4G ಡೌನ್‌ಲೋಡ್ ವೇಗದಲ್ಲಿ ಮಾರ್ಚ್ ತಿಂಗಳಲ್ಲಿ ಜಿಯೋಗೆ ಅಗ್ರಸ್ಥಾನ!
ಪ್ರತಿ ಸೆಕೆಂಡ್‌ಗೆ ಸರಾಸರಿ 21.1 ಮೆಗಾಬೈಟ್ ಡೌನ್‌ಲೋಡ್ ವೇಗ ಕಾಯ್ದುಕೊಳ್ಳುವ ಮೂಲಕ 4ಜಿ ವಿಭಾಗದಲ್ಲಿನ ಅಧಿಕ ಸರಾಸರಿ ಡೇಟಾ ಡೌನ್‌ಲೋಡ್ ವೇಗದಲ್ಲಿ ಮಾರ್ಚ್ ತಿಂಗಳಲ್ಲಿ ಕೂಡ ರಿಲಯನ್ಸ್ ಜಿಯೋ ಮುಂಚೂಣಿಯಲ್ಲಿದೆ ಎಂದು ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್) ಬಿಡುಗಡೆ ಮಾಡಿರುವ ಇತ್ತೀಚಿನ ವರದಿ ತಿಳಿಸಿದೆ.

ರಿಲಯನ್ಸ್ ಜಿಯೋದ 4ಜಿ ನೆಟ್‌ವರ್ಕ್ ವೇಗ ಫೆಬ್ರವರಿಗೆ ಹೋಲಿಸಿದರೆ ಶೇ 2.5ರಷ್ಟು ಹೆಚ್ಚಳ ಕಂಡಿದೆ. ಫೆಬ್ರವರಿಯಲ್ಲಿ ಜಿಯೋ ಡೌನ್‌ಲೋಡ್ ವೇಗ 20.6 ಎಂಬಿಪಿಎಸ್ ಇತ್ತು. ಅದು ಮಾರ್ಚ್‌ನಲ್ಲಿ 21.21 ಎಂಬಿಪಿಎಸ್ ವೇಗಕ್ಕೆ ಏರಿಕೆಯಾಗಿದೆ.
ವೊಡಾಫೋನ್ ಐಡಿಯಾ (ವಿಐಎಲ್) ಮತ್ತು ಭಾರ್ತಿ ಏರ್‌ಟೆಲ್ ಕ್ರಮವಾಗಿ ಪ್ರತಿ ಸೆಕೆಂಡ್‌ಗೆ 17.9 ಮೆಗಾಬೈಟ್ (ಎಂಬಿಪಿಎಸ್) ಮತ್ತು 13.7 ಎಂಬಿಪಿಎಸ್ ಡೌನ್‌ಲೋಡ್ ವೇಗಗಳೊಂದಿಗೆ ಅಲ್ಪ ಇಳಿಕೆ ಕಂಡಿವೆ. ಆದರೆ ಕಳೆದ ಆರು ತಿಂಗಳಲ್ಲಿ ಎರಡೂ ಕಂಪೆನಿಗಳು ಜಿಯೋ ಡೌನ್‌ಲೋಡ್ ವೇಗದೊಂದಿಗೆ ಇರುವ ಅಂತರವನ್ನು ಕಡಿಮೆ ಮಾಡಿವೆ. ಬಿಎಸ್‌ಎನ್‌ಎಲ್ ನೆಟ್‌ವರ್ಕ್ 6.1 ಎಂಬಿಪಿಎಸ್ ಡೌನ್‌ಲೋಡ್ ವೇಗ ಹೊಂದಿದೆ ಎಂದು ವರದಿ ತಿಳಿಸಿದೆ.

