Just In
- 4 hrs ago
ವಿದ್ಯಾರ್ಥಿಗಳೇ ಇಲ್ಲಿ ಗಮನಿಸಿ, ನೀವು Rank ಪಡೆಯಲು ಈ ಆಪ್ಗಳನ್ನು ಬಳಕೆ ಮಾಡಿ!
- 4 hrs ago
ನಿಮ್ಮ ಉಂಗುರದ ಗಾತ್ರವನ್ನು ಫೋನ್ ಮೂಲಕವೇ ಅಳತೆ ಮಾಡಿ: ಹೇಗೆ ಗೊತ್ತಾ?
- 5 hrs ago
ಫೈರ್-ಬೋಲ್ಟ್ನ ಈ ಸ್ಮಾರ್ಟ್ವಾಚ್ ಖರೀದಿಗೆ ಲಭ್ಯ!..ಇದರ ಲುಕ್ಗೆ ನೀವು ಕ್ಲೀನ್ ಬೋಲ್ಡ್!
- 6 hrs ago
ಸೋನಿ ಸಂಸ್ಥೆಯಿಂದ ಹೊಸ ಮಾದರಿಯ ವಾಕ್ಮ್ಯಾನ್ ಲಾಂಚ್!..ಜಬರ್ದಸ್ತ್ ಫೀಚರ್ಸ್!
Don't Miss
- Lifestyle
ಜನವರಿ 30ಕ್ಕೆ ಶನಿ ಅಸ್ತ: 35 ದಿನದವರೆಗೆ ಈ 6 ರಾಶಿಯವರು ಹೆಚ್ಚು ಜಾಗ್ರತೆವಹಿಸಬೇಕು
- News
ಚಿಕ್ಕಬಳ್ಳಾಪುರದಲ್ಲಿ ಕುಷ್ಠರೋಗ ನಿಯಂತ್ರಣ ಜಾಗೃತಿ ಅಭಿಯಾನ ರಥಕ್ಕೆ ಚಾಲನೆ
- Movies
ವಿಷ್ಣು ಸ್ಮಾರಕಕ್ಕೆ ಕಾರಣರಾದ ಇಬ್ಬರಿಗೆ ಧನ್ಯವಾದ ಅರ್ಪಿಸಿದ ನಟ ದರ್ಶನ್
- Sports
ವಿಶ್ವದ ಮೊದಲ ಆನ್ಲೈನ್ ಕ್ರಿಕೆಟ್ ಕೋಚ್ ನೇಮಕಕ್ಕೆ ಮುಂದಾದ ಪಾಕಿಸ್ತಾನ ತಂಡ
- Finance
ಫೆಬ್ರವರಿ 1ರಿಂದ ಯಾವೆಲ್ಲ ಹಣಕಾಸು ನಿಯಮ ಬದಲಾವಣೆಯಾಗಲಿದೆ?
- Automobiles
ಭಾರತದಲ್ಲಿ ಅಬ್ಬರಿಸಲು ಬಿಡುಗಡೆಯಾಯ್ತು ಹೀರೋ Xoom 110 ಸ್ಕೂಟರ್: ಬೆಲೆ ರೂ.68,599...!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
4G ನೆಟ್‌ವರ್ಕ್ ವೇಗದಲ್ಲಿ ಕಿಂಗ್ ಯಾರು?..ಜಿಯೋ ಸ್ಥಾನವೇನು?
ಪ್ರಸ್ತುತ 4G ನೆಟ್‌ವರ್ಕ್ ಬಳಕೆಯಲ್ಲಿರುವ ಇಡೀ ಟೆಲಿಕಾಂ ವಲಯ ಇದೀಗ 5G ನೆಟ್‌ವರ್ಕ್ ಬರುವಿಕೆಗಾಗಿ ನಿರೀಕ್ಷಿಸುತ್ತಿದೆ. ಆದ್ರೆ, ಸದ್ಯ 4G ನೆಟ್‌ವರ್ಕ್ ಸೇವೆಯನ್ನು ಒದಗಿಸುತ್ತಿರುವ ಜಿಯೋ, ವೊಡಾಫೋನ್, ಐಡಿಯಾ ಮತ್ತು ಏರ್‌ಟೆಲ್ ಖಾಸಗಿ ಟೆಲಿಕಾಂ ಸಂಸ್ಥೆಗಳಲ್ಲಿ ಯಾವ ಸಂಸ್ಥೆಯ ನೆಟ್‌ವರ್ಕ್ ಅತ್ಯುತ್ತಮ ಸ್ಪೀಡ್ ಹೊಂದಿದೆ ಎಂದು ನಿಮಗೆ ಗೊತ್ತಾ?..ಬಹುಶಃ ಬಹುತೇಕರು ಜಿಯೋ ನೆಟ್‌ವರ್ಕ್ ಸ್ಪೀಡ್ ಇದೆ ಎಂದು ಕೊಂಡಿರುತ್ತಾರೆ.

