Home
ಸುದ್ದಿಜಾಲ

ಜಿಯೋದಿಂದ ಅನ್ನದಾತರಿಗೊಂದು ವಿಶೇಷ ಆಪ್!

ಮುಖೇಶ್ ಅಂಬಾನಿ ಒಡೆತನದ ರಿಲಾಯನ್ಸ್‌ ಜಿಯೋ ಟೆಲಿಕಾಂ ಸಂಸ್ಥೆಯು ಅಗ್ಗದ ಡೇಟಾ ಪರಿಚಯಿಸಿದೆ. ಕಡಿಮೆ ಬೆಲೆಗೆ ಬ್ರಾಡ್‌ಬ್ಯಾಂಡ್‌ ಪ್ಲ್ಯಾನ್‌ಗಳನ್ನು ನೀಡಿದೆ. ಈ ಮೂಲಕ ಜಿಯೋ ಟೆಲಿಕಾಂ ಸದ್ಯ ದೇಶದಲ್ಲಿ ಟ್ರೆಂಡಿಂಗ್‌ನಲ್ಲಿ ಗುರುತಿಸಿಕೊಂಡಿದೆ. ಹಾಗೆಯೇ ಈಗಾಗಲೇ ಗ್ರಾಹಕರಿಗೆ ಹಲವು ಉಪಯುಕ್ತ ಅಪ್ಲಿಕೇಶನ್‌ಗಳನ್ನು ಪರಿಚಯಿಸಿರುವ ಜಿಯೋ ಇದೀಗ ಅನ್ನದಾತರಿಗಾಗಿ ಒಂದು ವಿಶೇಷ ಅಪ್ಲಿಕೇಶನ್ ರೂಪಿಸಿದೆ.

ಹೌದು, ರಿಲಾಯನ್ಸ್‌ ಜಿಯೋ ಸಂಸ್ಥೆಯು ಜಿಯೋ ಕೃಷಿ ಆಪ್-Jio Krishi app ಹೆಸರಿನ ಅಪ್ಲಿಕೇಶನ್‌ ಅನ್ನು ಅಭಿವೃದ್ಧಿಪಡಿಸಿದೆ. ಜಿಯೋ ಕೃಷಿ ಆಪ್ ರೈತರಿಗೆ ನೀರಾವರಿ ಬೆಳೆ, ಬೆಳೆಗಳಿಗೆ ತಗಲುವ ಕೀಟಗಳ ನಿವಾರಣೆ ಸೇರಿದಂತೆ ಕೃಷಿಗೆ ಸಂಬಂಧಿಸಿದ ಪ್ರಶ್ನೆಗಳಿಗೆ ಮಾಹಿತಿ ನೀಡಲಿದೆ. ಈ ಅಪ್ಲಿಕೇಶನ್ ಮೂಲಕ ರೈತರಿಗೆ ಇಂಟರ್ನೆಟ್ ಆಧಾರಿತ ಕೃಷಿ ಮಾಹಿತಿ ಜೊತೆಗೆ ಗ್ರಾಮೀಣ ಮತ್ತು ತಾಲೂಕು ಮಟ್ಟದಲ್ಲಿಯೂ ಜಿಯೋ ತನ್ನ ನೆಟವರ್ಕ ವಿಸ್ತರಿಸಲಿದೆ.

