Subscribe to Gizbot

ಜಿಯೋ ಆಧಾರ್ ಲೀಕ್ ಆಗಿದ್ದು ನಿಜ: ಬಂಧಿತನಿಂದ ಹೊರ ಬಿತ್ತು ಭಾರಿ ಸತ್ಯ..!!

Written By:

ದೇಶದ ಅತೀ ದೊಡ್ಡ ಮಾಹಿತಿ ಸೋರಿಕೆ ಪ್ರಕರಣ ಎಂದೇ ಬಿಂಬಿತವಾಗಿದ್ದ ರಿಲಯನ್ಸ್ ಮಾಲೀಕತ್ವದ ಜಿಯೋ ಗ್ರಾಹಕರ ಮಾಹಿತಿ ಸೋರಿಕೆಗೆ ಕಾರಣವಾಗಿದ್ದ ವ್ಯಕ್ತಿಯೊರ್ವನ್ನು ಪೊಲೀಸರು ಬಂಧಿಸಿದ್ದಾರೆ. 120 ಮಿಲಿಯನ್ ಜಿಯೋ ಬಳಕೆದಾರರ ಆಧಾರ್ ಮಾಹಿತಿಗಳು ಲೀಕ್ ಆಗಿತ್ತು ಎಂದು ಟೆಕ್ ವೆಬ್ ಸೈಟ್‌ಗಳು ವರದಿ ಮಾಡಿದ್ದವು.

ಜಿಯೋ ಆಧಾರ್ ಲೀಕ್ ಆಗಿದ್ದು ನಿಜ: ಬಂಧಿತನಿಂದ ಹೊರ ಬಿತ್ತು ಭಾರಿ ಸತ್ಯ..!!

ಓದಿರಿ: ಜಿಯೋಗೆ ರಿಚಾರ್ಜ್ ಮಾಡಿಸುವ ಮುನ್ನ ತಪ್ಪದೇ ಈ ಸ್ಟೋರಿ ಓದಿ...!

ಆದರೆ ಈ ಬಗ್ಗೆ ಹೇಳಿಕೆ ನೀಡಿದ್ದ ಜಿಯೋ ಯಾವುದೇ ಮಾಹಿತಿಯೂ ಲೀಕ್ ಆಗಿಲ್ಲ. ಗ್ರಾಹಕರ ಆಧಾರ್ ಮಾಹಿತಿಗಳು ನಮ್ಮ ಬಳಿ ಭದ್ರವಾಗಿದೆ ಎಂದು ತಿಳಿಸಿತ್ತು. ಸಿಮ್ ಕಾರ್ಡ್ ನೀಡುವ ಮೊದಲು ಗ್ರಾಹಕರಿಂದ ಸ್ವೀಕರಿಸಿದ್ದ ಬಯೋಮೆಟ್ರಿಕ್ ಮತ್ತು ಆಧಾರ್ ಮಾಹಿತಿಯನ್ನು ಸುಕ್ಷಿತವಾಗಿ ಇರಿಸಲಾಗಿದೆ ಎಂದು ತಿಳಿಸಿತ್ತು.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ರಾಜಸ್ಥಾನ ಮೂಲದ ವ್ಯಕ್ತಿಯ ಬಂಧನ:

ರಾಜಸ್ಥಾನ ಮೂಲದ ವ್ಯಕ್ತಿಯ ಬಂಧನ:

ರಿಲಯನ್ಸ್ ಜಿಯೋದಿಂದ ಆಧಾರ್ ಮಾಹಿತಿಗಳಿಗೆ ಕನ್ನ ಹಾಕಿದ್ದ ವ್ಯಕ್ತಿಯೊಬ್ಬನ್ನು ಪೊಲೀಸರು ಬಂಧಿಸಿದ್ದಾರೆ. ರಾಜಸ್ಥಾನ ಮೂಲದ ಇಮ್ರಾನ್ ಚಿಂಪಾ ಬಂಧಿತ ಆರೋಪಿಯಾಗಿದ್ದು, ಈತ ಜಿಯೋ ಮಾಹಿತಿಗಳನ್ನು ಸಂಗ್ರಹಿಸಿ ವೈಬ್ ಸೈಟ್ವೊಂದರಲ್ಲಿ ಲೀಕ್ ಮಾಡಿದ್ದ ಎನ್ನಲಾಗಿದೆ.

