟ್‌!

ಭಾರತೀಯ ಟೆಲಿಕಾಂ ವಲಯದಲ್ಲಿ ಮುಂಚೂಣಿಯ ಸಂಸ್ಥೆ ಎನಿಸಿರುವ ಜಿಯೋ ಟೆಲಿಕಾಂ ತನ್ನ ಚಂದಾದಾರರಿಗಾಗಿ ಕೆಲವು ಬೊಂಬಾಟ್‌ ಪ್ರೀಪೇಯ್ಡ್‌ ಪ್ಲ್ಯಾನ್‌ಗಳ ಆಯ್ಕೆ ನೀಡಿದೆ. ಡ್ಯುಯಲ್‌ ಸಿಮ್‌ ಬಳಕೆ ಮಾಡುವ ಕೆಲವರು ಚಂದಾದಾರರು ಸೆಕೆಂಡ್‌ ಸಿಮ್‌ ಆಕ್ಟಿವ್‌ ಇಡಲು ದೀರ್ಘಾವಧಿ ವ್ಯಾಲಿಡಿಟಿ ರೀಚಾರ್ಜ್‌ ಪ್ಲ್ಯಾನ್‌ ಬಗ್ಗೆ ನೋಡುತ್ತಾರೆ. ಹೀಗಾಗಿ ಜಿಯೋ ಟೆಲಿಕಾಂ ಕೆಲವೊಂದು ಉಪಯುಕ್ತ ರೀಚಾರ್ಜ್‌ ಆಯ್ಕೆಗಳನ್ನು ಸಹ ನೀಡಿದೆ.

ಹೌದು, ಒಂದು ಸಿಮ್‌ ಅನ್ನು ಪ್ರಾಥಮಿಕ ಸಿಮ್‌ ಆಗಿ ಬಳಕೆ ಮಾಡಲು ಹಾಗೂ ಇನ್ನೊಂದು ಸಿಮ್‌ ಚಾಲ್ತಿ ಇಡಲು ಕೆಲವು ವ್ಯಾಲಿಡಿಟಿ (ವ್ಯಾಲಿಡಿಟಿ ಎಕ್ಸ್‌ಟೆನ್ಷನ್‌) ಜಿಯೋದ ಕೆಲವು ಯೋಜನೆಗಳು ಉತ್ತಮ ಎನಿಸವೆ. ಹೀಗೆ ನೀವು ಕೂಡಾ ಒಂದು ಸಿಮ್‌ಗೆ ಹೆಚ್ಚು ವ್ಯಾಲಿಡಿಟಿ ಸೌಲಭ್ಯ ಬಯಸಿದರೆ, ಜಿಯೋದಲ್ಲಿ ಅಂತಹ ಪ್ಲ್ಯಾನ್ ಲಭ್ಯ. ಹಾಗಾದರೆ ಜಿಯೋದ ಅಂತಹ ಕೆಲವು ರೀಚಾರ್ಜ್‌ ಯೋಜನೆಗಳ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ನೀವು ಎರಡು ಸಿಮ್‌ ಬಳಕೆ ಮಾಡುತ್ತಿದ್ದರೆ, ಈ ಪ್ಲ್ಯಾನ್‌ ಬೆಸ್ಟ್‌!

ಜಿಯೋ ಟೆಲಿಕಾಂ 155ರೂ. ರೀಚಾರ್ಜ್‌ ಪ್ಲಾನ್ ಮಾಹಿತಿ :

ಜಿಯೋ ಟೆಲಿಕಾಂ 155ರೂ. ರೀಚಾರ್ಜ್‌ ಪ್ಲಾನಿನಲ್ಲಿ ಒಟ್ಟು 2 GB ಡೇಟಾ ಪ್ರಯೋಜನ ಸಿಗಲಿದೆ. ಇದರೊಂದಿಗೆ ಒಟ್ಟು 300 ಎಸ್‌ಎಮ್‌ಎಸ್‌ ಸೌಲಭ್ಯವನ್ನು ದೊರೆಯುತ್ತದೆ. ಹಾಗೆಯೇ ಈ ಪ್ಲ್ಯಾನ್‌ ಸಹ ಸಂಪೂರ್ಣ ಅನಿಯಮಿತ ವಾಯಿಸ್‌ ಕರೆಗಳ ಪ್ರಯೋಜನ ಸಹ ಪಡೆದಿದೆ. ಅಂದಹಾಗೆ ಈ ಪ್ಲ್ಯಾನ್‌ ಒಟ್ಟು 28 ದಿನಗಳ ವ್ಯಾಲಿಡಿಟಿ ಅವಧಿಯನ್ನು ಪಡೆದಿದೆ. ಈ ರೀಚಾರ್ಜ್‌ ಯೋಜನೆಯಲ್ಲಿ ಹೆಚ್ಚುವರಿ ಯಾಗಿ ಜಿಯೋ ಆಪ್ಸ್‌ಗಳು ದೊರೆಯುತ್ತವೆ.

