Home
ಸುದ್ದಿಜಾಲ

ಜಿಯೋ, ಏರ್‌ಟೆಲ್‌, ವೊಡಾಫೋನ್‌ ಹೊಸ ಪ್ಲ್ಯಾನ್‌ಗಳಲ್ಲಿ ಬೆಸ್ಟ್ ಯಾವುದು?

ದೇಶದಲ್ಲಿ ಎಲ್ಲ ಖಾಸಗಿ ಟೆಲಿಕಾಂ ಸಂಸ್ಥೆಗಳ ಕರೆ ಮತ್ತು ಡೇಟಾ ಪ್ಲ್ಯಾನ್‌ ದರಗಳು ಇದೀಗ ಏರಿಕೆ ಆಗಿವೆ. ಹೊಸ ಬೆಲೆಗಳು ಬಳಕೆದಾರರನ್ನು ಕಂಗೆಡಿಸಿದ್ದು, ಒಂಥರಾ ಬಿಸಿ ತುಪ್ಪದಂತಾಗಿದೆ. ಸದ್ಯ ಇರುವ ನೆಟವರ್ಕನಲ್ಲಿಯೇ ಅತ್ಯತ್ತಮ ಪ್ಲ್ಯಾನ್‌ಗಳ ಬಗ್ಗೆ ಬಳಕೆದಾರರು ಯೋಚಿಸುತ್ತಿದ್ದಾರೆ. ಏರ್‌ಟೆಲ್‌, ವೊಡಾಫೋನ್ ಮತ್ತು ಜಿಯೋ ಸಂಸ್ಥೆಗಳ ಹೊಸ ಪ್ಲ್ಯಾನ್‌ಗಳ ದರಗಳ ಪ್ರಯೋಜನಗಳು ಹೇಗಿವೆ?..ಯಾವುದು ಉತ್ತಮ ಪ್ಲ್ಯಾನ್ ಎನ್ನುವ ಚರ್ಚೆಯಲ್ಲಿದ್ದಾರೆ.

ಜಿಯೋ, ಏರ್‌ಟೆಲ್ ಮತ್ತು ವೊಡಾಫೋನ್

ಹೌದು, ಜಿಯೋ, ಏರ್‌ಟೆಲ್ ಮತ್ತು ವೊಡಾಫೋನ್ ಸಂಸ್ಥೆಗಳು ನೂತನ ಪ್ರೀಪೇಡ್ ಪ್ಲ್ಯಾನ್‌ಗಳನ್ನು ಜಾರಿ ಮಾಡಿವೆ. ಮೂರು ಸಂಸ್ಥೆಗಳ ಬಹುತೇಕ ಪ್ಲ್ಯಾನ್‌ಗಳು ಒಂದಕ್ಕೊಂದು ಹೋಲಿಕೆಯನ್ನು ಹೊಂದಿದ್ದು, ಹೆಚ್ಚಿನ ಅಂತರ ಕಾನಿಸುವುದಿಲ್ಲ. ಆದರೆ ಜಿಯೋ ಸ್ವಲ್ಪ ಅಗ್ಗ ಅನಿಸಿದರೂ ಆ ಪ್ಲ್ಯಾನ್‌ಗಳು ಎಲ್ಲ ಬಳಕೆದಾರರಿಗೂ ಸೂಕ್ತ ವಾಗುವುದಿಲ್ಲ. ಏಕೆಂದರೇ ಸದ್ಯ ಬಳಕೆದಾರರು ಅಧಿಕ ಡೇಟಾ, ಕರೆ ಮತ್ತು ವ್ಯಾಲಿಡಿಟಿ ಅಂಶಗಳನ್ನು ಗಮನಿಸುತ್ತಾರೆ. ಜಿಯೋ, ಏರ್‌ಟೆಲ್ ಮತ್ತು ವೊಡಾಫೋನ್ ಸಂಸ್ಥೆಗಳ ಹೊಸ ಪ್ಲ್ಯಾನ್‌ಗಳಲ್ಲಿ ದೀರ್ಘಾವಧಿಯ ಪ್ಲ್ಯಾನ್‌ಗಳಲ್ಲಿ ಯಾವುದು ಉತ್ತಮ ಆಯ್ಕೆ ಎನ್ನುವ ಬಗ್ಗೆ ಈ ಲೇಖನದಲ್ಲಿ ತಿಳಿಸಲಾಗಿದೆ ಮುಂದೆ ಓದಿರಿ.