ಜುಲೈ-2019 ತಿಂಗಳ ಟ್ರಾಯ್ ವರದಿಯ ಪ್ರಕಾರ 4G ನೆಟ್‌ವರ್ಕ್ ಡೌನ್‌ಲೋಡ್ ವೇಗದಲ್ಲಿ ಮುಂಚೂಣಿಯ ಸ್ಥಾನದಲ್ಲಿ ಜಿಯೋ ಇದೆ. ಆದ್ರೆ 4G ನೆಟ್‌ವರ್ಕ್‌ನಲ್ಲಿ ಅಪ್‌ಲೋಡ್ ಮಾಡುವ ವೇಗದಲ್ಲಿ ವೊಡಾಫೋನ್ ಹೆಚ್ಚು ಸ್ಪೀಡ್ ಹೊಂದಿದೆ. 4G ನೆಟ್‌ವರ್ಕ್‌ನಲ್ಲಿ ಜಿಯೋ ಡೌನ್‌ಲೋಡ್ ವೇಗದಲ್ಲಿ ಹೆಚ್ಚಳ ಕಂಡುಬಂದಿದ್ದು, ಜುಲೈನಲ್ಲಿ ಡೌನ್‌ಲೋಡ್ ವೇಗ 21Mbps ಆಗಿದ್ದು, ಕಳೆದ ಜೂನ್‌ನಲ್ಲಿ 17.6Mbps ದಾಖಲಾಗಿತ್ತು ಎಂದು ಟ್ರಾಯ್ ತಿಳಿಸಿದೆ.

4G ನೆಟ್‌ವರ್ಕ್‌ನಲ್ಲಿ ಡೇಟಾ ಅಪ್‌ಲೋಡಿಂಗ್‌ನಲ್ಲಿ ವೊಡಾಫೋನ್ 5.8 Mbps ಸಾಮರ್ಥ್ಯದ ವೇಗದೊಂದಿಗೆ, ವೇಗದ ಅಪ್‌ಲೋಡ್ ನೆಟ್‌ವರ್ಕ್ ಆಗಿ ಮೊದಲ ಸ್ಥಾನದಲ್ಲಿ ಗುರುತಿಸಿಕೊಂಡು ಜಿಯೋವನ್ನು ಮಣಿಸಿದೆ. ಹಾಗೆಯೇ ಐಡಿಯಾ ನೆಟ್‌ವರ್ಕ್ 5.3 Mbps ವೇಗ ಹೊಂದಿದ್ದರೇ, ಜಿಯೋದ ಅಪ್‌ಲೋಡಿಂಗ್ ವೇಗವು 4.3Mbps ಆಗಿದೆ. ಹಾಗೂ ಏರ್‌ಟೆಲ್ ಸಂಸ್ಥೆಯು 3.2 Mbps ವೇಗದಲ್ಲಿದೆ.

ಜುಲೈ ತಿಂಗಳ ಟ್ರಾಯ್ ವರದಿಯಂತೆ, ಸರ್ಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್ ಟೆಲಿಕಾಂ ಸಂಸ್ಥೆಯು 3G ನೆಟ್‌ವರ್ಕ್‌ನಲ್ಲಿ ವೇಗದ ಡೌನ್‌ಲೋಡ್ ಟೆಲಿಕಾಂ ಸಂಸ್ಥೆಯಾಗಿ ಹೊರಹೊಮ್ಮಿದೆ. ಬಿಎಸ್‌ಎನ್‌ಎಲ್ 2.5 Mbps ವೇಗವನ್ನು ಹೊಂದಿದ್ದರೇ, ಐಡಿಯಾ 2Mbps ವೇಗ ಹೊಂದಿದೆ. ಹಾಗೆಯೇ ವೊಡಾಫೋನ್ 1.9 Mbps ವೇಗವನ್ನು ಹೊಂದಿದ್ದು, ಏರ್‌ಟೆಲ್ ಸಂಸ್ಥೆಯು 1.4 Mbps ವೇಗವನ್ನು ಪಡೆದು ಕೊನೆಯ ಸ್ಥಾನದಲ್ಲಿ ಉಳಿದಿದೆ.
