Home
ಸುದ್ದಿಜಾಲ

ಹೊಸ ದಾಖಲೆ ಬರೆದ ಜಿಯೋ!..ಗ್ರಾಹಕರು ಎಷ್ಟು ಡೇಟಾ ಬಳಿಕೆ ಮಾಡಿದ್ದಾರೆ ಗೊತ್ತಾ!

ಜಿಯೋ ಬಳಕೆದಾರರು ಒಂದು ತಿಂಗಳಲ್ಲಿ 10 ಎಕ್ಸಾಬೈಟ್ ಅಥವಾ 10 ಬಿಲಿಯನ್ (ಒಂದು ಬಿಲಿಯನ್ ಅಂದರೆ ನೂರು ಕೋಟಿ) ಜಿಬಿ ಡೇಟಾವನ್ನು ಬಳಸಿದ್ದಾರೆ. ಈ ಸಂಖ್ಯೆಯು ಈ ರೀತಿಯ ಬಳಕೆ ಮಾದರಿಯಲ್ಲಿ ಅತ್ಯಧಿಕವಾಗಿದೆ. 2016 ನೇ ಇಸವಿಯಲ್ಲಿ ಜಿಯೋ ಟೆಲಿಕಾಂ ಮಾರುಕಟ್ಟೆ ಪ್ರವೇಶಿಸಿದಾಗ ಭಾರತದಲ್ಲಿ ಬಳಕೆ 4.6 ಎಕ್ಸಾಬೈಟ್ ಆಗಿತ್ತು ಮತ್ತು ಅದು ಕೂಡ ಒಂದು ಇಡೀ ವರ್ಷದಲ್ಲಿ ಆಗುತ್ತಿದ್ದ ಬಳಕೆ!

ಒಂದೇ ಟೆಲಿಕಾಂ ಕಂಪನಿಯ ಬಳಕೆಯು ಒಂದು ತಿಂಗಳಲ್ಲಿ 10 ಎಕ್ಸಾಬೈಟ್‌ಗಳನ್ನು ದಾಟಿದ ಮೊದಲ ನಿದರ್ಶನ ಇದಾಗಿದೆ. 2023 ಮಾರ್ಚ್ ಗೆ ಕೊನೆಗೊಳ್ಳುವ ತ್ರೈಮಾಸಿಕದಲ್ಲಿ ಡೇಟಾದ ಒಟ್ಟು ಬಳಕೆ 30.3 ಎಕ್ಸಾಬೈಟ್ ಆಗಿತ್ತು. ರಿಲಯನ್ಸ್ ಇಂಡಸ್ಟ್ರೀಸ್ ತನ್ನ ತ್ರೈಮಾಸಿಕ ಫಲಿತಾಂಶಗಳೊಂದಿಗೆ ಈ ಮಾಹಿತಿಯನ್ನು ಹಂಚಿಕೊಂಡಿದೆ.

ಹೊಸ ದಾಖಲೆ ಬರೆದ ಜಿಯೋ!..ಗ್ರಾಹಕರು ಎಷ್ಟು ಡೇಟಾ ಬಳಿಕೆ ಮಾಡಿದ್ದಾರೆ ಗೊತ್ತಾ!

ಡೇಟಾ ಬಳಕೆ ಹೆಚ್ಚಳದಲ್ಲಿ ಜಿಯೋ ಟ್ರೂ 5ಜಿ ನಿರ್ಣಾಯಕ ಪಾತ್ರ ವಹಿಸಿದೆ. ಸರಾಸರಿ ಬಳಕೆದಾರರು ಪ್ರತಿ ತಿಂಗಳು 23.1 GB ಡೇಟಾವನ್ನು ಬಳಸುತ್ತಿದ್ದಾರೆ. ಕೇವಲ 2 ವರ್ಷಗಳ ಹಿಂದೆ ಈ ಅಂಕಿ- ಅಂಶವು 13.3 ಜಿಬಿ ಆಗಿತ್ತು. ಹಾಗಾಗಿ, ಕೇವಲ 2 ವರ್ಷಗಳಲ್ಲಿ, ಸರಾಸರಿ ಬಳಕೆದಾರರು ಒಂದು ತಿಂಗಳಲ್ಲಿ 10ಜಿಬಿ ಹೆಚ್ಚು ಡೇಟಾ ಬಳಸುತ್ತಿದ್ದಾರೆ. ಕುತೂಹಲಕಾರಿಯಾಗಿ, ಉದ್ಯಮದಲ್ಲಿನ ಅದರ ಪ್ರತಿಸ್ಪರ್ಧಿಗಳಿಗೆ ಹೋಲಿಸಿದರೆ ಜಿಯೋ ನೆಟ್‌ವರ್ಕ್‌ನಲ್ಲಿ ಬಳಕೆಯ ಸರಾಸರಿ ಹೆಚ್ಚಾಗಿದೆ.