ಡೌನ್‌ಲೋಡ್ ವೇಗವು ಗ್ರಾಹಕರು ಅಂತರ್ಜಾಲದಿಂದ ಮಾಹಿತಿಗಳನ್ನು ಪಡೆದುಕೊಳ್ಳಲು ನೆರವಾಗುತ್ತದೆ. ಅಪ್‌ಲೋಡ್ ವೇಗವು ತಮ್ಮ ಸಂಪರ್ಕದಲ್ಲಿರುವವರಿಗೆ ಚಿತ್ರಗಳು ಮತ್ತು ವಿಡಿಯೋಗಳನ್ನು ತ್ವರಿತವಾಗಿ ರವಾನಿಸಲು ನೆರವಾಗುತ್ತದೆ.
ಟ್ರಾಯ್ ಪ್ರಕಾರ, ವೊಡಾಫೋನ್ ಐಡಿಯಾ ಮಾರ್ಚ್ ತಿಂಗಳಲ್ಲಿ 8.2 ಎಂಬಿಪಿಎಸ್ ಸರಾಸರಿ ಅಪ್‌ಲೋಡ್ ವೇಗ ಹೊಂದಿದ್ದು, ಈ ವಿಭಾಗದಲ್ಲಿ ಮೊದಲ ಸ್ಥಾನದಲ್ಲಿದೆ. 7.3 ಎಂಬಿಪಿಎಸ್ ವೇಗ ಇರುವ ರಿಲಯನ್ಸ್ ಜಿಯೋ ನಂತರದ ಸ್ಥಾನದಲ್ಲಿದ್ದರೆ, ಭಾರ್ತಿ ಏರ್‌ಟೆಲ್ 6.1 ಹಾಗೂ ಬಿಎಸ್‌ಎನ್‌ಎಲ್ 5.1 ಎಂಬಿಪಿಎಸ್ ವೇಗದೊಂದಿಗೆ ಕೊನೆಯ ಸ್ಥಾನದಲ್ಲಿದೆ. ಆಪ್‌ನ ಸಹಾಯದೊಂದಿಗೆ ದೇಶಾದ್ಯಂತ ರಿಯಲ್ ಟೈಮ್ ಆಧಾರದಲ್ಲಿ ದತ್ತಾಂಶಗಳನ್ನು ಸಂಗ್ರಹಿಸುವ ಟ್ರಾಯ್, ಅದರ ಮೂಲಕ ಸರಾಸರಿ ವೇಗವನ್ನು ಲೆಕ್ಕ ಹಾಕುತ್ತದೆ.
ಇತ್ತೀಚಿಗೆ ಜಿಯೋ 4ಜಿ ಡಿಜಿಟಲ್ ಸೇವೆಯನ್ನು ಮಲೆ ಮಹದೇಶ್ವರ ಬೆಟ್ಟದಲ್ಲಿ ಆರಂಭಿಸಿದೆ. ಇದರಿಂದ ಆ ಪ್ರದೇಶದ ಜನರು ಸಂವಹನ ಸಾಧಿಸಲು, ವಿದ್ಯಾರ್ಥಿಗಳು ಆನ್ ಲೈನ್ ಪಾಠ ಆಲಿಸಲು, ಯುವ ಜನರು ತಮ್ಮ ಉದ್ಯೋಗಾವಕಾಶಗಳನ್ನು ತಾವಿರುವ ಸ್ಥಳದಿಂದಲೇ ನಿರ್ವಹಿಸಲು ಸಹಾಯಕವಾಗಿದೆ.
ಅಲ್ಲದ ನೆಟ್ ವರ್ಕ್ ಸಮಸ್ಯೆಯಿಂದ ಬೆಟ್ಟಕ್ಕೆ ಬರುವ ಭಕ್ತಾದಿಗಳು ತಮ್ಮ ಮನೆಗಳಿಗೆ ಕರೆ ಮಾಡಲು ಅಥವಾ ಆನ್‍ಲೈನ್ ಸಂಪರ್ಕ ಸಾಧಿಸಲು ಕಷ್ಟಪಡಬೇಕಾಗಿತ್ತು. ಈಗ ಜಿಯೋ 4ಜಿ ನೆಟ್ ವರ್ಕ್ ನಿಂದಾಗಿ ಸುಲಲಿತ ಸಂವಹನಕ್ಕೆ ನೆರವಾಗಿದೆ. ಸ್ಥಳೀಯ ಕುಟುಂಬಗಳಿಗೂ ಸಹ ಇದರಿಂದ ಬಹಳ ಅನುಕೂಲವಾಗಿದೆ. ಇದಕ್ಕಾಗಿ ಸ್ಥಳೀಯರು ಜಿಯೋ ಸಂಸ್ಥೆಗೆ ಕೃತಜ್ಞತೆ ಸಲ್ಲಿಸಿದ್ದಾರೆ. ಗ್ರಾಹಕರ ಸಂತೋಷವು ಜಿಯೋದ ಮೂಲಾಧಾರವಾಗಿದೆ.
ಜಿಯೋ ತನ್ನ ಗ್ರಾಹಕರಿಗೆ ಅನೇಕ ಕೊಡುಗೆಗಳನ್ನು ನೀಡಿದೆ.
* ಜಿಯೋದಲ್ಲಿ ಕರ್ನಾಟಕದಾದ್ಯಂತ ತಡೆರಹಿತ ಸಂಪರ್ಕ, ದೃಢವಾದ ಮತ್ತು ವ್ಯಾಪಕವಾದ 4G ನೆಟ್‌ವರ್ಕ್
* ಜಿಯೋದ ಅನಿಯಮಿತ ಧ್ವನಿ ಮತ್ತು ಡೇಟಾ ಪ್ರಯೋಜನಗಳು
* ಜಿಯೋ ಟಿವಿ- JioTV (ಪ್ರಯಾಣದಲ್ಲಿರುವಾಗ ಹೆಚ್ಚು ಜನಪ್ರಿಯವಾಗಿರುವ, ಕ್ಯಾಚ್-ಅಪ್ ಟಿವಿ ಅಪ್ಲಿಕೇಶನ್), ಜಿಯೋ ಸಿನಿಮಾ- JioCinema ಮತ್ತು ಇತರವುಗಳನ್ನು ಒಳಗೊಂಡಿರುವ
* ಜಿಯೋ ಪ್ರೀಮಿಯಂ ಅಪ್ಲಿಕೇಶನ್‌ಗಳ ಹೋಸ್ಟ್‌ಗೆ ಪ್ರವೇಶ.
* ಕರ್ನಾಟಕದಾದ್ಯಂತ ಜಿಯೋ ಸಿಮ್‌ಗಳ ಸುಲಭ ಲಭ್ಯತೆ
* ಸರಳ ಮತ್ತು ಅನುಕೂಲಕರ ಆನ್‌ಬೋರ್ಡಿಂಗ್ ಅನುಭವ


Click it and Unblock the Notifications








