Home
ಸುದ್ದಿಜಾಲ

500ರೂ. ಒಳಗೆ ಲಭ್ಯವಿರುವ ಜಿಯೋ, ಏರ್‌ಟೆಲ್‌, ವಿ ಟೆಲಿಕಾಂಗಳ ಬೆಸ್ಟ್‌ ಪ್ಲ್ಯಾನ್‌!

ರಿಲಾಯನ್ಸ್‌ ಜಿಯೋ, ವೊಡಾಫೋನ್-ಐಡಿಯಾ ಹಾಗೂ ಏರ್‌ಟೆಲ್‌ ಟೆಲಿಕಾಂಗಳು ಹಲವು ಆಕರ್ಷಕ ಪ್ರೀಪೇಯ್ಡ್‌ ಯೋಜನೆಗಳ ಮೂಲಕ ಗ್ರಾಹಕರನ್ನು ಸೆಳೆದಿವೆ. ಈ ಟೆಲಿಕಾಂಗಳು ಅಲ್ಪಾವಧಿಯ ವ್ಯಾಲಿಡಿಟಿ ಹಾಗೂ ದೀರ್ಘಾವಧಿಯ ವ್ಯಾಲಿಡಿಟಿಯ ಯೋಜನೆಗಳನ್ನು ಪರಿಚಯಿಸಿದ್ದು, ಅವುಗಳು ಭಿನ್ನ ಪಪ್ರಯೋಜನಗಳನ್ನು ಒಳಗೊಂಡಿವೆ. ಆದರೆ ಗ್ರಾಹಕರು ಅನುಕೂಲಕರ ದರದಲ್ಲಿ ಬೆಸ್ಟ್‌ ಯೋಜನೆ ರೀಚಾರ್ಜ್ ಮಾಡಿಸಲು ಇಚ್ಛಿಸುತ್ತಾರೆ.

ಏರ್‌ಟೆಲ್

ಹೌದು, ಜಿಯೋ, ಏರ್‌ಟೆಲ್ ಹಾಗೂ ವಿ ಟೆಲಿಕಾಂ ಸಂಸ್ಥೆಗಳು ತಮ್ಮ ಚಂದಾದಾರರಿಗೆ ಅನುಕೂಲವಾಗಲೆಂದು ಹಲವು ರೀಚಾರ್ಜ್‌ ಮಾಡುವ ಆಯ್ಕೆಗಳನ್ನು ಪರಿಚಯಿಸಿವೆ. ಅವುಗಳಲ್ಲಿ ಮುಖ್ಯವಾಗಿ 500ರೂ. ಪ್ರೈಸ್‌ಟ್ಯಾಗ್‌ನಲ್ಲಿ ಯೋಜನೆಗಳು ಟ್ರೆಂಡಿಂಗ್‌ನಲ್ಲಿ ಕಾಣಿಸಿಕೊಂಡಿವೆ. ಈ ಯೋಜನೆಗಳು ಪ್ರತಿದಿನ ಡೇಟಾ ಪ್ರಯೋಜನ ಸೇರಿದಂತೆ ಕರೆ, ಎಸ್‌ಎಮ್‌ಎಸ್‌ ಹಾಗೂ ಬಿಗ್ ವ್ಯಾಲಿಡಿಟಿ ಪ್ರಯೋಜನಗಳನ್ನು ಹೊಂದಿವೆ. ಆ ಪ್ಲ್ಯಾನ್‌ಗಳ ಬಗ್ಗೆ ತಿಳಿಯಲು ಮುಂದೆ ಓದಿರಿ.

