Home
ಸುದ್ದಿಜಾಲ

ಜಿಯೋ Vs ಏರ್‌ಟೆಲ್‌ Vs ವಿ ಟೆಲಿಕಾಂ: ಯಾವ ಪ್ಲ್ಯಾನ್‌ ರೀಚಾರ್ಜ್‌ ಮಾಡಿದರೆ, ಉಳಿತಾಯ ಜಾಸ್ತಿ?

ಇಂದಿನ ಬೆಲೆ ಏರಿಕೆಯ ದಿನಗಳಲ್ಲಿ ಹಣ ಉಳಿಸುವುದೇ ಸವಾಲಾಗಿರುವ ಈ ವೇಳೆಯಲ್ಲಿ ಫೋನ್ ರೀಚಾರ್ಜ್‌ ಪ್ಲ್ಯಾನ್‌ ಕೂಡ ಸರಿಯಾಗಿರುವುದನ್ನು ಆರಿಸಿಕೊಳ್ಳಬೇಕು ಸೂಕ್ತ ಅಲ್ಲವೇ? ಅದು ಅಷ್ಟು ಮಾತ್ರ ಅಲ್ಲ, ಯಾವ ನೆಟ್‌ವರ್ಕ್‌ನಿಂದ ಎಷ್ಟು ಹಣಕ್ಕೆ ಎಷ್ಟು ಪ್ರಯೋಜನ ಲಭ್ಯವಾಗುತ್ತದೆ ಎನ್ನುವುದನ್ನೂ ಹೋಲಿಸಲೇ ನೋಡಬೇಕು. ಹೀಗೆ ಒಂದು ಹೋಲಿಕೆ ಮಾಡಿದ ಮೇಲೆ ಯಾವುದು ಉತ್ತಮವಾದ ಟೆಲಿಕಾಂ ಎಂಬುದು ಖಚಿತ ಆಗುತ್ತದೆ.

ಇತ್ತೀಚಿಗೆ ಏರ್‌ಟೆಲ್‌, ವಿ ಟೆಲಿಕಾಂ ಹಾಗೂ ಜಿಯೋ (Jio) ಈ ಮೂರು ಟೆಲಿಕಾಂ ಸಂಸ್ಥೆಗಳು ತಮ್ಮ ಪ್ರೀಪೇಯ್ಡ್‌ ಪ್ಲ್ಯಾನ್‌ ಹಾಗೂ ಪೋಸ್ಟ್‌ಪೇಯ್ಡ್‌ ಯೋಜನೆಗಳ ಬೆಲೆಯಲ್ಲಿ ಏರಿಕೆ ಮಾಡಿವೆ. ಆದರೆ ಚಂದಾದಾರರು ಎಷ್ಟು ಪಾವತಿ ಮಾಡುತ್ತಾರೆ ಹಾಗೂ ಪ್ರತಿಯಾಗಿ ರೀಚಾರ್ಜ್‌ ಪ್ಲ್ಯಾನಿನಲ್ಲಿ ಏನು ಸಿಗುತ್ತಿದೆ ಎಂಬುದನ್ನು ತಿಳಿದುಕೊಳ್ಳುವುದು ಮುಖ್ಯ. ಈ ನಿಟ್ಟಿನಲ್ಲಿ ಈ ಕೆಲವು ಜನಪ್ರಿಯ ಯೋಜನೆಗಳ ಕುರಿತು ಹೋಲಿಕೆ ಮಾಡಲಾಗಿದೆ. ಮುಂದೆ ಓದಿರಿ.

ಜಿಯೋ Vs ಏರ್‌ಟೆಲ್‌ Vs ವಿ: ಯಾವ ಪ್ಲ್ಯಾನ್‌ ರೀಚಾರ್ಜ್‌ ಮಾಡಿದರೆ ಉಳಿತಾಯ ಜಾಸ್ತಿ

ಮೊದಲಿಗೆ 28 ದಿನದ ವ್ಯಾಲಿಡಿಟಿ ಇರುವಂತ ಪ್ಲ್ಯಾನ್‌ ನೋಡೋಣ. ಜಿಯೋ 299ರೂ. ದರ ವಿಧಿಸಿದರೆ, ಇತರ ಟೆಲಿಕಾಂ ಆಪರೇಟರ್ ಗಳು ಇಷ್ಟೇ ದಿನದ ವ್ಯಾಲಿಡಿಟಿಗೆ 349 ರೂ. ಬೆಲೆಯನ್ನು ವಿಧಿಸುತ್ತಾರೆ. ಅಲ್ಲಿಗೆ ಜಿಯೋ ಗ್ರಾಹಕರಿಗೆ 50 ರೂ. ಉಳಿತಾಯ ಆಯಿತು. ಹಾಗಂತ ಪ್ರತಿ ದಿನದ ಡೇಟಾದಲ್ಲಿ ಏನಾದರೂ ವ್ಯತ್ಯಾಸ ಇದೆಯಾ ಅಂತ ನೋಡಿದರೆ, ಹಾಗೇನೂ ಇಲ್ಲ. ಎಲ್ಲರೂ ದಿನಕ್ಕೆ 1.5 GB ಡೇಟಾ ಮಾತ್ರ ನೀಡುವುದು. ತಿಂಗಳಿಗೆ 50 ರೂ. ಅಂತಾದರೆ, ಒಂದು ವರ್ಷಕ್ಕೆ 600 ರೂ. ಆಯಿತು.

