ಜಿಯೋ ಗ್ರಾಹಕರೇ ಗೊಂದಲ ಬೇಡ: ರೂ.399ರ ಪ್ಲಾನ್ ಬೆಸ್ಟ್..!!!

Written By:

ರಿಲಯನ್ಸ್ ಜಿಯೋ ತನ್ನ ಬಳಕೆದಾರರಿಗೆ ಹೊಸದೊಂದು ಆಫರ್ ಲಾಂಚ್ ಮಾಡಿದೆ. ಧನ್ ಧನಾ ಧನ್ ಆಫರ್ ವ್ಯಾಲಿಡಿಟಿ ಮುಗಿದ ಕಾರಣ ಗ್ರಾಹಕರಿಗೆ ಮತ್ತಷ್ಟು ಲಾಭವನ್ನು ಮಾಡಿಕೊಡುವ ಸಲುವಾಗಿ ಹಿಂದಿನ ಪ್ಲಾನ್ ಗಳಿಗೆ ಸ್ಪಲ್ಪ ಬಣ್ಣ ಬಳಿದು ಹೊಸ ಪ್ಲಾನ್ ನೀಡಲು ಮುಂದಾಗಿದೆ.

ಜಿಯೋ ಗ್ರಾಹಕರೇ ಗೊಂದಲ ಬೇಡ: ರೂ.399ರ ಪ್ಲಾನ್ ಬೆಸ್ಟ್..!!!

ಓದಿರಿ: ಜಿಯೋ ಆಧಾರ್ ಲೀಕ್ ಆಗಿದ್ದು ನಿಜ: ಬಂಧಿತನಿಂದ ಹೊರ ಬಿತ್ತು ಭಾರಿ ಸತ್ಯ..!!

ಈ ಹಿಂದೆ ರೂ.309ಕ್ಕೆ ನೀಡುತ್ತಿದ್ದ ಕೊಡುಗೆಗಳನ್ನು ಸಲ್ಪ ಬೆಲೆ ಏರಿಕೆ ಮಾಡಿ ರೂ.399ಕ್ಕೆ ನೀಡುತ್ತಿದೆ. ಈ ಹಿನ್ನಲೆಯಲ್ಲಿ ಈ ಎರಡು ಪ್ಲಾನ್ ಗಳ ನಡುವಿನ ವ್ಯತ್ಯಾಸವೇನು, ಇರುವ ಆಫರ್ ಗಳಲ್ಲಿ ರೂ.399 ಯಾಕೆ ಬೆಸ್ಟ್ ಎಂಬುದನ್ನು ಈ ಮುಂದಿನಂತೆ ತಿಳಿದುಕೊಳ್ಳಬಹುದಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಮೊದಲು ಆಫರ್ ಏನೀತ್ತು..?

ಮೊದಲು ಆಫರ್ ಏನೀತ್ತು..?

ಈ ಹಿಂದೆ ಧನ್ ಧನಾ ಧನ್ ಆಫರ್ ಲಾಂಚ್ ಆದ ಸಂದರ್ಭದಲ್ಲಿ ರೂ.309 ಮತ್ತು ರೂ.509 ಆಫರ್ ಘೋಷಣೆ ಮಾಡಲಾಗಿತ್ತು. ಇದರಲ್ಲಿ ಗ್ರಾಹಕರು ಪ್ರತಿ ನಿತ್ಯ 1GB ಹಾಗೂ 2GB ಡೇಟಾವನ್ನು ಪಡೆಯುತ್ತಿದ್ದರೂ. ಅಲ್ಲದೇ ಉಚಿತ ಕರೆ ಮಾಡುವ ಅವಕಾಶ ಮತ್ತು ಜಿಯೋ ಬೇರೆ ಸೇವೆಗಳನ್ನು ಉಚಿತವಾಗಿ ಪಡೆದುಕೊಳ್ಳಬಹುದಾಗಿತ್ತು. ಈ ಆಫರ್ ಇದೇ ಜುಲೈನಲ್ಲಿ ಅಂತ್ಯ ವಾಗುತ್ತಿತ್ತು.

ಹೊಸ ಆಫರ್ ನಲ್ಲಿ ಏನೀದೆ..?

ಹೊಸ ಆಫರ್ ನಲ್ಲಿ ಏನೀದೆ..?

ಜಿಯೋ ತನ್ನ ಗ್ರಾಹಕರಿಗೆ ಈ ಬಾರಿ ಹೆಚ್ಚಿನ ಆಯ್ಕೆಗಳನ್ನು ನೀಡಿದ್ದು, ರೂ. 399ಕ್ಕೆ 84 ದಿನಗಳ ವ್ಯಾಲಿಡಿಟಿಯನ್ನು ನೀಡಿದ್ದು, ಪ್ರತಿ ನಿತ್ಯ 1GB ಡೇಟಾವನ್ನು ನೀಡಲು ಮುಂದಾಗಿದೆ, ಅಲ್ಲದೇ ಉಚಿತ ಕರೆ ಮಾಡುವ ಅವಕಾಶ ಮತ್ತು ಜಿಯೋ ಬೇರೆ ಸೇವೆಗಳನ್ನು ಉಚಿತವಾಗಿ ಪಡೆದುಕೊಳ್ಳಬಹುದಾಗಿದೆ. ಜುಲೈ 11 ರಿಂದ ಆಫರ್ ಜಾರಿಯಲ್ಲಿದರಲಿದೆ.

ರೂ.349 ಪ್ಲಾನ್ ಸಹ ಇದೆ:

ರೂ.349 ಪ್ಲಾನ್ ಸಹ ಇದೆ:

ಈ ಬಾರಿ ಜಿಯೋ ರೂ.349 ಪ್ಲಾನ್ ಪರಿಚಯ ಮಾಡಿದ್ದು, 56 ದಿನಗಳ ವ್ಯಾಲಿಡಿಟಿಯನ್ನು ಹೊಂದಿದ್ದು, ಒಟ್ಟು 20GB ಡೇಟಾ ಬಳಕೆಗೆ ದೊರೆಯಲಿದೆ. ಆದರೆ ಇದರಲ್ಲಿ ಡೇಟಾ ಬಳಕೆಗೆ ಯಾವುದೇ ಮಿತಿಯನ್ನು ಹೇರಲಾಗಿಲ್ಲ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Read more about:
English summary
jio offering lesser validity and data on a revamped Rs 309 plan and dishing out a bumper 84GB for Rs 399. to know more visit kananda.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot