Home
ಸುದ್ದಿಜಾಲ

ಜಿಯೋ ವರ್ಕ್‌ ಫ್ರಂ ಹೋಮ್ ಪ್ಯಾಕ್ ಮತ್ತು 4G ಡೇಟಾ ವೋಚರ್: ಯಾವುದು ಬೆಸ್ಟ್?

ಜಿಯೋ ಟೆಲಿಕಾಂ ಹೆಚ್ಚು ಚಂದಾದಾರರನ್ನು ಹೊಂದಿ ದೇಶದ ಟೆಲಿಕಾಂ ವಲಯದಲ್ಲಿಯೇ ಲೀಡಿಂಗ್‌ನಲ್ಲಿ ಕಾಣಿಸಿಕೊಂಡಿದೆ. ಈಗಾಗಲೇ ಅಧಿಕ ಡೇಟಾ ಯೋಜನೆಗಳನ್ನು ಪರಿಚಯಿಸಿರುವ ಜಿಯೋ ಲಾಕ್‌ಡೌನ್ ವೇಳೆಯು ಆಕರ್ಷಕ ಕೊಡುಗೆಗಳನ್ನು ಘೋಷಿಸಿತ್ತು. ಹೆಚ್ಚು ಡೇಟಾ ಬಯಸುವ ಗ್ರಾಹಕರಿಗೆ ಜಿಯೋ ವರ್ಕ್‌ ಫ್ರಂ ಹೋಮ್ ಬೆಸ್ಟ್‌ ಅನಿಸಿತ್ತು. ಹಾಗೆಯೇ ಜಿಯೋದ 4G ಡೇಟಾ ಯೋಜನೆಗಳು ಗಮನ ಸೆಳೆದಿವೆ.

ಜಿಯೋ ಸಂಸ್ಥೆ

ಹೌದು, ಜಿಯೋ ಸಂಸ್ಥೆಯ ಪ್ರತಿದಿನ ಅಧಿಕ ಡೇಟಾ ಯೋಜನೆಗಳು ಚಂದಾದಾರಿಗೆ ಉಪಯುಕ್ತವಾಗಿವೆ. ಇನ್ನು ಪ್ರತಿದಿನದ ನಿಗದಿತ ಡೇಟಾ ಬಳಕೆಗೂ ಮೀರಿ ಹೆಚ್ಚಿನ ಡೇಟಾ ಅಗತ್ಯತೆಯ ಚಂದಾದಾರಿಗೆ ಜಿಯೋದ 4G ಡೇಟಾ ಯೋಜನೆಗಳ ಆಯ್ಕೆ ಇದೆ. ಇದರೊಂದಿಗೆ ಇತ್ತೀಚಿಗಷ್ಟೆ ಜಿಯೋ ಪರಿಚಯಿಸಿರುವ ವರ್ಕ್‌ ಫ್ರಂ ಹೋಮ್ ಪ್ಯಾಕ್‌ಗಳು ಅಧಿಕ ಡೇಟಾ ಸೌಲಭ್ಯದೊಂದಿಗೆ ಆಕರ್ಷಕ ಅನಿಸಿವೆ. ಹಾಗಾದರೆ ಅಧಿಕ ಹೆಚ್ಚುವರಿ ಡೇಟಾ ಬಳಕೆಗೆ ಜಿಯೋದ 4G ಡೇಟಾ ಪ್ಲ್ಯಾನ್ ಮತ್ತು ವರ್ಕ್‌ ಫ್ರಂ ಹೋಮ್ ಪ್ಯಾಕ್ ಆಯ್ಕೆಗಳಲ್ಲಿ ಯಾವುದು ಯೋಗ್ಯ?. ಮುಂದೆ ಓದಿರಿ.

ಜಿಯೋ 11ರೂ, 4G ಡೇಟಾ ವೋಚರ್

ಜಿಯೋ 11ರೂ, 4G ಡೇಟಾ ವೋಚರ್

ಜಿಯೋದ ಈ ಡೇಟಾ ವೋಚರ್‌ನಲ್ಲಿ 800MB ಡೇಟಾ ಲಭ್ಯವಾಗುತ್ತದೆ. ಇದರೊಂದಿಗೆ ಜಿಯೋ ಟು ನಾನ್ ಜಿಯೋ ಕರೆಗಳಿಗೆ 75 ನಿಮಿಷಗಳ ಮಿತಿ ಸೌಲಭ್ಯ ದೊರೆಯುತ್ತದೆ.