ಹಾಗೆಯೇ ಇತರೆ ಪ್ಲಾನ್ ಗಳ ಹೋಲಿಕೆ ಕೂಡ ಇಲ್ಲಿ ಗಮನಿಸೋಣ. ಒಂದು ವರ್ಷದ ಪ್ಲಾನ್ ಗೆ ಜಿಯೋದಲ್ಲಿ 3599 ರೂ. ಆಗುತ್ತದೆ. ಪ್ರತಿ ನಿತ್ಯ 2.5 GB ಡೇಟಾ ಸಿಗುತ್ತದೆ. ಉಳಿದ ಟೆಲಿಕಾಂ ಆಪರೇಟರ್ ಗಳು ಸಹ 3599 ರೂ. ವಿಧಿಸುತ್ತವೆ. ಆದರೆ ಪ್ರತಿ ದಿನ ಸಿಗುವ ಉಚಿತ ಡೇಟಾ 2 GB ಮಾತ್ರ. ಇನ್ನು ಜಿಯೋದ 84 ದಿನಗಳ ಪ್ಲಾನ್ ಗೆ 859 ರೂ, ಪ್ರತಿ ದಿನ 2 GB ಡೇಟಾ ದೊರೆಯುತ್ತದೆ.

ಉಳಿದ ಟೆಲಿಕಾಂ ಆಪರೇಟರ್ ಗಳು 979 ರೂ ದರ ವಿಧಿಸುತ್ತಿದ್ದು, ಪ್ರತಿ ದಿನ 2 GB ಡೇಟಾ ಉಚಿತವಾಗಿ ಸಿಗುತ್ತದೆ. ಈ ಪ್ಲಾನ್ ನಲ್ಲಿ ಜಿಯೋ ಗ್ರಾಹಕರಿಗೆ 120 ರೂ. ಉಳಿತಾಯ ಆಗುತ್ತದೆ. 84 ದಿನಗಳ ವ್ಯಾಲಿಡಿಟಿಯ 1.5 GB ಡೇಟಾ ಪ್ಲಾನ್ ಕೂಡ ಇದೆ. ಅದಕ್ಕೆ ಜಿಯೋ ತನ್ನ ಗ್ರಾಹಕರಿಂದ ಪಡೆಯುವುದು 799 ರೂ. ಮಾತ್ರ. ಬೇರೆ ಟೆಲಿಕಾಂ ಆಪರೇಟರ್ ಗಳು 859 ರೂ. ವಿಧಿಸುತ್ತವೆ. ಅಂದರೆ ಈ ಪ್ಲಾನ್ ನಲ್ಲಿ ಜಿಯೋ ಗ್ರಾಹಕರಿಗೆ 60 ರೂ. ಉಳಿತಾಯ ಆಗುತ್ತದೆ.

ಯಾರು ಬೇಸಿಕ್ ಮೊಬೈಲ್ ಹ್ಯಾಂಡ್ ಸೆಟ್ ಬಳಸುತ್ತಾರೋ ಅಂಥವರಿಗೆ ಉಳಿದ ಟೆಲಿಕಾಂ ಕಂಪನಿಗಳು 199 ರೂ. ದರವನ್ನು ವಿಧಿಸುತ್ತವೆ. ಅದು ಕೂಡ 2G ನೆಟ್ವರ್ಕ್ ಮಾತ್ರ ಸಿಗುತ್ತದೆ. ಯುಪಿಐ ಇಲ್ಲ, ಯಾವುದೇ ಮನರಂಜನೆ ಇರುವುದಿಲ್ಲ. ಆದರೆ ಜಿಯೋಭಾರತ್ ಫೋನ್ ನಲ್ಲಿ 123ರೂ. ಗೆ 14GB 4G ಡೇಟಾ ಸಿಗುತ್ತದೆ. ಇದರ ಜೊತೆಗೆ ಅನಿಯಮಿತ ಕಾಲ್ ಗಳು, ಜಿಯೋಸಿನಿಮಾ, ಜಿಯೋಸಾವನ್ , ಜಿಯೋಪೇ (ಯುಪಿಐ), ಎಫ್ಎಂ ರೇಡಿಯೋ ಇವೆಲ್ಲ ಸಿಗುತ್ತದೆ. ಈ ಪ್ಲಾನ್ ಬಳಸುವಂಥ ಜಿಯೋ ಗ್ರಾಹಕರಿಗೆ 76 ರೂ. ಉಳಿತಾಯ ಆಗುತ್ತದೆ. ಜಿಯೋ ಅಂತೂ ಬೇಸಿಕ್ ಫೋನ್ ಬಳಕೆದಾರರಿಗೆ ದರ ಏರಿಕೆ ಮಾಡಿಲ್ಲ ಅನ್ನುವುದನ್ನು ಗಮನಿಸಬೇಕು.

Best Mobiles in India

English summary
Jio Vs Airtel Vs Vi: Popular Plans comparison details here. check out all plans data and more benefits.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+