ಬೆಳೆ ಮಾಹಿತಿ

ಬೆಳೆ ಮಾಹಿತಿ

ರೈತರು ಜಿಯೋ ಕೃಷಿ ಅಪ್ಲಿಕೇಶನ್ನಲ್ಲಿ ಬೆಳೆ ಬಗ್ಗೆ ಸಂಪೂರ್ಣ ಮಾಹಿತಿ ಪಡೆಯಬಹದು. ರೈತರು ಬೆಳೆ ಬಗ್ಗೆ ಸರ್ಚ್ ಮಾಡಿದರೆ ಆ ಬೆಳೆಯ ಪೂರ್ಣ ಮಾಹಿತಿ ಲಭ್ಯವಾಗಲಿದೆ. ಆ ಬೆಳೆಯನ್ನು ಯಾವ ಅವಧಿಯಲ್ಲಿ ಬೆಳೆಯಬೇಕು, ಬೆಳೆಗೆ ಎಂತಹ ಹವಾಮಾನ ಅಗತ್ಯ ಇರುತ್ತದೆ. ಬೆಳೆಗೆ ತಗಲುವ ಕೀಟಗಳು ಯಾವುವು, ಬೆಳೆ ಕಟಾವು, ಔಷಧಿ ಸಿಂಪಡಿಸುವಿಕೆ ಸೇರಿದಂತೆ ಎಲ್ಲ ಮಾಹಿತಿಯು ಲಭ್ಯವಾಗಲಿದೆ.

ಕೀಟಗಳ ಮಾಹಿತಿ

ಕೀಟಗಳ ಮಾಹಿತಿ

ಕೃಷಿ ಬೆಳೆಗಳಿಗೆ ಕೀಟಗಳು ತಗುಲಿ ರೈತರು ನಿರೀಕ್ಷಿತ ಮಟ್ಟದಲ್ಲಿ ಬೆಳೆಗಳು ಕೈ ಸೇರುವ ಸಾಧ್ಯತೆಗಳಿರುವುದಿಲ್ಲ. ಬೆಳೆಗಳಿಗೆ ತಗುಲಬಹುದಾದ ಕೀಟಗಳ ಬಗ್ಗೆ ಪೂರ್ವ ಮಾಹಿತಿ ಒದಗಿಸುತ್ತದೆ. ಹಾಗೂ ಕೀಟ ತಗುಲದಂತೆ ತಡೆಯಲು ಅವುಗಳಿಗೆ ಸರಿಯಾಗಿ ಔಷಧಿ ಸಿಂಪಡಣೆ ಮಾಡುವ ಬಗ್ಗೆ ಜಿಯೋ ಕೃಷಿ ಅಪ್ಲಿಕೇಶನ್‌ನಲ್ಲಿ ಮಾಹಿತಿ ಲಭ್ಯವಾಗಲಿದೆ. ಇದರೊಂದಿಗೆ ಅಗತ್ಯ ಮಾಹಿತಿ ಒಳಗೊಂಡ ಕೆಲವೊಂದು ಬೆಳೆಗಳ ಫೋಟೊಗಳನ್ನು ಸಹ ಲಭ್ಯವಾಗಿಸುತ್ತದೆ.

ನೀರಾವರಿ ಬಗ್ಗೆ ಮಾಹಿತಿ

ನೀರಾವರಿ ಬಗ್ಗೆ ಮಾಹಿತಿ

ಬೆಳೆಗಳು ಸಮೃದ್ಧವಾಗಿ ಬೆಳೆಯಲು ನೀರಿನ ಅಗತ್ಯ ಇರುತ್ತದೆ. ನೀರಾವರಿ ಇರುವ ಹೊಲಗಳಲ್ಲಿ ನೀರಿನ ಸಮಸ್ಯೆ ಕಾಣಿಸುವುದಿಲ್ಲ. ಆದರೆ ಒಣ ಬೇಸಾಯ ಇರುವ ಪ್ರದೇಶಗಳಲ್ಲಿ ಬೆಳೆಗಳಿಗೆ ನೀರಿನ ಕೊರತೆ ಹೆಚ್ಚಿರುತ್ತದೆ. ಭೂಮಿ/ಮಣ್ಣುನ ಫಲವತ್ತತೆ ಆಧಾರದ ಮೇಲೆ ಬೆಳೆಗಳಿಗೆ ಅಗತ್ಯ ಇರುವ ನೀರಿನ ಪ್ರಮಾಣದ ಬಗ್ಗೆ ಜಿಯೋ ಕೃಷಿ ಅಪ್ಲಿಕೇಶನ್ ರೈತರಿಗೆ ಮಾಹಿತಿಯನ್ನು ಒದಗಿಸುತ್ತದೆ.

