Home
ಸುದ್ದಿಜಾಲ

4G ಡೇಟಾ ಡೌನ್‌ಲೋಡ್ ವೇಗ: ಅಗ್ರಸ್ಥಾನದಲ್ಲಿ ಮುಂದುವರಿದ ಜಿಯೋ

ರಿಲಯನ್ಸ್ ಜಿಯೋ ಪ್ರತಿ ಸೆಕೆಂಡ್‌ಗೆ ಸರಾಸರಿ 21.9 ಮೆಗಾಬೈಟ್ (ಎಂಬಿಪಿಎಸ್) ಡೌನ್‌ಲೋಡ್ ವೇಗದೊಂದಿಗೆ 4ಜಿ ವಿಭಾಗದಲ್ಲಿ ಅಕ್ಟೋಬರ್ ತಿಂಗಳಲ್ಲಿಯೂ ಮೊದಲ ಸ್ಥಾನದಲ್ಲಿದಲ್ಲಿ ಮುಂದುವರಿದಿದೆ ಎಂದು ಟ್ರಾಯ್ ತಿಳಿಸಿದೆ.

4G ಡೇಟಾ ಡೌನ್‌ಲೋಡ್ ವೇಗ: ಅಗ್ರಸ್ಥಾನದಲ್ಲಿ ಮುಂದುವರಿದ ಜಿಯೋ

ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್) ಬಿಡುಗಡೆ ಮಾಡಿರುವ ವರದಿ ಪ್ರಕಾರ, ಅಕ್ಟೋಬರ್ ತಿಂಗಳಲ್ಲಿ ರಿಲಯನ್ಸ್ ಜಿಯೋ ತನ್ನ 4ಜಿ ನೆಟ್‌ವರ್ಕ್ ವೇಗವನ್ನು ಜೂನ್ ತಿಂಗಳಲ್ಲಿ ದಾಖಲಾಗಿದ್ದಂತೆ 21.9 ಎಂಬಿಪಿಎಸ್‌ಗೆ ಮತ್ತೆ ಹೆಚ್ಚಿಸಿಕೊಂಡಿದೆ. ಅದರ ಪ್ರತಿಸ್ಪರ್ಧಿ ಕಂಪೆನಿಗಳಾದ ಭಾರತಿ ಏರ್‌ಟೆಲ್ ಮತ್ತು ವೊಡಾಫೋನ್ ಐಡಿಯಾ ಲಿಮಿಟೆಡ್ (ವಿಐಎಲ್) ಕೂಡ ತಮ್ಮ ಡೇಟಾ ಡೌನ್‌ಲೋಡ್ ವೇಗದಲ್ಲಿ ಹೆಚ್ಚಳ ಕಂಡುಕೊಂಡಿವೆ.

ಏರ್‌ಟೆಲ್ 4ಜಿ ಡೇಟಾ ಡೌನ್‌ಲೋಡ್ ವೇಗವು ಅಕ್ಟೋಬರ್ ತಿಂಗಳಲ್ಲಿ 13.2 ಎಂಬಿಪಿಎಸ್‌ಗೆ ಏರಿಕೆಯಾಗಿದೆ. ಜೂನ್ ತಿಂಗಳಲ್ಲಿ ಇದರ ಸರಾಸರಿ ಡೌನ್‌ಲೋಡ್ ವೇಗ 5 ಎಂಬಿಪಿಎಸ್ ಇತ್ತು. ಹಾಗೆಯೇ ವಿಐಎಲ್ ಕೂಡ ಡೌನ್‌ಲೋಡ್ ವೇಗವನ್ನು 6.5 ಎಂಬಿಪಿಎಸ್ ವೇಗದಿಂದ 15.6 ಎಂಬಿಪಿಎಸ್‌ಗೆ ಹೆಚ್ಚಿಸಿಕೊಂಡಿದೆ. ಇನ್ನು ಅಪ್‌ಲೋಡ್ ವಿಭಾಗದಲ್ಲಿ 7.6 ಎಂಬಿಪಿಎಸ್ ಡೇಟಾ ವೇಗ ಹೊಂದಿರುವ ವೊಡಾಫೋನ್ ಐಡಿಯಾ ಅಕ್ಟೋಬರ್‌ನಲ್ಲಿ ಕೂಡ ಮೊದಲ ಸ್ಥಾನದಲ್ಲಿ ಮುಂದುವರಿದಿದೆ.

