Home
ಸುದ್ದಿಜಾಲ

ಜಿಯೋ ಮತ್ತು ವಿ ಟೆಲಿಕಾಂ 666ರೂ. ಪ್ಲ್ಯಾನ್‌: ರೀಚಾರ್ಜ್‌ಗೆ ಯಾವುದು ಯೋಗ್ಯ?

ದೇಶದ ಟೆಲಿಕಾಂ ಕ್ಷೇತ್ದಲ್ಲಿ ರಿಲಯನ್ಸ್‌ ಜಿಯೋ ಮುಂಚೂಣಿಯ ಟೆಲಿಕಾಂ ಆಗಿ ಗುರುತಿಸಿಕೊಂಡಿದೆ. ಇನ್ನು ತೃತೀಯ ದೊಡ್ಡ ಟೆಲಿಕಾಂ ಎನಿಸಿರುವ ವಿ ಟೆಲಿಕಾಂ ಸಂಸ್ಥೆಯು ಸಹ ಜಿಯೋಗೆ ನೇರ ಸೆಡ್ಡು ಹೊಡೆಯುವಂತಹ ಪ್ರೀಪೇಯ್ಡ್‌ ಯೋಜನೆಗಳ ಆಯ್ಕೆಯನ್ನು ಚಂದಾದಾರಿಗೆ ನೀಡಿದೆ. ಅದಾಗ್ಯೂ ಎರಡು ಟೆಲಿಕಾಂನ ಕೆಲವು ಪ್ಲ್ಯಾನ್‌ಗಳ ಬಹುತೇಕ ಸಾಮ್ಯತೆ ಹೊಂದಿವೆ. ಆ ಪೈಕಿ 666 ರೂ. ಪ್ಲ್ಯಾನ್‌ ಸಹ ಒಂದು.

ಹೌದು, ಜಿಯೋ ಹಾಗೂ ವಿ ಟೆಲಿಕಾಂ 666 ರೂ. ಬೆಲೆಯ ಪ್ರೀಪೇಯ್ಡ್‌ ಪ್ಲ್ಯಾನ್‌ ಆಯ್ಕೆ ಗ್ರಾಹಕರಿಗೆ ನೀಡಿವೆ. ಈ ಎರಡು ಟೆಲಿಕಾಂ ಸಂಸ್ಥೆಗಳ ಈ ಮೊತ್ತದ ಪ್ರೀಪೇಯ್ಡ್‌ ಪ್ಲ್ಯಾನಿನಲ್ಲಿ ದೈನಂದಿನ ಡೇಟಾ, ಆಕರ್ಷಕ ವ್ಯಾಲಿಡಿಟಿ ಹಾಗೂ ಇತರೆ ಪ್ರಯೋಜನಗಳು ಸಹ ಇವೆ. ಹಾಗಾದರೇ ಜಿಯೋ ಹಾಗೂ ವಿ ಟೆಲಿಕಾಂ 666ರೂ. ರೀಚಾರ್ಜ್‌ ಪ್ಲ್ಯಾನಿನ ನಡುವಿನ ವ್ಯತ್ಯಾಸಗಳು ಏನು? ಇವೆರಡರಲ್ಲಿ ರೀಚಾರ್ಜ್‌ ಮಾಡಲು ಯಾವುದು ಬೆಸ್ಟ್‌? ಎನ್ನುವ ಬಗ್ಗೆ ಈ ಲೇಖನದಲ್ಲಿ ತಿಳಿಯೋಣ ಬನ್ನಿರಿ. ಮುಂದೆ ಓದಿರಿ.

ಜಿಯೋ ಮತ್ತು ವಿ ಟೆಲಿಕಾಂ 666ರೂ. ಪ್ಲ್ಯಾನ್‌: ರೀಚಾರ್ಜ್‌ಗೆ ಯಾವುದು ಯೋಗ್ಯ?

ರಿಲಯನ್ಸ್‌ ಜಿಯೋ 666 ರೂ. ರೀಚಾರ್ಜ್‌ ಪ್ಲ್ಯಾನ್‌

ಜಿಯೋ ಟೆಲಿಕಾಂನ 666 ರೂ. ರೀಚಾರ್ಜ್‌ ಯೋಜನೆ 84 ದಿನಗಳ ವ್ಯಾಲಿಡಿಟಿ ಅವಧಿಯ ಸೌಲಭ್ಯ ಪಡೆದಿದೆ. ಈ ಅವಧಿಯಲ್ಲಿ ಪ್ರತಿದಿನ 1.5 GB ಡೇಟಾ ಪ್ರಯೋಜನ ಗ್ರಾಹಕರಿಗೆ ಲಭ್ಯವಾಗಲಿವೆ. ಅನಿಯಮಿತ ಉಚಿತ ಧ್ವನಿ ಕರೆಗಳ ಪ್ರಯೋಜನ ಹಾಗೂ ಪ್ರತಿದಿನ 100 ಎಸ್ಎಮ್ಎಸ್ ಸೌಲಭ್ಯ ಸಹ ಲಭ್ಯ ಆಗಲಿದೆ. ಇನ್ನು ಒಟ್ಟಾರೇ ಪೂರ್ಣ ವ್ಯಾಲಿಡಿಟಿ ಅವಧಿಗೆ ಈ ರೀಚಾರ್ಜ್‌ ಪ್ಲ್ಯಾನಿನಲ್ಲಿ 126 GB ಡೇಟಾ ಸೌಲಭ್ಯ ದೊರೆಯುತ್ತದೆ. ಹೆಚ್ಚುವರಿ ಯಾಗಿ ಜಿಯೋ ಟಿವಿ, ಜಿಯೋ ಸಿನಿಮಾ ಸೇವೆಗಳು ಲಭ್ಯ.

