ಸದ್ಯದಲ್ಲೇ ಗ್ರಾಹಕರಿಗೆ ಸಿಹಿಸುದ್ದಿ!..ಅಗ್ಗದ ಬೆಲೆಗೆ ಜಿಯೋ ಲ್ಯಾಪ್‌ಟಾಪ್ ಲಾಂಚ್?!
ದೇಶದಲ್ಲಿ ರಿಲಾಯನ್ಸ್ ಜಿಯೋ ಸಂಸ್ಥೆಯು ಹಲವು ಯೋಜನೆಗಳ ಮೂಲಕ ಗ್ರಾಹಕರನ್ನು ಸೆಳೆದಿದೆ. ಮುಖ್ಯವಾಗಿ ಟೆಲಿಕಾಂ ವಲಯದಲ್ಲಿ ಹಾಗೂ ಮೊಬೈಲ್ ಮಾರುಕಟ್ಟೆಯಲ್ಲಿ ಭಾರೀ ಸದ್ದು ಮಾಡಿದೆ. ಅಂದಹಾಗೆ ಕಳೆದ ಅಕ್ಟೋಬರ್‌ನಲ್ಲಿ ಜಿಯೋ ಸಂಸ್ಥೆಯು ಜಿಯೋಬುಕ್ (JioBook) ಹೆಸರಿನ ಮೊದಲ ಲ್ಯಾಪ್‌ಟಾಪ್ ಅನ್ನು ಭಾರತದಲ್ಲಿ ಘೋಷಿಸಲಾಯಿತು. ಇದೀಗ ಮತ್ತೆ ಅದೇ ಹಾದಿಯಲ್ಲಿ ಸಂಚಲಯ ಮೂಡಿಸಲು ಜಿಯೋ ಸಜ್ಜಾಗಿದೆ.
ಹೌದು, ಜಿಯೋ ಕಂಪನಿಯು ಕಳೆದ ಅಕ್ಟೋಬರ್‌ನಲ್ಲಿ ಜಿಯೋಬುಕ್ ಲ್ಯಾಪ್‌ಟಾಪ್ ಅನ್ನು ಘೋಷಿಸಲಾಯಿತು. ಈ ಜಿಯೋಬುಕ್ ಲ್ಯಾಪ್‌ಟಾಪ್ 20,000ರೂ. ಕ್ಕಿಂತ ಕಡಿಮೆ ಬೆಲೆಯಲ್ಲಿ ಕಾಣಿಸಿತು. ಜಿಯೋ ಸಂಸ್ಥೆಯು ಈಗ, ಮತ್ತೆ ಭಾರತದಲ್ಲಿ ಗ್ರಾಹಕರ ಕೈಗೆಟುಕುವ ದರದಲ್ಲಿ ಲ್ಯಾಪ್‌ಟಾಪ್‌ನ ನೂತನ ರಿಫ್ರೆಶ್ ಆವೃತ್ತಿ ಅನ್ನು ಪ್ರಾರಂಭಿಸಲು ಸಕಲ ತಯಾರಿ ನಡೆಸಿದೆ ಎಂದು ವರದಿಯೊಂದರಿಂದ ತಿಳಿದುಬಂದಿದೆ.

ರಿಲಯನ್ಸ್ ದೇಶಿಯ ಮಾರುಕಟ್ಟೆಯಲ್ಲಿ ಈ ತಿಂಗಳ ಅಂತ್ಯದಲ್ಲಿ ಆಲ್-ನ್ಯೂ ಜಿಯೋಬುಕ್ ಲ್ಯಾಪ್‌ಟಾಪ್ ಅನ್ನು ಬಿಡುಗಡೆ ಮಾಡಲು ಸಿದ್ಧವಾಗಿದ್ದು, ಬಹುತೇಕ ಜುಲೈ 31 ರಂದು ನೂತನ ಜಿಯೋಬುಕ್ ಲ್ಯಾಪ್‌ಟಾಪ್ ಎಂಟ್ರಿ ಆಗುವ ನಿರೀಕ್ಷೆಗಳಿವೆ. ಇನ್ನು ಸಂಸ್ಥೆಯು ಭಾರತದಲ್ಲಿ ಅಧಿಕೃತ ಲಾಂಚ್ ಮಾಡುವ ಮುಂಚಿತವಾಗಿ, ಸಂಸ್ಥೆಯು ಅಮೆಜಾನ್ ತಾಣದಲ್ಲಿ ಲ್ಯಾಪ್‌ಟಾಪ್‌ನ ಕೆಲವು ಫೀಚರ್ಸ್‌ಗಳನ್ನು ಟೀಸ್ ಮಾಡಿ ಗಮನ ಸೆಳೆದಿದೆ.
