ಜಿಯೋ ಮತ್ತು ಏರ್‌ಟೆಲ್ 239ರೂ. ಪ್ಲ್ಯಾನ್; ರೀಚಾರ್ಜ್‌ಗೆ ಯಾವುದು ಬೆಸ್ಟ್?
ದೇಶದ ಟೆಲಿಕಾಂ ವಲಯದಲ್ಲಿ ಜಿಯೋ ಮತ್ತು ಭಾರ್ತಿ ಏರ್‌ಟೆಲ್ ಕಂಪನಿಗಳು ಮೊದಲೆರಡು ಸ್ಥಾನಗಳಲ್ಲಿ ಕಾಣಿಸಿಕೊಂಡಿರುವ ಟೆಲಿಕಾಂ ಪೊರೈಕೆದಾರ ಸಂಸ್ಥೆಗಳಾಗಿವೆ. ಇವು ಚಂದಾದಾರರ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳಲು ಹಲವು ಅತ್ಯುತ್ತಮ ಪ್ಲ್ಯಾನ್‌ಗಳನ್ನು ಪರಿಚಯಿಸುತ್ತಾ ಸಾಗಿವೆ. ಅದಾಗ್ಯೂ, ಕೆಲವೊಂದು ಯೋಜನೆಗಳು ಬಹುತೇಕ ಸಾಮ್ಯತೆ ಪ್ರಯೋಜನ ಪಡೆದಿವೆ.
ಹೌದು, ಏರ್‌ಟೆಲ್ ಮತ್ತು ಜಿಯೋ ಟೆಲಿಕಾಂಗಳ ಎಂಟ್ರಿ ಲೆವೆಲ್ ಪ್ಲ್ಯಾನ್‌ಗಳಲ್ಲಿ ಒಂದಾದ 239ರೂ. ಬೆಲೆಯ ಪ್ರೀಪೇಯ್ಡ್ ಯೋಜನೆಯು ಆಕರ್ಷಕ ಎನಿಸಿದೆ. ಈ ಎರಡು ಟೆಲಿಕಾಂಗಳ ಈ ಮೊತ್ತದ ರೀಚಾರ್ಜ್ ಪ್ಲ್ಯಾನಿನಲ್ಲಿ ಅಧಿಕ ದೈನಂದಿನ ಡೇಟಾ, ಆಕರ್ಷಕ ವ್ಯಾಲಿಡಿಟಿ, ಅನಿಯಮಿತ ವಾಯಿಸ್ ಕರೆ ಸೌಲಭ್ಯ ಸೇರಿದಂತೆ ಇತರೆ ಸೌಲಭ್ಯ ಕೂಡಾ ಲಭ್ಯ.

ಅದಾಗ್ಯೂ ಏರ್‌ಟೆಲ್ ಮತ್ತು ಜಿಯೋ ಟೆಲಿಕಾಂನ ಈ ಪ್ಲ್ಯಾನ್‌ನಲ್ಲಿ ಕೆಲವು ಭಿನ್ನತೆಗಳು ಕಾಣಬಹುದಾಗಿದೆ. ಈ ಎರಡು ಟೆಲಿಕಾಂಗಳ ಪ್ಲ್ಯಾನಿನ ವ್ಯತ್ಯಾಸಗಳೆನು? ಗ್ರಾಹಕರಿಗೆ ರೀಚಾರ್ಜ್ ಮಾಡಿಸಲು ಯಾವುದು ಬೆಸ್ಟ್? ಪ್ಲ್ಯಾನಿನ ಒಟ್ಟಾರೇ ಪ್ರಯೋಜನಗಳೆನು ಎಂಬ ಬಗ್ಗೆ ಮುಂದೆ ನೋಡೋಣ ಬನ್ನಿರಿ.
ಜಿಯೋ ಟೆಲಿಕಾಂನ 239ರೂ. ಪ್ರಿಪೇಯ್ಡ್ ಪ್ಲ್ಯಾನ್ ಸೌಲಭ್ಯಗಳ ಮಾಹಿತಿ :
ಜಿಯೋ ಟೆಲಿಕಾಂ 239ರೂ. ಪ್ರಿಪೇಯ್ಡ್ ಪ್ಲ್ಯಾನ್ ಒಟ್ಟು 28 ದಿನಗಳ ವ್ಯಾಲಿಡಿಟಿ ಅವಧಿಯನ್ನು ಪಡೆದುಕೊಂಡಿದೆ. ಈ ವ್ಯಾಲಿಡಿಟಿ ಅವಧಿಯಲ್ಲಿ ಪ್ರತಿದಿನ 1.5GB ಡೇಟಾ ಸೌಲಭ್ಯ ಗ್ರಾಹಕರಿಗೆ ಲಭ್ಯವಾಗಲಿದ್ದು, ಪೂರ್ಣ ವ್ಯಾಲಿಡಿಟಿ ಅವಧಿಗೆ ಒಟ್ಟು 42GB ಡೇಟಾ ಪ್ರಯೋಜನ ಸಿಗಲಿದೆ. ಹಾಗೆಯೇ ಅನಿಯಮಿತ ವಾಯಿಸ್ ಕರೆಗಳ ಸೌಲಭ್ಯ ಕೂಡಾ ದೊರೆಯುತ್ತದೆ. ಇದರೊಂದಿಗೆ ಎಸ್‌ಎಮ್‌ಎಸ್ ಪ್ರಯೋಜನ ಸಿಗಲಿದ್ದು, ಅಲ್ಲದೇ ಜಿಯೋ ಆಪ್ಸ್ ಸೇವೆ ಲಭ್ಯ.
