Home
ಸುದ್ದಿಜಾಲ

ಜಿಯೋ ಗ್ರಾಹಕರಿಗೆ ಕಡಿಮೆ ಬೆಲೆಯಲ್ಲಿ ಹೆಚ್ಚಿನ ಪ್ರಯೋಜನ ನೀಡುವ ಪ್ಲ್ಯಾನ್‌ಗಳು ಇವು!

ದೇಶದ ಟೆಲಿಕಾಂ ಕ್ಷೇತ್ರದಲ್ಲಿ ಮುಂಚೂಣಿಯ ಖಾಸಗಿ ಟೆಲಿಕಾಂ ಕಂಪನಿ ಎಂದೇ ಗುರುತಿಸಿಕೊಂಡಿರುವ ರಿಲಯನ್ಸ್‌ ಜಿಯೋ (Jio) ಕೆಲವು ಆಕರ್ಷಕ ರೀಚಾರ್ಜ್‌ ಪ್ಲ್ಯಾನ್‌ಗಳ ಮೂಲಕ ಗಮನ ಸೆಳದಿದೆ. ಜಿಯೋ ಸಂಸ್ಥೆಯ ಪ್ರೀಪೇಯ್ಡ್‌ ಪ್ಲ್ಯಾನ್‌ಗಳ ಲಿಸ್ಟ್‌ನಲ್ಲಿ ಕಡಿಮೆ ಬೆಲೆ ಹಾಗೂ ದುಬಾರಿ ಬೆಲೆಯ ಪ್ಲ್ಯಾನ್‌ಗಳು ಸಹ ಸೇರಿವೆ. ಅಲ್ಲದೇ ಗ್ರಾಹಕರ ಜೇಬಿಗೆ ಹೊರೆಯಾಗದ ಕೆಲವು ವ್ಯಾಲ್ಯೂ (Value) ರೀಚಾರ್ಜ್‌ ಯೋಜನೆಗಳು ಕೂಡಾ ಇವೆ. ಇವು ಅನೇಕ ಗ್ರಾಹಕರಿಗೆ ಅನುಕೂಲಕರ ಎನಿಸಿವೆ.

ಹೌದು, ಜಿಯೋ ಟೆಲಿಕಾಂ ಭಿನ್ನ ಶ್ರೇಣಿಯ ರೀಚಾರ್ಜ್‌ ಪ್ಲ್ಯಾನ್‌ಗಳ ಆಯ್ಕೆ ಹೊಂದಿದೆ. ಅವುಗಳಲ್ಲಿ ಅಧಿಕ ಡೇಟಾ ಪ್ರಯೋಜನದ ಯೋಜನೆಗಳು ಸೇರಿವೆ ಅಲ್ಲದೇ ಅಧಿಕ ವ್ಯಾಲಿಡಿಟಿಯ ಪ್ಲ್ಯಾನ್‌ಗಳ ಸಹ ಇವೆ. ಸಂಸ್ಥೆಯ ಬಹುತೇಕ ರೀಚಾರ್ಜ್‌ ಪ್ಲ್ಯಾನ್‌ಗಳು ದೈನಂದಿನ ಡೇಟಾ, ಎಸ್‌ಎಮ್‌ಎಸ್‌ ಹಾಗೂ ಬೊಂಬಾಟ್‌ ವ್ಯಾಲಿಡಿಟಿ ಸೌಲಭ್ಯ ಒಳಗೊಂಡಿವೆ. ಅದಾಗ್ಯೂ, ಅನೇಕರಿಗೆ ಜಿಯೋ ವ್ಯಾಲ್ಯೂ ಪ್ಲ್ಯಾನ್‌ಗಳು ಬೆಸ್ಟ್‌ ಎನಿಸಿವೆ. ಹಾಗಾದರೇ ಜಿಯೋ ಸಂಸ್ಥೆಯ ವ್ಯಾಲ್ಯೂ (Value) ರೀಚಾರ್ಜ್‌ ಪ್ಲ್ಯಾನ್‌ಗಳ ಪ್ರಯೋಜನಗಳ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಜಿಯೋ ಗ್ರಾಹಕರಿಗೆ ಕಡಿಮೆ ಬೆಲೆಯಲ್ಲಿ ಹೆಚ್ಚಿನ ಪ್ರಯೋಜನ ನೀಡುವ ಪ್ಲ್ಯಾನ್‌ಗಳು ಇವು

ಜಿಯೋ ಟೆಲಿಕಾಂ 479ರೂ. ರೀಚಾರ್ಜ್‌ ಯೋಜನೆ

ಜಿಯೋ ಸಂಸ್ಥೆಯ 479 ರೂ. ಪ್ರೀಪೇಯ್ಡ್‌ ರೀಚಾರ್ಜ್‌ ಯೋಜನೆಯು ವ್ಯಾಲ್ಯೂ ಪ್ಲ್ಯಾನ್‌ ಆಗಿ ಕಾಣಿಸಿಕೊಂಡಿದೆ. ಇನ್ನು ಈ ಯೋಜನೆಯು ಒಟ್ಟು 84 ದಿನಗಳ ವ್ಯಾಲಿಡಿಟಿ ( validity ) ಸೌಲಭ್ಯ ಪಡೆದಿದ್ದು, ಈ ಅವಧಿಯಲ್ಲಿ ಗ್ರಾಹಕರಿಗೆ ಒಟ್ಟು 6 GB ಡೇಟಾ ಪ್ರಯೋಜನ ನೀಡುತ್ತದೆ. ಇದರ ಜೊತೆಗೆ ಅನಿಯಮಿತ ವಾಯಿಸ್‌ ಕರೆಯ ಸೌಲಭ್ಯ ಸಹ ಗ್ರಾಹಕರಿಗೆ ಸಿಗಲಿದೆ. ಅಲ್ಲದೇ ಪ್ರತಿದಿನ 100 ಎಸ್‌ಎಮ್‌ಎಸ್‌ ಸೌಲಭ್ಯ ಕೂಡಾ ದೊರೆಯುತ್ತದೆ. ಇನ್ನು ಈ ರೀಚಾರ್ಜ್‌ ಯೋಜನೆಯಲ್ಲಿ ಹೆಚ್ಚುವರಿಯಾಗಿ ಜಿಯೋ ಟಿವಿ, ಜಿಯೋ ಸಿನಿಮಾ ಪ್ರಯೋಜನ ಸಹ ಗ್ರಾಹಕರಿಗೆ ಲಭ್ಯ.

