Jio ಧಮಾಕಾ ಆಫರ್: ಒಂದೇ ಕನೆಕ್ಷನ್ ಆದರೆ ಗ್ರಾಹಕರಿಗೆ ಎರಡು ಲಾಭ!
ಟೆಲಿಕಾಂ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿ ಗುರುತಿಸಿಕೊಂಡಿರುವ ರಿಲಯನ್ಸ್ ಜಿಯೋ ಸಂಸ್ಥೆಯು ತನ್ನ ಗ್ರಾಹಕರಿಗೆ ಜಿಯೋ ಟಿವಿ+ 2 ಇನ್ 1 (JioTV+ 2 in 1 offer) ಅನ್ನು ಪರಿಚಯಿಸಿದೆ. ಈ ಕೊಡುಗೆಯಲ್ಲಿ ಗ್ರಾಹಕರು ಈಗ ಒಂದೇ ಜಿಯೋ ಏರ್ ಫೈಬರ್ (JioAirFiber) ಕನೆಕ್ಷನ್ ಸೌಲಭ್ಯದಲ್ಲಿ ಎರಡು ಟಿವಿಗಳನ್ನು ಒಂದೇ ಸಮಯದಲ್ಲಿ ವೀಕ್ಷಿಸಬಹುದು/ಬಳಸಬಹುದು. ಈ ಯೋಜನೆಯಲ್ಲಿ ಗ್ರಾಹಕರು 800ಕ್ಕೂ ಹೆಚ್ಚು ಡಿಜಿಟಲ್ ಟಿವಿ ಚಾನೆಲ್‌ಗಳು ಮತ್ತು 13 ಒಟಿಟಿ ಆಪ್‌ಗಳ ಸೌಲಭ್ಯವನ್ನು ಪಡೆಯುತ್ತಾರೆ.
ಜಿಯೋ ಟಿವಿ ಪ್ಲಸ್ ಅಪ್ಲಿಕೇಷನ್ 10 ಭಾಷೆಗಳಲ್ಲಿ ಮತ್ತು 20 ವಿಭಾಗಗಳಲ್ಲಿ 800 ಡಿಜಿಟಲ್ ಟಿವಿ ಚಾನೆಲ್‌ಗಳಿಗೆ ಸಂಪರ್ಕವನ್ನು ಒದಗಿಸುತ್ತದೆ. ಅಷ್ಟೇ ಅಲ್ಲ, ಜತೆಗೆ ಬಳಕೆದಾರರು ಒಂದೇ ಲಾಗಿನ್‌ನಿಂದ 13 ಜನಪ್ರಿಯ ಒಟಿಟಿ ಅಪ್ಲಿಕೇಷನ್‌ಗಳನ್ನು ಬಳಸಬಹುದು. ಅಂದಹಾಗೆ ಈ ಸೇವೆಯು ಜಿಯೋ ಟಿವಿ ಪ್ಲಸ್ ಆಪ್ ಮೂಲಕ ಲಭ್ಯವಿದೆ.

ಜಿಯೋ ಟಿವಿ ಪ್ಲಸ್ (JioTV+) ಆಪ್‌ನ ಪ್ರಮುಖ ಫೀಚರ್ಸ್‌ಗಳು ಏನೆಂದರೆ, ಒಂದೇ ಸೈನ್ - ಆನ್ ಆಯ್ಕೆ, ಸ್ಮಾರ್ಟ್ ಟಿವಿ ರಿಮೋಟ್ ಹೊಂದಾಣಿಕೆ ಮತ್ತು ವೈಯಕ್ತಿಕಗೊಳಿಸಿದ ಕಂಟೆಂಟ್ ಒಳಗೊಂಡಿದೆ. ಗ್ರಾಹಕರು ಸ್ಮಾರ್ಟ್ ಫಿಲ್ಟರ್‌ಗಳನ್ನು ಬಳಸಿಕೊಂಡು ಚಾನಲ್‌ಗಳನ್ನು ಸುಲಭವಾಗಿ ಹುಡುಕಬಹುದು, ಪ್ಲೇಬ್ಯಾಕ್ ವೇಗವನ್ನು ನಿಯಂತ್ರಿಸಬಹುದು ಮತ್ತು ಈ ಹಿಂದೆ ಪ್ರಸಾರವಾದ ಕಾರ್ಯಕ್ರಮಗಳನ್ನು ವೀಕ್ಷಿಸಬಹುದು.
ಈ ಸೇವೆಯು ಎಲ್ಲ ಜಿಯೋ ಏರ್ ಫೈಬರ್ ಯೋಜನೆಗಳಲ್ಲಿ ಲಭ್ಯ ಇದೆ. ಆದರೆ ಜಿಯೋ ಫೈಬರ್ (Jio Fiber) ಪೋಸ್ಟ್‌ಪೇಯ್ಡ್‌ನಲ್ಲಿ, ಇದು 599ರೂ, 899ರೂ ಹಾಗೂ ಇದಕ್ಕಿಂತ ಅಧಿಕ ಮೊತ್ತದ ಯೋಜನೆಗಳಲ್ಲಿ ಲಭ್ಯ ಇದೆ. ಇನ್ನು ಜಿಯೋ ಫೈಬರ್ (Jio Fiber) ಪ್ರಿಪೇಯ್ಡ್‌ನಲ್ಲಿ ಇದು 999ರೂ. ಹಾಗೂ ಅದಕ್ಕಿಂತ ಹೆಚ್ಚಿನ ಮೊತ್ತದ ಯೋಜನೆಗಳಲ್ಲಿ ಲಭ್ಯ ಇದೆ.