ಜಿಯೋ 84 ದಿನಗಳ ವ್ಯಾಲಿಡಿಟಿ ಪ್ಲ್ಯಾನ್‌ಗಳು

ಜಿಯೋ 84 ದಿನಗಳ ವ್ಯಾಲಿಡಿಟಿ ಪ್ಲ್ಯಾನ್‌ಗಳು

ಜಿಯೋ 84 ದಿನಗಳ ವ್ಯಾಲಿಡಿಟಿ ಎರಡು ಹೊಸ ಪ್ಲ್ಯಾನ್‌ಗಳನ್ನು ಬಿಡುಗಡೆ ಮಾಡಿದ್ದು, ಅವುಗಳು ಕ್ರಮವಾಗಿ 555ರೂ ಮತ್ತು 599ರೂ.ಗಳ ಬೆಲೆಯನ್ನು ಹೊಂದಿವೆ. ಈ ಎರಡು ಪ್ಲ್ಯಾನ್‌ಗಳು ಸಹ ಜಿಯೋ ಟು ಜಿಯೋ ಕರೆ ಉಚಿತ ಹಾಗೂ ಇತರೆ ಟೆಲಿಕಾಂಗಳಿಗೆ 3000 ನಿಮಿಷಗಳ ಉಚಿತ ಕರೆ ಮಿತಿಯ ಸೌಲಭ್ಯ ಹೊಂದಿವೆ. ಅವುಗಳಲ್ಲಿ 555ರೂ. ಪ್ಲ್ಯಾನಿನಲ್ಲಿ ಪ್ರತಿದಿನ 1.5GB ಲಭ್ಯವಾದರೇ, 599ರೂ.ಪ್ಲ್ಯಾನಿನಲ್ಲಿ ಪ್ರತಿದಿನ 2GB ಡೇಟಾ ಪ್ರಯೋಜನ ಸಿಗಲಿದೆ.

ಏರ್‌ಟೆಲ್ ಮತ್ತು ವೊಡಾಫೋನ್ 84 ದಿನಗಳ ವ್ಯಾಲಿಡಿಟಿ ಪ್ಲ್ಯಾನ್

ಏರ್‌ಟೆಲ್ ಮತ್ತು ವೊಡಾಫೋನ್ 84 ದಿನಗಳ ವ್ಯಾಲಿಡಿಟಿ ಪ್ಲ್ಯಾನ್

ಏರ್‌ಟೆಲ್‌ನ 598ರೂ ಪ್ರೀಪೇಡ್‌ ಪ್ಲ್ಯಾನ್‌ ಸಹ ಒಟ್ಟು 84 ದಿನಗಳ ವ್ಯಾಲಿಡಿಟಿ ಅವಧಿಯನ್ನು ಹೊಂದಿದ್ದು, ಈ ಅವಧಿಯಲ್ಲಿ ಅನಿಯಮಿತ ಉಚಿತ ಕರೆಗಳ ಸೌಲಭ್ಯ ಹಾಗೂ ಪ್ರತಿದಿನ 1.5GB ಡೇಟಾ ಹಾಗೂ 100 ಎಸ್‌ಎಮ್‌ಎಸ್‌ ಸೌಲಭ್ಯ ಲಭ್ಯ. ಇನ್ನು ವೊಡಾಫೋನಿನ 599ರೂ.ಪ್ಲ್ಯಾನ್ ಸಹ 84 ದಿನಗಳ ವ್ಯಾಲಿಡಿಟಿ ಹೊಂದಿದ್ದು, ಇತರೆ ನೆಟವರ್ಕ ಕರೆಗಳಿಗೆ 1000ನಿಮಿಷಗಳು ಲಿಮಿಟ್ ಇರುತ್ತದೆ. ಇದರೊಂದಿಗೆ ಪ್ರತಿದಿನ 1.5GB ಡೇಟಾ ಹಾಗೂ ಪ್ರತಿದಿನ 100 ಉಚಿತ ಎಸ್‌ಎಮ್‌ಎಸ್‌ಗಳ ಸೌಲಭ್ಯ ದೊರೆಯಲಿದೆ.

