ಪ್ರತಿದಿನ 2GB ಮತ್ತು 3GB ಡೇಟಾ ಅಗತ್ಯವೇ?..ಇಲ್ಲಿವೆ ಬೆಸ್ಟ್ ಪ್ಲ್ಯಾನ್‌ಗಳು!
ಕೊರೊನಾ ವೈರಸ್ ಹರಡದಂತೆ ತಡೆಯಲು ಸರ್ಕಾರ ದೇಶದಲ್ಲಿ 21 ದಿನಗಳ ಕಾಲ ಲಾಕ್‌ಡೌನ್ ಘೋಷಿಸಿದೆ. ಈ ವೇಳೆ ಮನೆಯಲ್ಲಿ ಇರುವವರಿಗೆ ಹೆಚ್ಚಿನ ಇಂಟರ್ನೆಟ್ ಅಗತ್ಯ ಅನಿಸುತ್ತದೆ. ಇನ್ನೊಂದೆಡೆ ಬಹುತೇಕ ಸಂಸ್ಥೆಗಳು ವರ್ಕ್ ಫ್ರಂ ಹೋಮ್ ವ್ಯವಸ್ಥೆಯನ್ನು ತನ್ನ ಉದ್ಯೋಗಿಗಳಿಗೆ ಕಲ್ಪಿಸಿದೆ. ಈ ನಿಟ್ಟಿನಲ್ಲಿ ಟೆಲಿಕಾಂ ಸಂಸ್ಥೆಗಳು ಅಧಿಕ ಡೇಟಾ ಯೋಜನೆಗಳನ್ನು ತಿಳಿಸಿವೆ. ಅವುಗಳಲ್ಲಿ ಕೆಲವು 2GB ಡೇಟಾ ಪ್ರಯೋಜನಗಳನ್ನು ಹೊಂದಿವೆ.

ಜಿಯೋ, ಏರ್‌ಟೆಲ್ ಟೆಲಿಕಾಂಗಳ ಕೆಲವು ಪ್ಲ್ಯಾನ್‌ಗಳು ಪ್ರತಿದಿನ 2GB ಡೇಟಾ ಸೌಲಭ್ಯ ಹೊಂದಿವೆ. ಹಾಗೆಯೇ ವೊಡಾಫೋನ್ ಕೆಲವು ಪ್ಲ್ಯಾನ್‌ಗಳು 3GB ಡೇಟಾ ಪ್ರಯೋಜನ ಪಡೆದಿವೆ. ಈ ಅಧಿಕ ಡೇಟಾ ಯೋಜನೆಗಳು ಪ್ರಸ್ತತ ಅಗತ್ಯ ಅನಿಸುತ್ತವೆ. ಮನೆಯಲ್ಲಿಯೇ ಇರುವುದರಿಂದ ಹೆಚ್ಚಿನ ಡೇಟಾ ಅಗತ್ಯ ಬೇಕಾಗಿರುತ್ತದೆ. ಹಾಗಾದರೇ ಜಿಯೋ, ಏರ್‌ಟೆಲ್ ಮತ್ತು ವೊಡಾಫೋನ್ ಅಧಿಕ ಡೇಟಾ ಯೋಜನೆಗಳ/ಪ್ಲ್ಯಾನ್‌ಗಳ ಬಗ್ಗೆ ಈ ಲೇಖನದಲ್ಲಿ ತಿಳಿಸಲಾಗಿದೆ. ಮುಂದೆ ಓದಿರಿ.

ಜಿಯೋ 249ರೂ. ಪ್ಲ್ಯಾನ್
ಜಿಯೋದ ಈ ಪ್ಲ್ಯಾನಿನಲ್ಲಿ ಪ್ರತಿದಿನ 2GB ಇಂಟರ್ನೆಟ್ ಪ್ರಯೋಜನ ಸಿಗುತ್ತದೆ. ಹಾಗೆಯೇ ಜಿಯೋದಿಂದ ಜಿಯೋ ನೆಟವರ್ಕ ಕರೆಗಳು ಉಚಿತವಾಗಿರುತ್ತವೆ. ಜಿಯೋದಿಂದ ಇತರೆ ನೆಟವರ್ಕ ಕರೆಗಳಿಗೆ ಉಚಿತ 1,000 ನಿಮಿಷಗಳ FUP ಮಿತಿ ಇದೆ. ಇದರೊಂದಿಗೆ ಪ್ರತಿದಿನ 100ಎಸ್ಎಮ್ಎಸ್ ಸೌಲಭ್ಯ ಲಭ್ಯ. ಈ ಪ್ಲ್ಯಾನ್ ಒಟ್ಟು 28 ದಿನಗಳ ವ್ಯಾಲಿಡಿಟಿ ಅವಧಿ ಹೊಂದಿದೆ.

