ಜಿಯೋ 401ರೂ. ಪ್ಲ್ಯಾನ್ ಮತ್ತು ಏರ್‌ಟೆಲ್ 401ರೂ. ಪ್ಲ್ಯಾನ್: ಯಾವುದು ಬೆಸ್ಟ್?
ಟೆಲಿಕಾಂ ವಲಯದಲ್ಲಿ ಜಿಯೋ ಮತ್ತು ಏರ್‌ಟೆಲ್ ಹೆಚ್ಚು ಪೈಪೋಟಿಯಲ್ಲಿ ಮುನ್ನುಗ್ಗುತ್ತಿವೆ. ಗ್ರಾಹಕರನ್ನು ಸೆಳೆಯಲು ಈಗಾಗಲೆ ಹಲವು ಸಂಸ್ಥೆಗಳು ಆಕರ್ಷಕ ಪ್ರೀಪೇಯ್ಡ್ ಯೋಜನೆಗಳನ್ನು ಪ್ರಕಟಿಸಿವೆ. ಆ ಪೈಕಿ ಜಿಯೋ ಹೊಸದಾಗಿ 401ರೂ.ಗಳ ಪ್ರಿಪೇಯ್ಡ್ ಯೋಜನೆಯನ್ನು ಘೋಷಿಸಿದ್ದು, ಇದು ಏರ್‌ಟೆಲ್‌ನ 401ರೂ. ಪ್ಲ್ಯಾನಿಗೆ ನೇರ ಟಾಂಗ್ ನೀಡುವ ಹಾಗಿದೆ. ಈ ಎರಡು ಯೋಜನೆಗಳು ಹೆಚ್ಚು ಕಡಿಮೆ ಸಾಮ್ಯತೆಯ ಪ್ರಯೋಜನಗಳನ್ನು ಹೊಂದಿವೆ. ಇವೆರಡರಲ್ಲಿ ಯಾವುದು ಬೆಸ್ಟ್ ಎನ್ನುವ ಪ್ರಶ್ನೆ ಬಹುತೇಕ ಬಳಕೆದಾರರಲ್ಲಿದೆ.

ಹೌದು, ಜಿಯೋ ಹಾಗೂ ಏರ್‌ಟೆಲ್ ಜನಪ್ರಿಯ ಟೆಲಿಕಾಂ ಸಂಸ್ಥೆಗಳಾಗಿವೆ. ಈ ಸಂಸ್ಥೆಗಳು ಎರಡು 401ರೂ. ಪ್ಲ್ಯಾನ್ ಹೊಂದಿದ್ದು, ಅವುಗಳು ಕೂಡಾ ಒಂದಕ್ಕೊಂದು ಹೋಲಿಕೆ ಹೊಂದಿವೆ. ಈ ಯೋಜನೆಗಳಲ್ಲಿ ಪ್ರತಿದಿನ ಡೇಟಾ, ವಾಯಿಸ್ ಕರೆಗಳ ಸೌಲಭ್ಯ ಹಾಗೂ ವ್ಯಾಲಿಡಿಟಿ ಪ್ರಯೋಜನ ಲಭ್ಯ ಇವೆ. ಇದರೊಂದಿಗೆ ಹೆಚ್ಚುವರಿ ಸೇವೆಗಳು ಸೇರಿದ್ದು, ಗ್ರಾಹಕರನ್ನು ಸೆಳೆದಿವೆ. ಆದರೆ ಜಿಯೋ ಮತ್ತು ಏರ್‌ಟೆಲ್‌ನ 401ರೂ. ಪ್ಲ್ಯಾನಿನಲ್ಲಿ ಯಾವುದು ಯೋಗ್ಯ? ಈ ಎರಡು ಪ್ಲ್ಯಾನ್‌ಗಳ ಪೂರ್ಣ ಮಾಹಿತಿ ಈ ಲೇಖನದಲ್ಲಿ ತಿಳಿಸಲಾಗಿದೆ ಮುಂದೆ ಓದಿರಿ.

ಜಿಯೋ 401ರೂ. ಪ್ಲ್ಯಾನ್
ಜಿಯೋ ಟೆಲಿಕಾಂನ ಈ ಹೊಸ ಪ್ರೀಪೇಯ್ಡ್ ಪ್ಲ್ಯಾನ್ ಒಟ್ಟು 28 ದಿನಗಳ ವ್ಯಾಲಿಡಿಟಿಯನ್ನು ಒಳಗೊಂಡಿದ್ದು, ಈ ಅವಧಿಯಲ್ಲಿ ಪ್ರತಿದಿನ ಒಟ್ಟು 90GB ಡೇಟಾ ಪ್ರಯೋಜನವನ್ನು ಒಳಗೊಂಡಿದೆ. ಜಿಯೋ ಟು ಜಿಯೋ ಉಚಿತ ವಾಯಿಸ್ ಕರೆ ಹಾಗೂ ಜಿಯೋ ಟು ಇತರೆ ಟೆಲಿಕಾಂಗಳಿಗೆ 1000 ನಿಮಿಷಗಳ ಕರೆ ಮಿತಿ ಸೌಲಭ್ಯವಿದೆ. ಜೊತೆಗೆ ಪ್ರತಿದಿನ 100 ಎಸ್‌ಎಮ್‌ಎಸ್ ಪ್ರಯೋಜನ ಸಹ ಇದೆ. ಹಾಗೆಯೇ ಇದರೊಂದಿಗೆ ಹೆಚ್ಚುವರಿಯಾಗಿ 399ರೂ ಶುಲ್ಕದ ಡಿಸ್ನಿ ಪ್ಲಸ್ ಹಾಟ್‌ಸ್ಟಾರ್ VIP ಸದಸ್ಯತ್ವ ಸಹ ಲಭ್ಯವಾಗುತ್ತದೆ.