ಏರ್‌ಟೆಲ್ ಮತ್ತು ವೊಡಾಫೋನ್ 84 ದಿನಗಳ ವ್ಯಾಲಿಡಿಟಿ + ಅಧಿಕ ಡೇಟಾ

ಏರ್‌ಟೆಲ್ ಮತ್ತು ವೊಡಾಫೋನ್ 84 ದಿನಗಳ ವ್ಯಾಲಿಡಿಟಿ + ಅಧಿಕ ಡೇಟಾ

ಏರ್‌ಟೆಲ್‌ನ 698ರೂ ಪ್ರೀಪೇಡ್‌ ಪ್ಲ್ಯಾನ್‌ ಸಹ ಒಟ್ಟು 84 ದಿನಗಳ ವ್ಯಾಲಿಡಿಟಿ ಅವಧಿಯನ್ನು ಹೊಂದಿದ್ದು, ಈ ಅವಧಿಯಲ್ಲಿ ಅನಿಯಮಿತ ಉಚಿತ ಕರೆಗಳ ಸೌಲಭ್ಯ ಹಾಗೂ ಪ್ರತಿದಿನ 2GB ಡೇಟಾ ಹಾಗೂ 100 ಎಸ್‌ಎಮ್‌ಎಸ್‌ ಸೌಲಭ್ಯ ಲಭ್ಯ. ಇನ್ನು ವೊಡಾಫೋನಿನ 699ರೂ.ಪ್ಲ್ಯಾನ್ ಸಹ 84 ದಿನಗಳ ವ್ಯಾಲಿಡಿಟಿ ಹೊಂದಿದ್ದು, ಇತರೆ ನೆಟವರ್ಕ ಕರೆಗಳಿಗೆ 1000 ನಿಮಿಷಗಳು ಲಿಮಿಟ್(FUP) ಇರುತ್ತದೆ. ಇದರೊಂದಿಗೆ ಪ್ರತಿದಿನ 2GB ಡೇಟಾ ಹಾಗೂ ಪ್ರತಿದಿನ 100 ಉಚಿತ ಎಸ್‌ಎಮ್‌ಎಸ್‌ಗಳ ಸೌಲಭ್ಯ ದೊರೆಯಲಿದೆ.

ಜಿಯೋ 365 ದಿನಗಳ ವ್ಯಾಲಿಡಿಟಿ ಪ್ಲ್ಯಾನ್‌

ಜಿಯೋ 365 ದಿನಗಳ ವ್ಯಾಲಿಡಿಟಿ ಪ್ಲ್ಯಾನ್‌

ಜಿಯೋ ಹೊಸದೊಂದು ವಾರ್ಷಿಕ (365 ದಿನಗಳು) ಪ್ರೀಪೇಡ್‌ ಪ್ಲ್ಯಾನ್‌ ರಿಲೀಸ್ ಮಾಡಿದ್ದು, ಈ ಪ್ಲ್ಯಾನ್‌ 2199ರೂ. ಪ್ರೈಸ್‌ನಲ್ಲಿದೆ. ಗ್ರಾಹಕರಿಗೆ ಈ ಅವಧಿಯಲ್ಲಿ ಜಿಯೋ ಟು ಜಿಯೋ ಉಚಿತ ಕರೆ ಹಾಗೂ ಇತರೆ ಟೆಲಿಕಾಂಗಳಿಗೆ ಒಟ್ಟು 12000 ನಿಮಿಷಗಳ ಉಚಿತ ಕರೆಯ ಮಿತಿಯ ಸೌಲಭ್ಯ ಸಿಗಲಿದೆ. ಇನ್ನು ಪ್ರತಿದಿನ 1.5GB ಡೇಟಾ ಪ್ರಯೋಜನ ದೊರೆಯಲಿದೆ.