ಜಿಯೋ ಕೃಷಿ ಆಪ್ ಲಭ್ಯತೆ

ಜಿಯೋ ಕೃಷಿ ಆಪ್ ಲಭ್ಯತೆ

ಜಿಯೋ ರೈತರಿಗಾಗಿ ರೂಪಿಸಿರುವ ಜಿಯೋ ಕೃಷಿ ಆಪ್ ಖಂಡಿತಾ ಒಂದು ಉಪಯುಕ್ತ ಅಪ್ಲಿಕೇಶನ್ ಆಗಲಿದೆ. ಈ ಅಪ್ಲಿಕೇಶನ್ ಸದ್ಯದಲ್ಲಿಯೇ ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಲಭ್ಯವಾಗಲಿದೆ. ಹಾಗೂ ಜಿಯೋ ಮೈ ಆಪ್ಸ್‌ನಲ್ಲಿಯೂ ಸೇರಲಿದೆ ಎಂದು ಹೇಳಲಾಗಿದೆ.

ಅಗ್ಗದ ಬೆಲೆಗೆ ಪ್ರತಿದಿನ 1GB ಡೇಟಾ ನೀಡುವ ಬೆಸ್ಟ್‌ ಪ್ಲ್ಯಾನ್‌ಗಳು!

ಅಗ್ಗದ ಬೆಲೆಗೆ ಪ್ರತಿದಿನ 1GB ಡೇಟಾ ನೀಡುವ ಬೆಸ್ಟ್‌ ಪ್ಲ್ಯಾನ್‌ಗಳು!

ದೇಶದ ಟೆಲಿಕಾಂ ಕ್ಷೇತ್ರದಲ್ಲಿ ಕಳೆದ ಡಿಸೆಂಬರ್‌ನಲ್ಲಿ ಖಾಸಗಿ ಟೆಲಿಕಾಂ ಸಂಸ್ಥೆಗಳು ಪ್ರೀಪೇಡ್‌ ಪ್ಲ್ಯಾನ್‌ಗಳ ದರ ಹೆಚ್ಚಳ ಮಾಡಿ ಶಾಕ್ ನೀಡಿದವು. ಆದಾದ ಮೇಲೆ ಗ್ರಾಹಕರು ಕಡಿಮೆ ಬೆಲೆಗೆ ಯಾವ ಪ್ಲ್ಯಾನಿನಲ್ಲಿ ಪ್ರತಿದಿನ ಡೇಟಾ, ಉಚಿತ ಕರೆ ಹಾಗೂ ಅಧಿಕ ವ್ಯಾಲಿಡಿಟಿ ಪ್ರಯೋಜನಗಳಿವೆ ಎಂದು ನೋಡುತ್ತಿದ್ದಾರೆ. ಈ ನಿಟ್ಟಿನಲ್ಲಿ ಖಾಸಗಿ ಟೆಲಿಕಾಂ ಸಂಸ್ಥೆಗಳು ಸಹ ಡೇಟಾ, ವಾಯಿಸ್ ಕರೆ ಮತ್ತು ವ್ಯಾಲಿಡಿಟಿ ಸೌಲಭ್ಯದ ಆಕರ್ಷಕ ಪ್ಲ್ಯಾನ್‌ ಪರಿಚಯಿಸಿವೆ.