ಬರಲಿರುವ ಹೊಸ ಲ್ಯಾಪ್‌ಟಾಪ್‌ನ ನಿರೀಕ್ಷಿತ ಫೀಚರ್ಸ್:
ಅಮೆಜಾನ್ ಪಟ್ಟಿಗಳ ಪ್ರಕಾರ, ಇದೇ ಜುಲೈ 31 ರಂದು ಎಂಟ್ರಿ ಕೊಡಲು ರೆಡಿಯಾಗಿರುವ ಆಲ್-ನ್ಯೂ ಜಿಯೋಬುಕ್ ಲ್ಯಾಪ್‌ಟಾಪ್ ಎಲ್ಲಾ ವಯಸ್ಸಿನವರಿಗೆ, ಉತ್ಪಾದಕತೆ, ಮನರಂಜನೆ ಮತ್ತು ಪ್ಲೇ ಮಾದರಿಯಲ್ಲಿ ವಿನ್ಯಾಸ ಮಾಡಲಾಗಿದೆ. ಈ ಲ್ಯಾಪ್‌ಟಾಪ್ ಪ್ರಯಾಣದಲ್ಲಿರುವಾಗ 4G ಕನೆಕ್ಟಿವಿಟಿ ಒದಗಿಸುತ್ತದೆ.
ಹಾಗೆಯೇ ಈ ನೂತನ ಲ್ಯಾಪ್‌ಟಾಪ್ ವೈ-ಫೈ ಸಪೋರ್ಟ್ ಅನ್ನು ನೀಡುವ ನಿರೀಕ್ಷಿಯಿದೆ. ಇದರೊಂದಿಗೆ ಹೊಸ ಜಿಯೋಬುಕ್ ಲ್ಯಾಪ್‌ಟಾಪ್, ಈ ಹಿಂದಿನ ಲ್ಯಾಪ್‌ಟಾಪ್ ಆವೃತ್ತಿಗಿಂತ ಭಿನ್ನವಾಗಿ ಮತ್ತು ಜಿಯೋಓಎಸ್ (JioOS) ನಲ್ಲಿ ಕೆಲಸ ಮಾಡಲಿದೆ ಎನ್ನಲಾಗಿದೆ.
ಸಂಸ್ಥೆಯ ಜಿಯೋ ಓಎಸ್ ಕಲಿಕೆಗಾಗಿ ರಚಿಸಲಾಗಿದ್ದು, ಇದು ಬಳಕೆದಾರ ಸ್ನೇಹಿ ಇಂಟರ್ಫೇಸ್ ಅನ್ನು ಪಡೆದಿದೆ. ಜಿಯೋಬುಕ್ ಲ್ಯಾಪ್‌ಟಾಪ್ ಜಿಯೋದಿಂದ ಅನೇಕ ಆಪ್‌ಗಳೊಂದಿಗೆ ಬಿಡುಗಡೆ ಆಗಲಿದೆ. ಈ ಲ್ಯಾಪ್‌ಟಾಪ್ ಆಕ್ಟಾ-ಕೋರ್ ಚಿಪ್‌ಸೆಟ್ ರನ್ ಮಾಡಲಿದೆ. ಹಾಗೆಯೇ ಲ್ಯಾಪ್‌ಟಾಪ್ ಹೆಚ್‌ಡಿ ಕ್ವಾಲಿಟಿ ವೀಡಿಯೊಗಳನ್ನು ನಿರ್ವಹಿಸಲು, ಆಪ್‌ಗಳ ನಡುವೆ ಮಲ್ಟಿಟಾಸ್ಕ್ ಕೆಲಸ ನಿರ್ವಹಿಸಲು ಈ ಚಿಪ್‌ಸೆಟ್ ಪೂರಕವಾಗಿ ಕೆಲಸ ಮಾಡಲು ಸಾಧ್ಯವಾಗುತ್ತದೆ.