ಏರ್‌ಟೆಲ್ ಟೆಲಿಕಾಂನ 239ರೂ. ಪ್ರೀಪೇಯ್ಡ್ ಪ್ಲ್ಯಾನ್ ಸೌಲಭ್ಯಗಳ ಮಾಹಿತಿ :
ಏರ್‌ಟೆಲ್ ಟೆಲಿಕಾಂ 239ರೂ. ಪ್ರಿಪೇಯ್ಡ್ ಪ್ಲ್ಯಾನ್ ಒಟ್ಟು 24 ದಿನಗಳ ವ್ಯಾಲಿಡಿಟಿ ಅವಧಿಯನ್ನು ಪಡೆದುಕೊಂಡಿದೆ. ಈ ವ್ಯಾಲಿಡಿಟಿ ಅವಧಿಯಲ್ಲಿ ಪ್ರತಿದಿನ 1 GB ಡೇಟಾ ಸೌಲಭ್ಯ ಗ್ರಾಹಕರಿಗೆ ಲಭ್ಯವಾಗಲಿದ್ದು, ಪೂರ್ಣ ವ್ಯಾಲಿಡಿಟಿ ಅವಧಿಗೆ ಒಟ್ಟು 24 GB ಡೇಟಾ ಪ್ರಯೋಜನ ಸಿಗಲಿದೆ. ಹಾಗೆಯೇ ಅನಿಯಮಿತ ವಾಯಿಸ್ ಕರೆಗಳ ಸೌಲಭ್ಯ ಕೂಡಾ ಚಂದಾದಾರರಿಗೆ ದೊರೆಯುತ್ತದೆ. ಇದರೊಂದಿಗೆ ಎಸ್‌ಎಮ್‌ಎಸ್ ಸೌಲಭ್ಯ ಕೂಡಾ ಸಿಗಲಿದ್ದು, ಅಲ್ಲದೇ ಏರ್‌ಟೆಲ್‌ನ ಆಪ್ಸ್ ಸೇವೆ ಲಭ್ಯ.
ಜಿಯೋ v/s ಏರ್‌ಟೆಲ್ : ರೀಚಾರ್ಜ್‌ಗೆ ಯಾವುದು ಬೆಸ್ಟ್ ?
ರಿಲಯನ್ಸ್ ಜಿಯೋ 239ರೂ ಮತ್ತು ಭಾರ್ತಿ ಏರ್‌ಟೆಲ್ 239ರೂ. ಪ್ರೀಪೇಯ್ಡ್ ಪ್ಲ್ಯಾನ್ ಗಳು ತಮ್ಮ ವರ್ಗದಲ್ಲೇ ಆಕರ್ಷಕ ಸೌಲಭ್ಯಗಳನ್ನು ಒಳಗೊಂಡಿವೆ. ಜಿಯೋ ಮತ್ತು ಏರ್‌ಟೆಲ್ ಟೆಲಿಕಾಂಗಳ ಈ ಮೊತ್ತದಿಂದ ಯೋಜನೆಗಳು ಬಹುತೇಕ ಸಾಮ್ಯತೆ ಎಂದು ಕಂಡುಬಂದರೂ, ಅವುಗಳ ಪ್ರಯೋಜನಗಳಲ್ಲಿ ನಾವು ಭಿನ್ನತೆಯನ್ನು ಕಾಣಬಹುದಾಗಿದೆ.
ಜಿಯೋ 239ರೂ. ಯೋಜನೆಯು 28 ದಿನಗಳ ವ್ಯಾಲಿಡಿಟಿ ಸೌಲಭ್ಯ ಪಡೆದಿದೆ. ಆದರೆ ಅದೇ ಮೊತ್ತದ ಏರ್‌ಟೆಲ್ ಪ್ರೀಪೇಯ್ಡ್ ಯೋಜನೆಯು 24 ದಿನಗಳ ವ್ಯಾಲಿಡಿಟಿ ಸೌಲಭ್ಯವನ್ನು ಪಡೆದುಕೊಂಡಿದೆ. ಇನ್ನು ಜಿಯೋ 239ರೂ. ಯೋಜನೆಯಲ್ಲಿ ಪ್ರತಿದಿನ 1.5GB ಡೇಟಾ ಸೌಲಭ್ಯ ನಿಡುತ್ತದೆ. ಆದರೆ ಏರ್‌ಟೆಲ್ 239ರೂ. ಯೋಜನೆಯಲ್ಲಿ ನಿತ್ಯ 1 GB ಡೇಟಾ ಪ್ರಯೋಜನ ಒದಗಿಸುತ್ತದೆ.
ಇನ್ನು ಈ ಎರಡು ಟೆಲಿಕಾಂಗಳು ತಮ್ಮ 239ರೂ. ಪ್ಲ್ಯಾನಿನಲ್ಲಿ ಪ್ರತಿದಿನ 100 ಎಸ್‌ಎಮ್‌ಎಸ್ ಪ್ರಯೋಜನ ಸೌಲಭ್ಯ ಕೂಡಾ ಪಡೆದಿವೆ. ಡೇಟಾ ಹಾಗೂ ವ್ಯಾಲಿಡಿಟಿ ಅಂಶಗಳಿಂದ ಒಟ್ಟಾರೆಯಾಗಿ ಹೇಳುವುದಾದರೆ 239ರೂ. ಬೆಲೆಯಲ್ಲಿ ಜಿಯೋ ಯೋಜನೆ ಉತ್ತಮ ಆಯ್ಕೆ ಎನಿಸುತ್ತದೆ.


Click it and Unblock the Notifications