ಏರ್‌ಟೆಲ್ ಮತ್ತು ವೊಡಾಫೋನ್ 365 ದಿನಗಳ ವ್ಯಾಲಿಡಿಟಿ ಪ್ಲ್ಯಾನ್

ಏರ್‌ಟೆಲ್ ಮತ್ತು ವೊಡಾಫೋನ್ 365 ದಿನಗಳ ವ್ಯಾಲಿಡಿಟಿ ಪ್ಲ್ಯಾನ್

ಏರ್‌ಟೆಲ್‌ನ 1498ರೂ ದೀರ್ಘಾವಧಿಯ ಪ್ರೀಪೇಡ್‌ ಪ್ಲ್ಯಾನ್‌ ಆಗಿದ್ದು, 365 ದಿನಗಳ ವ್ಯಾಲಿಡಿಟಿ ಅವಧಿಯನ್ನು ಹೊಂದಿದೆ. ಈ ಅವಧಿಯಲ್ಲಿ ಅನಿಯಮಿತ ಉಚಿತ ಕರೆಗಳ ಸೌಲಭ್ಯ ಹಾಗೂ ಒಟ್ಟು 24GB ಡೇಟಾ ಮತ್ತು 3,600 ಎಸ್‌ಎಮ್‌ಎಸ್‌ ಸೌಲಭ್ಯ ಲಭ್ಯ. ಹಾಗೆಯೇ ವೊಡಾಫೋನಿನ 1499ರೂ.ಪ್ಲ್ಯಾನ್ ಸಹ 365 ದಿನಗಳ ವ್ಯಾಲಿಡಿಟಿ ಅವಧಿಯನ್ನು ಹೊಂದಿದ್ದು, ಈ ಅವಧಿಯಲ್ಲಿ ಒಟ್ಟು 24GB ಡೇಟಾ ಹಾಗೂ 3,600 ಎಸ್‌ಎಮ್‌ಎಸ್‌ ಸೌಲಭ್ಯ ಲಭ್ಯವಾಗುತ್ತವೆ. ಹಾಗೂ ಇತರೆ ನೆಟವರ್ಕ ಕರೆಗಳಿಗೆ ಒಟ್ಟು 12,000 ಉಚಿತ ನಿಮಿಷಗಳು ಲಿಮಿಟ್(FUP) ಇರುತ್ತದೆ.

ಏರ್‌ಟೆಲ್ ಮತ್ತು ವೊಡಾಫೋನ್ ವಾರ್ಷಿಕ ವ್ಯಾಲಿಡಿಟಿ + ಅಧಿಕ ಡೇಟಾ

ಏರ್‌ಟೆಲ್ ಮತ್ತು ವೊಡಾಫೋನ್ ವಾರ್ಷಿಕ ವ್ಯಾಲಿಡಿಟಿ + ಅಧಿಕ ಡೇಟಾ

ಏರ್‌ಟೆಲ್‌ನ 2398ರೂ ದೀರ್ಘಾವಧಿಯ ಪ್ರೀಪೇಡ್‌ ಪ್ಲ್ಯಾನ್‌ ಆಗಿದ್ದು, 365 ದಿನಗಳ ವ್ಯಾಲಿಡಿಟಿ ಅವಧಿಯನ್ನು ಹೊಂದಿದೆ. ಈ ಅವಧಿಯಲ್ಲಿ ಅನಿಯಮಿತ ಉಚಿತ ಕರೆಗಳ ಸೌಲಭ್ಯ ಹಾಗೂ ಪ್ರತಿದಿನ 1.5GB ಡೇಟಾ ಹಾಗೂ 100 ಎಸ್‌ಎಮ್‌ಎಸ್‌ ಸೌಲಭ್ಯ ಲಭ್ಯ. ಅದೇ ರೀತಿ ವೊಡಾಫೋನಿನ 2399ರೂ.ಪ್ಲ್ಯಾನ್ ಸಹ 365 ದಿನಗಳ ವ್ಯಾಲಿಡಿಟಿ ಅವಧಿಯನ್ನು ಹೊಂದಿದ್ದು, ಈ ಅವಧಿಯಲ್ಲಿ ಪ್ರತಿದಿನ 1.5GB ಡೇಟಾ ಹಾಗೂ 100 ಎಸ್‌ಎಮ್‌ಎಸ್‌ ಸೌಲಭ್ಯ ಲಭ್ಯ. ಹಾಗೂ ಇತರೆ ನೆಟವರ್ಕ ಕರೆಗಳಿಗೆ ಒಟ್ಟು 12,000 ಉಚಿತ ನಿಮಿಷಗಳು ಲಿಮಿಟ್(FUP) ಇರುತ್ತದೆ.

Best Mobiles in India

English summary
Jio, Airtel and Vodafone telecoms Hike their plans. In these new plans which one is the best plan for validity and data. to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+