ಜಿಯೋಥಿಂಗ್ಸ್ ಮತ್ತು ಮೀಡಿಯಾಟೆಕ್‌ನಿಂದ ದ್ವಿಚಕ್ರ ವಾಹನಗಳಿಗೆ ಸ್ಮಾರ್ಟ್ ಕ್ಲಸ್ಟರ್ ಲಾಂಚ್!
ಜಗತ್ತೀನ ಪ್ರಮುಖ ಸೆಮಿಕಂಡಕ್ಟರ್ ಕಂಪನಿ ಆಗಿರುವ ಮೀಡಿಯಾ ಟೆಕ್ ಮತ್ತು ಜಿಯೋ ಥಿಂಗ್ಸ್ ಲಿಮಿಟೆಡ್ ಇದೀಗ ದ್ವಿಚಕ್ರ ವಾಹನ ಮಾರುಕಟ್ಟೆಗಾಗಿ 'ಮೇಡ್ ಇನ್ ಇಂಡಿಯಾ' (Made in India) ಸ್ಮಾರ್ಟ್ ಡಿಜಿಟಲ್ ಕ್ಲಸ್ಟರ್‌ಗಳು ಮತ್ತು ಸ್ಮಾರ್ಟ್ ಮಾಡ್ಯೂಲ್‌ಗಳನ್ನು ಲಾಂಚ್ ಮಾಡಿದೆ. ಇದು ದ್ವಿಚಕ್ರ ವಾಹನ ಮಾರುಕಟ್ಟೆಯಲ್ಲಿ ಮತ್ತು ವಿಶೇಷವಾಗಿ ಎಲೆಕ್ಟ್ರಿಕ್ ವೆಹಿಕಲ್ (EV) ವಿಭಾಗದಲ್ಲಿ ಸಂಚಲನ ಉಂಟುಮಾಡುವಂಥದ್ದಾಗಿದೆ. ಜಿಯೋ ಥಿಂಗ್ಸ್ ಲಿಮಿಟೆಡ್ ಎಂಡ್ ಟು ಎಂಡ್ ಇಂಟರ್ನೆಟ್ ಆಫ್ ಥಿಂಗ್ಸ್ (ಐಒಟಿ) ಸಲ್ಯೂಷನ್ ಗಳ ಪೂರೈಕೆದಾರ ಆಗಿದ್ದು, ಇದು ಜಿಯೋ ಪ್ಲಾಟ್‌ಫಾರ್ಮ್ಸ್ ಲಿಮಿಟೆಡ್‌ನ ಅಂಗಸಂಸ್ಥೆ ಆಗಿದೆ.
ಪಾಲುದಾರಿಕೆ ಬಗ್ಗೆ ಮಾತನಾಡಿದ ಜಿಯೋ ಪ್ಲಾಟ್‌ಫಾರ್ಮ್ಸ್ ಲಿಮಿಟೆಡ್ ಅಧ್ಯಕ್ಷ ಕಿರಣ್ ಥಾಮಸ್, 'ಜಿಯೋ ಥಿಂಗ್ಸ್ ವಾಹನ ಉದ್ಯಮದಲ್ಲಿ ಕ್ರಾಂತಿ ಉಂಟು ಮಾಡುವುದಕ್ಕೆ ಮೀಡಿಯಾ ಟೆಕ್ ಜತೆಗೆ ಸಹಕರಿಸಲು ಸಂತೋಷವಾಗಿದೆ. ಮೀಡಿಯಾ ಟೆಕ್ ನ ಸುಧಾರಿತ ಚಿಪ್‌ಸೆಟ್‌ಗಳನ್ನು ನಮ್ಮ ಅತ್ಯಾಧುನಿಕ ಡಿಜಿಟಲ್ ಸಲ್ಯೂಷನ್ ಗಳ ಜತೆಗೆ ಸಂಯೋಜನೆ ಮಾಡುವ ಮೂಲಕ ನಾವು ಹೊಸ ಮಾನದಂಡಗಳನ್ನು ನಿಗದಿ ಮಾಡುತ್ತೇವೆ. ಇದು ಗ್ರಾಹಕರ ಅನುಭವವನ್ನು ಸುಧಾರಿಸುವ ಮೂಲಕ ವಾಹನೋದ್ಯಮದ ಭವಿಷ್ಯವನ್ನು ಬದಲಾಯಿಸುತ್ತದೆ. ಎಂದು ಹೇಳಿದ್ದಾರೆ.

ಗ್ರಾಹಕರು ಜಿಯೋ ಆಟೋಮೆಟಿವ್ ಆಪ್ ಸೂಟ್ ( Jio Automotive App Suite ) ಗೆ ಸಂಪರ್ಕವನ್ನು ಪಡೆಯುತ್ತಾರೆ, ಇದು ಅವರಿಗೆ ಜಿಯೋ ವಾಯ್ಸ್ ಅಸಿಸ್ಟೆಂಟ್, ಜಿಯೋ ಸಾವನ್, ಜಿಯೋ ಪೇಜಸ್, ಜಿಯೋಎಕ್ಸ್ ಪ್ಲೋರ್ ( JioXploR ) ಮತ್ತು ಬಂಡಲ್‌ನಂತೆ ವಿಶಿಷ್ಟ ಸೇವೆಗಳನ್ನು ನೀಡುತ್ತದೆ.