ಏರ್‌ಟೆಲ್ 401ರೂ. ಪ್ಲ್ಯಾನ್
ಏರ್‌ಟೆಲ್ ಸಂಸ್ಥೆಯ ಈ ಪ್ರೀಪೇಯ್ಡ್ ಪ್ಲ್ಯಾನ್ ಸಹ ಒಟ್ಟು 28 ದಿನಗಳ ವ್ಯಾಲಿಡಿಟಿಯನ್ನು ಒಳಗೊಂಡಿದ್ದು, ಈ ಅವಧಿಯಲ್ಲಿ ಪ್ರತಿದಿನ 3GB ಡೇಟಾ ಪ್ರಯೋಜನ ದೊರೆಯುತ್ತದೆ. ಹಾಗೆಯೇ ಹೆಚ್ಚುವರಿಯಾಗಿ 399ರೂ ಶುಲ್ಕದ ಡಿಸ್ನಿ ಪ್ಲಸ್ ಹಾಟ್‌ಸ್ಟಾರ್ VIP ಸದಸ್ಯತ್ವ ಸಹ ಲಭ್ಯವಾಗುತ್ತದೆ. ಅಂದಹಾಗೆ ಡಿಸ್ನಿ ಪ್ಲಸ್ ಹಾಟ್‌ಸ್ಟಾರ್ VIP ಸದಸ್ಯತ್ವವು ಒಂದು ವರ್ಷದ ವಾಯ್ದೆಯನ್ನು ಪಡೆದಿರುತ್ತದೆ. ಆದರೆ ಈ ಪ್ಲ್ಯಾನಿನಲ್ಲಿ ಯಾವುದೇ ಉಚಿತ ಕರೆ ಹಾಗೂ ಎಸ್‌ಎಮ್‌ಎಸ್ ಸೌಲಭ್ಯಗಳು ಲಭ್ಯವಿರುವುದಿಲ್ಲ.

ಯಾವುದು ಬೆಸ್ಟ್ ಆಯ್ಕೆ?
ಜಿಯೋ ಹಾಗೂ ಏರ್‌ಟೆಲ್ ಎರಡು ಸಹ 401ರೂ. ಪ್ಲ್ಯಾನ್ ಪರಿಚಯಿಸಿವೆ. ಎರಡು ಟೆಲಿಕಾಂಗಳು ಸಹ 28 ದಿನಗಳ ವ್ಯಾಲಿಡಿಟಿ ನೀಡಿದ್ದು, ಅಧಿಕ ಡೇಟಾ ಸೌಲಭ್ಯ ಸಹ ಹೊಂದಿವೆ. ಇದರೊಂದಿಗೆ ಎರಡು ಟೆಲಿಕಾಂಗಳು 401ರೂ. ಯೋಜನೆಯಲ್ಲಿ ಡಿಸ್ನಿ ಪ್ಲಸ್ ಹಾಟ್‌ಸ್ಟಾರ್ ವಿಐಪಿ ವಾರ್ಷಿಕ ಸದಸಸ್ಯತ್ವದ ಸೌಲಭ್ಯ ಸಹ ನೀಡಿವೆ. ಜಿಯೋ ಗ್ರಾಹಕರಿಗೆ ಈ ಯೋಜನೆ ಆಕರ್ಷಕ ಅನಿಸಿದರೂ ವ್ಯಾಲಿಡಿಟಿ ಕೇವಲ 28 ದಿನ ಅನ್ನೊದು ಡ್ರಾಬ್ಯಾಕ್ ಆಗಿ ಕಾಣಿಸುತ್ತದೆ. ಇನ್ನು ಏರ್‌ಟೆಲ್‌ನ ಗ್ರಾಹಕರಿಗೆ ಈ ಯೋಜನೆ ಉತ್ತಮ ಅನಿಸಿದರೂ ವಾಯಿಸ್ ಕರೆ ಸೌಲಭ್ಯ ನೀಡದಿರುವುದು ಡ್ರಾಬ್ಯಾಕ್ ಆಗಿ ಹೈಲೈಟ್ ಆಗುತ್ತದೆ.

ಹೆಚ್ಚು ವಾಯಿಸ್ ಕರೆಯ ಅಗತ್ಯ ಇರದ ಏರ್‌ಟೆಲ್ ಗ್ರಾಹಕರಿಗೆ ಈ ಯೋಜನೆ ಉತ್ತಮ. ಅಧಿಕ ಡೇಟಾ ಹಾಗೂ ಡಿಸ್ನಿ ಪ್ಲಸ್ ಹಾಟ್‌ಸ್ಟಾರ್ VIP ಸದಸ್ಯತ್ವ ಲಭ್ಯವಾಗುತ್ತದೆ. ಹಾಗೆಯೇ ಪ್ರತಿದಿನ ಅಧಿಕ ಡೇಟಾ ಜೊತೆ ಮನರಂಜನೆ ಆಯ್ಕೆಗಳನ್ನು ಬಯಸುವ ಜಿಯೋ ಗ್ರಾಹಕರಿಗೆ ಈ ಯೋಜನೆ ಉತ್ತಮ ಅನಿಸುತ್ತದೆ. ಏಕೆಂದರೇ ಈ ಪ್ಲ್ಯಾನಿನಲ್ಲಿ ಡೇಟಾ ಹಾಗೂ ಡಿಸ್ನಿ ಪ್ಲಸ್ ಹಾಟ್‌ಸ್ಟಾರ್ VIP ಸದಸ್ಯತ್ವ ಎರಡು ಲಭ್ಯ ಇವೆ.


Click it and Unblock the Notifications