ಒಟ್ಟಾರೇ ದೇಶದಲ್ಲಿ ಅಧಿಕ ಬಳಕೆದಾರರನ್ನು ಹೊಂದಿದ್ದ ಏರ್‌ಟೆಲ್ ಅನ್ನು ಹಿಂದಿಕ್ಕುವಲ್ಲಿ ಜಿಯೋ ಇತ್ತೀಚಿಗೆ ಯಶಸ್ವಿಯಾಗಿದೆ. ಟ್ರಾಯ್‌ನ ಜೂನ್ ವರದಿಯಂತೆ ಜಿಯೋದ ಬಳಕೆದಾರರ ಸಂಖ್ಯೆಯು 331.3 ಮಿಲಿಯನ್ ಆಗಿದೆ. ಹಾಗೆಯೇ ಜಿಯೋ ಸಂಸ್ಥೆಯು ತನ್ನ ಬಹುನಿರೀಕ್ಷಿತ 'ಜಿಯೋ ಗಿಗಾಫೈಬರ್' ಬ್ರಾಡ್‌ಬ್ಯಾಂಡ್ ಸೇವೆಯನ್ನು ಇದೇ ಸೆಪ್ಟಂಬರ್ 5ರಂದು ಆರಂಭಿಸಲಿದೆ. ಗಿಗಾಫೈಬರ್ ಪ್ಲ್ಯಾನ್‌ಗಳು 700ರೂ.ಗಳಿಂದ ಆರಂಭವಾಗಲಿದೆ.

ಡಿಶ್‌ಟಿವಿಯಿಂದ ಕೇವಲ 399ರೂ.ಗಳಿಗೆ 'ಡಿ2ಎಚ್ ಮ್ಯಾಜಿಕ್ ಸ್ಟಿಕ್'!
ಡಿ2ಎಚ್ ಪುಟ್ಟಿಯಿಂದ ಕೇಬಲ್‌ಗಳ ಮೂಲಕ ಟಿವಿಗಳಿಗೆ ಕೇಬಲ್ ಕನೆಕ್ಟ್ ಮಾಡಿ ಟಿವಿ ವೀಕ್ಷಿಸುವುದು ಜಮಾನ ಈಗ ಮರೆಯಾಗುತ್ತಿದ್ದು, ಮಹತ್ತರ ಬದಲಾವಣೆಗಳು ನಡೆಯುತ್ತಿವೆ. ಆ ಪೈಕಿ ಸದ್ಯ ಟ್ರೆಂಡಿಂಗ್‌ನಲ್ಲಿರುವುದು ಫೈರ್‌ಸ್ಟಿಕ್ ಮೂಲಕ ವಿಡಿಯೊ ಸ್ಟ್ರಿಮಿಂಗ್ ಮಾಡುವುದು. ಅದೇ ರೀತಿ ಈಗ ಎಲ್ಲ ಡಿಶ್ ಆಪರೇಟರ್ ಸಂಸ್ಥೆಗಳು ಸ್ಟಿಕ್ ಮೂಲಕ ವಿಡಿಯೊ ಸ್ಟ್ರಿಮಿಂಗ್ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ಮುನ್ನಡೆದಿವೆ.