4G ಡೇಟಾ ಡೌನ್‌ಲೋಡ್ ವೇಗ: ಅಗ್ರಸ್ಥಾನದಲ್ಲಿ ಮುಂದುವರಿದ ಜಿಯೋ

ಜಿಯೋ ಹಾಗೂ ಏರ್‌ಟೆಲ್‌ಗಳು ಅಕ್ಟೋಬರ್ ತಿಂಗಳಲ್ಲಿ ತಮ್ಮ ಅಪ್‌ಲೋಡ್ ವೇಗವನ್ನು ಹೆಚ್ಚಿಸಿಕೊಂಡಿದೆ. ಇದು ಕಳೆದ ಐದು ತಿಂಗಳಲ್ಲಿಯೇ ಅತ್ಯಧಿಕ ವೇಗವಾಗಿದೆ. ಜಿಯೋ 6.4 ಎಂಬಿಪಿಎಸ್ ಸರಾಸರಿ ಅಪ್‌ಲೋಡ್ ವೇಗ ಹೊಂದಿದ್ದರೆ, ಏರ್‌ಟೆಲ್ 5.2 ಎಂಬಿಪಿಎಸ್ ವೇಗ ದಾಖಲಿಸಿದೆ. ಡೌನ್‌ಲೋಡ್ ವೇಗವು ಗ್ರಾಹಕರು ಅಂತರ್ಜಾಲದಿಂದ ಮಾಹಿತಿಗಳನ್ನು ಪಡೆದುಕೊಳ್ಳಲು ನೆರವಾಗುತ್ತದೆ.

ಅಪ್‌ಲೋಡ್ ವೇಗವು ತಮ್ಮ ಸಂಪರ್ಕದಲ್ಲಿರುವವರಿಗೆ ಚಿತ್ರಗಳು ಮತ್ತು ವಿಡಿಯೋಗಳನ್ನು ತ್ವರಿತವಾಗಿ ರವಾನಿಸಲು ನೆರವಾಗುತ್ತದೆ. ಮೈಸ್ಪೀಡ್ ಆಪ್‌ನ ಸಹಾಯದೊಂದಿಗೆ ದೇಶಾದ್ಯಂತ ರಿಯಲ್ ಟೈಮ್ ಆಧಾರದಲ್ಲಿ ದತ್ತಾಂಶಗಳನ್ನು ಸಂಗ್ರಹಿಸುವ ಟ್ರಾಯ್, ಅದರ ಮೂಲಕ ಸರಾಸರಿ ವೇಗವನ್ನು ಲೆಕ್ಕ ಹಾಕುತ್ತದೆ.

ಜಿಯೋ ಕಂಪನಿಯು ಇತ್ತೀಚಿಗೆ ಬಿಡುಗಡೆ ಮಾಡಿರುವ ಜಿಯೋಫೋನ್ ನೆಕ್ಸ್ಟ್‌ ಫೋನ್ ಅಗ್ಗದ ಪ್ರೈಸ್ ಟ್ಯಾಗ್ ಅನ್ನು ಹೊಂದಿದ್ದು, ಗ್ರಾಹಕರನ್ನು ಸೆಳೆದಿದೆ. ಈ ಫೋನಿನ ಕೆಲವು ಫೀಚರ್ಸ್‌ಗಳು ಆಕರ್ಷಕ ಎನಿಸಿವೆ. ಆ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

