Home
ಸುದ್ದಿಜಾಲ

ಜಿಯೋ ಟೆಲಿಕಾಂನಿಂದ ಭಾರತ್‌ ಜಿಪಿಟಿ ಅಭಿವೃದ್ಧಿ!..ಇಲ್ಲಿದೆ ಪೂರ್ಣ ಮಾಹಿತಿ!

'ಭಾರತ್ ಜಿಪಿಟಿ' ಪ್ರೋಗ್ರಾಂ ಅನ್ನು ಆರಂಭಿಸಬೇಕು ಎಂಬ ಉದ್ದೇಶದಿಂದ ಜನಪ್ರಿಯ ಟೆಲಿಕಾಂ ಆಪರೇಟರ್ ಆದ ರಿಲಯನ್ಸ್ ಜಿಯೋ ಸಂಸ್ಥೆಯು ಇಂಡಿಯನ್ ಇನ್ ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ - ಬಾಂಬೆ ಜತೆಗೆ ಕೆಲಸ ಮಾಡುತ್ತಿದೆ ಎಂದು ರಿಲಯನ್ಸ್ ಜಿಯೋ ಇನ್ಫೋಕಾಮ್ ಮುಖ್ಯಸ್ಥರಾದ ಆಕಾಶ್ ಅಂಬಾನಿ ಅವರು ತಿಳಿಸಿದರು.

ಹೌದು, ರಿಲಯನ್ಸ್ ಇಂಡಸ್ಟ್ರೀಸ್ ಘಟಕವಾದ ಜಿಯೋ ಇನ್ಫೋಕಾಮ್ ಟೆಲಿಕಾಂನಿಂದ ಟಿವಿ ಗಾಗಿ ಆಪರೇಟಿವ್ ಸಿಸ್ಟಮ್ ಪರಿಚಯಿಸುವುದಕ್ಕೆ 'ಸಮಗ್ರವಾಗಿ ಚಿಂತಿಸಲಾಗುತ್ತಿದೆ' ಎಂದು ಹೇಳಿದ ಅವರು, ಕೆಲ ಸಮಯದಿಂದ ಇದಕ್ಕಾಗಿ ಕೆಲಸ ಮಾಡಲಾಗುತ್ತಿದೆ ಎಂದರು.

ಜಿಯೋ ಟೆಲಿಕಾಂನಿಂದ ಭಾರತ್‌ ಜಿಪಿಟಿ ಅಭಿವೃದ್ಧಿ!..ಇಲ್ಲಿದೆ ಪೂರ್ಣ ಮಾಹಿತಿ!

ಸಂಸ್ಥೆಯಿಂದ ನಡೆಸುವಂಥ ವಾರ್ಷಿಕ ತಂತ್ರಜ್ಞಾನ ಸಮಾರಂಭದಲ್ಲಿ ಅವರು ಮಾತನಾಡಿ, 'ಅಭಿವೃದ್ಧಿಯ ಪರಿಸರ ವ್ಯವಸ್ಥೆ' ಯನ್ನು ರೂಪಿಸುವುದು ಕಂಪನಿಗೆ ಬಹಳ ಮುಖ್ಯ. 'ಜಿಯೋ 2.0' ದೃಷ್ಟಿಯಲ್ಲಿ ಇಟ್ಟುಕೊಂಡು ಈಗಾಗಲೇ ಕೆಲಸ ನಡೆಯುತ್ತಾ ಇದೆ ಎಂದು ಅವರು ಹೇಳಿದರು.

"ನಾವು ಐಐಟಿ ಬಾಂಬೆಯೊಂದಿಗೆ ಭಾರತ್ ಜಿಪಿಟಿ ಕಾರ್ಯಕ್ರಮವನ್ನು ಪ್ರಾರಂಭಿಸಲು ಯೋಜನೆಯಲ್ಲಿ ಕೆಲಸ ಮಾಡುತ್ತಿದ್ದೇವೆ," ಎಂಬ ವಿಚಾರವನ್ನು ತಿಳಿಸಿದ ಅವರು, ಪ್ರತಿಷ್ಠಿತ ಶಿಕ್ಷಣ ಸಂಸ್ಥೆ ಜತೆಗಿನ ಪಾಲುದಾರಿಕೆ ಬಗ್ಗೆ ತಿಳಿಸುತ್ತಾ ಈ ವಿಷಯವನ್ನು ಹೇಳಿದರು.

ಸದ್ಯಕ್ಕೆ ನಾವು ದೊಡ್ಡ ಭಾಷೆಗಳ ಮಾದರಿಗಳು ಮತ್ತು ಜನರೇಟಿವ್ ಎಐ (ಕೃತಕ ಬುದ್ಧಿಮತ್ತೆ) ಮೇಲೆ ಮೇಲ್ಮೈ ಕೆಲಸಗಳನ್ನು ಮಾಡಿದ್ದೇವೆ. ಮುಂದಿನ ದಶಕವನ್ನು ಈ ಅಪ್ಲಿಕೇಷನ್ ಮೂಲಕವೇ ವ್ಯಾಖ್ಯಾನಿಸಲಾಗುವುದು ಎಂದರು.

ಜಿಯೋ ಟೆಲಿಕಾಂನಿಂದ ಭಾರತ್‌ ಜಿಪಿಟಿ ಅಭಿವೃದ್ಧಿ!..ಇಲ್ಲಿದೆ ಪೂರ್ಣ ಮಾಹಿತಿ!

ಉತ್ಪನ್ನಗಳ ಎಲ್ಲ ಕ್ಷೇತ್ರಗಳಲ್ಲೂ ಕೃತಕ ಬುದ್ಧಿಮತ್ತೆಯು ಪರಿವರ್ತನೆಯನ್ನು ತರುತ್ತಿದೆ. "ನಾವು ಕೇವಲ ನಮ್ಮ ಸಂಸ್ಥೆಯೊಳಗಿನ ಇತರ ವರ್ಟಿಕಲ್ ಘಟಕ ಅಥವಾ ವಿಭಾಗಗಳಲ್ಲಿ ಮಾತ್ರ ಇದನ್ನು ಪರಿಚಯಿಸುವ ಉದ್ದೇಶ ಹೊಂದಿಲ್ಲ.

ಆದರೆ ನಾವು ಯಾವುದೆಲ್ಲ ವಲಯದಲ್ಲಿ ಕೆಲಸ ಮಾಡುತ್ತಿದ್ದೇವೋ ಅಲ್ಲೆಲ್ಲ ಎಐ ಅಳವಡಿಸಲು ಶ್ರಮಿಸುತ್ತಾ ಇದ್ದೇವೆ," ಎಂದು ಆಕಾಶ್ ಅಂಬಾನಿ ತಿಳಿಸಿದರು. ಮಾಧ್ಯಮ ರಂಗದಲ್ಲಿ, ವಾಣಿಜ್ಯ, ಸಂವಹನ ಮತ್ತು ಸಲಕರಣೆಗಳಲ್ಲಿ ಸಹ ನಮ್ಮ ಕಂಪನಿಯು ಉತ್ಪನ್ನಗಳು ಮತ್ತು ಸೇವೆಗಳನ್ನು ಆರಂಭಿಸುತ್ತದೆ ಎಂದು ಸೇರಿಸಿದರು.

"ನಾವು ಕಳೆದ ಕೆಲ ಸಮಯದಿಂದ ಟಿವಿಗಳಿಗಾಗಿ ನಮ್ಮ ಸ್ವಂತ ಒಎಸ್ ಗಾಗಿ ಕೆಲಸ ಮಾಡುತ್ತಿದ್ದೇವೆ ಮತ್ತು ಅದನ್ನು ಹೇಗೆ ಆರಂಭಿಸಬೇಕು ಎಂಬುದರ ಕುರಿತು ನಾವು ಯೋಚಿಸುತ್ತಿದ್ದೇವೆ," ಎಂದು ಆಕಾಶ್ ಅಂಬಾನಿ ಅವರು ಹೇಳಿದರು. 2024ನೇ ಇಸವಿ ಕುಟುಂಬಕ್ಕೆ ವಿಶೇಷವಾದ ವರ್ಷ ಎಂದು ಹೇಳಿದ ಅವರು, ಈ ವರ್ಷ ತಮ್ಮ ಸೋದರ ಮದುವೆ ಆಗುವುದಾಗಿ ತಿಳಿಸಿದರು.

5ಜಿ ಖಾಸಗಿ ನೆಟ್‌ವರ್ಕ್‌ಗಳನ್ನು ನೀಡಲು ಕಂಪನಿಯು ಉತ್ಸುಕವಾಗಿದೆ ಎಂದು ಅವರು ಹೇಳಿದರು, ಅಲ್ಲಿ ಅದರ ಗಾತ್ರವನ್ನು ಲೆಕ್ಕಿಸದೆ ಯಾವುದೇ ಉದ್ಯಮಕ್ಕೆ 5ಜಿ ಸ್ಟಾಕ್ ಅನ್ನು ನೀಡುತ್ತದೆ ಎಂದು ಅವರು ಹೇಳಿದರು. ಮುಂದಿನ ದಶಕದಲ್ಲಿ ಭಾರತವು "ಅತಿದೊಡ್ಡ ನಾವೀನ್ಯತೆ ಕೇಂದ್ರ" ಆಗಲಿದೆ ಎಂದು ಬಣ್ಣಿಸಿದ ಆಕಾಶ್ ಅಂಬಾನಿ, ದಶಕದ ಅಂತ್ಯದ ವೇಳೆಗೆ ದೇಶವು 6 ಟ್ರಿಲಿಯನ್ ಯುಎಸ್ ಡಿ ಆರ್ಥಿಕತೆ ಆಗಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಕೃತಕ ಬುದ್ಧಿಮತ್ತೆ "ಎಲ್ಲದರಲ್ಲೂ ಬಳಕೆ ಆಗಲಿದೆ" ಎಂದು ಹೇಳಿದ ಆಕಾಶ್, ತನ್ನ ಹಾಸಿಗೆಯ ತಾಪಮಾನವನ್ನು ಎಐ ಮೂಲಕ ಹೇಗೆ ನಿಯಂತ್ರಿಸುವುದು ಎಂಬುದನ್ನು ನಿನ್ನೆ ತನ್ನ ಭಾವ ತೋರಿಸಿದರು ಎಂಬುದನ್ನು ವಿವರಿಸಿದರು. "ನನ್ನ ಪಾಲಿಗೆ, ಹೌದು ಎಐ ಅಂದರೆ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್. ಆದರೆ ಎಐ ಅಂದರೆ ಆಲ್ ಇನ್ ಕ್ಲೂಡೆಡ್ (ಎಲ್ಲವನ್ನು ಒಳಗೊಂಡಿರುತ್ತದೆ)," ಎಂದು ಅವರು ಹೇಳಿದರು.

Best Mobiles in India

English summary
Jio working on Bharat GPT with IIT-B; to launch OS for televisions.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+