Home
ಸುದ್ದಿಜಾಲ

ಏರ್‌ಟೆಲ್‌ VS ವಿ ಟೆಲಿಕಾಂ VS ಜಿಯೋ 299ರೂ. ಪ್ಲ್ಯಾನ್‌: ರೀಚಾರ್ಜ್‌ಗೆ ಯಾವುದು ಯೋಗ್ಯ?

ಭಾರತೀಯ ಟೆಲಿಕಾಂ ಕ್ಷೇತ್ರದಲ್ಲಿ ರಿಲಾಯನ್ಸ್‌ ಜಿಯೋ, ಭಾರ್ತಿ ಏರ್‌ಟೆಲ್‌ ಮತ್ತು ವಿ ಟೆಲಿಕಾಂ (ವೊಡಾಫೋನ್ ಐಡಿಯಾ) ಕಂಪನಿಗಳು ಪೈಪೋಟಿನಲ್ಲಿ ಮುನ್ನಡೆದಿವೆ. ತಮ್ಮ ಗ್ರಾಹಕರ ಸಂಖ್ಯೆ ಹೆಚ್ಚಿಸಲು ಮೂರು ಕಂಪನಿಗಳು ಕೆಲವೊಂದು ಆಕರ್ಷಕ ಯೋಜನೆಗಳನ್ನು ಪರಿಚಯಿಸಿವೆ. ಅವುಗಳ ಪೈಕಿ, ಅಗ್ಗದ ಬೆಲೆಯ 299ರೂ. ಯೋಜನೆಯು ಗ್ರಾಹಕರಿಗೆ ಉಪಯುಕ್ತವೇ?

ಹೌದು, ಏರ್‌ಟೆಲ್‌, ಜಿಯೋ, ವಿ ಟೆಲಿಕಾಂ ಸಂಸ್ಥೆಗಳು 299ರೂ. ಬೆಲೆಯ ರೀಚಾರ್ಜ್‌ ಯೋಜನೆಯನ್ನು ಒಳಗೊಂಡಿವೆ. ಈ ಟೆಲಿಕಾಂಗಳ ಈ ಮೊತ್ತದ ಪ್ಲ್ಯಾನ್‌ಗಳಲ್ಲಿ ಅಧಿಕ ದೈನಂದಿನ ಡೇಟಾ, ಆಕರ್ಷಕ ವ್ಯಾಲಿಡಿಟಿ, ಅನಿಯಮಿತ ವಾಯಿಸ್‌ ಕರೆ ಸೌಲಭ್ಯ ಹಾಗೂ ದೈನಂದಿನ ಎಸ್‌ಎಮ್‌ಎಸ್‌ ಸೇರಿದಂತೆ ಅಗತ್ಯ ಪ್ರಯೋಜನಗಳು ದೊರೆಯುತ್ತವೆ.

ಏರ್‌ಟೆಲ್‌, ವಿ, ಜಿಯೋ 299ರೂ. ಪ್ಲ್ಯಾನ್‌: ರೀಚಾರ್ಜ್‌ಗೆ ಯಾವುದು ಯೋಗ್ಯ?

ಹಾಗೆಯೇ ಯೋಜನೆಯ ಬೆಲೆ ಒಂದೇ ಆಗಿದ್ದರೂ, ಮೂರು ಟೆಲಿಕಾಂನ ಪ್ಲ್ಯಾನ್‌ಗಳಲ್ಲಿ ಕೆಲವು ಭಿನ್ನತೆಗಳು ಕಾಣಬಹುದು. ಅಲ್ಲದೇ ಹೆಚ್ಚುವರಿಯಾಗಿ ಗ್ರಾಹಕರಿಗೆ ಓಟಿಟಿ ಆಪ್‌ಗಳ ಚಂದಾದಾರಿಕೆಯು ಸೌಲಭ್ಯ ಸಹ ಸಿಗಲಿದೆ. ಹಾಗಾದರೇ ಈ ಮೂರು ಸಂಸ್ಥೆಗಳ 299ರೂ. ಯೋಜನೆಗಳಲ್ಲಿ ರೀಚಾರ್ಜ್‌ಗೆ ಯಾವುದು ಬೆಸ್ಟ್‌?. ಪ್ಲ್ಯಾನ್‌ಗಳ ಒಟ್ಟಾರೇ ಪ್ರಯೋಜನಗಳೆನು ಮುಂದೆ ನೋಡೋಣ ಬನ್ನಿರಿ.

ವಿ ಟೆಲಿಕಾಂ 299ರೂ. ರೀಚಾರ್ಜ್‌ ಪ್ಲ್ಯಾನ್‌

ವಿ ಟೆಲಿಕಾಂನ 299ರೂ. ರೀಚಾರ್ಜ್‌ ಯೋಜನೆಯು ಒಟ್ಟು 28 ದಿನಗಳ ವ್ಯಾಲಿಡಿಟಿ ಪ್ರಯೋಜನ ಸೌಲಭ್ಯವನ್ನು ಪಡೆದಿದೆ. ಈ ಅವಧಿಯಲ್ಲಿ ಗ್ರಾಹಕರಿಗೆ ಪ್ರತಿದಿನ 1.5 GB ದೈನಂದಿನ ಡೇಟಾ ಸೌಲಭ್ಯ ಸಿಗಲಿದೆ. ಇದರೊಂದಿಗೆ ಅನಿಯಮಿತ ವಾಯಿಸ್ ಕರೆ ಮತ್ತು 100 ಎಸ್‌ಎಂಎಸ್ ದೊರೆಯುತ್ತದೆ. ಹೆಚ್ಚುವರಿಯಾಗಿ ವಿಕೆಂಡ್‌ ಡೇಟಾ ರೋಲ್‌ಓವರ್ ಸೌಲಭ್ಯ ಸಹ ಸಿಗಲಿದೆ. ವಿ ಮೊಬೈಲ್ ಆಪ್‌ ಈ ಯೋಜನೆಯನ್ನು ರೀಚಾರ್ಜ್ ಮಾಡುವುದರಿಂದ ಬಳಕೆದಾರರಿಗೆ 5GB ಬೋನಸ್ ಡೇಟಾ

