Home
ಸುದ್ದಿಜಾಲ

Jio vs Vi 666ರೂ. ಪ್ಲ್ಯಾನ್‌: ರೀಚಾರ್ಜ್‌ ಮಾಡಲು ಯಾವುದು ಪ್ಲ್ಯಾನ್‌ ಬೆಸ್ಟ್‌?

ಇತ್ತೀಚಿಗೆ ಖಾಸಗಿ ಟೆಲಿಕಾಂ ಕಂಪನಿಗಳು ರೀಚಾರ್ಜ್‌ ಯೋಜನೆಗಳ ದರ ಏರಿಕೆ ಮಾಡಿ ಗ್ರಾಹಕರಿಗೆ ಶಾಕ್‌ ನೀಡಿವೆ. ಅದಾಗ್ಯೂ, ಚಂದಾದಾರರನ್ನು ಉಳಿಸಿಕೊಳ್ಳಲು, ಹೊಸ ಗ್ರಾಹಕರನ್ನು ಆಕರ್ಷಿಸುವ ಪ್ರಯತ್ನ ಮುನ್ನಡೆಸಿವೆ. ಪ್ರಸ್ತುತ ಅಧಿಕ ವ್ಯಾಲಿಡಿಟಿ ಸೌಲಭ್ಯದ ಪ್ಲ್ಯಾನ್‌ಗಳು ಡಿಮ್ಯಾಂಡ್‌ನಲ್ಲಿ ಕಾಣಿಸಿಕೊಂಡಿವೆ. ಆ ಪೈಕಿ ಬಹುತೇಕ ಚಂದಾದಾರಿಗೆ ಬಜೆಟ್‌ ದರದಲ್ಲಿ ಹೆಚ್ಚಿನ ವ್ಯಾಲಿಡಿಟಿ ಹಾಗೂ ಡೇಟಾ ಸೌಲಭ್ಯ ಇರುವ ಪ್ಲ್ಯಾನ್‌ಗಳು ಗಮನ ಸೆಳದಿವೆ. ಹೀಗೆ ಜಿಯೋ ಹಾಗೂ ವಿ ಟೆಲಿಕಾಂಗಳ 666ರೂ. ಪ್ಲ್ಯಾನ್‌ ಆಕರ್ಷಕ ಎನಿಸಿದೆ.

ಹೌದು, ಜಿಯೋ ಮತ್ತು ವಿ ಈ ಎರಡು ಟೆಲಿಕಾಂಗಳು 666ರೂ. ಬೆಲೆಯ ಪ್ರೀಪೇಯ್ಡ್‌ ರೀಚಾರ್ಜ್‌ ಪ್ಲ್ಯಾನ್‌ ಆಯ್ಕೆ ಒದಗಿಸಿವೆ. ಈ ಎರಡು ಟೆಲಿಕಾಂ ಈ ಮೊತ್ತದ ರೀಚಾರ್ಜ್‌ ಪ್ಲ್ಯಾನಿನಲ್ಲಿ ಆಕರ್ಷಕ ಡೇಟಾ, ದೀರ್ಘ ವ್ಯಾಲಿಡಿಟಿ, ಅನಿಯಮಿತ ವಾಯಿಸ್‌ ಕರೆ ಹಾಗೂ ಎಸ್‌ಎಮ್‌ಎಸ್‌ ಪ್ರಯೋಜನಗಳು ಕೂಡಾ ದೊರೆಯುತ್ತವೆ. ಅದಾಗ್ಯೂ, ಈ ಎರಡು ಪ್ಲ್ಯಾನಿನಲ್ಲಿ ಭಿನ್ನತೆ ಕಾಣಬಹುದು. ಹಾಗಾದರೇ ಜಿಯೋ ಹಾಗೂ ವಿ ಟೆಲಿಕಾಂನ 666ರೂ. ಪ್ಲ್ಯಾನಿನಲ್ಲಿ ಯಾವುದು ಬೆಸ್ಟ್‌? ಪ್ರಯೋಜನಗಳೆನು ಮುಂದೆ ಓದಿರಿ.