ಹೌದು, ಡಿ2ಎಚ್ ಸಂಸ್ಥೆಗಳಲ್ಲಿ ಒಂದಾಗಿರುವ ಡಿಶ್‌ಟಿವಿ ಇಂಡಿಯಾ ಸಂಸ್ಥೆಯು ಇದೀಗ ಡಿ2ಎಚ್ ಮ್ಯಾಜಿಕ್ ಹೆಸರಿನ ಸ್ಟಿಕ್ ಲಾಂಚ್ ಮಾಡಿದ್ದು, ಈ ಹೊಸ ಸೇವೆಯನ್ನು ಪ್ರಸ್ತುತ ಡಿಶ್‌ಟಿವಿ ಸೆಟ್‌ಬಾಕ್ಸ್ ಹೊಂದಿರುವ ಗ್ರಾಹಕರಿಗೆ ಲಭ್ಯವಾಗಲಿದೆ. ಈ ಮ್ಯಾಜಿಕ್ ಸ್ಟಿಕ್ ಮೂಲಕ ಬಳಕೆದಾರರು ಜೀ5, ಹಂಗಾಮಾ ಪ್ಲೇ, ಎಎಲ್‌ಟಿ ಬಾಲಾಜಿ ಸೇರಿದಂತೆ ಜನಪ್ರಿಯ ವಿಡಿಯೊ ಸ್ಟ್ರಿಮಿಂಗ್ (OTT) ಆಪ್ಸ್‌ಗಳನ್ನು ವೀಕ್ಷಿಸಬಹುದಾಗಿದೆ.
ಡಿಶ್‌ಟಿವಿ ಸಂಸ್ಥೆಯು ಆರಂಭಿಕ ಕೊಡುಗೆಯಾಗಿ 399ರೂ.ಗಳಿಗೆ 'ಡಿ2ಎಚ್ ಮ್ಯಾಜಿಕ್' ಅನ್ನು ಪರಿಚಯಿಸಿದ್ದು, ಹಾಗೆಯೇ 25+ಟ್ಯಾಕ್ಸ್ ನಾಮಿನಲ್ ಚಂದಾದಾರಿಕೆಯ ಶುಲ್ಕ ಇರಲಿದೆ. ಈ ಸೇವೆಯು ಏರ್‌ಟೆಲ್ ಇಂಟರ್ನೆಟ್ ಬಾಕ್ಸ್ ಮತ್ತು ಟಾಟಾಸ್ಕೈ Binge ಸೇವೆಗೆ ನೇರ ಪೈಪೋಟಿ ನೀಡುವ ಮುನ್ಸೂಚನೆಗಳನ್ನು ಹೊರಹಾಕಿದೆ. ಹಾಗಾದರೇ ಡಿಶ್‌ಟಿವಿಯ ಹೊಸ 'ಡಿ2ಎಚ್ ಮ್ಯಾಜಿಕ್' ಸೇವೆಯ ಇನ್ನಷ್ಟು ಮಾಹಿತಿಗಳನ್ನು ಮುಂದೆ ನೋಡೋಣ ಬನ್ನಿರಿ.

ಡಿ2ಎಚ್ ಮ್ಯಾಜಿಕ್ ಸ್ಟಿಕ್ ಆರ್ಡರ್ ಹೇಗೆ
ಈಗಾಗಲೇ ಡಿಶ್‌ಟಿವಿ ಸೆಟ್‌ಅಪ್ ಬಾಕ್ಸ್ ಸೇವೆಯನ್ನು ಪಡೆಯುತ್ತಿರುವ ಗ್ರಾಹಕರು ಕಂಪನಿಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ 'ಡಿ2ಎಚ್ ಮ್ಯಾಜಿಕ್ ಸ್ಟಿಕ್' ಆರ್ಡರ್ ಮಾಡಬಹುದು. ಅಥವಾ ಕಂಪೆನಿಯ 1800 1370 111 ನಂಬರ್‌ಗೆ ಕರೆ ಮಾಡುವ ಮೂಲಕವು ಮ್ಯಾಜಿಕ್ ಸ್ಟಿಕ್ ತರಿಸಿಕೊಳ್ಳಬಹುದಾಗಿದೆ. ಎಲ್ಲ ಪ್ರಮುಖ ನಗರಗಳಲ್ಲಿ ಈ ಸೇವೆಯು ಲಭ್ಯವಾಗಲಿದೆ.