1. ವಾಯ್ಸ್ ಫಸ್ಟ್ ಸಾಮರ್ಥ್ಯಗಳು

ಬಳಕೆದಾರರು ಸಾಧನದೊಂದಿಗೆ ಮಾತನಾಡುವ ಮೂಲಕ (ಆಪ್ ತೆರೆಯಿರಿ, ಸೆಟ್ಟಿಂಗ್‌ಗಳನ್ನು ನಿರ್ವಹಿಸಿ ಇತ್ಯಾದಿ) ಅದನ್ನು ನಿರ್ವಹಿಸಲು ಗೂಗಲ್ ಅಸಿಸ್ಟೆಂಟ್ ಸಹಾಯ ಮಾಡುತ್ತದೆ. ಬಳಕೆದಾರರು ತಮಗೆ ತಿಳಿದಿರುವ ಭಾಷೆಯಲ್ಲಿ ಮಾಹಿತಿ/ಕಂಟೆಂಟ್ ಅನ್ನು ಇಂಟರ್‌ನೆಟ್‌ನಿಂದ ಸುಲಭವಾಗಿ ಪಡೆಯಬಹುದು.

4G ಡೇಟಾ ಡೌನ್‌ಲೋಡ್ ವೇಗ: ಅಗ್ರಸ್ಥಾನದಲ್ಲಿ ಮುಂದುವರಿದ ಜಿಯೋ

2. ರೀಡ್ ಅಲೌಡ್

ರೀಡ್ ಅಲೌಡ್ ಸೌಲಭ್ಯವು ಬಳಕೆದಾರರಿಗೆ ತಮ್ಮ ಪರದೆಯ ಮೇಲಿರುವ ಯಾವುದೇ ವಿಷಯವನ್ನು ಓದಿಸಿ, ಕೇಳಲು ಅನುವು ಮಾಡಿಕೊಡುತ್ತದೆ. ಬಳಕೆದಾರರು ಸರಳವಾಗಿ ತಮ್ಮ ಆದ್ಯತೆಯ ಭಾಷೆಯಲ್ಲಿ ಕೇಳುವ ಮೂಲಕ ವಿಷಯವನ್ನು ಸುಲಭವಾಗಿ ಪಡೆದುಕೊಳ್ಳುವುದನ್ನು ಇದು ಸಾಧ್ಯವಾಗಿಸುತ್ತದೆ.

3. ಟ್ರಾನ್ಸ್‌ಲೇಟ್ ನೌ

ಟ್ರಾನ್ಸ್‌ಲೇಟ್ ನೌ ಸೌಲಭ್ಯವು ಯಾವುದೇ ಪರದೆಯನ್ನು ಭಾರತದ 10 ಜನಪ್ರಿಯ ಭಾಷೆಗಳ ಪೈಕಿ ತಮ್ಮ ಆಯ್ಕೆಯ ಭಾಷೆಗೆ ಅನುವಾದಿಸಿಕೊಳ್ಳಲು ಬಳಕೆದಾರರಿಗೆ ಅನುವುಮಾಡಿಕೊಡುತ್ತದೆ. ಇದರಿಂದ ಬಳಕೆದಾರರು ತಮ್ಮ ಆದ್ಯತೆಯ ಭಾಷೆಯಲ್ಲಿ ಯಾವುದೇ ವಿಷಯವನ್ನು ಓದುವುದು ಸಾಧ್ಯವಾಗುತ್ತದೆ.

