ಕರ್ನಾಟಕದ ಕೋಲಾರ ಸೇರಿ ದೇಶದ 25 ನಗರಗಳಲ್ಲಿ ಈಗ ಜಿಯೋ 5G ಲಭ್ಯ!
ರಿಲಯನ್ಸ್ ಜಿಯೋ ಟೆಲಿಕಾಂ ಇದೀಗ ಕರ್ನಾಟಕದಲ್ಲಿ ಮತ್ತೆ ತನ್ನ 5G ನೆಟ್‌ವರ್ಕ್ ಜಾಲವನ್ನು ವಿಸ್ತರಿಸಿದೆ. ನೆನ್ನೆ (ಫೆಬ್ರವರಿ 28, 2023) ಕೋಲಾರ ಹಾಗೂ ದೇಶದ ಇತರ 24 ನಗರಗಳಲ್ಲಿ ಜಿಯೋ ಟೆಲಿಕಾಂ ತನ್ನ ಜಿಯೋ ಟ್ರೂ 5G ಸೇವೆಗೆ ಚಾಲನೆ ನೀಡಿತು.
ಕರ್ನಾಟಕದ ಕೋಲಾರ, ಆಂಧ್ರಪ್ರದೇಶ (ಅನಕಪಲ್ಲಿ, ಮಚಲಿಪಟ್ಟಣಂ), ಬಿಹಾರ (ಅರಾಹ್, ಬೇಗುಸರೈ, ಬಿಹಾರ ಷರೀಫ್, ದರ್ಭಾಂಗ, ಪುರ್ನಿಯಾ), ಛತ್ತೀಸ್‌ಗಢ (ಜಗ್ದಲ್ಪುರ್), ಗುಜರಾತ್ (ವಾಪಿ), ಹಿಮಾಚಲ ಪ್ರದೇಶ (ಬಡ್ಡಿ-ಬರೋಟಿವಾಲಾ-ನಲಗಢ), ಜಾರ್ಖಂಡ್ (ಕತ್ರಾಸ್), ಮಹಾರಾಷ್ಟ್ರ (ಬೀಡ್, ಚಕನ್, ಧುಲೆ, ಜಲ್ನಾ, ಮಾಲೆಗಾಂವ್), ತಮಿಳುನಾಡು (ತಿರುನೆಲ್ವೇಲಿ), ಉತ್ತರ ಪ್ರದೇಶ (ಬಾರಾಬಂಕಿ).

ಉತ್ತರಾಖಂಡ (ಮಸ್ಸೂರಿ), ಪಶ್ಚಿಮ ಬಂಗಾಳ (ಬರ್ಧಮಾನ್, ಬರ್ಹಾಂಪೋರ್, ಇಂಗ್ಲಿಷ್ ಬಜಾರ್, ಹಬ್ರಾ, ಖರಗ್‌ಪುರ)ದಲ್ಲಿ- ಹೀಗೆ ಒಟ್ಟು 24 ನಗರಗಳಲ್ಲಿ ತನ್ನ ಟ್ರೂ 5G ಸೇವೆಗಳನ್ನು ಪ್ರಾರಂಭಿಸಿರುವುದಾಗಿ ಘೋಷಿಸಿದೆ. ಇದರೊಂದಿಗೆ ಜಿಯೋ ಟ್ರೂ 5G ಸೇವೆ ಪಡೆಯುತ್ತಿರುವ ನಗರಗಳ ಒಟ್ಟು ಸಂಖ್ಯೆ 304 ಕ್ಕೆ ಏರಿಕೆ ಆಗಿದೆ.