ಹೊಸ ದಾಖಲೆ ಬರೆದ ಜಿಯೋ!..ಗ್ರಾಹಕರು ಎಷ್ಟು ಡೇಟಾ ಬಳಿಕೆ ಮಾಡಿದ್ದಾರೆ ಗೊತ್ತಾ!

ರಿಲಯನ್ಸ್ ಇಂಡಸ್ಟ್ರೀಸ್‌ನ ಇತ್ತೀಚಿನ ತ್ರೈಮಾಸಿಕ ಫಲಿತಾಂಶಗಳಲ್ಲಿ ಹಂಚಿಕೊಂಡ ಅಂಕಿ- ಅಂಶಗಳ ಪ್ರಕಾರ, ಜಿಯೋ ರಾಷ್ಟ್ರದಾದ್ಯಂತ 60,000 ಸೈಟ್‌ಗಳಲ್ಲಿ 3,50,000 ಕ್ಕೂ ಹೆಚ್ಚು 5ಜಿ ಸೆಲ್‌ಗಳನ್ನು ಸ್ಥಾಪಿಸಿದೆ. ಇಲ್ಲಿಯವರೆಗೆ, ಜಿಯೋ ಟ್ರೂ 5ಜಿ ಭಾರತದಾದ್ಯಂತ 2,300 ಪಟ್ಟಣಗಳು ಮತ್ತು ನಗರಗಳನ್ನು ಒಳಗೊಂಡಿದೆ. ಇದು ವಿಶ್ವದ ಅತ್ಯಂತ ವೇಗದ 5ಜಿ ಜಾರಿ ‌ಆಗಿದೆ. 2023ರ ಅಂತ್ಯದ ವೇಳೆಗೆ ಭಾರತದಾದ್ಯಂತ 5ಜಿ ಸೇವೆಗಳನ್ನು ವಿಸ್ತರಿಸುವುದಾಗಿ ಕಂಪನಿ ಭರವಸೆ ನೀಡಿದೆ.

5ಜಿ ಜಾರಿಯ ‌ಜೊತೆಗೆ, ಜಿಯೋ ಏರ್‌ಫೈಬರ್ ಅನ್ನು ಪ್ರಾರಂಭಿಸಲು ಸಹ ಸಿದ್ಧವಾಗಿದೆ. ಇದು ಮುಂದಿನ ಕೆಲವು ತಿಂಗಳಲ್ಲಿ ನಿರೀಕ್ಷಿಸಲಾಗಿದೆ. ಫೈಬರ್ ಮತ್ತು ಏರ್‌ಫೈಬರ್‌ನೊಂದಿಗೆ 100 ಮಿಲಿಯನ್ ಮನೆಗಳನ್ನು ಕವರ್ ಮಾಡುವ ಗುರಿಯನ್ನು ಕಂಪನಿ ಹೊಂದಿದೆ.

ರಿಲಯನ್ಸ್ ಫಲಿತಾಂಶಗಳು ಇನ್ನೂ ಕೆಲವು ಆಸಕ್ತಿದಾಯಕ ಡೇಟಾವನ್ನು ಬಹಿರಂಗಪಡಿಸಿವೆ. ಜಿಯೋದ ಪ್ರತಿ ಬಳಕೆದಾರರಿಗೆ ಸರಾಸರಿ ಆದಾಯ (ARPU) ತಿಂಗಳಿಗೆ 178.8 ರೂ. ಹೆಚ್ಚಿದೆ. ಬಳಕೆದಾರರು ಪ್ರತಿದಿನ 1,459 ಕೋಟಿ ಧ್ವನಿ ನಿಮಿಷಗಳನ್ನು ಬಳಸುತ್ತಿದ್ದಾರೆ. ಇದರರ್ಥ ಸರಾಸರಿ ಬಳಕೆದಾರರು ಪ್ರತಿ ತಿಂಗಳು 1,003 ನಿಮಿಷಗಳ ಕಾಲ ಕರೆ ಮಾಡುತ್ತಿದ್ದಾರೆ.