ಏರ್‌ಟೆಲ್ 299ರೂ. ರೀಚಾರ್ಜ್‌ ಪ್ಲ್ಯಾನ್‌

ಭಾರ್ತಿ ಏರ್‌ಟೆಲ್‌ ಸಂಸ್ಥೆಯ 299ರೂ. ಪ್ರಿಪೇಯ್ಡ್ ಪ್ಲ್ಯಾನ್‌ ಕೂಡಾ ಒಟ್ಟು 28 ದಿನಗಳ ವ್ಯಾಲಿಡಿಟಿ ಸೌಲಭ್ಯ ಒಳಗೊಂಡಿದೆ. ಈ ವೇಳೆ ಗ್ರಾಹಕರಿಗೆ ಪ್ರತಿದಿನ 1.5 GB ದೈನಂದಿನ ಡೇಟಾ ಸೌಲಭ್ಯ ದೊರೆಯುತ್ತದೆ. ಇದರ ಜೊತೆಗೆ ಅನಿಯಮಿತ ಧ್ವನಿ ಕರೆ ಮತ್ತು ನಿತ್ಯ 100 ಎಸ್‌ಎಂಎಸ್ ಉಚಿತ ಲಭ್ಯವಾಗಲಿವೆ. ಹೆಚ್ಚುವರಿಯಾಗಿ ಏರ್ಟೆಲ್ ಎಕ್ಸ್‌ಸ್ಟ್ರೀಮ್ ಮತ್ತು ವಿಂಕ್ ಮ್ಯೂಸಿಕ್‌ಗೆ ಚಂದಾದಾರಿಕೆ ಪ್ರಯೋಜನದ ಸೌಲಭ್ಯ ಸಹ ಸಿಗಲಿದೆ.

ಜಿಯೋ 299ರೂ. ರೀಚಾರ್ಜ್‌ ಪ್ಲ್ಯಾನ್‌

ರಿಲಯನ್ಸ್‌ ಜಿಯೋ ಸಂಸ್ಥೆಯ 299ರೂ. ರೀಚಾರ್ಜ್‌ ಯೋಜನೆಯು ಕೂಡಾ ಒಟ್ಟು 28 ದಿನಗಳ ವ್ಯಾಲಿಡಿಟಿ ಸೌಲಭ್ಯವನ್ನು ಹೊಂದಿದೆ. ಈ ಅವಧಿಯಲ್ಲಿ ಬಳಕೆದಾರರಿಗೆ ಪ್ರತಿದಿನ 2 GB ದೈನಂದಿನ ಡೇಟಾ ಸೌಲಭ್ಯ ದೊರೆಯಲಿದ್ದು, ಒಟ್ಟಾರೇ ಪೂರ್ಣ ವ್ಯಾಲಿಡಿಟಿ ಅವಧಿಗೆ ಒಟ್ಟು 56GB ಪ್ರಯೋಜನ ಲಭ್ಯವಾಗಲಿದೆ. ಇದರ ಜೊತೆಗೆ ಅನಿಯಮಿತ ವಾಯಿಸ್ ಕರೆ ಮತ್ತು 100 ಎಸ್‌ಎಂಎಸ್ ದೊರೆಯುತ್ತದೆ. ಹೆಚ್ಚುವರಿಯಾಗಿ ಜಿಯೋ ಟಿವಿ, ಜಿಯೋ ಮೂವಿಸ್, ಜಿಯೋ ನ್ಯೂಸ್ ಹಾಗೂ ಇತರೆ ಸೇವೆಗಳು ಸಿಗಲಿವೆ.

ಯಾವುದು ಬೆಸ್ಟ್‌?

ಜಿಯೋ, ವಿ ಟೆಲಿಕಾಂ ಹಾಗೂ ಏರ್‌ಟೆಲ್‌ ಟೆಲಿಕಾಂ ಈ ಮೂರು ಸಂಸ್ಥೆಗಳ 299ರೂ. ಯೋಜನೆಯು ಆಕರ್ಷಕ ಎನಿಸುತ್ತದೆ. ಮೂರು ಯೋಜನೆಗಳ 28 ದಿನಗಳ ವ್ಯಾಲಿಡಿಟಿ ಪಡೆದಿವೆ. ಅದಾಗ್ಯೂ, ಕೆಲವೊಂದು ಪ್ರಯೋಜನಗಳಲ್ಲಿ ಭಿನ್ನತೆಗಳು ಇವೆ. ಈ ಮೊತ್ತದ ಯೋಜನೆಯಲ್ಲಿ ಅಧಿಕ ದೈನಂದಿನ ಡೇಟಾ ಸೌಲಭ್ಯ ಅಗತ್ಯ ಎನಿಸಿದರೆ, ಜಿಯೋ ನಿತ್ಯ 2GB ಡೇಟಾ ಸೌಲಭ್ಯ ಪಡೆದಿದ್ದು, ಹೆಚ್ಚು ಆಕರ್ಷಕವಾಗಿ ಕಾಣಿಸುತ್ತದೆ.

Best Mobiles in India

English summary
Jio vs Airtel vs Vi telecom Rs 299 Recharge Plan Compare: which one better. check details here.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+