ರಿಲಯನ್ಸ್ ಜಿಯೋ ಕೋಲಾರದಲ್ಲಿ (ಕರ್ನಾಟಕ) 5G ಸೇವೆಗಳನ್ನು ಪ್ರಾರಂಭಿಸಿದ ಮೊದಲ ಮತ್ತು ಏಕೈಕ ಆಪರೇಟರ್ ಆಗಿದೆ. ಇಂದಿನಿಂದ ಪ್ರಾರಂಭ ಆಗುವ ಈ ಸೇವೆಯನ್ನು ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ, 1 ಜಿಬಿಪಿಎಸ್+ ವೇಗದಲ್ಲಿ ಅನಿಯಮಿತ ಡೇಟಾವನ್ನು ಅನುಭವಿಸಲು ಜಿಯೋ ಬಳಕೆದಾರರನ್ನು ವೆಲ್‌ಕಮ್ ಆಫರ್ ಮೂಲಕ ಆಹ್ವಾನಿಸಲಾಗುತ್ತದೆ.

ಈ ಸಂದರ್ಭದಲ್ಲಿ ಮಾತನಾಡಿದ ಜಿಯೋ ವಕ್ತಾರರು, 'ಕೋಲಾರ ಮತ್ತು 12 ರಾಜ್ಯಗಳಾದ್ಯಂತ 24 ನಗರಗಳಲ್ಲಿ ಜಿಯೋ ಟ್ರೂ 5G ಸೇವೆಗಳನ್ನು ಬಿಡುಗಡೆ ಮಾಡಲು ನಾವು ಹೆಮ್ಮೆಪಡುತ್ತೇವೆ. ಈ ಆರಂಭದೊಂದಿಗೆ, 304 ನಗರಗಳಲ್ಲಿ ಜಿಯೋ ಬಳಕೆದಾರರು ಹೊಸ ವರ್ಷ 2023ರಲ್ಲಿ ಜಿಯೋ ಟ್ರೂ 5G ರೂಪಾಂತರ ಪ್ರಯೋಜನಗಳನ್ನು ಆನಂದಿಸಬಹುದು.
'ಹೊಸದಾಗಿ ಈ ಟ್ರೂ 5G ಪ್ರಾರಂಭಿಸಲಾದ ನಗರಗಳು ಪ್ರಮುಖ ಪ್ರವಾಸೋದ್ಯಮ ಮತ್ತು ವಾಣಿಜ್ಯ ತಾಣಗಳು ಮತ್ತು ನಮ್ಮ ದೇಶದ ಪ್ರಮುಖ ಶಿಕ್ಷಣ ಕೇಂದ್ರಗಳಾಗಿವೆ. ಜಿಯೋದ ಟ್ರೂ 5ಜಿ ಸೇವೆಗಳ ಪ್ರಾರಂಭದೊಂದಿಗೆ, ಈ ಪ್ರದೇಶದ ಗ್ರಾಹಕರು ಕೇವಲ ಉತ್ತಮ ದೂರಸಂಪರ್ಕ ಜಾಲವನ್ನು ಪಡೆಯುತ್ತಾರೆ ಮಾತ್ರವಲ್ಲ, ಜತೆಗೆ ಇ-ಆಡಳಿತ, ಶಿಕ್ಷಣ, ಆಟೋಮೇಷನ್, ಕೃತಕ ಬುದ್ಧಿಮತ್ತೆ, ಗೇಮಿಂಗ್, ಆರೋಗ್ಯ, ಕೃಷಿ, ಐಟಿ ಕ್ಷೇತ್ರಗಳಲ್ಲಿ ಮತ್ತು ಎಸ್ ಎಂಇಗಳು ಅನಂತ ಬೆಳವಣಿಗೆಯ ಅವಕಾಶಗಳನ್ನು ಪಡೆಯುತ್ತವೆ.
'ಕರ್ನಾಟಕದ, ಆಂಧ್ರಪ್ರದೇಶ, ಬಿಹಾರ, ಛತ್ತೀಸ್‌ಗಢ, ಗುಜರಾತ್, ಹಿಮಾಚಲ ಪ್ರದೇಶ, ಜಾರ್ಖಂಡ್, ಮಹಾರಾಷ್ಟ್ರ, ತಮಿಳುನಾಡು, ಉತ್ತರ ಪ್ರದೇಶ, ಉತ್ತರಾಖಂಡ ಮತ್ತು ಪಶ್ಚಿಮ ಬಂಗಾಳದ ರಾಜ್ಯ ಸರ್ಕಾರಗಳು ಮತ್ತು ಆಡಳಿತಾಧಿಕಾರಿಗಳು ಈ ಪ್ರದೇಶಗಳನ್ನು ಡಿಜಿಟಲೈಸ್ ಮಾಡುವ ನಮ್ಮ ಪ್ರಯತ್ನದಲ್ಲಿ ನಿರಂತರ ಬೆಂಬಲಕ್ಕಾಗಿ ನಾವು ಕೃತಜ್ಞರಾಗಿರುತ್ತೇವೆ,' ಎಂದಿದ್ದಾರೆ.