ಹೊಸ ದಾಖಲೆ ಬರೆದ ಜಿಯೋ!..ಗ್ರಾಹಕರು ಎಷ್ಟು ಡೇಟಾ ಬಳಿಕೆ ಮಾಡಿದ್ದಾರೆ ಗೊತ್ತಾ!

ಜಿಯೋ 2999ರೂ. ಯೋಜನೆ ಪ್ರಯೋಜನ : ಜಿಯೋ ಟೆಲಿಕಾಂನ 2999ರೂ. ಪ್ರೀಪೇಯ್ಡ್‌ ಪ್ಲ್ಯಾನ್ ವಾರ್ಷಿಕ ಅವಧಿಯ ಯೋಜನೆ ಆಗಿದ್ದು, 365 ದಿನಗಳ ವ್ಯಾಲಿಡಿಟಿ ಅವಧಿ ಯನ್ನು ಪಡೆದಿದೆ. ಆದ್ರೆ ಈಗ ಹೆಚ್ಚುವರಿಯಾಗಿ 23 ದಿನಗಳನ್ನು ನೀಡಿದ್ದು, ಒಟ್ಟು 388 ದಿನಗಳ ವ್ಯಾಲಿಡಿಟಿ ದೊರೆಯುತ್ತದೆ. ಪ್ರತಿದಿನ 2.5 GB ಡೇಟಾ ಪ್ರಯೋಜನಗಳು ಗ್ರಾಹಕರಿಗೆ ಲಭ್ಯವಾಗಲಿವೆ. ಹಾಗೆಯೇ ಅನಿಯಮಿತ ಉಚಿತ ವಾಯಿಸ್ ಕರೆಗಳ ಸೌಲಭ್ಯ. ಪ್ರತಿದಿನ 100 ಎಸ್ಎಮ್ಎಸ್ ಪ್ರಯೋಜನ ಸಹ ದೊರೆಯುತ್ತದೆ.

ಜಿಯೋ 2023ರೂ. ಯೋಜನೆ ಪ್ರಯೋಜನ : ರಿಲಾಯನ್ಸ್ ಜಿಯೋ 2023ರೂ. ಪ್ಲ್ಯಾನ್ ಒಟ್ಟು 252 ದಿನಗಳ ವ್ಯಾಲಿಡಿಟಿ ಅವಧಿಯನ್ನು ಪಡೆದಿದೆ. ಈ ಅವಧಿಯಲ್ಲಿ ಪ್ರತಿದಿನ 2.5GB ಡೇಟಾ ಪ್ರಯೋಜನ ಲಭ್ಯವಾಗಲಿದ್ದು, ಪೂರ್ಣ ವ್ಯಾಲಿಡಿಟಿ ಅವಧಿಗೆ 630 GB ಡೇಟಾ ಸಿಗಲಿದೆ. ವೇಗದಲ್ಲಿ ಇಂಟರ್ನೆಟ್ ಇರಲಿದೆ. ಹಾಗೆಯೇ ಅನಿಯಮಿತ ಜಿಯೋ ಟು ಜಿಯೋ ಕರೆಗಳು, ಜಿಯೋ ದಿಂದ ಇತರೆ ನೆಟವರ್ಕ್ ಕರೆಗಳಿಗೂ ಅನಿಯಮಿತ ವಾಯಿಸ್‌ ಕರೆ ಲಭ್ಯ. ಇದರೊಂದಿಗೆ 100 ಎಸ್‌ಎಮ್‌ಎಸ್‌ ಸೌಲಭ್ಯ ಸಹ ಲಭ್ಯವಾಗಲಿದೆ ಜೊತೆಗೆ ಜಿಯೋ ಆಪ್ ಸೇವೆಗಳು ಸಹ ಸಿಗುತ್ತವೆ.

Best Mobiles in India

English summary
Jio Users Set a New Record, Use 10 Exabyte Data in a month. details in kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+