Jio vs Vi 666ರೂ. ಪ್ಲ್ಯಾನ್‌: ರೀಚಾರ್ಜ್‌ ಮಾಡಲು ಯಾವುದು ಪ್ಲ್ಯಾನ್‌ ಬೆಸ್ಟ್‌?

ಜಿಯೋ ಟೆಲಿಕಾಂನ 666ರೂ. ರೀಚಾರ್ಜ್‌ ಯೋಜನೆ

ಜಿಯೋ (Jio) ಟೆಲಿಕಾಂನ 666 ರೂ. ಬೆಲೆಯ ಪ್ರೀಪೇಯ್ಡ್‌ ರೀಚಾರ್ಜ್‌ ಯೋಜನೆಯು ಒಟ್ಟು 70 ದಿನಗಳ ವ್ಯಾಲಿಡಿಟಿ ಪ್ರಯೋಜನ ಪಡೆದಿದೆ. ಈ ಅವಧಿಯಲ್ಲಿ ಗ್ರಾಹಕರಿಗೆ ಪ್ರತಿದಿನ 1.5 GB ಡೇಟಾ ಪ್ರಯೋಜನ ಗ್ರಾಹಕರಿಗೆ ಸಿಗಲಿದೆ. ಅಲ್ಲದೇ ಅನಿಯಮಿತ ಉಚಿತ ವಾಯಿಸ್‌ ಕರೆಗಳ ಪ್ರಯೋಜನ ಹಾಗೂ ಪ್ರತಿದಿನ 100 ಎಸ್ಎಮ್ಎಸ್ ಸೌಲಭ್ಯ ಕೂಡಾ ಗ್ರಾಹಕರಿಗೆ ಲಭ್ಯ ಆಗಲಿದೆ.

ಅಲ್ಲದೇ ಈ ಯೋಜನೆಯ ಒಟ್ಟಾರೇ ಪೂರ್ಣ ವ್ಯಾಲಿಡಿಟಿ (Validity) ಅವಧಿಗೆ ಗ್ರಾಹಕರಿಗೆ ಒಟ್ಟು 105 GB ಡೇಟಾ ಸೌಲಭ್ಯ ಲಭ್ಯ ಆಗಲಿದೆ. ಇದರ ಜೊತೆಗೆ ಹೆಚ್ಚುವರಿ ಯಾಗಿ ಜಿಯೋ ಟಿವಿ, ಜಿಯೋ ಸಿನಿಮಾ ಸೇವೆಗಳು ಕೂಡಾ ಲಭ್ಯ.

ವಿ ಟೆಲಿಕಾಂನ 666ರೂ. ರೀಚಾರ್ಜ್‌ ಯೋಜನೆ

ವಿ ಟೆಲಿಕಾಂನ (Vi Telecom) 666 ರೂ. ದರದ ಪ್ರೀಪೇಯ್ಡ್ ರೀಚಾರ್ಜ್‌ ಯೋಜನೆ ಒಟ್ಟು 64 ದಿನಗಳ ವ್ಯಾಲಿಡಿಟಿ ಅವಧಿಯ ಸೌಲಭ್ಯ ಒಳಗೊಂಡಿದೆ. ಈ ವೇಳೆ ಗ್ರಾಹಕರಿಗೆ ಪ್ರತಿದಿನ 1.5 GB ಡೇಟಾ ಸೌಲಭ್ಯ ಗ್ರಾಹಕರಿಗೆ ಸಿಗಲಿದೆ. ಇದರ ಜೊತೆಗೆ ಅನಿಯಮಿತ ಉಚಿತ ವಾಯಿಸ್‌ ಕರೆಗಳ ಸೌಲಭ್ಯ ಹಾಗೆಯೇ ಪ್ರತಿದಿನ 100 ಎಸ್ಎಮ್ಎಸ್ ಪ್ರಯೋಜನ ಕೂಡಾ ಲಭ್ಯ ಆಗಲಿದೆ.