ಜಿಯೋ 5G ಡೇಟಾ ಪ್ಲ್ಯಾನ್‌ಗಳ ಮಾಹಿತಿ
ಜಿಯೋ 5G ಸೇವೆ ಲಭ್ಯವಿರುವ ಪ್ರದೇಶದ ಗ್ರಾಹಕರು ಜಿಯೋ 239ರೂ. ಪ್ರಿಪೇಯ್ಡ್ ಯೋಜನೆ ಅಥವಾ ಅದಕ್ಕಿಂತ ಅಧಿಕ ಮೊತ್ತದ ಪ್ಲ್ಯಾನ್ ರೀಚಾರ್ಜ್ ಮಾಡಿರುವ ಗ್ರಾಹಕರು ಹೆಚ್ಚುವರಿ ಪ್ಯಾಕ್ ಖರೀದಿಸುವ ಅಗತ್ಯವಿಲ್ಲ. ಆದರೆ ಕಡಿಮೆ ಬೆಲೆಯ ಪ್ಲ್ಯಾನ್‌ಗಳನ್ನು ರೀಚಾರ್ಜ್ ಮಾಡಿರುವ ಗ್ರಾಹಕರಿಗೆ 5G ಅನ್ನು ಅನುಭವಿಸಲು ಸಾಧ್ಯವಾಗಲಿಲ್ಲ. ಅದಕ್ಕಾಗಿ ಜಿಯೋ ಹೊಸ 5G ಅಪ್‌ಗ್ರೇಡ್ ಯೋಜನೆಯನ್ನು ಈಗ ಅವರಿಗೆ ಲಭ್ಯ ಮಾಡಿದೆ. ಅದುವೇ ಜಿಯೋ 61ರೂ. ಪ್ಲ್ಯಾನ್ ಆಗಿದ್ದು, ಇದು 6GB ಡೇಟಾ ಪ್ರಯೋಜನ ಪಡೆದಿದೆ.
ಗ್ರಾಹಕರು ತಮ್ಮ ಚಾಲ್ತಿ ಇರುವ ಪ್ರಿಪೇಯ್ಡ್ ಯೋಜನೆ ಅವಧಿ ಮುಗಿಯುವವರೆಗೆ 61ರೂ. ಪ್ಲ್ಯಾನ್ ಸಕ್ರಿಯವಾಗಿರುತ್ತದೆ. ಜಿಯೋ 119ರೂ, ಜಿಯೋ 149ರೂ, ಜಿಯೋ 179ರೂ, ಜಿಯೋ 199ರೂ ಅಥವಾ ಜಿಯೋ 209ರೂ. ಬೆಲೆಯ ಪ್ರಿಪೇಯ್ಡ್ ಪ್ಲ್ಯಾನ್ ರೀಚಾರ್ಜ್ ಮಾಡಿರುವ ಗ್ರಾಹಕರಿಗೆ ಈ 5G ಅಪ್‌ಗ್ರೇಡ್ ಡೇಟಾ ಪ್ಲಾನ್ ಕಾರ್ಯನಿರ್ವಹಿಸುತ್ತದೆ. ಆದರೆ, ಗ್ರಾಹಕರು ಜಿಯೋ 5G ವೆಲ್ಕಮ್ ಆಫರ್ ಅನ್ನು ಸ್ವೀಕರಿಸದಿದ್ದರೆ, ಈ ಪ್ಲ್ಯಾನ್ ಉಪಯುಕ್ತವಾಗದು.


Click it and Unblock the Notifications