ಜಿಯೋ, ಏರ್‌ಟೆಲ್ ಮತ್ತು ವೊಡಾಫೋನ್

ಹೌದು, ಪ್ರಸ್ತುತ ಜಿಯೋ, ಏರ್‌ಟೆಲ್ ಮತ್ತು ವೊಡಾಫೋನ್ ಚಂದಾದಾರರರು ಪ್ರತಿದಿನ 1GB ಡೇಟಾ ಪ್ರಯೋಜನ ಒಳಗೊಂಡಿರುವ ಪ್ರೀಪೇಡ್‌ ಪ್ಲ್ಯಾನ್‌ಗಳತ್ತ ಹೆಚ್ಚು ಆಕರ್ಷಿತರಾಗುತ್ತಿದ್ದಾರೆ. ಇನ್ನು ಕೆಲವು ಚಂದಾದಾರರು ವ್ಯಾಲಿಡಿಟಿ ಕಡಿಮೆ ಇದ್ದರೂ ಪ್ರತಿದಿನ 1GB ಡೇಟಾ ಮತ್ತು ಉಚಿತ ವಾಯಿಸ್‌ ಕರೆಗಳ ಸೌಲಭ್ಯಗಳಿರುವ ಅಗ್ಗದ ಪ್ರೀಪೇಡ್‌ ಪ್ಲ್ಯಾನ್‌ಗಳಿಗೆ ಅನಿವಾರ್ಯವಾಗಿ ಮನಸೋಲುತ್ತಿದ್ದಾರೆ. ಸದ್ಯ ಜಿಯೋ, ಏರ್‌ಟೆಲ್ ಮತ್ತು ವೊಡಾಫೋನ್‌ ಟೆಲಿಕಾಂಗಳಲ್ಲಿ ಪ್ರತಿದಿನ 1GB ಡೇಟಾ ಮತ್ತು ವಾಯಿಸ್‌ ಕರೆ ಸೌಲಭ್ಯಗಳಿರುವ ಅಗ್ಗದ ಪ್ಲ್ಯಾನ್‌ಗಳ ಬಗ್ಗೆ ಈ ಲೇಖನದಲ್ಲಿ ಮಾಹಿತಿ ನೀಡಲಾಗಿದೆ. ಮುಂದೆ ಓದಿರಿ.

ರಿಲಾಯನ್ಸ್‌ ಜಿಯೋ 149ರೂ. ಪ್ಲ್ಯಾನ್

ರಿಲಾಯನ್ಸ್‌ ಜಿಯೋ 149ರೂ. ಪ್ಲ್ಯಾನ್

ರಿಲಾಯನ್ಸ್‌ ಜಿಯೋ ಪ್ರತಿದಿನ 1GB ಡೇಟಾ ಸೌಲಭ್ಯ ಒಳಗೊಂಡಿರುವ ಹಲವು ಪ್ಲ್ಯಾನ್‌ಗಳಿವೆ. ಅವುಗಳಲ್ಲಿ ಅಗ್ಗದ ಪ್ರೈಸ್‌ಟ್ಯಾಗ್‌ನಲ್ಲಿ 149ರೂ ಪ್ಲ್ಯಾನ್ ಇದೆ. ಈ ಪ್ರೀಪೇಡ್ ಪ್ಲ್ಯಾನ್ ಒಟ್ಟು 24 ದಿನಗಳ ವ್ಯಾಲಿಡಿಟಿ ಅವಧಿಯನ್ನು ಪಡೆದಿದ್ದು, ಈ ಅವಧಿಯಲ್ಲಿ ಪ್ರತಿದಿನ 1GB ಡೇಟಾ, ಜಿಯೋ ಟು ಜಿಯೋ ಅನಿಯಮಿತ ಉಚಿತ ವಾಯಿಸ್‌ ಕರೆಗಳ ಮತ್ತು ಜಿಯೋದಿಂದ ಇತರೆ ಟೆಲಿಕಾಂಗಳಿಗೆ 300 ಉಚಿತ ನಿಮಿಷಗಳ ಸೌಲಭ್ಯಗಳಿವೆ. ಇದರೊಂದಿಗೆ ಪ್ರತಿದಿನ 100ಎಸ್ಎಮ್ಎಸ್ ಪ್ರಯೋಜನ ಇದ್ದು, ಜಿಯೋ ಟಿವಿ ಸೇವೆಯು ಸಿಗಲಿದೆ.