ಜಿಯೋ 21ರೂ, 4G ಡೇಟಾ ವೋಚರ್

ಜಿಯೋ 21ರೂ, 4G ಡೇಟಾ ವೋಚರ್

ಜಿಯೋ 21ರೂ, ಡೇಟಾ ವೋಚರ್‌ನಲ್ಲಿ 2GB ಡೇಟಾ ಪ್ರಯೋಜನ ಲಭ್ಯವಾಗುತ್ತದೆ. ಇದರೊಂದಿಗೆ ಜಿಯೋ ಟು ನಾನ್ ಜಿಯೋ ಕರೆಗಳಿಗೆ 200 ನಿಮಿಷಗಳ ಮಿತಿ ಸೌಲಭ್ಯ ದೊರೆಯುತ್ತದೆ.

ಜಿಯೋ 51ರೂ, 4G ಡೇಟಾ ವೋಚರ್

ಜಿಯೋ 51ರೂ, 4G ಡೇಟಾ ವೋಚರ್

ಜಿಯೋ 51ರೂ, ಡೇಟಾ ವೋಚರ್‌ನಲ್ಲಿ 6GB ಡೇಟಾ ಪ್ರಯೋಜನ ಲಭ್ಯವಾಗುತ್ತದೆ. ಇದರೊಂದಿಗೆ ಜಿಯೋ ಟು ನಾನ್ ಜಿಯೋ ಕರೆಗಳಿಗೆ 500 ನಿಮಿಷಗಳ ಮಿತಿ ಸೌಲಭ್ಯ ದೊರೆಯುತ್ತದೆ.

ಜಿಯೋ 101ರೂ, 4G ಡೇಟಾ ವೋಚರ್

ಜಿಯೋ 101ರೂ, 4G ಡೇಟಾ ವೋಚರ್

ಜಿಯೋ 101ರೂ, ಡೇಟಾ ವೋಚರ್‌ನಲ್ಲಿ 12GB ಡೇಟಾ ಪ್ರಯೋಜನ ಲಭ್ಯವಾಗುತ್ತದೆ. ಇದರೊಂದಿಗೆ ಜಿಯೋ ಟು ನಾನ್ ಜಿಯೋ ಕರೆಗಳಿಗೆ 1000 ನಿಮಿಷಗಳ ಮಿತಿ ಸೌಲಭ್ಯ ದೊರೆಯುತ್ತದೆ.

ಜಿಯೋ 151ರೂ. ವೋಚರ್

ಜಿಯೋ 151ರೂ. ವೋಚರ್

ಜಿಯೋದ ಈ ವೋಚರ್‌ನಲ್ಲಿ 30GB ಡೇಟಾ ಪ್ರಯೋಜನವು ದೊರೆಯುತ್ತದೆ. ಹಾಗೆಯೇ ಈ ಪ್ಲ್ಯಾನ್‌ ಒಟ್ಟು 30 ದಿನಗಳ ವ್ಯಾಲಿಡಿಟಿ ಅವಧಿಯನ್ನು ಒಳಗೊಂಡಿದೆ. ಇದು ಡೇಟಾ ಪ್ಲ್ಯಾನ್ ಆಗಿರುವುದರಿಂದ ಈ ಯೋಜನೆಯಲ್ಲಿ ಯಾವುದೇ ಉಚಿತ ವಾಯಿಸ್‌ ಕರೆ ಲಭ್ಯವಿರುವುದಿಲ್ಲ.