ಈ ಹಿಂದಿನ ಜಿಯೋಬುಕ್ ಲ್ಯಾಪ್‌ಟಾಪ್ ಫೀಚರ್ಸ್:
ಜಿಯೋಬುಕ್ (JioBook) ಬಜೆಟ್ ಪ್ರೈಸ್‌ನ ಲ್ಯಾಪ್‌ಟಾಪ್ ಡಿವೈಸ್ ಆಗಿದೆ. ಈ ಲ್ಯಾಪ್‌ಟಾಪ್ 11.6 ಇಂಚಿನ ಹೆಚ್‌ಡಿ ಡಿಸ್‌ಪ್ಲೇ ಅನ್ನು ಪಡೆದಿದ್ದು, ವಿಶಾಲವಾದ ಮಾದರಿಯ ಬೆಜೆಲ್‌ಗಳನ್ನು ಪಡೆದಿದೆ. ಈ ಲ್ಯಾಪ್‌ಟಾಪ್ ಕ್ವಾಲ್ಕಮ್ ಸ್ನ್ಯಾಪ್‌ಡ್ರಾಗನ್ 665 SoC ಪ್ರೊಸೆಸರ್ ನಲ್ಲಿ ಕೆಲಸ ಮಾಡುತ್ತದೆ. ಇದರೊಂದಿಗೆ ಈ ಲ್ಯಾಪ್‌ಟಾಪ್ ಅಡ್ರಿನೊ 610 GPU ನ ಬೆಂಬಲ ಸಹ ಒಳಗೊಂಡಿದೆ.
ಹಾಗೆಯೇ ಜಿಯೋಬುಕ್ ಗ್ರಾಹಕ ಸ್ನೇಹಿ ಬೆಲೆಯನ್ನು ಹೊಂದಿದ್ದು, ಈ ಲ್ಯಾಪ್‌ಟಾಪ್ 2GB RAM ಮತ್ತು 32GB ಆಂತರಿಕ ಸ್ಟೋರೇಜ್ ಸಾಮರ್ಥ್ಯವನ್ನು ಪಡೆದಿದೆ. ಇದರೊಂದಿಗೆ ಈ ಲ್ಯಾಪ್‌ಟಾಪ್ ಕ್ವಾಲ್ಕಮ್ ಸ್ನ್ಯಾಪ್‌ಡ್ರಾಗನ್ (Qualcomm Snapdragon SoC) ಪ್ರೊಸೆಸರ್ ಅನ್ನು ಪಡೆದುಕೊಂಡಿದೆ. ಹಾಗೆಯೇ ಜಿಯೋಬುಕ್ ಆಂಡ್ರಾಯ್ಡ್ ಆಧಾರಿತ ಓಎಸ್ ಸಪೋರ್ಟ್ ಪಡೆದಿದೆ.
ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ಈ ಲ್ಯಾಪ್‌ಟಾಪ್ 3.5 mm ಆಡಿಯೋ ಜ್ಯಾಕ್, ಬ್ಲೂಟೂತ್ 5.0, HDMI ಮಿನಿ, Wi-Fi ಸೇರಿದಂತೆ ಕೆಲವು ಅಗತ್ಯ ಆಯ್ಕೆಗಳನ್ನು ಪಡೆದಿದೆ. ಈ ಲ್ಯಾಪ್‌ಟಾಪ್ ಎಂಬೆಡೆಡ್ ಜಿಯೋ ಸಿಮ್ ಕಾರ್ಡ್‌ನೊಂದಿಗೆ ಸೌಲಭ್ಯ ಪಡೆದಿದೆ.


Click it and Unblock the Notifications