4. ಸುಲಭ ಮತ್ತು ಸ್ಮಾರ್ಟ್ ಕ್ಯಾಮೆರಾ

ಜಿಯೋಫೋನ್ ನೆಕ್ಸ್ಟ್‌ನಲ್ಲಿರುವ ಸ್ಮಾರ್ಟ್ ಮತ್ತು ಶಕ್ತಿಯುತ ಕ್ಯಾಮೆರಾ ಪೋರ್ಟ್ರೇಟ್ ಮೋಡ್‌ನಂತಹ ವಿವಿಧ ಫೋಟೋಗ್ರಫಿ ಮೋಡ್‌ಗಳನ್ನು ಬೆಂಬಲಿಸುತ್ತದೆ, ಹಾಗೂ ಇದು ಮಸುಕಾದ ಹಿನ್ನೆಲೆಯಿರುವ ಉತ್ತಮ ಫೋಟೋಗಳನ್ನು ಸ್ವಯಂಚಾಲಿತವಾಗಿ ಸೆರೆಹಿಡಿಯಲು ಬಳಕೆದಾರರಿಗೆ ಅನುವು ಮಾಡಿಕೊಡುತ್ತದೆ. ಕಡಿಮೆ ಬೆಳಕಿನಲ್ಲಿಯೂ ಉತ್ತಮ ಫೋಟೋಗಳನ್ನು ಸೆರೆಹಿಡಿಯಲು ನೈಟ್ ಮೋಡ್ ನೆರವಾಗುತ್ತದೆ. ಭಾವನೆಗಳು ಮತ್ತು ಸಂಭ್ರಮಾಚರಣೆಯೊಂದಿಗೆ ತಮ್ಮ ಸೆಲ್ಫಿಗಳನ್ನು ಉತ್ತಮಗೊಳಿಸಲು ವಿಶಿಷ್ಟವಾದ ಭಾರತ-ಕೇಂದ್ರಿತ ಲೆನ್ಸ್‌ಗಳನ್ನೂ ಕ್ಯಾಮೆರಾ ಒಳಗೊಂಡಿದೆ.

5. ಲಕ್ಷಾಂತರ ಆಪ್‌ಗಳನ್ನು ಬಳಸುವ ಅವಕಾಶ

ಬಳಕೆದಾರರು ಗೂಗಲ್ ಪ್ಲೇ ಸ್ಟೋರ್ ಮೂಲಕ ಡೌನ್‌ಲೋಡ್ ಮಾಡಿಕೊಳ್ಳಬಹುದಾದ ಎಲ್ಲ ಆಂಡ್ರಾಯ್ಡ್ ಆಪ್‌ಗಳನ್ನೂ ಈ ಸಾಧನವು ಬೆಂಬಲಿಸುತ್ತದೆ ಮತ್ತು ಆ ಮೂಲಕ ಪ್ಲೇ ಸ್ಟೋರ್‌ನಲ್ಲಿ ಲಭ್ಯವಿರುವ ಲಕ್ಷಾಂತರ ಆಪ್‌ಗಳ ಪೈಕಿ ತಮಗೆ ಬೇಕಾದ್ದನ್ನು ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯವನ್ನು ಅವರಿಗೆ ನೀಡುತ್ತದೆ. ಅನೇಕ ಜಿಯೋ ಮತ್ತು ಗೂಗಲ್ ಆಪ್‌ಗಳ‌ನ್ನು ಈ ಸಾಧನದಲ್ಲಿ ಮುಂಚಿತವಾಗಿ ಲೋಡ್ ಮಾಡಲಾಗಿದೆ.

6. ಸ್ವಯಂಚಾಲಿತ ಫೀಚರ್ ಅಪ್‌ಡೇಟ್‌ಗಳು

ಹೊಸ ವೈಶಿಷ್ಟ್ಯಗಳು, ಕಸ್ಟಮೈಸೇಶನ್, ಭದ್ರತಾ ಅಪ್‌ಡೇಟ್‌ಗಳು ಹಾಗೂ ಇನ್ನೂ ಹೆಚ್ಚಿನದಕ್ಕಾಗಿ ಜಿಯೋಫೋನ್ ನೆಕ್ಸ್ಟ್‌ನಲ್ಲಿ ಓವರ್ ದಿ ಏರ್ ಅಪ್‌ಡೇಟ್ಸ್ ಬೆಂಬಲವಿದ್ದು, ಇದು ಕಾಲಕ್ರಮೇಣ ಫೋನ್ ಅನುಭವವನ್ನು ವರ್ಧಿಸುತ್ತಲೇ ಹೋಗುತ್ತದೆ.