ಇನ್ನು ಒಟ್ಟಾರೇ ಪೂರ್ಣ ವ್ಯಾಲಿಡಿಟಿ ಅವಧಿಗೆ ಈ ಪ್ರೀಪೇಯ್ಡ್‌ ರೀಚಾರ್ಜ್‌ ಯೋಜನೆಗಲ್ಲಿ ಗ್ರಾಹಕರಿಗೆ 96 GB ಡೇಟಾ ಪ್ರಯೋಜನ ದೊರೆಯುತ್ತದೆ. ಹಾಗೆಯೇ ಈ ಪ್ಲ್ಯಾನಿನಲ್ಲಿ ವಿಕೆಂಡ್‌ ಡೇಟಾ ರೋಲ್‌ಓವರ್ ಸೌಲಭ್ಯ ಸಿಗಲಿದೆ.

ರೀಚಾರ್ಜ್‌ ಮಾಡಲು ಯಾವ ಪ್ಲ್ಯಾನ್‌ ಬೆಸ್ಟ್?

ರಿಯಲನ್ಸ್‌ ಜಿಯೋ ಟೆಲಿಕಾಂ ಮತ್ತು ವಿ ಟೆಲಿಕಾಂನ ಸಂಸ್ಥೆಗಳ 666 ರೂ. ಬೆಲೆಯ ಪ್ರೀಪೇಯ್ಡ್‌ ರೀಚಾರ್ಜ್‌ ಪ್ಲ್ಯಾನ್‌ಗಳು ಬೆಲೆಯಲ್ಲಿ ಒಂದಕ್ಕೊಂದು ಸಾಮ್ಯತೆ ಹೊಂದಿದ್ದರೂ, ಭಿನ್ನತೆ ಪಡೆದಿವೆ. ಮುಖ್ಯವಾಗಿ ಜಿಯೋ ಹಾಗೂ ವಿ ಟೆಲಿಕಾಂನ ಈ ಪ್ಲ್ಯಾನಿನ ವ್ಯಾಲಿಡಿಟಿ ಸೌಲಭ್ಯದಲ್ಲಿ ಭಿನ್ನತೆ ಕಾಣಬಹುದಾಗಿದೆ. ಜಿಯೋ ಟೆಲಿಕಾಂ 70 ದಿನಗಳ ವ್ಯಾಲಿಡಿಟಿ ಪಡೆದಿದ್ದರೇ, ವಿ ಟೆಲಿಕಾಂ 64 ದಿನಗಳ ವ್ಯಾಲಿಡಿಟಿ ಸೌಲಭ್ಯ ಪಡೆದಿದೆ.

ಹಾಗೆಯೇ ಡೇಟಾ ಸೌಲಭ್ಯದಲ್ಲಿಯೂ ಭಿನ್ನತೆ ಕಾಣಬಹುದಾಗಿದೆ. ಜಿಯೋ ಟೆಲಿಕಾಂನಲ್ಲಿ ಪೂರ್ಣ ವ್ಯಾಲಿಡಿಟಿ ಅಬಧಿಗೆ ಒಟ್ಟು 105GB ಡೇಟಾ ಪ್ರಯೋಜನ ಸಿಗಲಿದೆ. ಇನ್ನು ವಿ ಟೆಲಿಕಾಂನಲ್ಲಿ ಪೂರ್ಣ ವ್ಯಾಲಿಡಿಟಿ ಅವಧಿಗೆ ಒಟ್ಟು 96GB ಡೇಟಾ ಪ್ರಯೋಜನ ದೊರೆಯುತ್ತದೆ. ಹೀಗಾಗಿ ಡೇಟಾ ಹಾಗೂ ಹೆಚ್ಚಿನ ವ್ಯಾಲಿಡಿಟಿ ಬೇಕೆ ಎನ್ನುವ ಗ್ರಾಹಕರಿಗೆ ಜಿಯೋ ಯೋಜನೆ ಉತ್ತಮ ಎನಿಸುತ್ತದೆ.

Best Mobiles in India

English summary
Jio vs Vi Rs 666 Plan Comparison: Which is best to Recharge. Check out both plan benefits, data, validity and more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+