ಜಿಯೋ ಟೆಲಿಕಾಂ 1899ರೂ. ರೀಚಾರ್ಜ್‌ ಯೋಜನೆ

ಜಿಯೋ ಸಂಸ್ಥೆಯ 1899 ರೂ. ಪ್ರೀಪೇಯ್ಡ್‌ ರೀಚಾರ್ಜ್‌ ಯೋಜನೆಯು ವ್ಯಾಲ್ಯೂ ಪ್ಲ್ಯಾನ್‌ ಆಗಿ ಕಾಣಿಸಿಕೊಂಡಿದೆ. ಇನ್ನು ಈ ಯೋಜನೆಯು ಒಟ್ಟು 336 ದಿನಗಳ ವ್ಯಾಲಿಡಿಟಿ (validity) ಸೌಲಭ್ಯ ಪಡೆದಿದ್ದು, ಈ ಪ್ಲ್ಯಾನಿನಲ್ಲಿ ಗ್ರಾಹಕರಿಗೆ ಪೂರ್ಣ ವ್ಯಾಲಿಡಿಟಿ ಅವಧಿಯಲ್ಲಿ ಒಟ್ಟು 24 GB ಡೇಟಾ ಪ್ರಯೋಜನ ದೊರೆಯುತ್ತದೆ. ಇದರ ಜೊತೆಗೆ ಅನಿಯಮಿತ ವಾಯಿಸ್‌ ಕರೆಯ ಸೌಲಭ್ಯ ಸಹ ಗ್ರಾಹಕರಿಗೆ ಸಿಗಲಿದೆ. ಅಲ್ಲದೇ ಪ್ರತಿದಿನ 100 ಎಸ್‌ಎಮ್‌ಎಸ್‌ ಸೌಲಭ್ಯ ಕೂಡಾ ದೊರೆಯುತ್ತದೆ. ಇನ್ನು ಈ ರೀಚಾರ್ಜ್‌ ಯೋಜನೆಯಲ್ಲಿ ಹೆಚ್ಚುವರಿಯಾಗಿ ಜಿಯೋ ಟಿವಿ, ಜಿಯೋ ಸಿನಿಮಾ ಪ್ರಯೋಜನ ಸಹ ಗ್ರಾಹಕರಿಗೆ ಲಭ್ಯ.

ಜಿಯೋ ಟೆಲಿಕಾಂ 189ರೂ. ರೀಚಾರ್ಜ್‌ ಯೋಜನೆ

ಜಿಯೋ ಸಂಸ್ಥೆಯ 189 ರೂ. ಈ ಅಗ್ಗದ ರೀಚಾರ್ಜ್‌ ಯೋಜನೆಯು ಕೂಡಾ ವ್ಯಾಲ್ಯೂ ( Value ) ಪ್ಲ್ಯಾನ್‌ ಪಟ್ಟಿಯಲ್ಲಿ ಗುರುತಿಸಿಕೊಂಡಿದೆ. ಅಂದಹಾಗೆ ಈ ಯೋಜನೆಯು ಒಟ್ಟು 28 ದಿನಗಳ ವ್ಯಾಲಿಡಿಟಿ ಸೌಲಭ್ಯ ಪಡೆದಿದ್ದು, ಈ ಅವಧಿಯಲ್ಲಿ ಗ್ರಾಹಕರಿಗೆ ಒಟ್ಟು 2 GB ಡೇಟಾ ಪ್ರಯೋಜನ ನೀಡುತ್ತದೆ. ಇದರ ಜೊತೆಗೆ ಅನಿಯಮಿತ ವಾಯಿಸ್‌ ಕರೆಯ ಸೌಲಭ್ಯ ಸಹ ಗ್ರಾಹಕರಿಗೆ ಸಿಗಲಿದೆ. ಅಲ್ಲದೇ ಪ್ರತಿದಿನ 100 ಎಸ್‌ಎಮ್‌ಎಸ್‌ ಸೌಲಭ್ಯ ಕೂಡಾ ದೊರೆಯುತ್ತದೆ. ಇನ್ನು ಈ ರೀಚಾರ್ಜ್‌ ಯೋಜನೆಯಲ್ಲಿ ಹೆಚ್ಚುವರಿಯಾಗಿ ಜಿಯೋ ಟಿವಿ, ಜಿಯೋ ಸಿನಿಮಾ ಪ್ರಯೋಜನ ಸಹ ಗ್ರಾಹಕರಿಗೆ ಲಭ್ಯ.

Best Mobiles in India

English summary
Jio Value Recharge Prepaid Plans list November 2024. check plans offer and more details.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+