7. ಸ್ನೇಹಿತರೊಂದಿಗೆ ಸುಲಭವಾಗಿ ಹಂಚಿಕೊಳ್ಳಿ

ಆಪ್‌ಗಳು, ಫೈಲ್‌ಗಳು, ಫೋಟೋಗಳು, ವೀಡಿಯೊಗಳು, ಹಾಡುಗಳು ಮತ್ತು ಇನ್ನೂ ಹೆಚ್ಚಿನದನ್ನು ಕುಟುಂಬದವರು ಮತ್ತು ಸ್ನೇಹಿತರೊಂದಿಗೆ, ಇಂಟರ್‌ನೆಟ್ ಇಲ್ಲದಿದ್ದರೂ ಸಹ, ನಿಯರ್‌ಬೈ ಶೇರ್ ವೈಶಿಷ್ಟ್ಯವನ್ನು ಬಳಸಿ ತ್ವರಿತವಾಗಿ ಹಂಚಿಕೊಳ್ಳಿ.

ಜಿಯೋಫೋನ್ ನೆಕ್ಸ್ಟ್‌ನ ಕೆಲವು ಪ್ರಮುಖ ಅಂಶಗಳು: -
* 10 ಭಾರತೀಯ ಭಾಷೆಗಳ ಪೈಕಿ ನಿಮ್ಮ ಆಯ್ಕೆಯ ಭಾಷೆಯಲ್ಲಿ ಸುಲಭವಾಗಿ ಮಾಹಿತಿ ಪಡೆಯಿರಿ ಮತ್ತು ಬಳಸಿರಿ - ಬಟನ್‌ನ ಟ್ಯಾಪ್‌ ಮಾಡುವ ಮೂಲಕ, ಈಗ ಪರದೆಯ ಮೇಲೆ ಇರುವುದನ್ನು ಅನುವಾದಿಸಿ ಮತ್ತು ಅದನ್ನು ನಿಮ್ಮ ಸ್ವಂತ ಭಾಷೆಯಲ್ಲಿ ಕೇಳಿ

* ಟ್ರಾನ್ಸ್‌ಲೇಟ್ ನೌ - ಯಾವುದೇ ಚಿತ್ರ ಅಥವಾ ಮೊಬೈಲ್ ಸ್ಕ್ರೀನ್ ಅನ್ನು (ಯಾವುದೇ ಆಪ್‌ನಲ್ಲಿ) ನಿಮ್ಮ ಆಯ್ಕೆಯ ಭಾಷೆಗೆ ಅನುವಾದಿಸಿ

* ರೀಡ್ ಅಲೌಡ್ - ನಿಮ್ಮ ಮೊಬೈಲ್ ಪರದೆಯಲ್ಲಿರುವ ಯಾವುದೇ ಪಠ್ಯವನ್ನು ನಿಮ್ಮ ಭಾಷೆಯಲ್ಲಿ ಗಟ್ಟಿಯಾಗಿ ಓದಿಸಿ - ಅತ್ಯುತ್ತಮ ಕ್ಯಾಮೆರಾ

* ಬಿಲ್ಟ್-ಇನ್ ಫಿಲ್ಟರ್‌ಗಳು ಮತ್ತು ಉತ್ಕೃಷ್ಟ ನೈಟ್ ಫೋಟೋಗ್ರಫಿ - ವಾಯ್ಸ್ ಫಸ್ಟ್ ಅನುಭವ

* ನಿಮ್ಮ ಭಾಷೆಯಲ್ಲಿ ನಿಮ್ಮ ಜಿಯೋಫೋನ್‌ ನೆಕ್ಸ್ಟ್ ಜೊತೆ ಮಾತನಾಡುವ ಮೂಲಕ ಹೆಚ್ಚಿನ ಕೆಲಸಗಳನ್ನು ಸಾಧಿಸಿ

Best Mobiles in India

English summary
Jio Tops 4G Chart in Download Speed; Airtel, Vi Reduce Gap in Oct: Trai Data.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+