ಜಿಯೋ 444ರೂ. ಪ್ಲ್ಯಾನ್
ಜಿಯೋದ ಈ ಪ್ಲ್ಯಾನ್ ಒಟ್ಟು 56 ದಿನಗಳ ವ್ಯಾಲಿಡಿಟಿ ಹೊಂದಿದ್ದು, ಈ ಅವಧಿಯಲ್ಲಿ ಪ್ರತಿದಿನ 2GB ಡೇಟಾ ಪ್ರಯೋಜನ ಸಿಗುತ್ತದೆ. (ಒಟ್ಟು ಡೇಟಾ 112GB). ಹಾಗೆಯೇ ಜಿಯೋದಿಂದ ಜಿಯೋ ನೆಟವರ್ಕ ಕರೆಗಳು ಉಚಿತವಾಗಿರುತ್ತವೆ. ಜಿಯೋದಿಂದ ಇತರೆ ನೆಟವರ್ಕ ಕರೆಗಳಿಗೆ ಉಚಿತ 2,000 ನಿಮಿಷಗಳ FUP ಮಿತಿ ಇದೆ. ಇದರೊಂದಿಗೆ ಪ್ರತಿದಿನ 100ಎಸ್ಎಮ್ಎಸ್ ಸೌಲಭ್ಯ ಲಭ್ಯ ಪೂರ್ಣ ಅವಧಿಗೆ ಒಟ್ಟು 2000ಎಸ್ಎಮ್ಎಸ್‌ಗಳ ಪ್ರಯೋಜನ.

ಜಿಯೋ 599ರೂ. ಪ್ಲ್ಯಾನ್
ಜಿಯೋ 599ರೂ. ಪ್ರೀಪೇಯ್ಡ್ ಪ್ಲ್ಯಾನ್ ಒಟ್ಟು 84 ದಿನಗಳ ವ್ಯಾಲಿಡಿಟಿ ಅವಧಿಯನ್ನು ಪಡೆದುಕೊಂಡಿದೆ. ಈ ಅವಧಿಯಲ್ಲಿ ಈ ಪ್ಲ್ಯಾನ್ ಸಹ ಪ್ರತಿದಿನ 2GB ಡೇಟಾ ಪ್ರಯೋಜನವನ್ನು ಹೊಂದಿದೆ. ಹಾಗೆಯೇ ಪ್ರತಿದಿನ 100 ಉಚಿತ ಎಸ್ಎಮ್ಎಸ್ ಸೌಲಭ್ಯ ಒಳಗೊಂಡಿದೆ. ಇದರೊಂದಿಗೆ ಜಿಯೋದಿಂದ ಜಿಯೋಗೆ ಅನಿಯಮಿತ ಉಚಿತ ಕರೆಗಳ ಪ್ರಯೋಜನ ಪಡೆದಿದ್ದು, ಜಿಯೋದಿಂದ ಇತರೆ ನೆಟವರ್ಕ ಕರೆಗಳಿಗೆ 3000 ಉಚಿತ ನಿಮಿಷಗಳ ಮಿತಿ ಹೊಂದಿದೆ.

ಜಿಯೋ 251ರೂ. ಪ್ಲ್ಯಾನ್
ವರ್ಕ್ ಫ್ರಂ ಹೋಮ್ ವ್ಯವಸ್ಥೆಯನ್ನು ಬೆಂಬಲಿಸಿ ಜಿಯೋ ಈ ಕೊಡುಗೆಯನ್ನು ನೀಡಿದೆ. ಈ ಪ್ರೀಪೇಯ್ಡ್ ಒಟ್ಟು 51 ದಿನಗಳ ವ್ಯಾಲಿಡಿಟಿ ಹೊಂದಿದ್ದು, ಪ್ರತಿದಿನ 2GB ಡೇಟಾ ಪ್ರಯೋಜನ ದೊರೆಯಲಿದೆ. ಅಂದರೇ ಒಟ್ಟು ವ್ಯಾಲಿಡಿಟಿ ಅವಧಿಗೆ 102GB ಡೇಟಾ ಸೌಲಭ್ಯ ಲಭ್ಯವಾಗುತ್ತದೆ. ಈ ಯೋಜನೆಯಲ್ಲಿ ವಾಯಿಸ್ ಕರೆ ಹಾಗೂ ಎಸ್ಎಮ್ಎಸ್ ಸೌಲಭ್ಯ ಇರುವುದಿಲ್ಲ. ಇದು ಪೂರ್ಣ ಡೇಟಾ ಯೋಜನೆ.