ವೊಡಾಫೋನ್ ಅಗ್ಗದ 1GB ಡೇಟಾ ಪ್ಲ್ಯಾನ್‌ಗಳು

ವೊಡಾಫೋನ್ ಅಗ್ಗದ 1GB ಡೇಟಾ ಪ್ಲ್ಯಾನ್‌ಗಳು

ವೊಡಾಫೋನ್‌ ಟೆಲಿಕಾಂ ಸಹ ಪ್ರತಿದಿನ 1GB ಡೇಟಾ ಒದಗಿಸುವ ಅಗ್ಗದ ಪ್ರೀಪೇಡ್‌ ಪ್ಲ್ಯಾನ್‌ಗಳನ್ನು ಹೊಂದಿದೆ. ಅವುಗಳಲ್ಲಿ 199ರೂ ಮತ್ತು 219ರೂ. ಪ್ರೀಪೇಡ್‌ ಪ್ಲ್ಯಾನ್‌ಗಳು ಹೆಚ್ಚು ಆಕರ್ಷಕ ಎನಿಸಿವೆ. 199ರೂ. ಪ್ರೀಪೇಡ್‌ ಪ್ಲ್ಯಾನ್ ಒಟ್ಟು 21 ದಿನಗಳ ವ್ಯಾಲಿಡಿಟಿ ಅವಧಿಯನ್ನು ಪಡೆದಿದ್ದು, ಅದೇ ರೀತಿ 219ರೂ. ಪ್ರೀಪೇಡ್‌ ಪ್ಲ್ಯಾನ್ 28 ದಿನಗಳ ವ್ಯಾಲಿಡಿಟಿ ಅವಧಿಯನ್ನು ಹೊಂದಿದೆ. ಈ ಎರಡು ಪ್ಲ್ಯಾನ್‌ಗಳು ವ್ಯಾಲಿಡಿಟಿ ಅವಧಿಯಲ್ಲಿ ಪ್ರತಿದಿನ 1GB ಡೇಟಾ ಹಾಗೂ 100ಎಸ್ಎಮ್ಎಸ್ ಪ್ರಯೋಜನ ಒದಗಿಸಲಿದೆ. ಹಾಗೆಯೆ ಅನಿಯಮಿತ ವಾಯಿಸ್‌ ಕರೆಗಳ ಸೌಲಭ್ಯ ಒದಗಿಸಲಿದೆ.

ಏರ್‌ಟೆಲ್ 219ರೂ ಪ್ಲ್ಯಾನ್

ಏರ್‌ಟೆಲ್ 219ರೂ ಪ್ಲ್ಯಾನ್

ಏರ್‌ಟೆಲ್‌ ಟೆಲಿಕಾಂ ಸಹ 219ರೂ ಪ್ರೀಪೇಡ್‌ ಪ್ಲ್ಯಾನ್ ಹೊಂದಿದ್ದು, ಈ ಪ್ಲ್ಯಾನ್ ಪ್ರತಿದಿನ 1GB ಡೇಟಾ ಸೌಲಭ್ಯವನ್ನು ಒಳಗೊಂಡಿದೆ. ಯಾವುದೇ ಟೆಲಿಕಾಂಗೆ ಅನಿಯಮಿತ ವಾಯಿಸ್ ಕರೆಗಳ ಪ್ರಯೋಜನ ಹೊಂದಿದ್ದು, ಇದರೊಂದಿಗೆ ಪ್ರತಿದಿನ 100 ಉಚಿತ ಎಸ್ಎಮ್ಎಸ್ ಸೌಲಭ್ಯಗಳನ್ನು ಪಡೆದಿದೆ. ಇನ್ನು ಈ ಪ್ರೀಪೇಡ್ ಪ್ಲ್ಯಾನ್ ಒಟ್ಟು 28 ದಿನಗಳ ವ್ಯಾಲಿಡಿಟಿ ಅವಧಿಯನ್ನು ಪಡೆದಿದೆ.

Best Mobiles in India

English summary
Reliance Jio is now gearing up to launch the farmers-centric app dubbed Jio Krishi.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+