ಜಿಯೋ ಗ್ರಾಹಕರಿಗೆ ಸಿಹಿಸುದ್ದಿ: ಕರ್ನಾಟಕದ ಈ ಎಲ್ಲಾ ಜಿಲ್ಲೆಗಳಲ್ಲಿ ಈಗ 5G ಲೈವ್!
ಜನಪ್ರಿಯ ರಿಲಯನ್ಸ್ ಸಂಸ್ಥೆಯು ಜಿಯೋ ಟ್ರೂ 5G ಈಗ ಕರ್ನಾಟಕದಾದ್ಯಂತ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ, 250ಕ್ಕೂ ಹೆಚ್ಚು ಪ್ರಮುಖ ನಗರಗಳು ಮತ್ತು ಪಟ್ಟಣಗಳಲ್ಲಿ ಲಭ್ಯವಿದೆ. ಅಲ್ಲದೆ, ಈ ನಗರಗಳು ಮತ್ತು ಪಟ್ಟಣಗಳಿಗೆ ಹೊಂದಿಕೊಂಡಿರುವ ಅನೇಕ ಹಳ್ಳಿಗಳು ಸಹ ಈಗ ಜಿಯೋ ಟ್ರೂ 5G ಪ್ರಯೋಜನಗಳನ್ನು ಪಡೆಯುವುದಕ್ಕೆ ಸಾಧ್ಯ ಆಗಿದೆ.
ಈ ಎಲ್ಲ ನಗರಗಳು, ಪಟ್ಟಣಗಳು ಮತ್ತು ಹಳ್ಳಿಗಳಲ್ಲಿನ ಜಿಯೋ ಚಂದಾದಾರರನ್ನು ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ 1 ಜಿಬಿಪಿಎಸ್+ ಸ್ಪೀಡ್‌ನಲ್ಲಿ ಅನಿಯಮಿತ ಡೇಟಾ ಸೌಲಭ್ಯ ಪಡೆಯಲು ಜಿಯೋ ವೆಲ್ ಕಮ್ ಆಫರ್ ಗಾಗಿ ಆಹ್ವಾನಿಸಲಾಗಿದೆ.

ದೇಶದ ಎಲ್ಲ ಪ್ರಮುಖ ಸ್ಥಳಗಳು, ಪ್ರವಾಸಿ ಸ್ಥಳಗಳು, ಶಿಕ್ಷಣ ಸಂಸ್ಥೆಗಳು, ಮಾಲ್‌ಗಳು ಮತ್ತು ಮಾರುಕಟ್ಟೆಗಳು, ವಸತಿ ಪ್ರದೇಶಗಳು, ಆಸ್ಪತ್ರೆಗಳು, ಹೋಟೆಲ್‌ಗಳು ಮತ್ತು ರೆಸ್ಟೋರೆಂಟ್‌ಗಳು, ಸರ್ಕಾರಿ ಕಟ್ಟಡಗಳು ಹಾಗೂ ಈ ಎಲ್ಲ ಪ್ರದೇಶಗಳಲ್ಲಿನ ಇತರ ಪ್ರಮುಖ ವಾಣಿಜ್ಯ ಸಂಸ್ಥೆಗಳನ್ನು ಜಿಯೋದ ಟ್ರೂ 5G ನೆಟ್‌ವರ್ಕ್ ಒಳಗೊಂಡಿದೆ. ಐಪಿಎಲ್ ಸೀಸನ್‌ನಲ್ಲಿ ಲಕ್ಷಾಂತರ ಜಿಯೋ ಬಳಕೆದಾರರು ಟ್ರೂ 5G ಸೌಲಭ್ಯಗಳನ್ನು ಪಡೆದಿದ್ದು, ತಮ್ಮ ಮನೆಯಲ್ಲಿನ ಅನುಕೂಲಗಳಿಂದ ಮ್ಯಾಚ್‌ಗಳನ್ನು ವೀಕ್ಷಿಸುತ್ತಿದ್ದಾರೆ.
ಎಲ್ಲ ಜಿಲ್ಲಾ ಕೇಂದ್ರಗಳು ಮತ್ತು ಕರ್ನಾಟಕದಾದ್ಯಂತ 250 ಕ್ಕೂ ಹೆಚ್ಚು ಪ್ರಮುಖ ನಗರಗಳು ಹಾಗೂ ಪಟ್ಟಣಗಳಲ್ಲಿ ಟ್ರೂ 5G ಸೇವೆಗಳನ್ನು ಪ್ರಾರಂಭಿಸಿದ ಮೊದಲ ಟೆಲಿಕಾಂ ಸಂಸ್ಥೆ ಜಿಯೋ ಆಗಿದೆ. ಕರ್ನಾಟಕದಾದ್ಯಂತ ಟ್ರೂ 5G ಸೇವೆಗಳನ್ನು ಶೀಘ್ರವಾಗಿ ಜಾರಿಗೆ ತರುವ ಮೂಲಕ ಕರ್ನಾಟಕದಲ್ಲಿ ಜಿಯೋ ತನ್ನ ಟ್ರೂ 5G ವ್ಯಾಪ್ತಿಯನ್ನು ಮತ್ತಷ್ಟು ಭದ್ರಪಡಿಸಿದೆ. ಅಲ್ಲದೇ ಜಿಯೋ ಬಳಕೆದಾರರಿಗೆ ತಂತ್ರಜ್ಞಾನ ಭಿನ್ನ ಆವೃತ್ತಿಗಳ ಪ್ರಯೋಜನಗಳನ್ನು ಒದಗಿಸುವ ಉದ್ದೇಶ ಜಿಯೋ ಹೊಂದಿದೆ.