ಏರ್‌ಟೆಲ್ 298ರೂ. ಪ್ಲ್ಯಾನ್
ಏರ್‌ಟೆಲ್‌ನ 298ರೂ. ಪ್ರೀಪೇಡ್ ಪ್ಲ್ಯಾನ್ ಒಟ್ಟು 28 ದಿನಗಳ ವ್ಯಾಲಿಡಿಟಿ ಅವಧಿಯನ್ನು ಹೊಂದಿದೆ. ಈ ಅವಧಿಯಲ್ಲಿ ಅನಿಯಮಿತ ಉಚಿತ ಲೋಕಲ್ ಮತ್ತು ನ್ಯಾಶನಲ್ ಕರೆಗಳ ಸೌಲಭ್ಯ ದೊರೆಯುತ್ತದೆ. ಇದರೊಂದಿಗೆ ಪ್ರತಿದಿನ 2GB ಡೇಟಾ ಹಾಗೂ 100 ಎಸ್ಎಮ್ಎಸ್ ಸೌಲಭ್ಯ ಸಹ ಸಿಗಲಿದೆ. ಹಾಗೆಯೆ ಈ ಪ್ಲ್ಯಾನ್ ಏರ್‌ಟೆಲ್ Wynk Music ಸೇವೆಯನ್ನು ಒದಗಿಸುತ್ತದೆ.

ಏರ್‌ಟೆಲ್‌ನ 349ರೂ. ಪ್ಲ್ಯಾನ್
ಏರ್‌ಟೆಲ್‌ನ 349ರೂ. ಪ್ರೀಪೇಡ್ ಪ್ಲ್ಯಾನ್ ಸಹ ಒಟ್ಟು 28 ದಿನಗಳ ವ್ಯಾಲಿಡಿಟಿ ಅವಧಿಯನ್ನು ಹೊಂದಿದೆ. ಈ ಅವಧಿಯಲ್ಲಿ ಅನಿಯಮಿತ ಉಚಿತ ಲೋಕಲ್ ಮತ್ತು ನ್ಯಾಶನಲ್ ಕರೆಗಳ ಸೌಲಭ್ಯ ದೊರೆಯುತ್ತದೆ. ಇದರೊಂದಿಗೆ ಪ್ರತಿದಿನ 2GB ಡೇಟಾ ಹಾಗೂ 100 ಎಸ್ಎಮ್ಎಸ್ ಸೌಲಭ್ಯ ಸಹ ಸಿಗಲಿದೆ. ಹಾಗೆಯೆ ಈ ಪ್ಲ್ಯಾನ್ ಏರ್‌ಟೆಲ್ Wynk Music ಸೇವೆಯನ್ನು ಒದಗಿಸುತ್ತದೆ.

ಏರ್‌ಟೆಲ್ 449ರೂ. ಪ್ಲ್ಯಾನ್
ಏರ್‌ಟೆಲ್‌ನ 449ರೂ. ಪ್ರೀಪೇಡ್ ಪ್ಲ್ಯಾನ್ ಒಟ್ಟು 56 ದಿನಗಳ ವ್ಯಾಲಿಡಿಟಿ ಅವಧಿಯನ್ನು ಹೊಂದಿದೆ. ಈ ಅವಧಿಯಲ್ಲಿ ಅನಿಯಮಿತ ಉಚಿತ ಲೋಕಲ್ ಮತ್ತು ನ್ಯಾಶನಲ್ ಕರೆಗಳ ಸೌಲಭ್ಯ ದೊರೆಯುತ್ತದೆ. ಇದರೊಂದಿಗೆ ಪ್ರತಿದಿನ 2GB ಡೇಟಾ ಹಾಗೂ 100 ಎಸ್ಎಮ್ಎಸ್ ಸೌಲಭ್ಯ ಸಹ ಸಿಗಲಿದೆ. ಹಾಗೆಯೆ ಈ ಪ್ಲ್ಯಾನ್ ಏರ್‌ಟೆಲ್ Wynk Music ಸೇವೆಯನ್ನು ಒದಗಿಸುತ್ತದೆ.

ವೊಡಾಫೋನ್ 249ರೂ.ಪ್ಲ್ಯಾನ್
ವೊಡಾಫೋನಿನ 249ರೂ.ಪ್ಲ್ಯಾನ್ ಸಹ 28 ದಿನಗಳ ವ್ಯಾಲಿಡಿಟಿ ಹೊಂದಿದ್ದು, ಈ ಅವಧಿಯಲ್ಲಿ ಅನಿಯಮಿತ ಉಚಿತ ಕರೆಗಳ ಸೌಲಭ್ಯ ದೊರೆಯುತ್ತದೆ. ಜೊತೆಗೆ ಪ್ರತಿದಿನ 1.5GB ಡೇಟಾ+ ಹೆಚ್ಚುವರಿ 1.5GB ಡೇಟಾ ಒಟ್ಟು ಪ್ರತಿದಿನ 3GB ಡೇಟಾ ಹಾಗೂ ಪ್ರತಿದಿನ 100 ಉಚಿತ ಎಸ್‌ಎಮ್‌ಎಸ್‌ಗಳ ಸೌಲಭ್ಯ ದೊರೆಯಲಿದೆ. ಇದರೊಂದಿಗೆ ವೊಡಾಫೋನ್ ಪ್ಲೇ ಹಾಗೂ ಜೀ5 ಆಪ್ ಚಂದಾದಾರಿಕೆ ಸೌಲಭ್ಯ ಲಭ್ಯ.

