ಜಿಯೋ ಟ್ರೂ 5G ಚಾಲಿತ ವೈ-ಫೈ ಪ್ರಾರಂಭ!..ಎಲ್ಲೆಲ್ಲಿ ಲಭ್ಯ!..ಇಲ್ಲಿದೆ ಮಾಹಿತಿ!
ಎಲ್ಲ ಬಳಕೆದಾರರಿಗೂ 5G ಸೇವೆಗಳನ್ನು ಸಕ್ರಿಯಗೊಳಿಸಲು ರಿಲಯನ್ಸ್ ಜಿಯೋ ಇನ್ಫೋಕಾಮ್ ಲಿಮಿಟೆಡ್ (Jio Telecom) ಅ. 22 ರಂದು (ಶನಿವಾರ) ಜಿಯೋ ಟ್ರೂ 5G ಚಾಲಿತ ವೈ - ಫೈ (Wi - Fi) ಸೇವೆಗಳನ್ನು ಶಿಕ್ಷಣ ಸಂಸ್ಥೆಗಳು, ಧಾರ್ಮಿಕ ಸ್ಥಳಗಳು, ರೈಲು ನಿಲ್ದಾಣ, ಬಸ್ ನಿಲ್ದಾಣಗಳು, ವಾಣಿಜ್ಯ ಕೇಂದ್ರಗಳು ಮತ್ತಷ್ಟು ಕಡೆ ಹೆಚ್ಚಿನ ಜನಸಂದಣಿ ಇರುವೆಡೆಗಳಲ್ಲಿ ಪರಿಚಯಿಸುತ್ತಿದೆ ಎಂದು ಘೋಷಿಸಿದೆ.

ಇದು ಜಿಯೋ ಟ್ರೂ 5G (Jio True 5G) ಸೇವೆಗೆ ಹೆಚ್ಚುವರಿಯಾಗಿದೆ ಮತ್ತು ಜಿಯೋ ವೆಲ್‌ಕಮ್ ಆಫರ್ ಇತ್ತೀಚೆಗೆ ದೆಹಲಿ, ಮುಂಬೈ, ಕೋಲ್ಕತ್ತಾ ಮತ್ತು ವಾರಾಣಸಿಯಲ್ಲಿ ಪ್ರಾರಂಭಿಸಲಾಗಿದೆ. ಇನ್ನಷ್ಟು ನಗರಗಳಲ್ಲಿ ವಿಸ್ತರಿಸಲು ಮತ್ತು ಟ್ರೂ 5G ರೆಡಿ ಫೋನ್‌ಗಳ ಲಭ್ಯತೆ ಹೆಚ್ಚಿಸಲು ಜಿಯೋ ತಂಡಗಳು ಹಗಲಿರುಳು ಕೆಲಸ ಮಾಡುತ್ತಿವೆ.

ಶುಭಾರಂಭ ಎಂಬಂತೆ ಜಿಯೋ ಟ್ರೂ 5G (Jio True 5G) ಸೇವೆಗಳ ಜೊತೆಗೆ ಜಿಯೋ ಇಂದು ರಾಜಸ್ಥಾನದ ದೇವಾಲಯ ಪಟ್ಟಣವಾದ ನಾಥದ್ವಾರದಲ್ಲಿ ಜಿಯೋ ಟ್ರೂ 5G ಚಾಲಿತ ವೈ - ಫೈ ಸೇವೆಗಳನ್ನು ಪ್ರಾರಂಭಿಸಿದೆ. ಜಿಯೋ ವೆಲ್‌ಕಮ್ ಆಫರ್ ಅವಧಿಯಲ್ಲಿ ಜಿಯೋ ಬಳಕೆದಾರರು ಯಾವುದೇ ಶುಲ್ಕವಿಲ್ಲದೆ ಈ ಸೇವೆಯನ್ನು ಪಡೆಯುತ್ತಾರೆ, ಜಿಯೋ ಅಲ್ಲದ ಗ್ರಾಹಕರು ಪೂರ್ಣ ಮತ್ತು ಅನಿಯಮಿತ ಸೇವಾ ಅನುಭವವನ್ನು ಪಡೆಯಲು ಜಿಯೋಗೆ ತೆರಳುವ ಮೊದಲು ಈ ಸೇವೆಯನ್ನು ಪ್ರಯತ್ನಿಸಲು ಸಾಧ್ಯ ಆಗುತ್ತದೆ. ಇದು ಜಿಯೋದ 'ವಿ ಕೇರ್' ತತ್ವದ ಮತ್ತೊಂದು ಸಾಕಾರ ಆಗಿದ್ದು ಅದು ಅದರ ಬ್ರಾಂಡ್ ನೀತಿಗೆ ಪ್ರಮುಖವಾಗಿದೆ.