ಡಿ2ಎಚ್ ಮ್ಯಾಜಿಕ್ ಸ್ಟಿಕ್ ಕನೆಕ್ಟ್
ಡಿ2ಎಚ್ ಮ್ಯಾಜಿಕ್ ಸ್ಟಿಕ್ ಅನ್ನು ಗ್ರಾಹಕರು ಡಿಶ್‌ಟಿವಿ ಸೆಟ್‌ಅಪ್ ಬಾಕ್ಸ್‌ನ ಯುಎಸ್‌ಬಿ ಪೋರ್ಟ್ ಕನೆಕ್ಟ್ ಮಾಡಬೇಕಿರುತ್ತದೆ. ಹೀಗಾಗಿ ಗ್ರಾಹಕರು ಇತ್ತೀಚಿನ ಮೊಬೈಲ್ ಹಾಟ್‌ಸ್ಪಾಟ್ ಮತ್ತು ವೈ ಫೈ ನೆಟ್‌ವರ್ಕ್ ಬೆಂಬಲ ಪಡೆದಿರುವ ಅಪ್‌ಡೇಟ್ ಸೆಟ್‌ಅಪ್ ಬಾಕ್ಸ್ ಹೊಂದಿದ್ದರಬೇಕು. ಹಾಗೆಯೇ ಡಿ2ಎಚ್ ಮ್ಯಾಜಿಕ್ ಸ್ಟಿಕ್ ಸೇವೆಯನ್ನು ರಿಮೋಟ್ ಕಂಟ್ರೂಲ್ ಸಹ ಮಾಡಬಹುದಾಗಿದೆ.

ಡಿ2ಎಚ್ ಮ್ಯಾಜಿಕ್ ಸ್ಟಿಕ್ ಸೌಲಭ್ಯಗಳು
ಡಿ2ಎಚ್ ಮ್ಯಾಜಿಕ್ ಸ್ಟಿಕ್ ಡಿವೈಸ್ ಲೈವ್ ಟಿವಿ ಮತ್ತು ಜೀ5, ಹಂಗಾಮಾ ಪ್ಲೇ, ಎಎಲ್‌ಟಿ ಬಾಲಾಜಿ, ಸೋನಿ ಲೈವ್, ವಾಚೋ ಸೇರಿದಂತೆ ಜನಪ್ರಿಯ OTT ವಿಡಿಯೊ ಸ್ಟ್ರಿಮಿಂಗ್ ಆಪ್ಸ್‌ಗಳ ನಡುವೆ ಬ್ರಿಡ್ಜ್ ಇದ್ದಂತೆ. ಈ ಸ್ಟಿಕ್ ಜನಪ್ರಿಯ ವಿಡಿಯೊ ಸ್ಟ್ರಿಮಿಂಗ್ ಆಪ್ಸ್ ಪ್ರಿ-ಇನ್‌ಸ್ಟಾಲ್ ಹೊಂದಿದ್ದು, ಅವುಗಳು ಅನೇಕ ಮನರಂಜನೆಯ ಕಾರ್ಯಕ್ರಮಗಳ ಸಂಗ್ರಹ ಇದ್ದು, ಗ್ರಾಹಕರಿಗೆ ಲಭ್ಯವಾಗಲಿದೆ.

ಲಭ್ಯತೆ ಮತ್ತು ಬೆಲೆ
ಪ್ರಸ್ತುತ ವಿಡಿಯೊ ಸ್ರಿಮಿಂಗ್ ಆಪ್ಸ್‌ಗಳ ಸೇವೆ ಒದಗಿಸುವ ಸ್ಟಿಕ್‌ಗಳಲ್ಲಿ ಆಪ್ಸ್‌ಗಳು ಪ್ರಿ-ಇನ್‌ಬಿಲ್ಟ್ ಆಗಿರುತ್ತವೆ. ಹಾಗೆಯೇ ಡಿಶ್‌ಟಿವಿ ಮ್ಯಾಜಿಕ್ ಸ್ಟಿಕ್‌ನಲ್ಲಿಯೂ OTT ಆಪ್ಸ್‌ಗಳು ಸೇರಿವೆ. ಈ ಡಿ2ಎಚ್ ಮ್ಯಾಜಿಕ್ ಸ್ಟಿಕ್ ಅನ್ನು ಸಂಸ್ಥೆಯು ಆರಂಭಿಕ ಕೊಡುಗೆಯಾಗಿ 399ರೂ.ಗಳಿಗೆ 'ಡಿ2ಎಚ್ ಮ್ಯಾಜಿಕ್' ಅನ್ನು ಪರಿಚಯಿಸಿದ್ದು, ಹಾಗೆಯೇ 25+ಟ್ಯಾಕ್ಸ್ ನಾಮಿನಲ್ ಚಂದಾದಾರಿಕೆಯ ಶುಲ್ಕ ಇರಲಿದೆ.
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470