ಜಿಯೋ ಥಿಂಗ್ಸ್ ನ ಸ್ಮಾರ್ಟ್ ಡಿಜಿಟಲ್ ಕ್ಲಸ್ಟರ್ ಆವ್ನಿ ಒಎಸ್ (AvniOS) ಅನ್ನು ಆಧರಿಸಿದೆ. ಸ್ಮಾರ್ಟ್ ಡಿಜಿಟಲ್ ಕ್ಲಸ್ಟರ್ ಮತ್ತು ಆಪರೇಟಿಂಗ್ ಸಿಸ್ಟಮ್ ರಿಯಲ್ ಟೈಮ್‌ನ ಡೇಟಾ ವಿಶ್ಲೇಷಣೆಯನ್ನು ನಿರ್ವಹಿಸುತ್ತದೆ. ಇದು ವಾಹನದ ಉತ್ತಮ ನಿಯಂತ್ರಣಕ್ಕಾಗಿ ಉತ್ತಮ ಇಂಟರ್ ಫೇಸ್ ಅನ್ನು ಹೊಂದಿದೆ ಮತ್ತು ಸುಲಭ ನಿಯಂತ್ರಣಕ್ಕಾಗಿ ಧ್ವನಿ ಅನ್ನು ಗುರುತಿಸುತ್ತದೆ.
ಮೀಡಿಯಾ ಟೆಕ್‌ನ ಇಂಟೆಲಿಜೆಂಟ್ ಡಿವೈಸಸ್ ಬ್ಯುಸಿನೆಸ್ ಗ್ರೂಪ್‌ನ ಕಾರ್ಪೊರೇಟ್ ಹಿರಿಯ ಉಪಾಧ್ಯಕ್ಷ ಮತ್ತು ಜನರಲ್ ಮ್ಯಾನೇಜರ್ ಜೆರ್ರಿ ಯು ಅವರು ಮಾತನಾಡಿ, 'ಮೀಡಿಯಾ ಟೆಕ್ ನಿಂದ ನಡೆಯುವ ದ್ವಿ ಚಕ್ರ ವಾಹನ ಸ್ಮಾರ್ಟ್ ಡಿಜಿಟಲ್ ಕ್ಲಸ್ಟರ್‌ನಲ್ಲಿ ಜಿಯೋ ಥಿಂಗ್ಸ್ ಜೊತೆಗಿನ ಸಹಯೋಗವು ಐಒಟಿ ಮತ್ತು ಆಟೋಮೋಟಿವ್ ವಲಯಗಳಲ್ಲಿ ನಾವೀನ್ಯತೆಗೆ ನಮ್ಮ ಬದ್ಧತೆಯನ್ನು ಮತ್ತಷ್ಟು ಬಲಪಡಿಸುತ್ತದೆ. ಈ ಕ್ಲಸ್ಟರ್ ದ್ವಿ ಚಕ್ರ ವಾಹನ ಸ್ಮಾರ್ಟ್ ಡ್ಯಾಶ್‌ಬೋರ್ಡ್‌ಗಳ ಭವಿಷ್ಯದ ನಮ್ಮ ದೃಷ್ಟಿಗೆ ಅನುಗುಣವಾಗಿದೆ,' ಎಂದು ತಿಳಿಸಿದ್ದಾರೆ.
ಅತ್ಯಾಧುನಿಕ ಚಿಪ್‌ಸೆಟ್‌ಗಳ ತಯಾರಿಕೆಯಲ್ಲಿ ಮೀಡಿಯಾ ಟೆಕ್‌ನ ಪರಿಣತಿ ಮತ್ತು ಉತ್ಪನ್ನ ನಾವೀನ್ಯತೆಯಲ್ಲಿ ಜಿಯೋ ಇತಿಹಾಸವು ಈ ಸಲ್ಯೂಷನ್ ಅನ್ನು ಭಾರತದಲ್ಲಿ ಮಾತ್ರವಲ್ಲದೆ ಜಾಗತಿಕ ಮಾರುಕಟ್ಟೆಗಳಲ್ಲಿಯೂ ಟರ್ನ್ ಕೀ ಆಧಾರದ ಮೇಲೆ ನೀಡಲು ಸಾಧ್ಯವಾಗಿಸುತ್ತದೆ ಎಂದು ಸಂಸ್ಥೆಯು ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಭಾರತೀಯ ದ್ವಿಚಕ್ರ ವಾಹನಗಳ ಇವಿ (EV) ಮಾರುಕಟ್ಟೆಯು 2025 ನೇ ವರ್ಷದ ಅಂತ್ಯದ ವೇಳೆಗೆ 10,000 ಕೋಟಿ ರೂ. ಗಳನ್ನು ತಲುಪುತ್ತದೆ ಎಂದು ಅಂದಾಜಿಸಲಾಗಿದೆ. ಇದರಲ್ಲಿ 30 ಲಕ್ಷಕ್ಕೂ ಹೆಚ್ಚು ವಾಹನಗಳು ರಸ್ತೆಗಿಳಿಯಲಿವೆ. ಜಿಯೋ ಥಿಂಗ್ಸ್ ಮತ್ತು ಮೀಡಿಯಾ ಟೆಕ್ ಮಧ್ಯದ ಈ ಸಹಯೋಗವು ಆಟೋಮೋಟಿವ್ ಉದ್ಯಮದಲ್ಲಿ ಎಲೆಕ್ಟ್ರಾನಿಕ್ ವಾಹನಗಳಿಗೆ ಹೆಚ್ಚುತ್ತಿರುವ ಬೇಡಿಕೆ ಅನ್ನು ಒದಗಿಸುತ್ತದೆ.


Click it and Unblock the Notifications