ಈ ಬಗ್ಗೆ ಮಾತನಾಡಿದ ಜಿಯೋ ಸಂಸ್ಥೆಯ ವಕ್ತಾರರು, 'ಎಲ್ಲ ಜಿಲ್ಲಾ ಕೇಂದ್ರಗಳು ಮತ್ತು ಕರ್ನಾಟಕದಾದ್ಯಂತ 250 ಕ್ಕೂ ಹೆಚ್ಚು ಪ್ರಮುಖ ನಗರಗಳು ಮತ್ತು ಪಟ್ಟಣಗಳಲ್ಲಿ ಜಿಯೋ ಟ್ರೂ 5G ಸೇವೆಗಳ ಲಭ್ಯ ಮಾಡಲು ನಾವು ಸಂತಸ ಪಡುತ್ತೇವೆ. ರಾಜ್ಯದ ಮೊಬೈಲ್ ಬಳಕೆದಾರರಿಗೆ ಜಿಯೋ ಆಯ್ಕೆಯ ಟೆಲಿಕಾಂ ಹಾಗೂ ಅಕ್ಕರೆಯ ತಂತ್ರಜ್ಞಾನದ ಬ್ರ್ಯಾಂಡ್ ಆಗಿದೆ. ಈನ ನೂತನ ಸೇವೆಯ ಬಿಡುಗಡೆಯು ಕರ್ನಾಟಕದ ಜನರಿಗೆ, ವಿಶೇಷವಾಗಿ ಯುವಜನರಿಗೆ ಜಿಯೋದ ನಿರಂತರ ಬದ್ಧತೆಗೆ ಸಾಕ್ಷಿ ಎನಿಸಿದೆ.
'ಅತ್ಯಂತ ವೇಗದಲ್ಲಿ ಬೆಳೆಯುತ್ತಿರುವ ವಿಶ್ವ ದರ್ಜೆಯ ನೆಟ್‌ವರ್ಕ್ ಅನ್ನು ನೀಡಲು ನಾವು ಹೆಮ್ಮೆಪಡುತ್ತೇವೆ. ಶಿಕ್ಷಣ, ಆರೋಗ್ಯ, ಪ್ರವಾಸೋದ್ಯಮ, ಉತ್ಪಾದನೆ, ಎಸ್ ಎಂಇಗಳು, ಇ-ಆಡಳಿತ, ಕೃಷಿ, ಆಟೊಮೇಷನ್, ಕೃತಕ ಬುದ್ಧಿಮತ್ತೆ, ಗೇಮಿಂಗ್ ಮತ್ತು ಐಟಿ ಕ್ಷೇತ್ರಗಳಲ್ಲಿ ಅನಂತ ಬೆಳವಣಿಗೆಯ ಅವಕಾಶಗಳೊಂದಿಗೆ ಕರ್ನಾಟಕದ ಜನರನ್ನು ಜಿಯೋ ಟ್ರೂ 5G ಸಜ್ಜುಗೊಳಿಸುತ್ತದೆ,' ಎಂದಿದ್ದಾರೆ. 2023ರ ಡಿಸೆಂಬರ್ ಅಂತ್ಯದ ವೇಳೆಗೆ ದೇಶದ ಪ್ರತಿ ಪಟ್ಟಣ ಮತ್ತು ತಾಲೂಕುಗಳಲ್ಲಿ ತನ್ನ ಟ್ರೂ 5G ಸೇವೆಗಳನ್ನು ಪ್ರಾರಂಭಿಸಲು ಜಿಯೋ ಯೋಜಿಸಿದೆ.
ಜಿಯೋದ 1199 ರೂ. ಪ್ರೀಪೇಯ್ಡ್ ಪ್ಲಾನ್ : ಜಿಯೋ ಟೆಲಿಕಾಂನ 1199 ರೂ. ಪ್ರೀಪೇಯ್ಡ್ ಪ್ಲ್ಯಾನ್ ಒಟ್ಟು 84 ದಿನಗಳ ವ್ಯಾಲಿಡಿಟಿ ಅವಧಿಯನ್ನು ಪಡೆದುಕೊಂಡಿದೆ. ಈ ಅವಧಿಯಲ್ಲಿ ಪ್ರತಿದಿನ 3 GB ಡೇಟಾ ಲಭ್ಯವಾಗಲಿದ್ದು ಹಾಗೆಯೇ ಪ್ರತಿದಿನ 100 ಉಚಿತ ಎಸ್ಎಮ್ಎಸ್ ಸೌಲಭ್ಯ ಸಹ ಲಭ್ಯ. ಜಿಯೋ ಸೇರಿದಂತೆ ಇತರೆ ನೆಟವರ್ಕ್‌ಗಳಿಗೂ ಅನಿಯಮಿತ ಉಚಿತ ವಾಯಿಸ್ ಕರೆಗಳ ಸೌಲಭ್ಯ ದೊರೆಯುತ್ತದೆ. ಹಾಗೆಯೇ ಜಿಯೋ ಆಪ್ಸ್ ಸಹ ಲಭ್ಯ.
ಇತರೆ ಜಿಯೋ ಟೆಲಿಕಾಂ ಪ್ರೀಪೇಯ್ಡ್ ಪ್ಲ್ಯಾನ್‌ಗಳು
ಜಿಯೋ 2023ರೂ. ಪ್ಲ್ಯಾನ್
ಜಿಯೋ 2999ರೂ. ಪ್ಲ್ಯಾನ್
ಜಿಯೋ 2545ರೂ. ಪ್ಲ್ಯಾನ್
ಜಿಯೋ 2879ರೂ. ಪ್ಲ್ಯಾನ್
ಜಿಯೋ 719ರೂ. ಪ್ಲ್ಯಾನ್
ಜಿಯೋ 419ರೂ. ಪ್ಲ್ಯಾನ್


Click it and Unblock the Notifications