ವಿ ಟೆಲಿಕಾಂ 666 ರೂ. ರೀಚಾರ್ಜ್‌ ಪ್ಲ್ಯಾನ್‌

ವಿ ಟೆಲಿಕಾಂನ 666 ರೂ. ರೀಚಾರ್ಜ್‌ ಯೋಜನೆ ಒಟ್ಟು 77 ದಿನಗಳ ವ್ಯಾಲಿಡಿಟಿ ಅವಧಿಯ ಸೌಲಭ್ಯ ಹೊಂದಿದೆ. ಈ ವೇಳೆ ಪ್ರತಿದಿನ 1.5 GB ಡೇಟಾ ಸೌಲಭ್ಯ ಗ್ರಾಹಕರಿಗೆ ದೊರೆಯುತ್ತದೆ. ಇದರೊಂದಿಗೆ ಅನಿಯಮಿತ ಉಚಿತ ವಾಯಿಸ್‌ ಕರೆಗಳ ಸೌಲಭ್ಯ ಮತ್ತು ಪ್ರತಿದಿನ 100 ಎಸ್ಎಮ್ಎಸ್ ಪ್ರಯೋಜನ ಕೂಡಾ ಲಭ್ಯ ಆಗಲಿದೆ. ಇನ್ನು ಒಟ್ಟಾರೇ ಪೂರ್ಣ ವ್ಯಾಲಿಡಿಟಿ ಅವಧಿಗೆ ಈ ರೀಚಾರ್ಜ್‌ ಪ್ಲ್ಯಾನಿನಲ್ಲಿ 115.5 GB ಡೇಟಾ ಸೌಲಭ್ಯ ದೊರೆಯುತ್ತದೆ. ಹಾಗೆಯೇ ಈ ಯೋಜನೆಯಲ್ಲಿ ವಿಕೆಂಡ್‌ ಡೇಟಾ ರೋಲ್‌ಓವರ್ ಸೌಲಭ್ಯ ಸಿಗಲಿದೆ.

ರೀಚಾರ್ಜ್‌ಗೆ ಯಾವುದು ಬೆಸ್ಟ್?

ರಿಯಲನ್ಸ್‌ ಜಿಯೋ ಹಾಗೂ ವಿ ಟೆಲಿಕಾಂನ 666 ರೂ. ಬೆಲೆಯ ಪ್ರೀಪೇಯ್ಡ್‌ ಪ್ಲ್ಯಾನ್‌ಗಳು ಬೆಲೆಯಲ್ಲಿ ಸಾಮ್ಯತೆ ಕಂಡರೂ, ವ್ಯಾಲಿಡಿಟಿ ಸೌಲಭ್ಯದಲ್ಲಿ ಭಿನ್ನತೆ ಹೊಂದಿವೆ. ಅದಾಗ್ಯೂ ಈ ಎರಡು ಟೆಲಿಕಾಂಗಳ 666 ರೂ ಪ್ಲ್ಯಾನಿನಲ್ಲಿ ದೈನಂದಿನ ಡೇಟಾ ಸೌಲಭ್ಯ ಒಂದೇ ಇದ್ದರೂ, ಒಟ್ಟಾರೇ ಡೇಟಾ ಪ್ರಯೋಜನ ದಲ್ಲಿ ಭಿನ್ನತೆ ಇದೆ. ಅಧಿಕ ವ್ಯಾಲಿಡಿಟಿ ಬಯಸುವ ಗ್ರಾಹಕರಿಗೆ ಜಿಯೋ ಟೆಲಿಕಾಂನ 666 ರೂ. ಯೋಜನೆಯು ಸೂಕ್ತ ಎನಿಸುತ್ತದೆ.

ಜಿಯೋ ಪ್ಲ್ಯಾನಿನಲ್ಲಿ ಒಟ್ಟಾರೇ 126 GB ಡೇಟಾ ಸೌಲಭ್ಯ ದೊರೆಯುತ್ತದೆ. ಆದರೆ ವಿ ಟೆಲಿಕಾಂನ ಪ್ಲ್ಯಾನಿನಲ್ಲಿ ಒಟ್ಟಾರೇ 115.5 GB ಡೇಟಾ ಸೌಲಭ್ಯ ಮಾತ್ರ ಲಭ್ಯ. ಹೀಗಾಗಿ ಹೆಚ್ಚಿನ ವ್ಯಾಲಿಡಿಟಿ ಹಾಗೂ ಡೇಟಾ ಅಗತ್ಯ ಎನ್ನುವ ಗ್ರಾಹಕರಿಗೆ ಜಿಯೋ ಪ್ಲ್ಯಾನ್ ಆಕರ್ಷಕ ಎನಿಸುತ್ತದೆ.

Best Mobiles in India

English summary
Jio VS Vi Telecom Rs 666 Plan: Which is best Recharge. check data and more details.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+