ಜಿಯೋ 201ರೂ. ವೋಚರ್

ಜಿಯೋ 201ರೂ. ವೋಚರ್

ಜಿಯೋ 201ರೂ. ವೋಚರ್‌ನಲ್ಲಿ 40GB ಡೇಟಾ ಪ್ರಯೋಜನವು ದೊರೆಯುತ್ತದೆ ಹಾಗೂ ಇದು ವರ್ಕ್ ಫ್ರಮ್ ಹೋಮ್ ಪ್ಲ್ಯಾನ್ ಆಗಿದೆ. ಈ ಯೋಜನೆಯು ಒಟ್ಟು 30 ದಿನಗಳ ವ್ಯಾಲಿಡಿಟಿ ಅವಧಿಯನ್ನು ಒಳಗೊಂಡಿದೆ. ಇದು ಡೇಟಾ ಪ್ಲ್ಯಾನ್ ಆಗಿರುವುದರಿಂದ ಈ ಯೋಜನೆಯಲ್ಲಿ ಯಾವುದೇ ಉಚಿತ ವಾಯಿಸ್‌ ಕರೆ ಲಭ್ಯವಿರುವುದಿಲ್ಲ.

ಜಿಯೋ 251ರೂ. ವೋಚರ್

ಜಿಯೋ 251ರೂ. ವೋಚರ್

ಜಿಯೋ 251ರೂ. ವೋಚರ್ ಸಹ ವರ್ಕ್ ಫ್ರಂ ಹೋಮ್ ಪ್ಯಾಕ್‌ ಆಗಿದ್ದು, ಈ ಯೋಜನೆಯು ಒಟ್ಟು 30 ದಿನಗಳ ವ್ಯಾಲಿಡಿಟಿ ಅವಧಿಯನ್ನು ಒಳಗೊಂಡಿದೆ. ಈ ವೇಳೆ ಒಟ್ಟು 50GB ಡೇಟಾ ಪ್ರಯೋಜನವನ್ನು ಒದಗಿಸಲಿದೆ. ಇದು ಡೇಟಾ ಪ್ಲ್ಯಾನ್ ಆಗಿರುವುದರಿಂದ ಈ ಯೋಜನೆಯಲ್ಲಿ ಯಾವುದೇ ಉಚಿತ ವಾಯಿಸ್‌ ಕರೆ ಲಭ್ಯವಿರುವುದಿಲ್ಲ.

ಯಾವುದು ಬೆಸ್ಟ್‌?

ಯಾವುದು ಬೆಸ್ಟ್‌?

ಅಧಿಕ ಹೆಚ್ಚುವರಿ ಡೇಟಾ ಬಯಸುವ ಮತ್ತು ಹೆಚ್ಚಿನ ಡೇಟಾ ಅಗತ್ಯ ಇರುವ ಗ್ರಾಹಕರಿಗೆ ಅನುಕೂಲವಾಗಲೆಂದು ಜಿಯೋ ವರ್ಕ್‌ ಫ್ರಂ ಹೋಮ್ ಪ್ಯಾಕ್ ಮತ್ತು 4G ಡೇಟಾ ವೋಚರ್ ಆಯ್ಕೆಗಳನ್ನು ಪರಿಚಯಿಸಿದೆ. ಹೆಚ್ಚುವರಿ ಡೇಟಾ ಸೌಲಭ್ಯದ ಜೊತೆಗೆ ಇತರೆ ನೆಟವರ್ಕ್‌ ಕರೆಗಳಿಗೆ ಉಚಿತ ನಿಮಿಷಗಳ ಸೌಲಭ್ಯವನ್ನೂ ಬಯಸುವ ಗ್ರಾಹಕರಿಗೆ ಜಿಯೋ 4G ಡೇಟಾ ವೋಚರ್ ಸೂಕ್ತ ಅನಿಸಲಿದೆ. ಇನ್ನು ಬರಿ ಅಧಿಕ ಹೆಚ್ಚುವರಿ ಡೇಟಾ ಅಷ್ಟೇ ಸಾಕು ಉಚಿತ ಕರೆ ನಿಮಿಷಗಳ ಅಗತ್ಯ ಇಲ್ಲ ಎನ್ನುವ ಗ್ರಾಹಕರು ಜಿಯೋ ವರ್ಕ್ ಫ್ರಂ ಹೋಮ್ ಪ್ಲ್ಯಾನ್‌ಗಳು ಉತ್ತಮ ಆಯ್ಕೆ ಎನ್ನಬಹುದು.

Best Mobiles in India

English summary
Jio Work From Home vouchers, there are no calling benefits included while with the 4G data vouchers, you get FUP calling minutes as well.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+