ಜಿಯೋ ಟಿವಿ ಅಪ್ಲಿಕೇಷನ್‌ನಲ್ಲಿ ಲಭ್ಯವಿರುವ ಪ್ರಮುಖ ಚಾನೆಲ್‌ಗಳು ಮತ್ತು ಒಟಿಟಿ (OTT) ಅಪ್ಲಿಕೇಶನ್‌ಗಳಲ್ಲಿ ಜನಪ್ರಿಯ ನೆಟ್‌ವರ್ಕ್‌ಗಳಾದ ಕಲರ್ಸ್ ಟಿವಿ, ಸ್ಟಾರ್ ಪ್ಲಸ್ ಮತ್ತು ಝೀ ಟಿವಿಯನ್ನು ಒಳಗೊಂಡಿವೆ. ಇದರ ಜೊತೆಗೆ ಡಿಸ್ನಿ ಪ್ಲಸ್, ಹಾಟ್‌ಸ್ಟಾರ್, ಸೋನಿ ಲಿವ್ ಮತ್ತು ಜೀ ಫೈವ್‌ನಂತಹ ಒಟಿಟಿ ಪ್ಲಾಟ್‌ಫಾರ್ಮ್‌ಗಳು ಸಹ ದೊರೆಯುತ್ತವೆ.
ಈ ಯೋಜನೆಯ ಪ್ರಯೋಜನವನ್ನು ನೀವು ಕೂಡ ಪಡೆಯುವುದಕ್ಕಾಗಿ ನಿಮ್ಮ ಸ್ಮಾರ್ಟ್ ಟಿವಿಯ ಆಪ್ ಸ್ಟೋರ್‌ನಿಂದ ಜಿಯೋ ಟಿವಿ ಪ್ಲಸ್ (Jio TV Plus) ಅಪ್ಲಿಕೇಷನ್ ಅನ್ನು ಡೌನ್‌ಲೋಡ್ ಮಾಡಿ, ನಿಮ್ಮ ಜಿಯೋ ಫೈಬರ್ ಅಥವಾ ಜಿಯೋ ಏರ್ ಫೈಬರ್ (JioAirFiber) ನೋಂದಾಯಿತ ಮೊಬೈಲ್ ನಂಬರ್ ಮೂಲಕ ಲಾಗಿನ್ ಮಾಡಿ ಮತ್ತು ದೊಡ್ಡ ಮಟ್ಟದ ಕಂಟೆಂಟ್ ಲೈಬ್ರರಿಯನ್ನು ತಕ್ಷಣವೇ ಆನಂದಿಸಲು ಪ್ರಾರಂಭಿಸಿ.
ಈ ಆಫರ್‌ನೊಂದಿಗೆ, ಜಿಯೋ ಟಿವಿ ವೇಗವಾಗಿ ಬೆಳೆಯುತ್ತಿರುವ ಭಾರತದ ಅತಿದೊಡ್ಡ ಕಂಟೆಂಟ್ ಅಗ್ರಿಗೇಟರ್ ಪ್ಲಾಟ್‌ಫಾರ್ಮ್ ಆಗುತ್ತಿದೆ, ಯಾವುದೇ ಹೆಚ್ಚುವರಿ ಶುಲ್ಕಗಳು ಅಥವಾ ಸಂಪರ್ಕವಿಲ್ಲದೆ ಬಹು ಪ್ಲಾಟ್‌ಫಾರ್ಮ್‌ಗಳಲ್ಲಿ ಮನರಂಜನೆಗೆ ಯಾವುದೇ ಅಡೆತಡೆ ಇಲ್ಲದ ಕನೆಕ್ಷನ್ ಅನ್ನು ಇದು ಒದಗಿಸುತ್ತದೆ.
ಇನ್ನು ಜಿಯೋ ಏರ್ ಫೈಬರ್ 1199ರೂ. ಪ್ಲ್ಯಾನ್ ಜಿಯೋದ ಈ ಯೋಜನೆಯಲ್ಲಿ 100 Mbps ವೇಗದ ಇಂಟರ್ನೆಟ್ ಸೇವೆ ಪಡೆದುಕೊಳ್ಳಬಹುದಾಗಿದೆ. ಇದರಲ್ಲಿ 550+ ಡಿಜಿಟಲ್ ಚಾನೆಲ್‌ಗಳು ಸೇರಿದಂತೆ ನೆಟ್‌ಫ್ಲಿಕ್ಸ್, ಪ್ರೈಮ್ ವಿಡಿಯೋ, ಡಿಸ್ನಿ+ ಹಾಟ್‌ಸ್ಟಾರ್, ಜಿಯೋ ಸಿನಿಮಾ ಪ್ರೀಮಿಯಂ ಅಲ್ಲದೇ ಇನ್ನೂ ಹೆಚ್ಚಿನ ಓಟಿಟಿ ಆಪ್‌ಗಳಿಗೆ ಈ ಮೂಲಕ ಉಚಿತ ಚಂದಾದಾರಿಕೆ ಲಭ್ಯ.


Click it and Unblock the Notifications