ರಿಲಯನ್ಸ್ ಜಿಯೋ ಇನ್ಫೋಕಾಮ್ ಲಿಮಿಟೆಡ್‌ನ ಅಧ್ಯಕ್ಷರಾದ ಆಕಾಶ್ ಅಂಬಾನಿ ಮಾತನಾಡಿ, 'ಮಾನವೀಯತೆ ಸೇವೆಯು ಭಾರತೀಯ ಸಂಸ್ಕೃತಿಯ ಅತ್ಯಂತ ಪ್ರೀತಿಯ ಅಂಶಗಳಲ್ಲಿ ಒಂದಾಗಿದೆ. ಅದರ ಬೇರುಗಳು ನಮ್ಮ ಸಾಮಾಜಿಕ ಧಾರ್ಮಿಕ ಸಂಪ್ರದಾಯಗಳಲ್ಲಿ ಕಂಡುಬರುತ್ತವೆ.

'ಮೊದಲೇ ಹೇಳಿದಂತೆ, 5G ವಿಶೇಷವಾದ ಕೆಲವು ಅಥವಾ ನಮ್ಮ ದೊಡ್ಡ ನಗರಗಳಲ್ಲಿ ಇರುವವರಿಗೆ ವಿಶೇಷ ಸೇವೆಯಾಗಿ ಉಳಿಯಲು ಸಾಧ್ಯವಿಲ್ಲ. ಇದು ಭಾರತದಾದ್ಯಂತ ಪ್ರತಿಯೊಬ್ಬ ನಾಗರಿಕರಿಗೆ, ಪ್ರತಿ ಮನೆಗೆ ಮತ್ತು ಪ್ರತಿಯೊಂದು ವ್ಯಾಪಾರಕ್ಕೂ ಲಭ್ಯವಿರಬೇಕು. ಜಿಯೋ ಟ್ರೂ 5G (Jio True 5G) ಯೊಂದಿಗೆ ಪ್ರತಿ ಭಾರತೀಯರನ್ನು ಸಕ್ರಿಯಗೊಳಿಸಲು ಇದು ಆ ದಿಕ್ಕಿನಲ್ಲಿ ಒಂದು ಹೆಜ್ಜೆಯಾಗಿದೆ.

'ಇಂದು ನಾವು ಮೊದಲ ಟ್ರೂ 5G ಸಕ್ರಿಯಗೊಳಿಸಿದ ವೈ ಫೈ ಸೇವೆಯನ್ನು ಪವಿತ್ರ ಪಟ್ಟಣವಾದ ನಾಥದ್ವಾರದಲ್ಲಿ ಮತ್ತು ಭಗವಾನ್ ಶ್ರೀನಾಥ್ ಜೀ ದೇವಸ್ಥಾನದಲ್ಲಿ ಒದಗಿಸಿದ್ದೇವೆ. ಇದರೊಂದಿಗೆ ನಾವು ಅಂತಹ ಹಲವು ಸ್ಥಳಗಳಿಗೆ ಸೇವೆ ನೀಡುತ್ತೇವೆ ಮತ್ತು ನಮ್ಮ ಸೇವೆಗಳನ್ನು ಪ್ರಯೋಗಿಸಲು ಅವರಿಗೆ ಅವಕಾಶ ನೀಡುತ್ತೇವೆ. ಇದರ ಜತೆಗೆ, ಜಿಯೋ ಟ್ರೂ 5G (Jio True 5G) ವೆಲ್‌ಕಮ್ ಆಫರ್‌ಗೆ ಸೇರಿಸಲು ಚೆನ್ನೈ ಅನ್ನು ನಮ್ಮ ಇತ್ತೀಚಿನ ನಗರವಾಗಿ ಸ್ವಾಗತಿಸುತ್ತೇವೆ,' ಎಂದು ಅವರು ಹೇಳಿದರು.

ಇತ್ತೀಚಿನ ಆರಂಭದ ಸಮಯದಲ್ಲಿ ಭರವಸೆ ನೀಡಿದಂತೆ, ಜಿಯೋ ಟ್ರೂ 5G (Jio True 5G) ಹೆಚ್ಚಿನ ನಗರಗಳಲ್ಲಿ ವಿಸ್ತರಿಸುತ್ತದೆ ಮತ್ತು ಚೆನ್ನೈ ಜಿಯೋ ವೆಲ್‌ಕಮ್ ಆಫರ್‌ಗೆ ಸೇರಿಸಲಾದ ಇತ್ತೀಚಿನ ನಗರವಾಗಿದೆ. ಚೆನ್ನೈನಲ್ಲಿರುವ ಆಹ್ವಾನಿತ ಜಿಯೋ ಬಳಕೆದಾರರು 1 ಗಿಗಾಬೈಟ್ಸ್ (Gbps) ವರೆಗೆ ಅನಿಯಮಿತ 5G ಡೇಟಾವನ್ನು ಪಡೆಯಬಹುದು ಮತ್ತು ಜಿಯೋ ಟ್ರೂ 5G (Jio True 5G) ಅನುಭವ ಪಡೆಯಬಹುದು.


Click it and Unblock the Notifications