ವೊಡಾಫೋನ್ 399ರೂ.ಪ್ಲ್ಯಾನ್
ವೊಡಾಫೋನಿನ 399ರೂ.ಪ್ಲ್ಯಾನ್ ಸಹ 56 ದಿನಗಳ ವ್ಯಾಲಿಡಿಟಿ ಹೊಂದಿದ್ದು, ಈ ಅವಧಿಯಲ್ಲಿ ಅನಿಯಮಿತ ಉಚಿತ ಕರೆಗಳ ಸೌಲಭ್ಯ ದೊರೆಯುತ್ತದೆ. ಇದರೊಂದಿಗೆ ಪ್ರತಿದಿನ 1.5GB ಡೇಟಾ+ ಹೆಚ್ಚುವರಿ 1.5GB ಡೇಟಾ ಒಟ್ಟು ಪ್ರತಿದಿನ 3GB ಡೇಟಾ ಹಾಗೂ ಪ್ರತಿದಿನ 100 ಉಚಿತ ಎಸ್‌ಎಮ್‌ಎಸ್‌ಗಳ ಸೌಲಭ್ಯ ದೊರೆಯಲಿದೆ. ಇದರೊಂದಿಗೆ ವೊಡಾಫೋನ್ ಪ್ಲೇ ಹಾಗೂ ಜೀ5 ಆಪ್ ಚಂದಾದಾರಿಕೆ ಸೌಲಭ್ಯ ಲಭ್ಯ.

ವೊಡಾಫೋನ್ 599ರೂ.ಪ್ಲ್ಯಾನ್
ವೊಡಾಫೋನಿನ 599ರೂ.ಪ್ಲ್ಯಾನ್ ಸಹ 84 ದಿನಗಳ ವ್ಯಾಲಿಡಿಟಿ ಹೊಂದಿದ್ದು, ಈ ಅವಧಿಯಲ್ಲಿ ಅನಿಯಮಿತ ಉಚಿತ ಕರೆಗಳ ಸೌಲಭ್ಯ ದೊರೆಯುತ್ತದೆ. ಹಾಗೆಯೇ ಪ್ರತಿದಿನ 1.5GB ಡೇಟಾ+ ಹೆಚ್ಚುವರಿ 1.5GB ಡೇಟಾ ಒಟ್ಟು ಪ್ರತಿದಿನ 3GB ಡೇಟಾ ಹಾಗೂ ಪ್ರತಿದಿನ 100 ಉಚಿತ ಎಸ್‌ಎಮ್‌ಎಸ್‌ಗಳ ಸೌಲಭ್ಯ ದೊರೆಯಲಿದೆ. ಇದರೊಂದಿಗೆ ವೊಡಾಫೋನ್ ಪ್ಲೇ ಹಾಗೂ ಜೀ5 ಆಪ್ ಚಂದಾದಾರಿಕೆ ಸೌಲಭ್ಯ ಲಭ್ಯ.

ಕೊನೆಯ ಮಾತು
ಜಿಯೊ, ಏರ್‌ಟೆಲ್ ಮತ್ತು ವೊಡಾಫೋನ್ ಟೆಲಿಕಾಂ ಸಂಸ್ಥೆಗಳು ಅಧಿಕ ಡೇಟಾ ಪ್ರಯೋಜನೆಯ ಪ್ಲ್ಯಾನ್‌ಗಳನ್ನು ನೀಡಿವೆ. ಆದರೆ ನಿಮ್ಮ ಪ್ರದೇಶದಲ್ಲಿ ಯಾವ ನೆಟವರ್ಕ ಸಿಗ್ನಲ್ ಕವರೇಜ್ ಉತ್ತಮವಾಗಿದೆ ಮತ್ತು ಇಂಟರ್ನೆಟ್ ವೇಗ ಹೇಗಿದೆ, ವ್ಯಾಲಿಡಿಟಿ ಅವಧಿ ಎಷ್ಟು, ಎಂಬ ಅಂಶಗಳು ಮುಖ್ಯವಾಗುತ್ತದೆ.


Click it and Unblock the Notifications