ಜಿಯೋ ಟೆಲಿಕಾಂ 395ರೂ. ರೀಚಾರ್ಜ್‌ ಪ್ಲಾನ್ ಮಾಹಿತಿ :

ಜಿಯೋ ಟೆಲಿಕಾಂ 395ರೂ. ರೀಚಾರ್ಜ್‌ ಪ್ಲಾನಿನಲ್ಲಿ ಒಟ್ಟು 6GB ಡೇಟಾ ಸೌಲಭ್ಯ ಲಭ್ಯವಿದೆ. ಇದರೊಂದಿಗೆ ನಿತ್ಯ 100 ಎಸ್‌ಎಮ್‌ಎಸ್‌ ಪ್ರಯೋಜನ ಒಳಗೊಂಡಿದೆ. ಹಾಗೆಯೇ ಈ ಪ್ಲ್ಯಾನ್‌ ಸಹ ಸಂಪೂರ್ಣ ಅನಿಯಮಿತ ವಾಯಿಸ್‌ ಕರೆಗಳ ಪ್ರಯೋಜನ ಪಳಗೊಂಡಿದೆ. ಅಂದಹಾಗೆ ಈ ಪ್ಲ್ಯಾನ್‌ ಒಟ್ಟು 84 ದಿನಗಳ ವ್ಯಾಲಿಡಿಟಿ ಅವಧಿ ಒಳಗೊಂಡಿದ್ದು, ಜೊತೆಗೆ ಈ ಪ್ಲ್ಯಾನ್‌ನಲ್ಲಿ ಹೆಚ್ಚುವರಿ ಯಾಗಿ ಜಿಯೋ ಆಪ್ಸ್‌ಗಳು ಸಿಗುತ್ತವೆ.

ಜಿಯೋ ಟೆಲಿಕಾಂ 1559ರೂ. ರೀಚಾರ್ಜ್‌ ಪ್ಲಾನ್ ಮಾಹಿತಿ :

ಜಿಯೋ ಟೆಲಿಕಾಂ 1559ರೂ. ರೀಚಾರ್ಜ್‌ ಪ್ಲಾನಿನಲ್ಲಿ ಒಟ್ಟು 24 GB ಡೇಟಾ ಸೌಲಭ್ಯ ಲಭ್ಯವಿದೆ. ಇದರೊಂದಿಗೆ ಒಟ್ಟು 3600 ಎಸ್‌ಎಮ್‌ಎಸ್‌ ಪ್ರಯೋಜನ ಪಡೆದಿದೆ. ಹಾಗೆಯೇ ಈ ಪ್ಲ್ಯಾನ್‌ ಸಹ ಸಂಪೂರ್ಣ ಅನಿಯಮಿತ ವಾಯಿಸ್‌ ಕರೆಗಳ ಪ್ರಯೋಜನ ಕೂಡಾ ಪಡೆದಿದೆ. ಅಂದಹಾಗೆ ಈ ರೀಚಾರ್ಜ್‌ ಯೋಜನೆಯು ಒಟ್ಟು 336 ದಿನಗಳ ವ್ಯಾಲಿಡಿಟಿ ಅವಧಿ ಕೂಡಾ ಪಡೆದಿದೆ. ಈ ಪ್ಲ್ಯಾನಿನಲ್ಲಿ ಹೆಚ್ಚುವರಿ ಯಾಗಿ ಜಿಯೋ ಆಪ್ಸ್‌ಗಳು ಖಚಿತ ಲಭ್ಯ.

ಇತರೆ ಜನಪ್ರಿಯ ಯೋಜನೆ ಮಾಹಿತಿ

ಜಿಯೋ ಟೆಲಿಕಾಂ 2999ರೂ. ಪ್ಲಾನ್ - ಜಿಯೋ ಟೆಲಿಕಾಂನ 2999ರೂ. ರೀಚಾರ್ಜ್‌ ಪ್ಲಾನ್ ಜನಪ್ರಿಯ ವಾರ್ಷಿಕ ಯೋಜನೆ ಆಗಿದೆ. ಈ ಅವಧಿಯಲ್ಲಿ ಪ್ರತಿದಿನ 2.5 GB ಡೇಟಾ ಸೌಲಭ್ಯ ಗ್ರಾಹಕರಿಗೆ ಸಿಗಲಿದೆ. ಜೊತೆಗೆ ಜಿಯೋ ಸೇರಿದಂತೆ ಇತರೆ ನೆಟವರ್ಕ್‌ ಗಳಿಗೂ ಅನಿಯಮಿತ ಉಚಿತ ವಾಯಿಸ್ ಕರೆಗಳ ಪ್ರಯೋಜನ ಸಿಗುತ್ತದೆ. ಅಲ್ಲದೇ ಪ್ರತಿದಿನ 100 ಎಸ್ಎಮ್ಎಸ್ ಪ್ರಯೋಜನ ಕೂಡಾ ಲಭ್ಯ.

ಅಂದಹಾಗೆ ಈ ಯೋಜನೆಯಲ್ಲಿ ಒಟ್ಟಾರೇ 912.5GB ಡೇಟಾ ಪ್ರಯೋಜನ ಗ್ರಾಹಕರಿಗೆ ದೊರೆಯುತ್ತದೆ. ಹಾಗೆಯೇ ಈ ಜನಪ್ರಿಯ ಪ್ಲ್ಯಾನಿನಲ್ಲಿ ಗ್ರಾಹಕರಿಗೆ ಹೆಚ್ಚುವರಿ ಯಾಗಿ ಜಿಯೋ ಸಂಸ್ಥೆಯ ಆಪ್ಸ್‌ಗಳು ಖಚಿತ ಲಭ್ಯ.

Best Mobiles in India

English summary
Jio telecom's this Value recharge plans very useful to dual sim user. all details here.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+