ಬಂಧಿತ ಪ್ರಳಯಾಂತಕ ಟೆಕ್ಕಿ:

ಬಂಧಿತ ಪ್ರಳಯಾಂತಕ ಟೆಕ್ಕಿ:

ಜಿಯೋ ದಿಂದ ಮಾಹಿತಿಯನ್ನು ಲಪಟಾಯಿಸಿದ್ದ ವ್ಯಕ್ತಿಯೂ 24 ವರ್ಷದವನಾಗಿದ್ದು, ಟೆಕ್ನಾಲಜಿ ವಿಷಯದಲ್ಲಿ ಪರಿಣಿತಿಯನ್ನ ಪಡೆದುಕೊಂಡಿದ್ದ ಎಂದು ಫೆನಾಷಿಯಲ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.

ತನ್ನದೇ ಸರ್ಚ್ ಇಂಜಿನ್ ನಿರ್ಮಾಣಕ್ಕಾಗಿ ಈ ಕಾರ್ಯ:

ತನ್ನದೇ ಸರ್ಚ್ ಇಂಜಿನ್ ನಿರ್ಮಾಣಕ್ಕಾಗಿ ಈ ಕಾರ್ಯ:

ಬಂಧಿತ ಟೆಕ್ಕಿಯನ್ನು ಮಹಾರಾಷ್ಟ್ರದಲ್ಲಿ ವಿಚಾರಣೆಗೆ ಗುರಿಪಡಿಸಲಾಗಿದ್ದು, ಈ ವೇಳೆಯಲ್ಲಿ ಆತ ತನ್ನೇ ಸರ್ಚ್ ಇಂಜಿನ್ ಆರಂಭಿಸಬೇಕು ಎನ್ನುವ ಕಾರಣಕ್ಕೆ ಈ ಕಾರ್ಯಕ್ಕೆ ಕೈ ಹಾಕಿದ್ದಾಗಿ ಬಾಯಿಬಿಟ್ಟಿದ್ದಾನೆ.

ಇನ್ನು ಪ್ಲಾನ್ ಇತ್ತು:

ಇನ್ನು ಪ್ಲಾನ್ ಇತ್ತು:

ಇದಲ್ಲದೇ ಎಲ್ಲಾ ಟೆಲಿಕಾಂ ಕಂಪನಿಗಳ ಗ್ರಾಹಕರ ಮಾಹಿತಿಯನ್ನು ಕದಿಯುವ ಪ್ರಯತ್ನಕ್ಕೆ ಈತ ಮುಂದಾಗಲು ಯೋಜನೆಯನ್ನು ರೂಪಿಸಿದ್ದ ಎನ್ನಲಾಗಿದೆ. ಅಷ್ಟರಲ್ಲಿ ಮಹಾರಾಷ್ಟ್ರ ಸೈಬರ್ ಪೊಲೀಸರ ಬಲೆಗೆ ಬಿದ್ದಿದ್ದಾನೆ.

ಯಾವ ಮಾಹಿತಿ ಲೀಕ್ ಆಗಿತ್ತು:

ಯಾವ ಮಾಹಿತಿ ಲೀಕ್ ಆಗಿತ್ತು:

ಜಿಯೋ ಫೋನ್ ನಂಬರ್ ನಿಂದ ಹಿಡಿದು ನಿಮ್ಮ ಮೊದಲನೆ ಹೆಸರು, ಕೊನೆಯ ಹೆಸರು, ವಿಳಾಸಗಳು ಲೀಕ್ ಆಗಿತ್ತು. ಆದರೆ ಕೆಲವು ಗಂಟೆಗಳಲ್ಲೇ ವೈಬ್ ಸೈಟನ್ನು ಬಂದ್ ಮಾಡಲಾಗಿತ್ತು.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Read more about:
English summary
Reliance Jio data breach: A man was arrested from Rajasthan for his alleged involvement in a case of breach of customer data from Reliance Jio. to know more visit kananda.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot