Home
ಸುದ್ದಿಜಾಲ

JioBharat ಮೊಬೈಲ್ ಮೂಲಕ 1 ಕೋಟಿ ಜನರಿಗೆ 4G ನೆಟ್‌ವರ್ಕ್‌!..ಅಗ್ಗದ ರೀಚಾರ್ಜ್‌ ಆಯ್ಕೆ!

ಭಾರತ ದೇಶದ 2ಜಿ ಮತ್ತು 3ಜಿ ಗ್ರಾಹಕರಿಗೆ ಜಿಯೋಭಾರತ್ 4G ( JioBharat ) ಮೊಬೈಲ್ ವರದಾನವಾಗಿ ಬಂದಿದೆ. 2ಜಿ ಮತ್ತು 3ಜಿ ಬಳಸುವಂಥ 1 ಕೋಟಿಗೂ ಹೆಚ್ಚು ಗ್ರಾಹಕರು ಜಿಯೋ ಭಾರತ್ ಮೂಲಕ 4ಜಿ ನೆಟ್‌ವರ್ಕ್‌ಗೆ ಸಂಪರ್ಕ ಹೊಂದಿದ್ದಾರೆ. 1,000 ರೂ. ಗಿಂತ ಕಡಿಮೆ ಬೆಲೆಯ ಮೊಬೈಲ್ ವಿಭಾಗದ ಶೇಕಡಾ 50 ರಷ್ಟು ಪಾಲನ್ನು ಜಿಯೋ ಭಾರತ್ ತನ್ನದಾಗಿಸಿಕೊಂಡಿದೆ. ಇತ್ತೀಚೆಗೆ ಬಿಡುಗಡೆಯಾದ ರಿಲಯನ್ಸ್ ವಾರ್ಷಿಕ ವರದಿಯಲ್ಲಿ ಈ ಸಂಗತಿಯ ಬಗ್ಗೆ ತಿಳಿದುಬಂದಿದೆ.

ಹೌದು, ಜಿಯೋ ಸಂಸ್ಥೆಯ ಜಿಯೋಭಾರತ್ ಮೊಬೈಲ್ ನಿಂದಾಗಿ 2ಜಿ ಮತ್ತು 3ಜಿ ಯಿಂದ 4ಜಿಗೆ ಬದಲಾಯಿಸುವ ಗ್ರಾಹಕರ ಸಂಖ್ಯೆಯು ವೇಗವಾಗಿ ಹೆಚ್ಚುತ್ತಿದೆ. ಅಲ್ಲದೇ ದೇಶದಲ್ಲಿ ಡಿಜಿಟಲ್ ವಿಭಜನೆಯನ್ನು ಕಡಿಮೆ ಮಾಡುವುದಕ್ಕೆ ಸಹಾಯ ಮಾಡುತ್ತಿದೆ. ಸುಮಾರು 25 ಕೋಟಿ ಗ್ರಾಹಕರು ಇನ್ನೂ ಫೀಚರ್ ಫೋನ್‌ಗಳನ್ನು ಬಳಸುತ್ತಿದ್ದಾರೆ.

JioBharat ಮೊಬೈಲ್ ಮೂಲಕ 1 ಕೋಟಿ ಜನರಿಗೆ 4G ನೆಟ್‌ವರ್ಕ್‌!..ಅಗ್ಗದ ರೀಚಾರ್ಜ್‌

ಷೇರುದಾರರಿಗೆ ಪತ್ರ ಬರೆದಿರುವ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಅಧ್ಯಕ್ಷ ಮುಕೇಶ್ ಅಂಬಾನಿ, "ಜಿಯೋ ಭಾರತ್ ಫೋನ್ ಬಿಡುಗಡೆಯು ದೇಶದಲ್ಲಿ ಡಿಜಿಟಲ್ ವಿಭಜನೆಯನ್ನು ಕಡಿಮೆ ಮಾಡುವ ಮತ್ತೊಂದು ಕ್ರಾಂತಿಕಾರಿ ಹೆಜ್ಜೆಯಾಗಿದೆ. ಜಿಯೋಭಾರತ್ ಫೋನ್ ಫೀಚರ್ ಫೋನ್‌ನ ಬೆಲೆಯಲ್ಲಿ ದೊರೆಯುವಂಥ ಸ್ಮಾರ್ಟ್‌ಫೋನ್ ಆಗಿದೆ, 2ಜಿ ಮುಕ್ತ ಭಾರತದ ಕನಸನ್ನು ನನಸಾಗಿಸುವಲ್ಲಿ ಇದು ಒಂದು ದೊಡ್ಡ ಹೆಜ್ಜೆ ಎಂದು ಸಾಬೀತುಪಡಿಸುತ್ತದೆ, ಎಂದು ಹೇಳಿದ್ದಾರೆ.

ಜಿಯೋಭಾರತ್ ಒಂದು ವರ್ಷದ ಹಿಂದೆ ಪ್ರಾರಂಭವಾಯಿತು. ಇದು ಯುಪಿಐ, ಜಿಯೋಸಿನಿಮಾ ಮತ್ತು ಜಿಯೋಟಿವಿಯಂತಹ ಅಪ್ಲಿಕೇಷನ್‌ಗಳು ಮತ್ತು ಡಿಜಿಟಲ್ ವೈಶಿಷ್ಟ್ಯಗಳನ್ನು ಹೊಂದಿದೆ. ಇದು ಸ್ಮಾರ್ಟ್ ಫೋನ್ ಸಾಮರ್ಥ್ಯಗಳೊಂದಿಗೆ ಬಳಕೆದಾರರಿಗೆ ಅನುಕೂಲ ಆಗುವಂಥ ಅತ್ಯಂತ ಕೈಗೆಟುಕುವ ಸಾಧನವಾಗಿದೆ. ಉತ್ತಮ ಗುಣಮಟ್ಟದ ಮತ್ತು ಕೈಗೆಟುಕುವ ಡೇಟಾವನ್ನು ಸಹ ಒದಗಿಸುತ್ತದೆ.

ಇಡೀ ಉದ್ಯಮವು ಟಾರಿಫ್ ಯೋಜನೆಗಳನ್ನು ದುಬಾರಿ ಮಾಡಿದಾಗಲೂ ಜಿಯೋ ಭಾರತ್‌ನ ಟಾರಿಫ್ ನಲ್ಲಿ ಯಾವುದೇ ಬದಲಾವಣೆ ಮಾಡಲಿಲ್ಲ. ಜಿಯೋಭಾರತ್ (JioBharat) ಅನ್ನು ಇಂದಿಗೂ 123 ರೂ. ಗಳಿಗೆ ರೀಚಾರ್ಜ್ ಮಾಡಬಹುದು. ಅಂದಹಾಗೆ ಈ ದರವು ದೂರಸಂಪರ್ಕ ಉದ್ಯಮದಲ್ಲಿಯೇ ಅತ್ಯಂತ ಕಡಿಮೆಯಾಗಿದೆ.

ಜಿಯೋ ಭಾರತ್‌ 123ರೂ. ಯೋಜನೆಯ ಮಾಹಿತಿ
ಜಿಯೋ ಸಂಸ್ಥೆಯ ಜಿಯೋ ಭಾರತ್‌ 123 ರೂ. ಗಳ ರೀಚಾರ್ಜ್‌ ಬಗ್ಗೆ ನೋಡುವುದಾದರೇ, ಈ ಯೋಜನೆಯು ಒಟ್ಟು 28 ದಿನಗಳ ವ್ಯಾಲಿಡಿಟಿ ಸೌಲಭ್ಯ ಪಡೆದಿದೆ. ಅಲ್ಲದೇ ಇದು ಒಟ್ಟು 14GB ಡೇಟಾ ಸೌಲಭ್ಯ ಅನಿಯಮಿತ ವಾಯ್ಸ್‌ ಕರೆಗಳು ಮತ್ತು 300 ಎಸ್‌ಎಮ್‌ಎಸ್‌ ಸೌಲಭ್ಯ ನೀಡಲಿದೆ. ಈ ಪ್ಲ್ಯಾನ್‌ನಲ್ಲೂ ಸಹ ಬಳಕೆದಾರರು ಜಿಯೋ ಸಾವನ್‌ ಹಾಗೂ ಜಿಯೋ ಸಿನಿಮಾ ಚಂದಾದಾರಿಕೆ ಪಡೆಯಬಹುದಾಗಿದೆ.

ಜಿಯೋ ಭಾರತ್‌ 234ರೂ. ಯೋಜನೆಯ ಮಾಹಿತಿ
ಜಿಯೋ ಭಾರತ್‌ 234ರೂ. ರೀಚಾರ್ಜ್‌ ಬಗ್ಗೆ ನೋಡುವುದಾದರೇ, ಈ ಯೋಜನೆಯು ಒಟ್ಟು 56 ದಿನಗಳ ವ್ಯಾಲಿಡಿಟಿ ಸೌಲಭ್ಯ ಪಡೆದಿದೆ. ಅಲ್ಲದೇ ಇದು ಒಟ್ಟು 28 GB ಡೇಟಾ ಸೌಲಭ್ಯ ಅನಿಯಮಿತ ವಾಯ್ಸ್‌ ಕರೆಗಳು ಮತ್ತು 300 ಎಸ್‌ಎಮ್‌ಎಸ್‌ (28 ದಿನಗಳಿಗೆ) ಸೌಲಭ್ಯ ನೀಡಲಿದೆ. ಈ ಪ್ಲ್ಯಾನ್‌ನಲ್ಲೂ ಸಹ ಬಳಕೆದಾರರು ಜಿಯೋ ಸಾವನ್‌ ಹಾಗೂ ಜಿಯೋ ಸಿನಿಮಾ ಚಂದಾದಾರಿಕೆ ಪಡೆಯಬಹುದಾಗಿದೆ.

ಜಿಯೋ ಭಾರತ್‌ 1234ರೂ. ಯೋಜನೆಯ ಮಾಹಿತಿ
ಜಿಯೋ ಭಾರತ್‌ 1234 ರೂ. ರೀಚಾರ್ಜ್‌ ಬಗ್ಗೆ ನೋಡುವುದಾದರೇ, ಈ ಯೋಜನೆಯು ಒಟ್ಟು 336 ದಿನಗಳ ವ್ಯಾಲಿಡಿಟಿ ಸೌಲಭ್ಯ ಪಡೆದಿದೆ. ಅಲ್ಲದೇ ಇದು ಒಟ್ಟು 168 GB ಡೇಟಾ ಸೌಲಭ್ಯ ಅನಿಯಮಿತ ವಾಯ್ಸ್‌ ಕರೆಗಳು ಮತ್ತು 300 ಎಸ್‌ಎಮ್‌ಎಸ್‌ (28 ದಿನಗಳಿಗೆ) ಸೌಲಭ್ಯ ನೀಡಲಿದೆ. ಈ ಪ್ಲ್ಯಾನ್‌ನಲ್ಲೂ ಸಹ ಬಳಕೆದಾರರು ಜಿಯೋ ಸಾವನ್‌ ಹಾಗೂ ಜಿಯೋ ಸಿನಿಮಾ ಚಂದಾದಾರಿಕೆ ಪಡೆಯಬಹುದಾಗಿದೆ.

Best Mobiles in India

English summary
JioBharat 4G: More than one crore people have adopted 4G network in India. check out all details here.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+