ಜಿಯೋ 444ರೂ. ಪ್ಲ್ಯಾನ್

ಜಿಯೋ 444ರೂ. ಪ್ಲ್ಯಾನ್

ಜಿಯೋದ ಈ ಪ್ಲ್ಯಾನ್‌ ಒಟ್ಟು 56 ದಿನಗಳ ವ್ಯಾಲಿಡಿಟಿ ಹೊಂದಿದ್ದು, ಈ ಅವಧಿಯಲ್ಲಿ ಪ್ರತಿದಿನ 2GB ಡೇಟಾ ಪ್ರಯೋಜನ ಸಿಗುತ್ತದೆ. (ಒಟ್ಟು ಡೇಟಾ 112GB). ಹಾಗೆಯೇ ಜಿಯೋದಿಂದ ಜಿಯೋ ನೆಟವರ್ಕ ಕರೆಗಳು ಉಚಿತವಾಗಿರುತ್ತವೆ. ಜಿಯೋದಿಂದ ಇತರೆ ನೆಟವರ್ಕ ಕರೆಗಳಿಗೆ ಉಚಿತ 2000 ನಿಮಿಷಗಳ FUP ಮಿತಿ ಇದೆ. ಇದರೊಂದಿಗೆ ಪ್ರತಿದಿನ 100ಎಸ್ಎಮ್ಎಸ್‌ ಸೌಲಭ್ಯ ಲಭ್ಯ.

ಏರ್‌ಟೆಲ್ 449ರೂ. ಪ್ಲ್ಯಾನ್

ಏರ್‌ಟೆಲ್ 449ರೂ. ಪ್ಲ್ಯಾನ್

ಏರ್‌ಟೆಲ್‌ನ 449ರೂ. ಪ್ರೀಪೇಡ್‌ ಪ್ಲ್ಯಾನ್‌ ಒಟ್ಟು 56 ದಿನಗಳ ವ್ಯಾಲಿಡಿಟಿ ಅವಧಿಯನ್ನು ಹೊಂದಿದೆ. ಈ ಅವಧಿಯಲ್ಲಿ ಅನಿಯಮಿತ ಉಚಿತ ಲೋಕಲ್ ಮತ್ತು ನ್ಯಾಶನಲ್ ಕರೆಗಳ ಸೌಲಭ್ಯ ದೊರೆಯುತ್ತದೆ. ಇದರೊಂದಿಗೆ ಪ್ರತಿದಿನ 2GB ಡೇಟಾ ಹಾಗೂ 100 ಎಸ್‌ಎಮ್‌ಎಸ್‌ ಸೌಲಭ್ಯ ಸಹ ಸಿಗಲಿದೆ. ಹಾಗೆಯೆ ಈ ಪ್ಲ್ಯಾನ್ ಏರ್‌ಟೆಲ್ Wynk Music ಸೇವೆಯನ್ನು ಒದಗಿಸುತ್ತದೆ.

ವೊಡಾಫೋನ್-ಐಡಿಯಾ 499ರೂ. ಪ್ಲ್ಯಾನ್

ವೊಡಾಫೋನ್-ಐಡಿಯಾ 499ರೂ. ಪ್ಲ್ಯಾನ್

ವೊಡಾಫೋನಿನ 499ರೂ. ಪ್ಲ್ಯಾನ್‌ ಸಹ ಪ್ರತಿದಿನ 2GB ಡೇಟಾ ಸೌಲಭ್ಯ ಒಳಗೊಂಡಿದೆ(ಸದ್ಯ ಈ ಯೋಜನೆಗೆ ಡಬಲ್ ಡೇಟಾ ಕೊಡುಗೆ ಇದೆ ಹೀಗಾಗಿ 4GB ಡೇಟಾ ಸಿಗಲಿದೆ). ಅದರೊಂದಿಗೆ ಯಾವುದೇ ನೆಟವರ್ಕಗೆ ಅನಿಯಮಿತ ಉಚಿತ ಕರೆಗಳ ಪ್ರಯೋಜನ ಒಳಗೊಂಡಿದೆ. ಹಾಗೂ ಪ್ರತಿದಿನ 100 ಉಚಿತ ಎಸ್ಎಮ್ಎಸ್‌ ಸಹ ಹೊಂದಿದೆ. ಇನ್ನು ಈ ಪ್ರೀಪೇಯ್ಡ್‌ ಪ್ಲ್ಯಾನ್ ಒಟ್ಟು 56 ದಿನಗಳ ವ್ಯಾಲಿಡಿಟಿ ಅವಧಿಯನ್ನು ಪಡೆದಿದೆ.

Best Mobiles in India

English summary
The best unlimited prepaid plans under Rs 500 from Airtel, Jio, Vi, with a ton of data and voice calling benefits.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+